ಶುಗರ್ ಇದ್ದವರು ಯಾವ ರೀತಿಯ ಆಹಾರ ರೂಢಿಮಾಡಬೇಕು?

What kind of diet should people with diabetes follow?

ಶುಗರ್ ಇದ್ದವರು ಯಾವ ರೀತಿಯ ಆಹಾರ ರೂಢಿಮಾಡಬೇಕು?

ಸಕ್ಕರೆ ಕಾಯಿಲೆ ಎನ್ನುವುದು ಭಾರತದಲ್ಲಿ 60%ಗೂ ಹೆಚ್ಚು ಜನರನ್ನು ಭಾದಿಸುತ್ತಿದೆ.ಇದು ಯಾವತ್ತು ಸಂಪೂರ್ಣ ಗುಣವಾಗುವ ಕಾಯಿಲೆಯಂತು ಅಲ್ಲ ಖಾಯಿಲೆಯನ್ನು ಒಂದಷ್ಟು ನಿಯಂತ್ರಿಸಬಹುದು.ಖಾಯಿಲೆ ಬರುವುದಕ್ಕಿಂತ ಮುನ್ನವೆ ಹಿತಮಿತವಾದ ಆಹಾರ ಹಾಗೂ ದೈಹಿಕ ದಂಡನೆಯ ಕೆಲಸಮಾಡುತ್ತಿದ್ದರೆ ಒಳ್ಳೆಯದು. ಹಳ್ಳಿಗರಿಗಿಂತ ಪಟ್ಟಣದಲ್ಲಿ ವಾಸಿಸುವವರು ಈ ಖಾಯಿಲೆಯಿಂದ ಬಳತ್ತಿದ್ದಾರೆ ಕಾರಣ ಅಹಾರದಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಬೆವರು ಸುರಿಸಿ ದುಡಿಮೆ ಇಲ್ಲದಿರುವುದು ಕುಳಿತು ಉಂಡರೆ ದೇಹ ರೋಗಗ್ರಸ್ತವಾಗುತ್ತದೆ. ಈಗಿನ ಜನ ಹೆಚ್ಚಾಗಿ ಕಂಪ್ಯೂಟರ್ ಆಪೀಸು ಗಳಲ್ಲಿ ಕೆಲಸಮಾಡುವವರಿಗೆ ದೇಹದ ಶ್ರಮಕ್ಕಿಂತ ಮಾನಸಿಕ ಶ್ರಮ ಹೆಚ್ಚು ಸಕ್ಕರೆ ಖಾಯಿಲೆ ಬರಲು ಟೆನ್ಷನ್ ಎನ್ನುವುದು ಒಂದು ಕಾರಣ ಮಾನಸಿಕ ಒತ್ತಡ ಆಹಾರದ ಪಚನ ಕ್ರಿಯೆಯನ್ನು ವ್ಯತ್ಯಾಸ ಮಾಡುತ್ತದೆ ಇದರಿಂದ ದೇಹದಲ್ಲಿ‌ಕೊಬ್ಬು ಜಾಸ್ತಿಯಾಗುತ್ತದೆ. ಸಕ್ಕರೆ ಖಾಯಿಲೆಯು ಕೆಲವರಿಗೆ ಅನುವಂಶಿಕ ಕೊಡುಗೆಯಾದರೆ ಮತ್ತೆ ಕೆಲವರಿಗೆ ತಾವಾಗಿಯೆ ತಂದುಕೊಳ್ಳುವುದು.ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರಿಗೆ ಕೆಲವು ಸಲ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದೆ ಗೊತ್ತಾಗದು. ಒಬ್ಬೊಬ್ಬರು ಒಂದೋಂದು ಸಜೆಶನ್ನ ಕೊಡುತ್ತಾರೆ. ಅನ್ನ ಮುಟ್ಟಬಾರದು ಸಿಹಿತಿಂಡಿತಿನ್ನಬಾರದು, ಕರಿದ ಪದಾರ್ಥ ಮುಟ್ಟಬಾರದು ಕೆಲವು ಹಣ್ಣು ಹಂಪಲು ತಿನ್ನಬಾರದು ಅಂತ ಹಾಗಿದ್ದರೆ ಹಸಿವಾದಾಗ ಏನು ತಿನ್ನುವುದು ಎನ್ನುವುದೆ ದೊಡ್ಡ ಸಮಸ್ಯೆಯಾಗಿದೆ ಯಾವುದೇ ತಿಂದರು ಊಟಮಾಡಿದಷ್ಟು ಬೇರೆ ಏನೇ ತಿಂದರು ಹೊಟ್ಟೆ ತುಂಬುವುದಿಲ್ಲ ಮೈದಾ ಅಕ್ಕಿಹಿಟ್ಟು ಕಡಲೆ ಹಿಟ್ಟು ಕೆಲವು ಧಾನ್ಯಗಳು ಸಕ್ಕರೆಖಾಯಿಲೆಗೆ ಆಗುವುದಿಲ್ಲ .ಅನ್ನವನ್ನು ಕುಕ್ಕರಿನಲ್ಲಿ ಬೇಯಿಸಬೇಡಿ ಬೇರೆ ಪಾತ್ರೆಯಲ್ಲಿ ಅನ್ನಮಾಡಿ ಬಸಿದು ಉಣ್ಣುವುದರಿಂದ ತೊಂದರೆ ಆಗದು. ಇದು ಹಳೇಕಾಲದ ಪದ್ದತಿಯಾದರು ಇದರಲ್ಲಿ ಅಕ್ಕಿಯಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಮಾಡುತ್ತದೆ ಬೆಳಿಗ್ಗೆ ಎದ್ದತಕ್ಕಷಣ ಹತ್ತು ಮೆಂತೆಕಾಳುಗಳನ್ನು ನುಂಗಿ ನೀರು ಕುಡಿಯುವುದರಿಂದ ಸಕ್ಕರೆಯ ಅಂಶವು ಕಡಿಮೆಯಾಗುತ್ತದೆ. ಪ್ರಿಡ್ಜನಲ್ಲಿರುವ ವಸ್ತುಗಳನ್ನು ಬಳಸಬಾರದು. ಇದರಲ್ಲಿ ಯಾವುದೆ ಜೀವಸತ್ವ ಇರುವುದಿಲ್ಲ. ರೆಡಿ ಮೇಡ್ ಜ್ಯೂಸ್ ಕುಡಿಯುವುದನ್ನು ನಿಲ್ಲಿಸಿ.ಇದು ತತ್ತಕ್ಷಣ ಸಕ್ಕರೆ ಅಂಶವನ್ನು ಜಾಸ್ತಿಮಾಡುತ್ತದೆ. ಹೆಸರುಕಾಳು ನೆನಸಿ ರುಬ್ಬಿ ಜ್ಯೂಸಮಾಡಿ ಬೇಕಾದರೆ (ಸ್ವಲ್ಪ ಬೆಲ್ ಸೇರಿಸಿ)ಕುಡಿಯಬಹುದು.ನೆಲನೆಲ್ಲಿ ಗಿಡದ ಕಷಾಯ ದಿನವೂ ಮಾಡಿ ಕುಡಿಯುವುದರಿಂದ ಒಳ್ಳೆಯದು ಸಕ್ಕರೆಖಾಯಿಲೆ ಇದ್ದವರಿಗೆ ಹಸಿವು ಭಾಯಾರಿಕೆ ಜಾಸ್ತಿ ಹಾಗಾಗಿ ಹಸಿವಾದಾಗ ಅಲ್ಪಸ್ವಲ್ಪ ಹಸಿತರಕಾರಿ ತಿನ್ನಿ. ಬೆಂಡೆಕಾಯಿಯನ್ನು ಉದ್ದ ಹೆಚ್ಚಿ ಸ್ವಲ್ಪ ಉಪ್ಪುಹುಳಿಕಾರ ಹಾಕಿ ಬೇಯಿಸಿ ತಿನ್ನಬಹುದು. ಸೌತೆಕಾಯಿ ಗಡ್ಡೆಕೋಸು ಗೌರಿಕಾಯಿ ಸಕ್ಕರೆ ಖಾಯಿಲೆಗಳಿಗೆ ಉತ್ತಮ. ತರಕಾರಿ. ಬಾಳೆಹಣ್ಣು ಮಾವಿನಹಣ್ಣು ,ಹಲಸು , ಚಿಕ್ಕುಹಣ್ಣುಗಳನ್ನು ತಿನ್ನಬಾರದು. ಸೀಬೇ ಮೋಸುಂಬಿ ಕಿತ್ತಳೆ ನೇರಳೆ, ಪಪ್ಪಾಯಿ ಒಳ್ಳೆಯದು.ವಾರಕ್ಕೆ ಒಂದುಬಾರಿ ಹಗಲಕಾಯಿ ಚಟ್ಣೆ ಗೊಜ್ಜು ಸಾಂಬಾರು ಮಾಡುವುದರಿಂದ ಒಳ್ಳೆಯದು. ಜಾಸ್ತಿ ಸೇವಿಸಿದರೆ ಚರ್ಮ ಶುಕ್ಕವಾಗುತ್ತದೆ ಬಹಳ ಉಷ್ಣವಾದ್ದರಿಂದ ಪಿತ್ತ ಜಾಸ್ತಿಯಾಗಿ ಮೈ ತುರಿಕೆ ,ಸ್ನಾಯುಸೆಳೆತ ,ಎದೆನೋವು ಬರಬಹುದು.ನುಗ್ಗೆ ಸೊಪ್ಪು ಪಾಲಾಕ್ ಸೊಪ್ಪು ಮೆಂತೆ ಸಬ್ಬ್ಬಸಿಗೆ ಕಾಕೆಸೊಪ್ಪು ಒಳ್ಳೆಯದು.ದಂಟಿನ ಸೊಪ್ಪು ಹರಿವೆ ಸೊಪ್ಪುಗಳು ಒಳ್ಳೆಯದಾದರು ಕೆಲವರಿಗೆ ಇದು ಬೇದಿಶುರುವಾಗುತ್ತದೆ. ಮತ್ತು ಹೊಟ್ಟೆಯುಬ್ಬರವೂ ಆಗುತ್ತದೆ.ಕಾಡುನೆಲ್ಲಿಕಾಯಿಯನ್ನು ಬಿಡಿಸಿ ಒಣಗಿಸಿ ಆಗಾಗ ಬಾಯಲ್ಲಿಟ್ಟು ಚಪ್ಪರಿಸಿದರೆ ಸಕ್ಕೆರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ತಂಬುಳಿ ಗೊಜ್ಜು ಆರೋಗ್ಯಕ್ಕೆ ಬಹಳ ಉತ್ತಮ. ಸಕ್ಕರೆ ನಿಯಂತ್ರಣದಲ್ಲಿ ಇಡಬಹುದು.ಕಾಫಿ ಟೀ ನಿಯಮಿತವಾಗಿ ಸೇವಿಸಬಹುದು. ಅಲೋವೆರಾ ಜ್ಯೂಸ ಒಳ್ಳೆಯದು.ಯಾವುದೆ ತರಕಾರಿಗಳನ್ನು ಸ್ವಲ್ಪ ಬೇಯಿಸಿ ತಿನ್ನಬಹುದು.ಸೂಪ್ಮಾಡಿ ಕುಡಿಯಬಹುದು.ಮಾವಿನ ಚಿಗುರು ನೇರಲೆ ಕುಡಿ ಸೀಬೆಕುಡಿ ಒಂದೆಲಗದ ಕಷಾಯಗಳು ಸಕ್ಕರೆಖಾಯಿಲೆ ಯನ್ನು ನಿಯಂತ್ರಣ ಮಾಡುತ್ತದೆ ದಿನಕ್ಕೆ ಎರಡುಬಾರಿ ಎಲೆ ಅಡಿಕೆ ಹಾಕುವುದರಿಂದ ಜೀರ್ಣಕ್ಕು ಒಳ್ಳೆಯದು ಅಡಿಕೆಯಲ್ಲಿನ ಚೊಗರು ಅಂಶ ಸಕ್ಕರೆಯನ್ನು ನಿಯಂತ್ರಿಸುತ್ತದೆ ಸ್ವೀಟ್ ಅಡಿಕೆ ಉಪಯೋಗಿಸಬಾರದು ಮಲೆನಾಡಿನಲ್ಲಿ ಸಿಗುವ ಬೇಯಿಸಿದ ಸರಕು ಅಥವಾ ಕೆಂಪು ಅಡಿಕೆ ಒಳ್ಳೆಯದು.ಸಕ್ಕರೆ ಖಾಯಿಲೆಗೆ ದಿನಕ್ಕೊಂದು ಡಾಕ್ಟರ್ನ್ನು ಬೇಟಿಮಾಡುವುದಕ್ಕಿಂತ ನಾವೇ ವೈದ್ಯರಾಗುವುದು ಒಳ್ಳೆಯದು . ಯಾವುದನ್ನು ತಿಂದಾಗ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ ಯಾವುದನ್ನು ಸೇವಿಸಿದಾಗ ಕಡಿಮೆಯಾಗುತ್ತದೆ ಎಂದು ಪ್ರತಿದಿನವೂ ಗಮನದಲ್ಲಿ ಇಟ್ಟುಕೊಳ್ಳಬೇಕು ಈಗ ಸಕ್ರೆ ಖಾಯಿಲೆ ಪರೀಕ್ಷಿಸಲು ಹಲವು ಉಪಕರಣಗಳಿವೆ ಪ್ರತಿದಿನ ಆಹಾರ ಸೇವಿಸುವ ಮೊದಲು ಮತ್ತು ನಂತರ ಪರೀಕ್ಷಿಸಿ ಚಾಟ್ನಲ್ಲಿ ಬರೆದಿಟ್ಟು ಕೊಳ್ಳಿ ಏನೇನು ಆಹಾರ ಸೇವಿಸಿದ್ದೀರಿ ಎಂದು ತಿಳಿದುಕೊಂಡರೆ ಅಲ್ಲೆ ಉತ್ತರ ಸಿಗುತ್ತದೆ.ಹಸಿವಾದಾಗ ಇಡ್ಲಿ ದೋಸೆ ಉಪ್ಪಿಟ್ಟು ಅನಿವಾರ್ಯ. ಉಳಿದ ಕರಿದ ಪದಾರ್ಥಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.ಆದರೂ ದಿನವೂ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಲೇಬೇಕಾಗುತ್ತದೆ.

ಚರ್ಮರೋಗ ಚಿಕಿತ್ಸೆಯಲ್ಲಿ ನಕಲಿ ವೈದ್ಯರ ಹಾವಳಿ: ಎಚ್ಚರ ವಹಿಸುವಂತೆ ಐಎಡಿವಿಎಲ್ ಕರ್ನಾಟಕ ಘಟಕ ಮನವಿ.

IADVL Karnataka unit appeals to be cautious about fake doctors in dermatology treatment.

ಚರ್ಮರೋಗ ಚಿಕಿತ್ಸೆಯಲ್ಲಿ ನಕಲಿ ವೈದ್ಯರ ಹಾವಳಿ: ಎಚ್ಚರ ವಹಿಸುವಂತೆ ಐಎಡಿವಿಎಲ್ ಕರ್ನಾಟಕ ಘಟಕ ಮನವಿ.



 ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ ಐಎಡಿವಿಎಲ್ನೈತಿಕ ಬೆಂಬಲ 

ಬೆಂಗಳೂರು; ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ರೋಗ ತಜ್ಞರು ಮತ್ತು ಕುಷ್ಟರೋಗ ತಜ್ಞರ ಸಂಘ – ಕರ್ನಾಟಕ  ಐಎಡಿವಿಎಲ್   ಇಂದು ಚರ್ಮರೋಗ ಚಿಕಿತ್ಸೆ, ಕೂದಲು ಕಸಿ ಹಾಗೂ ಸೌಂದರ್ಯ ಚಿಕಿತ್ಸೆಗಳ ಕ್ಷೇತ್ರದಲ್ಲಿ ವೇಗವಾಗಿ ಹೆಚ್ಚುತ್ತಿರುವ ನಕಲಿ ವೈದ್ಯರು ಹೆಚ್ಚುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಇದು ರೋಗಿಗಳ ಸುರಕ್ಷತೆಗೆ ದೊಡ್ಡ ಅಪಾಯವಾಗುತ್ತಿದೆ ಎಂದು ಸಂಘ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಡಾ. ಸವಿತಾ ಎ. ಎಸ್., ಮಾಜಿ ಅಧ್ಯಕ್ಷರಾದ ಡಾ. ವೆಂಕರಾಮ್ ಮೈಸೂರು ಮತ್ತು ಡಾ. ಬಿ.ಎಸ್. ಚಂದ್ರಶೇಖರ್, ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಗದೀಶ್ ಪಿ, ಕಾನೂನು ಸಮಿತಿ ಅಧ್ಯಕ್ಷ ಡಾ. ಅಕ್ಷಯ್ ಸಮಾಗಾಣಿ, ಹಿರಿಯ ಚರ್ಮರೋಗ ತಜ್ಞ  ಡಾ. ಎಂ.ಎಸ್. ಗಿರೀಶ್   ಉದ್ದೇಶಿಸಿ ಮಾತನಾಡಿದರು.

 ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ   ಐಎಡಿವಿಎಲ್   ನೈತಿಕ ಬೆಂಬಲ ಸೂಚಿಸಿದರು.

ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ನಕಲಿ ವೈದ್ಯರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಓವರ್-ದಿ-ಕೌಂಟರ್ ಔಷಧಿಗಳ ಅನಿಯಂತ್ರಿತ ಬಳಕೆ ಹಾಗೂ ಔಷಧಿಗಳ ಆನ್ಲೈನ್ ಮಾರಾಟವು ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದ ದುರ್ಘಟನೆಗಳ ಕುರಿತು ಸಂಘ ಗಂಭೀರ ಕಳವಳ ವ್ಯಕ್ತಪಡಿಸಿದೆ. ದಂತ ವೈದ್ಯರು ನಡೆಸಿದರೆಂದು ಹೇಳಲಾಗುತ್ತಿರುವ ಕೂದಲು ಪ್ರತಿರೋಪಣ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಎಂಜಿನಿಯರ್ಗಳು ಮೃತಪಟ್ಟ ಘಟನೆಗಳು ಅನಧಿಕೃತ ಚಿಕಿತ್ಸೆಯಿಂದ ಉಂಟಾಗುವ ಜೀವಾಪಾಯದ ಅಪಾಯವನ್ನು ತೋರಿಸುತ್ತವೆ ಎಂದು ಅವರು ಹೇಳಿದರು.

ಕೂದಲು ಕಸಿ ಮತ್ತು ಸೌಂದರ್ಯ ಚರ್ಮ ಚಿಕಿತ್ಸೆಗಳು ಆಧುನಿಕ ವೈದ್ಯಕೀಯದಲ್ಲಿ ಹಾಗೂ ಚರ್ಮ ಶಸ್ತ್ರಚಿಕಿತ್ಸೆಯಲ್ಲಿ ವಿಶಿಷ್ಟ ತರಬೇತಿ ಅಗತ್ಯವಾಗಿದೆ. ಆದ್ದರಿಂದ ಇಂತಹ ಚಿಕಿತ್ಸೆಯನ್ನು ಕೇವಲ ಅರ್ಹತೆ ಹೊಂದಿದ ಹಾಗೂ ನೋಂದಾಯಿತ ವೈದ್ಯರು—ಚರ್ಮರೋಗ ತಜ್ಞರು ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು—ಮಾತ್ರ ಮಾಡಬೇಕು ಎಂದು ಹೇಳಿದೆ.

ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಓರಲ್ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸಕರಿಗೆ ಕೂದಲು ಪ್ರತಿರೋಪಣ ಮತ್ತು ಕೆಲವು ಸೌಂದರ್ಯ ಚಿಕಿತ್ಸೆಗಳು ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಚರ್ಮರೋಗ ತಜ್ಞರ ಸಂಘಟನೆಗಳ ಅಭಿಪ್ರಾಯದಲ್ಲಿ ಇದು ಅವರ ಶಿಕ್ಷಣ ವ್ಯಾಪ್ತಿಗೂ ಹಾಗೂ ಕಾನೂನು ಅಧಿಕಾರಕ್ಕೂ ಮೀರಿದೆ. ಈ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರು ಮದ್ರಾಸ್ ಹಾಗೂ ಬಾಂಬೆ ಉಚ್ಚ ನ್ಯಾಯಾಲಯಗಳಲ್ಲಿ ಈ ತೀರ್ಮಾನವನ್ನು ಪ್ರಶ್ನಿಸಿದ್ದೇವೆ ಎಂದರು.

ಐಎಡಿವಿಎಲ್-ಕೆಎನ್ ಕಳೆದ ವರ್ಷ ನಡೆಸಿದ “ನಕಲಿ ವೈದ್ಯ ಮುಕ್ತ ಭಾರತ” ಅಭಿಯಾನದ ಫಲಿತಾಂಶಗಳನ್ನೂ ಉಲ್ಲೇಖಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ 450ಕ್ಕೂ ಹೆಚ್ಚು ದೂರುಗಳನ್ನು ಸಲ್ಲಿಸಲಾಗಿದ್ದು, ಅನಧಿಕೃತ ಕ್ಲಿನಿಕ್ಗಳ ಮೇಲೆ ಹಲವಾರು ದಾಳಿ ಕಾರ್ಯಾಚರಣೆಗಳು ನಡೆದಿವೆ. ಆದರೆ ಕೆಲವು ಕೇಂದ್ರಗಳು ಮೇಲ್ವಿಚಾರಣೆ ಮಾಡುವ ವೈದ್ಯರ ಅನುಮಾನಾಸ್ಪದ “ಘೋಸ್ಟ್” ಪ್ರಮಾಣಪತ್ರಗಳನ್ನು ಬಳಸಿ ಮತ್ತೆ ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿದು ಬಂದಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಅರ್ಹ ಚರ್ಮರೋಗ ತಜ್ಞರನ್ನು ಗುರುತಿಸಲು ಒಂದು ಕ್ಯೂಆರ್ ಕೋಡ್ ಕೂಡ ಬಿಡುಗಡೆ ಮಾಡಲಾಗಿದೆ.ಸಂಘವು ಮುಖ್ಯವಾಗಿ ಸರ್ಕಾರಿ ವೈದ್ಯರ ವಿಷಯವನ್ನೂ ಬೆಂಬಲಿಸುತ್ತದೆ ಎಂದು ತಿಳಿಸಿದೆ.

ಐಎಡಿವಿಎಲ್-ಕೆಎನ್ ಸರ್ಕಾರವನ್ನು ಅನಧಿಕೃತ ಸೌಂದರ್ಯ ಕ್ಲಿನಿಕ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಯಾವುದೇ ಚರ್ಮರೋಗ ಅಥವಾ ಸೌಂದರ್ಯ ಚಿಕಿತ್ಸೆಗೆ ಮೊದಲು ವೈದ್ಯರ ಅರ್ಹತೆ ಮತ್ತು ಮೆಡಿಕಲ್ ಕೌನ್ಸಿಲ್ ನೋಂದಣಿಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

IADVL-KN ಸರ್ಕಾರವನ್ನು ಅನಧಿಕೃತ ಕಾಸ್ಮೆಟಿಕ್ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಾರ್ವಜನಿಕರು ಯಾವುದೇ ಚರ್ಮ ಅಥವಾ ಅಲಂಕಾರಿಕ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಅರ್ಹತೆ ಮತ್ತು ರಾಜ್ಯ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

Stop looting, provide electricity to poor people's homes: BJP leaders' attack

ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆ

ಬೆಂಗಳೂರು ಮಾರ್ಚ್ 11: ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.

ಸಂಘದ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ. ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್‌ನ ವಿರೋಧ ಪಕ್ಷದ
ಮುಖ್ಯ ಸಚೇತಕರಾದ ಎನ್.ರವಿಕುಮಾರ್, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಶಾಸಕ ಸಿ.ಕೆ. ರಾಮಮೂರ್ತಿ, ಆಮ್ ಆದ್ಮಿ ಪಾರ್ಟಿ ಮುಖಂಡ ರವಿಕೃಷ್ಣಾ ರೆಡ್ಡಿ ಸೇರಿದಂತೆ ಇತರೆ ರಾಜಕೀಯ ಮುಖಂಡರು ಭಾಗಿಯಾಗಿ ಬೆಂಬಲ ಸೂಚಿಸಿದರು ಹಾಗೂ ಆಡಳಿತ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪ್ರಮುಖ ವಿಚಾರವನ್ನು ವಿಧಾನ ಮಂಡಲ ಕಲಾಪದಲ್ಲಿ ಪ್ರಶ್ನಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, “ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರತಿಯೊಂದು ವಿಚಾರದಲ್ಲಿ ವಸೂಲಿಗೆ ನಿಂತಿದೆ. ಬಡವರು ಇಂದು ಜೀವನ ಮಾಡುವುದು ದುಸ್ಥರವಾಗಿದೆ. ಬಡವರ ಪರವಾಗಿ ಕೆಲಸ ಮಾಡಲು ಜನರು ಆಯ್ಕೆ ಮಾಡಿದ ಸರಕಾರ, ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ಆಕ್ರೋಶ” ವ್ಯಕ್ತಪಡಿಸಿದರು.

“ಕಷ್ಟಪಟ್ಟು ಮನೆಕಟ್ಟಿಕೊಳ್ಳುವುದಕ್ಕೆ ಮುಂದಾಗಿರುವ ಜನರಿಗೆ ಕರೆಂಟ್ ಸಂಪರ್ಕ ನೀಡಲು ಸರಕಾರ ಈ ರೀತಿಯ ಷರತ್ತು, ನಿಯಮಗಳನ್ನು ಹೇರಿಕೆ ಮಾಡುವ ಮೂಲಕ ಜನರ ಜೀವ ಹಿಂಡುವ ಕೆಲಸ ಮಾಡುತ್ತಿದೆ. ಸರಕಾರ ಸುಪ್ರೀಂ ಕೋರ್ಟ್ ನಿಯಮವನ್ನು ಪಾಲಿಸುವ ನೆಪದಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ. ಮೊದಲು ಇದು ನಿಲ್ಲಬೇಕು. ಜನರ ಪರವಾಗಿ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ಮಾತನಾಡಿ, “ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ 2025 ಏಪ್ರಿಲ್‌ನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಾಗೂ ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ, ಪೂರ್ಣಗೊಂಡಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ (ಓ.ಸಿ) ಅಥವಾ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು” ಎಂದು ಆಗ್ರಹಿಸಿದರು.

“ರಾಜ್ಯಾದ್ಯಂತ ಲಕ್ಷಾಂತರ ಗ್ರಾಹಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಭೂ ಪರಿವರ್ತಿತ ಹಾಗೂ ಭೂ ಪರಿವರ್ತನೆಯಾಗದ ಪ್ರದೇಶಗಳು ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿರುವ ಸ್ಥಳಗಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಬ್ಯಾಂಕ್‌ಗಳಿಂದ ಸಾಲ ಪಡೆದು ವಿವಿಧ ಹಂತಗಳಲ್ಲಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಲ್ಲಿ ರಾಜ್ಯದ ಲಕ್ಷಾಂತರ ನಾಗರಿಕರಿಗೆ ಆರ್ಥಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ಅರ್ಜಿ ಸಲ್ಲಿಸಿರುವ, ಮಂಜೂರಾತಿ ಪಡೆದಿರುವ ಕಾರ್ಯಾದೇಶಗೊಂಡಿರುವ ಕಟ್ಟಡಗಳಿಗೆ ಸೂಕ್ತ ವಿನಾಯಿತಿ ನೀಡುವ ಮೂಲಕ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ಗ್ರಾಹಕರಿಗೆ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು” ಒತ್ತಾಯಿಸಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ನೇತೃತ್ವದಲ್ಲಿ ಸಾವಿರಾರು ಸದಸ್ಯರು ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು

  • ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಒಮ್ ಟೈಮ್ ವಿನಾಯಿತ ನೀಡಬೇಕು.
  • ಸುಪ್ರೀಂ ಕೋರ್ಟ್ ಆದೇಶ ತೋರಿಸಿ ವಿದ್ಯುತ್ ಸಂಪರ್ಕ ನಿಲ್ಲಿಸುವುದು ನೀಡಬೇಕು
  • ಗುತ್ತಿಗೆದಾರು ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡಬೇಕು
  • ಎಂ.ಎಸ್. ಎಂ. ಇ. ಕೈಗಾರಿಕೆಗಳಿಗೆ ಓಸಿಯಿಂದ ವಿನಾಯಿತ ನೀಡಬೇಕು


ಪ್ರತಿಭಟನೆ ನಡೆಸುತ್ತಿರುವವರು ಯಾರು ನಮಗೆ ಬಸ್ ಉಚಿತವಾಗಿ ನೀಡಿ, ನಮ್ಮ ಖಾತೆಗೆ ಹಣ ಹಾಕಿ ಅಂತಾ ಕೇಳುತ್ತಿಲ್ಲ. ಬದಲಾಗಿ ನಮಗೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಆಡಳಿತದಲ್ಲಿರುವ ಸರ್ಕಾರ ಓಸಿ, ಸಿಸಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಿದೆ, ಜನರನ್ನು ಸುಲಿಗೆ ಮಾಡುತ್ತಿದೆ. ಇದು ಯಾವ ನ್ಯಾಯ.? ಮೊದಲು ಇವರ ಕಷ್ಟ ಪರಿಹಾರ ಮಾಡಿ.

  • ಎನ್.ರವಿಕುಮಾರ್, ವಿರೋಧ ಪಕ್ಷದ ಮುಖ್ಯ ಸಚೇತಕ, ವಿಧಾನ ಪರಿಷತ್
ವೀರೇಶ್ವರ ಪುನ್ಯಾಶ್ರಮದಲ್ಲಿ ಅಂದ ಹಾಗೂ ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ.

Birthday with beautiful and orphaned children at Veereshwara Punyashram.

ವೀರೇಶ್ವರ ಪುನ್ಯಾಶ್ರಮದಲ್ಲಿ ಅಂದ ಹಾಗೂ ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ.


ಗಂಗಾವತಿ: ನಗರದ ಹಿರೇಜಂತಲ್ಲಿನ ಸಂಗೀತ ಕಲಾವಿದೆ ಹಾಗೂ ಬೆಂಗಳೂರಿನ ಸ್ವರ ಸಂಗೀತ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸುನಿತಾ ತಮ್ಮ ಹುಟ್ಟು ಹಬ್ಬವನ್ನು ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂದ ಅನಾಥ ಮಕ್ಕಳೊಂದಿಗೆ ಮಂಗಳವಾರದಂದು ಆಚರಿಸಿಕೊಂಡರು. ಇದಕ್ಕೂ ಪೂರ್ವದಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿ ಮಹಾಸ್ವಾಮಿಗಳು ಪಂಡಿತ್ ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಡಾಕ್ಟರ್ ಪುಟ್ಟರಾಜ ಕವಿ ಗವಾಯಿಗಳವರ ಕರ್ತೋ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪ್ರಸ್ತುತ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜ ಅವರ ಆಶೀರ್ವಾದವನ್ನು ಪಡೆದುಕೊಂಡು ಮಕ್ಕಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದರು. ಈ ಸಂದರ್ಭದಲ್ಲಿ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜ ಆಶೀರ್ವಚನ ನೀಡಿ ಕಳೆದ ಹಲವು ವರ್ಷಗಳಿಂದ ಸಂಗೀತ ಕಲಾವಿದೆ ಸುನಿತಾ ಅವರು ಆಶ್ರಮಕ್ಕೆ ಆಗಮಿಸಿ ,

ಗುರುಗಳಿಗೆ ವಿಶೇಷ ಪೂಜಾ ಸಲ್ಲಿಸಿ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದರ ಮೂಲಕ ತಮ್ಮ ಗುರು ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಸುಲ್ತಾವರು ತ್ರಿಭಾಷಕವಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಪರಮ ಶಿಕ್ಷಕರಾಗಿ ಅಂದಿನಿಂದ ಇಂದಿನವರೆಗೆ ಆಶ್ರಮದೊಂದಿಗೆ ತಮ್ಮ ಧಾನ್ಯವನ್ನು ವೃದ್ಧಿಸಿಕೊಂಡಿದ್ದು ಅವರಿಗೆ ಗುರುವರ್ಯರು ಸುಖ ಶಾಂತಿ ಸಮೃದ್ಧಿ ಹಾಗೂ ಸಂಗೀತ ಕ್ಷೇತ್ರದ ಸಾಧನೆಗೆ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಕಾರಟಗಿಯ ಭೋಜರಾಜ್ ಹಾಗೂ ವಿಜಾಪುರದ ಸ್ನೇಹಿತೆಯರು ಪಾಲ್ಗೊಂಡಿದ್ದರು.

ಹಿಂದಿ ಹೇರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ
Massive protest against Hindi imposition

ಹಿಂದಿ ಹೇರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ


ಬೆಂಗಳೂರು:      ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಕಲಿಕೆಯನ್ನು ೧೦೦ ಅಂಕಗಳಿಗೆಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಇಂದು ಮಲ್ಲೇಶ್ವರದ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಲಿಯ ಎದಿರು ಬೃಹತ್ ಪ್ರತಿಭಟನೆ
ನಡೆಸಲಾಯಿತು.
ಕನ್ನಡ ಪರ ಸಂಘಟನೆಗಳು, ರೈತ-ದಲಿತ ಸಂಘಟನೆಗಳು, ಪ್ರಗತಿಪರ ಜನ ಸಂಘಟನೆಗಳ ನೂರಾರು ಮಂದಿ ಇಂದು ಬೆಳಗ್ಗೆ ಪ್ರೌಢಶಿಕ್ಷಣ
ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೋಲೀಸರು ಪ್ರತಿಭಟನಾಕಾರರನ್ನು ತಡೆದರು.
ಕೆಲಹೊತ್ತು ಮಾತಿನ ಚಕಮಕಿ ನಡೆದು ಹೋರಾಟಗಾರರು ಹಿಂದೆ ಸರಿಯದೆ ಹೋದಾಗ ಕೊನೆಗೆ ಪೋಲೀಸರು ಇಲಾಖೆಯ ನಿರ್ದೇಶಕರಾದ
ಮಹೇಶ್ ರವರನ್ನೇ ಕಚೇರಿಯಿಂದ ಕರೆಸಿ ಸಂಘಟನೆಗಳ ಬೇಡಿಕೆಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟರು.
ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಲೇಖಕ ಜಾಣಗೆರೆ ವೆಂಕಟರಾಮಯ್ಯನವರಃ ಮಾತನಾಡಿ ‘ಹಿಂದಿ ಕಡ್ಡಾಯ ಕಲಿಕೆಯನ್ನು
ಕನ್ನಡಿಗರು ಎಂದೂ ಒಪ್ಪುವುದಿಲ್ಲ, ಸರ್ಕಾರವು ವಿಳಂಬ ಮಾಡದೆ ಹಿಂದಿ ಹೇರಿಕೆ ರದ್ದು ಮಾಡಬೇಕೆಂದು’ ಅಗ್ರಹಿಸಿದರು.
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮಾತನಾಡಿ ‘ಕಳೆದ ನಾಲ್ಕು ದಶಕಗಳಿಂದಲೂ ನಾನು
ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿದ್ದು ಕನ್ನಡಿಗರು ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ, ಸರ್ಕಾರವು ಈ
ಬಗ್ಗೆ ಖಚಿತ ನಿರ್ಧಾರ ಕ್ಯೆಗೊಳ್ಳುವಂತೆ’ ಆಗ್ರಹಿಸಿದರು.
ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ‘ಸರ್ಕಾರದ ಹಿಂದಿ ಕಲಿಕೆ ನೀತಿಯಿಂದ ಲಕ್ಷಾಂತರ ಮಕ್ಕಳ
ಬದುಕು ಭವಿಷ್ಯವು ಅತಂತ್ರಗೊಳ್ಳುತ್ತಿದೆ. ಸರ್ಕಾರವು ಸೂಕ್ತ ತೀರ್ಮಾನ ಮಾಡುವವರೆಗೂ ಹೋರಾಟ ನಿಲ್ಲದೆಂದು’ ಎಚ್ಚರಿಸಿದರು.
ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಮಾತನಾಡಿ ‘ಸರ್ಕಾರವು ಹಿಂದಿ ಭಾಷಾ ಕಲಿಕೆ ರದ್ದುಮಾಡದಿದ್ದಲ್ಲಿ ಹಿಂದಿ ಭಾಷಾ
ಪರೀಕ್ಷೆ ನಡೆಯುವ ಮಾರ್ಚ್ ೩೦ರಂದು ಪರೀಕ್ಷಾ ಕೇಂದ್ರಗಳಿಗೆ ಹೋರಾಟಗಾರರು ನುಗ್ಗಿ ಅಡಚಣೆ ಉಂಟು ಮಾಡುವುದಾಗಿ ಎಚ್ಚರಿಕೆ’
ನೀಡಿದರು.
ನಾವೇ ಕರ್ನಾಟಕದ ಪಾರ್ವತೀಶ ಬಿಳಿದಾಳೆ ಐದು ಪ್ರಮುಖ ಬೇಡಿಕೆಗಳಿರುವ ಮನವಿ ಪತ್ರವನ್ನು ಸಭೆಯಲ್ಲಿ ಓದಿದರು.
ಪ್ರತಿಕ್ರಿಯಿಸಿದ ನಿರ್ದೇಶಕರಾದ ಮಹೇಶ್ ರವರು ಈ ವಿಚಾರವನ್ನು ತಕ್ಷಣ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಕದಂಬ ಸೇನೆಯ ಚೇತನ್ ಗೌಡ, ರಕ್ಷಣಾ ವೇದಿಕೆಯ ಶಿವರಾಮೇಗೌಡರು, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಶೇ.ಬೊ
ರಾಧಾಕೃಷ್ಣ, ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆಯ ಕೃಷ್ಣೇಗೌಡರು, ಕರ್ನಾಟಕ ರಕ್ಷಣಾ ಪಡೆಯ ನೆ.ಲ ರಾಮಪ್ರಸಾದ್, ಡಾ. ರಾಜ್ ಸೇನೆಯ
ತ್ಯಾಗರಾಜ್, ನಮ್ಮ ಕರುನಾಡ ವಿಜಯ ಸೇನೆಯ ವಿಜಯ ಕುಮಾರ್, ಚಂದಾಪುರ ಯುವ ರಣಧೀರರ ಪಡೆಯ ಮಂಜುನಾಥ್, ಕರ್ನಾಟಕ
ಜನಶಕ್ತಿಯ ಸಿರಿಮನೆ ನಾಗರಾಜ್ ಮುಂತಾದವರು ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸAಘರ್ಷಮಯ ವಾತಾವರಣ ಉಂಟಾಗುವ ನಿರೀಕ್ಷೆಯಿಂದ ಭಾರಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿ

ಸೋಲಿಡಾರಿಟಿ ಯೂಥ್ ಮುಮೆಂಟ್ ವತಿಯಿಂದ  ಸರ್ವ ಧರ್ಮದವರೊಂದಿಗೆ ಇಫ್ತಾರ್ ಕೂಟ

Solidarity Youth Moment hosts Iftar gathering with people of all religions

ಸೋಲಿಡಾರಿಟಿ ಯೂಥ್ ಮುಮೆಂಟ್ ವತಿಯಿಂದ  ಸರ್ವ ಧರ್ಮದವರೊಂದಿಗೆ ಇಫ್ತಾರ್ ಕೂಟ

    ಗಂಗಾವತಿ: ನಗರದ ಪ್ರಶಾಂತಿ ನಗರದಲ್ಲಿರುವ ಸೋಲಿಡಾರಿಟಿ ಯೂಥ್ ಮುಮೆಂಟ್ ಗಂಗಾವತಿ ಘಟಕದವತಿಯಿಂದ ಸರ್ವ ಧರ್ಮದವರೊಂದಿಗೆ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜ್ಞಾನಜ್ಯೋತಿ ಶಿವಲಿಂಗ ಸ್ವಾಮೀಜಿ ಸುಕ್ಷೇತ್ರ ಹೆಚ್. ವೀರಾಪುರ್ ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ಜನಸ್ತೋಮಕ್ಕೆ ರಂಜಾನಿನ ಸಂದೇಶ ನೀಡಲಿಕ್ಕಾಗಿ ಸಹೋದರರಾದ ಇಸ್ಮಾಯಿಲ್ ತೀರ್ಥಹಳ್ಳಿ.ಮುಖ್ಯ ಕಾರ್ಯದರ್ಶಿಗಳು ಸೋಲಿಡಾರಿಟಿ ಯೂಥ್ ಮೂಮೆಂಟ್ರವರು ಬೆಂಗಳೂರಿನಿಂದ ಆಗಮಿಸಿದ್ದರು..

ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲಾ ಧರ್ಮಗಳ ಸಾರವೊಂದೇ ಮಾನವೀಯತೆ ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕೆ ಹೊರತು ಮನುಷ್ಯನ ಧರ್ಮವನಲ್ಲ ಅಂತಕಂತ ಮಾತನ್ನು ಕೂಡ ತಿಳಿಸಿದರು.

ಎಲ್ಲರೂ ಶ್ರೇಷ್ಠರು ನಾವೆಲ್ಲರೂ ಭಾರತೀಯರು ನಾವೆಲ್ಲರೂ ಪರಸ್ಪರ ಅಣ್ಣತಮ್ಮಂದಿರಂತೆ ಬದುಕಿ ಬಾಳಬೇಕು ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಭೇದ ಭಾವ ಮಾಡದೇ ಹಗಲಿರುಳು ಶ್ರಮಿಸಬೇಕು ಅಂತಕಂತಹ ಮಾತನ್ನು ಕೂಡ ಸ್ವಾಮೀಜಿಯವರು ಈ ಸಂದರ್ಭದಲ್ಲಿ ತಿಳಿಸಿದರು.

ಸಹೋದರರಾದ ಇಸ್ಮಾಯಿಲ್ ತೀರ್ಥಳ್ಳಿ ಅವರು ಮಾತನಾಡಿ ಪವಿತ್ರ ತಿಂಗಳು ಕೇವಲ ಆಹಾರ ಮತ್ತು ಪಾನೀಯದಿಂದ ದೂರವಿರುವುದಷ್ಟೇ ಅಲ್ಲ; ಇದು ಆತ್ಮದ ತಪಸ್ಸು ಹಾಗೂ ಸಮಾಜದ ಮೇಲಿನ ಕರುಣೆ ಮತ್ತು ದಯೆಯನ್ನೂ ಬೆಳೆಸುವ ಸಮಯವಾಗಿದೆ.

ಅಲ್ಲಾಹನು ಪವಿತ್ರ ಕುರ್‌ಆನಿನಲ್ಲಿ ಹೀಗೆ ಹೇಳುತ್ತಾನೆ:
“ಓ ವಿಶ್ವಾಸಿಗಳೇ! ನಿಮ್ಮ ಮೇಲೆ ಉಪವಾಸವನ್ನು ವಿಧಿಸಲಾಗಿದೆ, ನೀವು ಧರ್ಮನಿಷ್ಠರಾಗುವಂತೆ.”
ಆದ್ದರಿಂದ – ದೇವರ ಭಯವು ನಮ್ಮ ಹೃದಯಗಳಲ್ಲಿ ಆಳವಾಗಿ ನೆಲೆಸಲಿ, ಮತ್ತು ನಾವು ಸತ್ಯನಿಷ್ಠ ಜೀವನವನ್ನು ನಡೆಸೋಣ.
ನಾವೆಲ್ಲರೂ ಉತ್ತಮ ಸಮಾಜಕ್ಕಾಗಿ ಒಳ್ಳೆಯ ಕೆಲಸಗಳನ್ನು ಕೂಡಿಕೊಂಡು ಮಾಡೋಣ ಅಂತಕಂತ ಮಾತನ್ನು ತಿಳಿಸಿ ಹೇಳಿದರು

ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರುಗಳು  ಗಂಗಾವತಿ ರಾಷ್ಟ್ರೀಯ ಬಸವದಳದ ,ಬಸವಕೇಂದ್ರ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜದ ಚಿಂತನೆಯಲ್ಲಿ ತೊಡಗಿರುವಂತಹ ಬುದ್ಧಿಜೀವಿಗಳು ಪತ್ರಕರ್ತರು ಭಾಗವಹಿಸಿದ್ದರು.

SYM ನ ಜಿಲ್ಲಾಧ್ಯಕ್ಷರಾದ ನಾಸಿರ್ ಅಹಮದ್, ತಾಲೂಕ ಅಧ್ಯಕ್ಷರಾದ ರಾಜ, ಮತ್ತು SYM ನ ಎಲ್ಲಾ ಕಾರ್ಯಕರ್ತರು ಮತ್ತು JIH ನ ತಾಲೂಕ ಆದ್ಯಕ್ಷರಾದ ಅಬ್ದುಲ್ ಖುದ್ದೂಸ್, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,

ಶ್ರೀ ಕೃಷ್ಣ ರಾಸಲೀಲೆ ನೃತ್ಯ ರೂಪಕ ಪ್ರದರ್ಶನ

Sri Krishna Rasa Leela dance performance

ಶ್ರೀ ಕೃಷ್ಣ ರಾಸಲೀಲೆ ನೃತ್ಯ ರೂಪಕ ಪ್ರದರ್ಶನ

ಮಂಡ್ಯ: ಐತಿಹಾಸಿಕ ಶ್ರೀ ಮೇಲುಕೋಟೆ ಚೆಲುವನಾರಾಣ ಸ್ವಾಮಿ ದೇವಳದ ಶಾಸ್ತ್ರೀಯ ಸಂಗೀತ ನೃತ್ಯ ವೇದಿಕೆ, ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದದವರಿಂದ ಶ್ರೀ ಕೃಷ್ಣ ರಾಸಲೀಲೆ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಸಂಚಾಲಕರಾದ ಹೆಚ್.ವಿ. ಶ್ರೀಲಕ್ಷ್ಮೀ ತೇಜಸ್ ಕಲಾವಿದರನ್ನು ಸನ್ಮಾನಿಸಿದರು.

ಆನೆಗುಂದಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ

Cleanliness campaign led by Anegundi Gram Panchayat

ಆನೆಗುಂದಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ


ಗಂಗಾವತಿ. ತಾಲೂಕಿನ ಆನೆಗುಂದಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಂಗಳವಾರದಂದು ಜಿಲ್ಲಾಧಿಕಾರಿಗಳು ಕೊಪ್ಪಳ, ಇವರ ಆದೇಶದಂತೆ ಆನೆಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳೊಂದಿಗೆ nrlm ಇಲಾಖೆ ಸಿಬ್ಬಂದಿ ರವರು ಆನೆಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಬೆಟ್ಟದ ಮುಂಭಾಗದ ಅಂಗಡಿ ಮತ್ತು ಹೋಟೆಲ್ಗಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತು ನೋಟಿಸ್ ಅನ್ನು ನೀಡಲಾಯಿತು ಹಾಗೆಯೇ ಏಕ ಬಳಕೆ ಪ್ಲಾಸ್ಟಿಕ್( ಕ್ಯಾರಿ ಬ್ಯಾಗ್ ಪ್ಲಾಸ್ಟಿಕ್ ಸ್ಪೂನ್, ಟೀ ಕಪ್ಸ್, ಪ್ಲಾಸ್ಟಿಕ್ ಗ್ಲಾಸ್, ಸ್ಟ್ರಾ,) ಬಳಸುತ್ತಿದ್ದ ಅಂಗಡಿಗಳಿಂದ ಜಪ್ತಿ ಮಾಡಲಾಯಿತು.ಹಾಗೂ ಪ್ಲಾಸ್ಟಿಕ್ ಬಳಸುವಂತಹ ಅಂಗಡಿಗಳಿಗೆ 500 ರೂ ದಂಡ ಕಟ್ಟಿಸಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಪಿಡಿಒ ಮಲ್ಲಿಕಾರ್ಜುನ್ ಕಡಿವಾಳ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ದುಷ್ಪರಿಣಾಮ ಹಾಗೂ ಪರಿಸರದ ಕಲುಷಿತಗೊಳಿತು ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಕಿಷ್ಕಿಂದ ಹಾಗೂ ಪಂಪ ಸರೋವರ ಮತ್ತಿತರ ಭಾಗಗಳಲ್ಲಿ ಜನ ಜಾಗೃತಿ ಜೊತೆಗೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಿ ದರು. ಈ ಸಂದರ್ಭದಲ್ಲಿ l ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು

ಹಾಲಿಗೆ ತುಪ್ಪ ಸೇರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ, ಇದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಾಗುತ್ತೆ ನೋಡಿ.

Make it a habit to add ghee to milk and drink it, and see how many benefits it brings.

ಹಾಲಿಗೆ ತುಪ್ಪ ಸೇರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ, ಇದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಾಗುತ್ತೆ ನೋಡಿ.


ಹಾಲು ಮತ್ತು ತುಪ್ಪ ಸೇರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೀರ್ಣಾಂಗದ ಸಮಸ್ಯೆ ದೂರಮಾಡುತ್ತದೆ.ಹಾಲು ಮತ್ತು ತುಪ್ಪದ ಇವೆರಡರ ಆರೋಗ್ಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅವೆರಡನ್ನೂ ಸೇರಿಸಿ ಕುಡಿದಾಗ ಅದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದೊಂದು ಉತ್ತಮ ಆರೋಗ್ಯಕರ ಪಾನೀಯವೂ ಹೌದು. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದೆ. ಹಾಲಿನಲ್ಲಿರುವ ಕೊಬ್ಬಿನಾಂಶವು ಹಸು ಅಥವಾ ಎಮ್ಮೆಗಳಂತಹ ಮೂಲವನ್ನು ಅವಲಂಬಿಸಿರುತ್ತದೆ. ಹಾಗಾಗಿ ಅದರಲ್ಲಿಯ ಕೊಬ್ಬಿನಾಂಶವು ಬದಲಾಗುತ್ತದೆ. ತುಪ್ಪವು ಉತ್ತಮ ಕೊಬ್ಬಿನ ಮೂಲವಾಗಿದೆ. ಅದರಲ್ಲಿ ಕರಗಬಲ್ಲ ವಿಟಮಿನ್‌ಗಳಾದ ಎ, ಡಿ, ಇ, ಮತ್ತು ಕೆ ಅನ್ನು ಹೊಂದಿದೆ. ಮೊಸರನ್ನು ಕಡೆದು ಬಂದ ಬೆಣ್ಣೆಯಿಂದ ತಯಾರಿಸಿದ ತುಪ್ಪ ಮತ್ತು ದೇಸಿ ಹಸುವಿನ ಹಾಲು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ.ಚರ್ಮ ಮತ್ತು ಕೂದಲಿಗಿದೆ ಭಾರಿ ಪ್ರಯೋಜನಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಚರ್ಮ ಮತ್ತು ಕೂದಲು ಶುಷ್ಕವಾಗಿ ಬಣ್ಣ ಕಳೆದುಕೊಳ್ಳುತ್ತದೆ. ಹಾಲು ಮತ್ತು ತುಪ್ಪವು ಉತ್ತಮ ಮಾಯಶ್ಚರೈಸರ್‌ ಆಗಿದೆ. ಅದು ಚರ್ಮ ಮತ್ತು ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಸಹಕಾರಿಯಾಗಿದೆ. ಅರಿಶಿನದ ಹಾಲಿಗೆ ತುಪ್ಪ ಬೆರೆಸಿ ಕುಡಿಯಲು ಹೇಳಲಾಗುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ಚರ್ಮದ ಮೇಲಿರುವ ಕಲೆ, ಮೊಡವೆಗಳನ್ನು ದೂರಮಾಡುತ್ತದೆ.ಪೋಷಕಾಂಶಗಳ ಖಜಾನೆಹಾಲು ಮತ್ತು ತುಪ್ಪದ ಸಂಯೋಜನೆಯು ಉತ್ತಮ ಪೌಷ್ಠಿಕಾಂಶದ ಮೂಲವಾಗಿದೆ. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದ್ದರೆ, ತುಪ್ಪವು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ತುಪ್ಪವು ಸ್ಯಾಚುರೇಟೆಡ್‌ ಮತ್ತು ಮೊನೊಸ್ಯಾಚುರೇಟೆಡ್‌ ಕೊಬ್ಬುಗಳ ಜೊತೆಗೆ ಕರಗಬಲ್ಲ ಜೀವಸತ್ವಗಳಾದ ಎ, ಡಿ, ಇ ಮತ್ತು ಕೆ ಹೊಂದಿದೆ. ಇವೆರಡನ್ನು ಸೇರಿಸಿ ಕುಡಿದಾಗ ಆ ಎಲ್ಲಾ ಪೋಷಕಾಂಶಗಳು ನಮ್ಮ ದೇಹವನ್ನು ಸೇರುತ್ತದೆ. ಉತ್ತಮ ಆರೋಗ್ಯ ನೀಡುತ್ತದೆ.ಎಲುಬಿನ ಆರೋಗ್ಯ ಕಾಪಾಡುತ್ತದೆಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಗಟ್ಟಿಮುಟ್ಟಾದ ಮೂಳೆ ಮತ್ತು ಹಲ್ಲುಗಳಿಗೆ ಇದು ಅಗತ್ಯ. ವಿಟಮಿನ್ ಡಿ ಹೊಂದಿರುವ ತುಪ್ಪದೊಂದಿಗೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲನ್ನು ಸೇರಿಸಿದಾಗ, ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಮಹತ್ವದ ಪಾತ್ರ ವಹಿಸುತ್ತದೆ. ತುಪ್ಪವು ಉತ್ತಮ ಲೂಬ್ರಿಕಂಟ್ ಆಗಿದೆ. ಅದು ಕೀಲುಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಅದ್ಭುತವಾಗಿದೆ.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆಹಾಲು ಮತ್ತು ತುಪ್ಪ ಎರಡೂ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ದೇಸಿ ತುಪ್ಪವು ಜೀರ್ಣಾಂಗದಿಂದ ಕಲ್ಮಶಗಳನ್ನು ಹೊರಹಾಕಲು, ದೇಹದ ರಕ್ಷಣೆಯನ್ನು ಬಲಪಡಿಸಲು ಮತ್ತು ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ತುಪ್ಪವು ನೈಸರ್ಗಿಕ ವಿರೇಚಕವೂ ಹೌದು. ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಕರುಳಿನಿಂದ. ತುಪ್ಪ ಮತ್ತು ಹಾಲು ಎರಡೂ ಕರುಳಿಗೆ ಉತ್ತಮವಾದ ಕಾರಣ ಅವುಗಳ ಮಿಶ್ರಣವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮವಾಗಿದೆ.ತೂಕ ಇಳಿಕೆಯಲ್ಲಿ ಸಹಕಾರಿತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಹಲವರ ತಪ್ಪು ತಿಳುವಳಿಕೆ. ಮಿತವಾಗಿ ಸೇವಿಸಿದಾಗ ಅದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿರುವ ಅನುಭವ ನೀಡಿ, ಅತಿಯಾಗಿ ತಿನ್ನುವ ಬಯಕೆ ಕಡಿಮೆಯಾಗುವಂತೆ ಮಾಡುತ್ತದೆ. ಹಾಲಿನಲ್ಲಿರುವ ಪ್ರೋಟೀನ್‌ನೊಂದಿಗೆ ಸೇರಿಸಿದಾಗ ತೃಪ್ತಿ ನೀಡುವ ಪೌಷ್ಠಿಕ ಪಾನೀಯವಾಗಬಲ್ಲದು.ಜೀರ್ಣಕ್ರಿಯೆ ಸುಧಾರಿಸುತ್ತದೆತುಪ್ಪವು ಉತ್ತಮ ಜೀರ್ಣಕಾರಿ ಎಂದೇ ಹೆಸರುವಾಸಿ. ಇದರಲ್ಲಿರುವ ಬ್ಯುಟರಿಕ್‌ ಆಮ್ಲವು ಜಿರ್ಣಾಂಗವ್ಯೂಹದ ಆರೋಗ್ಯವನ್ನು ಬೆಂಬಲಿಸುವ ಕೊಬ್ಬಿನಾಮ್ಲವಾಗಿದೆ. ಇದು ಕರುಳಿನ ಬ್ಯಾಕ್ಟೀರಿಯಾ, ಕರುಳಿನ ಕೋಶಗಳು ಮತ್ತು ಉರಿಯೂತದಿಂದ ಆರೋಗ್ಯವನ್ನು ಕಾಪಾಡುತ್ತದೆ. ಹಾಲಿನೊಂದಿಗೆ ತುಪ್ಪ ಸೇವಿಸಿದಾಗ, ತುಪ್ಪವು ಹಾಲಿನ ಜೀರ್ಣಕಾರಿ ಗುಣಗಳನ್ನು ಹೆಚ್ಚಿಸುತ್ತದೆ. ಲ್ಯಾಕ್ಟೋಸ್‌ ಅಥವಾ ಡೈರಿ ಉತ್ಪನ್ನ ಅಲರ್ಜಿ ಇರುವವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಎಷ್ಟು ತುಪ್ಪ ತಿನ್ನಬೇಕು?ಹಾಲು ಮತ್ತು ತು‌ಪ್ಪ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಅವೆರಡೂ ಕ್ಯಾಲೋರಿಗಳಿಂದ ತುಂಬಿರುತ್ತವೆ. ಹಾಗಾಗಿ ದಿನವೊಂದಕ್ಕೆ ತುಪ್ಪವನ್ನು ಒಂದರಿಂದ ಎರಡು ಚಮಚ ಶಿಫಾರಸ್ಸು ಮಾಡಲಾಗುತ್ತದೆ. ಹಾಲು ಕುಡಿಯಲು ನೀಡಿರುವ ಮಾರ್ಗಸೂಚಿಯೆಂದರೆ ವಯಸ್ಕರರು ದಿನವೊಂದಕ್ಕೆ ಎರಡರಿಂದ ಮೂರು ಕಪ್‌ ಕುಡಿಯಬಹುದು. ಆದರೆ ಈ ಸೂಚಿಯು ಮಹಿಳೆ, ಪುರುಷ, ವಯಸ್ಸು ಮತ್ತು ಆಹಾರಕ್ರಮದ ಮೇಲೆ ಅವಲಂಬಿಸಿದೆ.ಮುನ್ನೆಚ್ಚರಿಕೆಗಳೇನು?ಹಾಲು ಮತ್ತು ತುಪ್ಪ ಎಷ್ಟೇ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅವುಗಳನ್ನು ಸೇವಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇ ಬೇಕು. ಮೊದಲನೆಯದಾಗಿ ಹಾಲು ಮತ್ತು ತುಪ್ಪ ಇವೆರಡರಲ್ಲೂ ಲ್ಯಾಕ್ಟೋಸ್‌ ಇರುವುದರಿಂದ ಅದರ ಅಲರ್ಜಿ ಇರುವವರು ಎಚ್ಚರಿಕೆ ವಹಿಸಬೇಕು. ತೂಕ ನಿರ್ವಹಣೆಯಲ್ಲಿರುವವರು ತುಪ್ಪದ ಕ್ಯಾಲೋರಿ ಗಮನದಲ್ಲಿಟ್ಟುಕೊಂಡಿರಬೇಕು. ಇದು ಮಿತವಾಗಿ ಉತ್ತಮವಾಗಿದೆ. ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಕೆಲವು ಆಹಾರಗಳ ನಿರ್ಬಂಧವಿರುವವರು ಅಥವಾ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವವರು, ಓಟ್, ಸೋಯಾ ಅಥವಾ ಬಾದಾಮಿ ಹಾಲಿನಂತಹ ಪರ್ಯಾಯಗಳನ್ನು ರೂಢಿಸಿಕೊಳ್ಳಬೇಕಾಗಬಹುದು.

ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ
International Women's Day: Public awareness on "Health Care"

ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.
ನಂತರ ಮಾತನಾಡಿದ ಗಿರಿಜಮ್ಮ, ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಇದಕ್ಕಾಗಿ ಸೂಕ್ತ ಹಣಕಾಸು ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.
ಡಾ. ನಳಿನಿ ಮಾತನಾಡಿ ಹೆಣ್ಣು ಮಕ್ಕಳು ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ, ವಿಹಾರಕ್ಕೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕೆನರಾ ಬ್ಯಾಂಕ್ ಮ್ಯಾನೇಜರ್ ಲಾವಣ್ಯ ಅವರು, ಹಣಕಾಸು ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗಿನ್ನಿಸ್ ವಿಶ್ವ ದಾಖಲೆಯ ರಂಗಲಕ್ಷ್ಮಿ ಶ್ರೀನಿವಾಸರವರ ನಗೆಯೋಗ ನೃತ್ಯದಲ್ಲಿ ಮಹಿಳೆಯರು ಅತ್ಯಂತ ಆನಂದದಿಂದ ಪಾಲ್ಗೊಂಡು ಸಂಭ್ರಮಿಸಿದರು.