ಹಿರೇಜಂತಕಲ್ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಏಳಿಗೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
A preparatory meeting was held for the development of a government-style primary school.

ಹಿರೇಜಂತಕಲ್ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಏಳಿಗೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಗಂಗಾವತಿ: ನಗರದ ಹಿರೇಜಂತಕಲ್ ಹಲವಾರು ವರ್ಷಗಳಿಂದ ಶಾಲೆಯಲ್ಲಿ ತರಗತಿ ಕೊಠಡಿಗಳ ಸಮಸ್ಯೆಯಿಂದಾಗಿ ಹಲವಾರು ಶೈಕ್ಷಣಿಕ ತೊಂದರೆಗಳು, ಮಳೆಗಾಲದಲ್ಲಿ ಛಾವಣಿ ಸೋರುವುದು, ವಿದ್ಯಾರ್ಥಿ/ವಿ ದ್ಯಾರ್ಥಿನಿಯರ ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಇನ್ನೂ ಹಲವಾರು ಸಮಸ್ಯೆಗಳಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಇಂದು ಸಭೆಯನ್ನು ಕರೆಯಲಾಗಿದೆ. ಶಾಲೆಯ ಅನೇಕ ಸಮಸ್ಯೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅದಕ್ಕೆ ಸ್ಪಂದಿಸಿದ ಅವರು PWD ಅಧಿಕಾರಿಗಳ ಸಮನ್ವಯ ಸಾಧಿಸಿ ಆದೇಶವನ್ನು ಹೊರಡಿಸಿ ಹಳೆಯ ಕೊಠಡಿಗಳನ್ನು ನೆಲಸಮಗೊಳಿಸಿ ನೂತನ ಶೌಚಾಲಯ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಅನುಕೂಲತೆಗೆ ಅನುವು ಮಾಡಿದ್ದರು.
ಇದರ ಬೆನ್ನಲ್ಲೇ ಶಾಲೆಯ ಎಲ್ಲ ಎಸ್ ಡಿ ಎಂ ಸಿ ಸದಸ್ಯರು ಸಭೆಗೆ ಹಾಜರಾಗಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ವಿನಂತಿಸಲಾಗಿದ್ದು ಎಲ್ಲ ಸದಸ್ಯರು ಪೂರ್ವಭಾವಿ ಸಭೆಯನ್ನು ನಡೆಸಿ ಯಶಸ್ವಿಗೋಳಿಸಿದರು.
ಮುಂದಿನ ಶನಿವಾರದಂದು ಎರಡನೆಯ ಸಭೆಯನ್ನು ಕರೆಯಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಡಿಯಪ್ಪ ಹಂಚಿನಾಳ, ವಾರ್ಡಿನ ಮಾಜಿ ಸದಸ್ಯರಾದ ಹುಲಿಗೆಮ್ಮ ಕಿರಿ ಕಿರಿ, ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ತಿಪ್ಪವ್ವ ಉಳ್ಳಟ್ಟಿ, ಹಾಗೂ ಸದಸ್ಯರು ವಾರ್ಡಿನ ಯುವಕರಾದ ಪರುಶುರಾಮ ಕಿರಿಕಿರಿ, ಮಂಜುನಾಥ ಆರತಿ, ಮಂಜುನಾಥ ಹಂಚಿನಾಳ, ಪರುಶುರಾಮ ಭಾಗವಹಿಸಿದ್ದರು.
