ಮನೆ ಮುಂದೆಮೂತ್ರವಿಸರ್ಜನೆ ಮಾಡಿದನೆನ್ನಲಾದ ಜಮೀರ್ ಸೇರಿ ಇತರ ರನ್ನುಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

Protest led by former MLA Munavalli in front of the police station demanding the arrest of Jameer and others for urinating in front of the house


ಮನೆ ಮುಂದೆಮೂತ್ರವಿಸರ್ಜನೆ ಮಾಡಿದನೆನ್ನಲಾದ ಜಮೀರ್ ಸೇರಿ ಇತರರನ್ನು
ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆನಡೆಸಿದರು.

ನ್ಯಾಯವಾದಿಮನೆಯ ಮುಂದೆ ಮೂತ್ರವಿಸರ್ಜನೆ ,ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಹಾಗೂ , ಪತ್ನಿಯ ಮೇಲೆ ಹಲ್ಲೆ

ಮೂತ್ರ ವಿಸರ್ಜನೆ ಮಾಡಿ ರದ್ದಾಂತಕ್ಕೆ ಕಾರಣನಾದ ಜಮೀರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತಿದ್ದಾರೆ.



ಗಂಗಾವತಿ: ಮನೆಯ ಮುಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಜಮೀರ್ ಹಾಗೂ ಐವತ್ತು ಹೆಚ್ಚು ಜನರು ಸೇರಿ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ಬಸವೇಶ್ವರ ಕಾಲೋನಿ(ಬಂಬೂ ಬಜಾರ್)ಯಲ್ಲಿ ಮಂಗಳವಾರ ಸಂಜೆ ಜರುಗಿದ್ದು ಹಲ್ಲೆ ಮಾಡಿದವರು ಕೂಡಲೇ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ,ಮಾಜಿ ಸಂಸದ ಶಿವರಾಮ ಗೌಡ,
ನೇತೃತ್ವದಲ್ಲಿ ನ್ಯಾಯವಾದಿ ಪ್ರಭಾಕರ್ ಆಪ್ತರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಗಂಗಾವತಿಯಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸ್ ವೈಫಲ್ಯ ಕಾರಣವಾಗಿದೆ. ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ನಗರದಲ್ಲಿ ಪದೇ ಪದೇ ಹಲ್ಲೆ, ದೌರ್ಜನ್ಯ, ಗೂಂಡಾಗಿರಿಯಂತಹ ಕೃತ್ಯಗಳು ನಡೆಯುತ್ತಿವೆ. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕೆಂದರು.
ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ದೌರ್ಜನ್ಯ ಗುಂಡಾಗಿರಿ ಹಲ್ಲೆ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಯಾರನ್ನು ಬಿಡುವ ಪ್ರಶ್ನೆ ಇಲ್ಲ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸಲಾಗುತ್ತದೆ. ಎಲ್ಲರೂ ಸಹಕಾರ ನೀಡುವ ಮೂಲಕ ಗಂಗಾವತಿಯಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗಾಗಲೇ ಗಂಗಾವತಿ ನಗರದಾದ್ಯಂತ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.


ವಕೀಲರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳು ಬಿಜೆಪಿ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.
ಚಿಕಿತ್ಸೆ: ಮೂತ್ರ ವಿಸರ್ಜನೆ ಘಟನೆಯಲ್ಲಿ ಅಸ್ವಸ್ಥಗೊಂಡ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿ ಅನಸೂಯಾ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”: ಓಂ ಬಿರ್ಲಾಗೆ ಮಹುವಾ ಮೋಯಿತ್ರಿ ಮಾರ್ಮಿಕ ಮಾತು
There is no escape from karma": Mahua Moitri's mystical words to Om Birla

ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”: ಓಂ ಬಿರ್ಲಾಗೆ ಮಹುವಾ ಮೋಯಿತ್ರಿ ಮಾರ್ಮಿಕ ಮಾತು

ನವದೆಹಲಿ: ಮಾರ್ಚ್ 10, 2026 ಭಾರತೀಯ ಸಂಸದೀಯ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ಉಳಿಯಲಿದೆ. ಹೌದು ಸಾಂಪ್ರದಾಯಕವಾಗಿ ಸ್ಪೀಕರ್ ಪೀಠಕ್ಕೆ ಗೌರವ ಸಲ್ಲಿಸಲಾಗುತ್ತದೆ, ಅದೇ ರೀತಿ ಆ ಪೀಠದ ಮೇಲಿ ಕುಳಿತಿರುವ ವ್ಯಕ್ತಿ ಕೂಡ ಪಕ್ಷಪಾತಿಯಾಗಿರದೆ, ಸದನ ನಡೆಸಬೇಕು. ಆದರೆ ಆ ವ್ಯಕ್ತಿ ಪಕ್ಷಪಾತಿಯಾಗಿ ವರ್ತಿಸಿದರೆ ಏನಾಗುತ್ತದೆ ಎಂಬುದಕ್ಕೆ ತೃಣಮೂಲ ಕಾಂಗ್ರೆಸ್‌ನ ಫೈರ್ ಬ್ರಾಂಡ್ ಸಂಸದೆ ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣ ಸಾಕ್ಷಿಯಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಮಹುವಾ, ಕೇವಲ ಭಾಷಣ ಮಾಡಲಿಲ್ಲ; ಬದಲಿಗೆ ಅಂಕಿ-ಅಂಶಗಳ ಚಾಕು ಹಿಡಿದು ಪ್ರಜಾಪ್ರಭುತ್ವದ ವಿರೂಪತೆಯನ್ನು ಬಿಡಿಸಿಟ್ಟರು.

ಕರ್ಮದ ಚಕ್ರ ತಿರುಗಿದೆ!

ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣದ ಆರಂಭವೇ ಅತ್ಯಂತ ಅರ್ಥಪೂರ್ಣವಾಗಿತ್ತು. ಕಳೆದ ಬಾರಿ ಸಂಶಯಾಸ್ಪದ ಕಾರಣಗಳ ನೀಡಿ, ಮಾತನಾಡಲು ಕನಿಷ್ಠ ಅವಕಾಶವನ್ನೂ ಕೊಡದೆ ಮಹುವಾ ಅವರನ್ನು ಇದೇ ಸದನದಿಂದ ಉಚ್ಚಾಟಿಸಲಾಗಿತ್ತು. ಆದರೆ, ಇಂದು ಅದೇ ಮಹುವಾ ಅದೇ ಸದನದಲ್ಲಿ ಸ್ಪೀಕರ್ ವಿರುದ್ಧವೇ ಚರ್ಚೆ ಆರಂಭಿಸುತ್ತಿದ್ದರು. ಇದನ್ನು ಅವರು “ಡಿವೈನ್ ಕರ್ಮ” (ದೈವಿಕ ಕರ್ಮ) ಎಂದು ಕರೆದರು. “ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನೀವು ಯಾರ ಧ್ವನಿಯನ್ನು ಅಡಗಿಸಲು ಯತ್ನಿಸಿದಿರೋ, ಅದೇ ಧ್ವನಿ ಇಂದು ನಿಮ್ಮ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಿದೆ” ಎಂದು ಅಕ್ಷರಶಃ ಗುಡುಗಿದ್ದರೆ, ಈ ವೇಳೆ ಸದನದಲ್ಲಿ ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ಸ್ತಬ್ಧವಾಗಿತ್ತು.

ಮಹುವಾ ಅವರ ಟೀಕೆಗಳು ಬರಿ ಗಾಳಿಯಲ್ಲಿ ಗುಂಡು ಹಾರಿಸುವಂತಿರಲಿಲ್ಲ. ಅವರು ಓಂ ಬಿರ್ಲಾ ಅವರ ಅವಧಿಯ ಕರಾಳ ಅಂಕಿ-ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  • ಅಮಾನತುಗಳ ಸುನಾಮಿ: ಕಳೆದ 20 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದ ಒಟ್ಟು ಅಮಾನತುಗಳಲ್ಲಿ ಶೇ. 40ರಷ್ಟು ಕೇವಲ ಓಂ ಬಿರ್ಲಾ ಅವರ ಕಾಲದಲ್ಲೇ ನಡೆದಿವೆ. ಅದರಲ್ಲೂ ಡಿಸೆಂಬರ್ 2023ರಲ್ಲಿ ಒಂದೇ ಬಾರಿಗೆ 100ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದು ಪ್ರಜಾಪ್ರಭುತ್ವದ ಅತಿದೊಡ್ಡ ಕಪ್ಪುಚುಕ್ಕೆ ಎಂದು ಅವರು ಬಣ್ಣಿಸಿದರು.
  • ಏಕಪಕ್ಷೀಯ ತೀರ್ಪು: ವಿಶೇಷವೇನೆಂದರೆ, ಅಮಾನತುಗೊಂಡವರಲ್ಲಿ ಒಬ್ಬನೇ ಒಬ್ಬ ಎನ್‌ಡಿಎ ಸದಸ್ಯನಿಲ್ಲ. ಹಾಗಾದರೆ ಆಡಳಿತ ಪಕ್ಷದವರು ಸದಾ ಸಂಸತ್ತಿನ ನಿಯಮ ಪಾಲಿಸುತ್ತಾರೆಯೇ? ಅಥವಾ ಸ್ಪೀಕರ್ ಕಣ್ಣಿಗೆ ಕೇವಲ ವಿರೋಧ ಪಕ್ಷದವರೇ ತಪ್ಪಿತಸ್ಥರಾಗಿ ಕಾಣುತ್ತಾರೆಯೇ? ಎಂಬ ಮಹುವಾ ಅವರ ಪ್ರಶ್ನೆ ಖಾರವಾಗಿತ್ತು.
  • ಮೌನಕ್ಕೆ ಶರಣಾದ ಮೈಕ್: ವಿರೋಧ ಪಕ್ಷದ ನಾಯಕರು ದೇಶದ ಜ್ವಲಂತ ಸಮಸ್ಯೆಗಳಾದ ಮಣಿಪುರ ಹಿಂಸಾಚಾರ ಅಥವಾ ಅದಾನಿ ಹಗರಣದ ಬಗ್ಗೆ ಮಾತನಾಡಲು ಎದ್ದಾಗಲೆಲ್ಲಾ ಸೆನ್ಸಾರ್ ಮಂಡಳಿಯಂತೆ ಮೈಕ್ ಕಟ್ ಮಾಡುವ ತಂತ್ರಜ್ಞಾನವನ್ನು ಸ್ಪೀಕರ್ ಕಚೇರಿ ಕರಗತ ಮಾಡಿಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.

ಉಪಸಭಾಪತಿ ಹುದ್ದೆಯೆಂಬ ‘ಖಾಲಿ ಖುರ್ಚಿ’

ಸಂವಿಧಾನದ 93ನೇ ವಿಧಿಯ ಪ್ರಕಾರ ಸಭಾಪತಿಯ ಜೊತೆಗೆ ಉಪಸಭಾಪತಿಯ ಆಯ್ಕೆಯೂ ಅಷ್ಟೇ ಮುಖ್ಯ. ಆದರೆ ಕಳೆದ ಏಳು ವರ್ಷಗಳಿಂದ ಭಾರತದ ಲೋಕಸಭೆಯಲ್ಲಿ ಈ ಹುದ್ದೆಯನ್ನು ಖಾಲಿ ಇಡಲಾಗಿದೆ. “ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸದನವನ್ನು ಒಬ್ಬನೇ ವ್ಯಕ್ತಿಯ ಸರ್ವಾಧಿಕಾರದ ಕೇಂದ್ರವನ್ನಾಗಿ ಮಾಡಲಾಗಿದೆ” ಎಂಬುದು ಮಹುವಾ ಅವರ ಗಂಭೀರ ಆರೋಪವಾಗಿತ್ತು.

ದ್ವೇಷ ಭಾಷಣಕ್ಕೆ ರಕ್ಷಣೆ, ಪ್ರಶ್ನೆ ಮಾಡಿದವರಿಗೆ ಶಿಕ್ಷೆ!

ಭಾಷಣದ ಅತ್ಯಂತ ಕಟುಭಾಗವೆಂದರೆ, ಬಿಜೆಪಿ ಸಂಸದ ರಮೇಶ್ ಬಿದೂರಿ ಅವರು ಸದನದಲ್ಲಿ ಮುಸ್ಲಿಂ ಸಂಸದರ ವಿರುದ್ಧ ಬಳಸಿದ ಅಶ್ಲೀಲ ಮತ್ತು ದ್ವೇಷಪೂರಿತ ಪದಗಳ ಪ್ರಸ್ತಾಪ. ಆ ಸಂದರ್ಭದಲ್ಲಿ ಸ್ಪೀಕರ್ ಬಿರ್ಲಾ ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಆದರೆ ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಕೇಳಿದ ವಿರೋಧ ಪಕ್ಷದವರನ್ನು ಗುಂಪು ಗುಂಪಾಗಿ ಹೊರಹಾಕಲಾಯಿತು. “ನೀವು ಕೇವಲ ಒಬ್ಬ ಸಂಸದನಿಗೆ ಅವಮಾನ ಮಾಡಲಿಲ್ಲ, ಈ ದೇಶದ 20 ಕೋಟಿ ಮುಸ್ಲಿಮರ ಅಸ್ತಿತ್ವವನ್ನೇ ಪ್ರಶ್ನಿಸಿದ ವ್ಯಕ್ತಿಗೆ ರಕ್ಷಣೆ ನೀಡಿದಿರಿ” ಎಂದು ಮಹುವಾ ನೇರವಾಗಿ ಬೆರಳು ಮಾಡಿ ತೋರಿಸಿದರು.

ಅಂತ್ಯಕಾಲದ ಮುನ್ಸೂಚನೆ?

ಮಹುವಾ ಮೋಯಿತ್ರಿ ತಮ್ಮ ಭಾಷಣವನ್ನು ಮುಗಿಸಿದ್ದು 1653ರಲ್ಲಿ ಆಲಿವರ್ ಕ್ರಾಮ್‌ವೆಲ್ ಬ್ರಿಟಿಷ್ ಸಂಸತ್ತಿಗೆ ಹೇಳಿದ ಐತಿಹಾಸಿಕ ಸಾಲುಗಳೊಂದಿಗೆ: “ನೀವು ಇಲ್ಲಿ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಬಹಳ ಕಾಲ ಕುಳಿತುಬಿಟ್ಟಿದ್ದೀರಿ. ಇನ್ನು ಹೊರಡಿ, ದೇವರ ಹೆಸರಲ್ಲಿ ನೀವು ಇಲ್ಲಿಂದ ತೊಲಗಿ!”

ಈ ಮಾತುಗಳು ಕೇವಲ ಓಂ ಬಿರ್ಲಾ ಅವರಿಗೆ ಮಾತ್ರವಲ್ಲ, ಇಡೀ ಆಡಳಿತ ವ್ಯವಸ್ಥೆಗೆ ನೀಡಿದ ಎಚ್ಚರಿಕೆಯಾಗಿತ್ತು. ಸಂಸತ್ತು ಎಂದರೆ ಕೇವಲ ಕಲ್ಲು-ಕಾಂಕ್ರೀಟ್ ಕಟ್ಟಡವಲ್ಲ, ಅದು ಜನರ ಧ್ವನಿ. ಆ ಧ್ವನಿಯನ್ನು ಅಡಗಿಸುವ ಸಭಾಪತಿ ಪೀಠಕ್ಕೆ ಗೌರವ ಇರುವುದಿಲ್ಲ ಎಂಬ ಅಸಲಿ ಸತ್ಯವನ್ನು ಮಹುವಾ ಮರುಸ್ಥಾಪಿಸಿದರು.

ಮಹುವಾ ಮೋಯಿತ್ರಿ ಅವರ ಈ ಭಾಷಣ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. ಎಷ್ಟೇ ಅಮಾನತು ಮಾಡಿದರೂ, ಧ್ವನಿಯನ್ನು ಅಡಗಿಸಿದರೂ ಸತ್ಯ ಒಂದಲ್ಲ ಒಂದು ದಿನ ಗಟ್ಟಿಯಾಗಿ ಕೇಳಿಯೇ ಕೇಳುತ್ತದೆ ಎಂಬುದಕ್ಕೆ ಈ ದಿನವೇ ಸಾಕ್ಷಿ. ಸ್ಪೀಕರ್ ವಿರುದ್ಧದ ಈ ಅವಿಶ್ವಾಸ ನಿರ್ಣಯ ಕೇವಲ ಮತಗಳ ಸಂಖ್ಯೆಯಲ್ಲಿ ಸೋಲಬಹುದು, ಆದರೆ ನೈತಿಕವಾಗಿ ಮಹುವಾ ಮತ್ತು ವಿರೋಧ ಪಕ್ಷಗಳು ದೊಡ್ಡ ಜಯ ದಾಖಲಿಸಿವೆ.

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ:    ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಿ – ಡಾ. ಸುರೇಶ್ ಬಿ. ಇಟ್ನಾಳ್
District Collector's instructions in the preliminary meeting:
    Take steps to conduct SSLC annual examination transparently – Dr. Suresh B. Itnal

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ:
    ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಿ – ಡಾ. ಸುರೇಶ್ ಬಿ. ಇಟ್ನಾಳ್


ಕೊಪ್ಪಳ ಮಾರ್ಚ್ 09 (ಕರ್ನಾಟಕ ವಾರ್ತೆ): ಮಾರ್ಚ್ & ಏಪ್ರಿಲ್-2026ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕಯನ್ನು ಜಿಲ್ಲೆಯಲ್ಲಿ ಶಿಸ್ತಿನಿಂದ, ಪಾರದರ್ಶಕವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಪರೀಕ್ಷಾ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯಲ್ಲಿ 2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್  ಹೇಳಿದರು.
 ಅವರು ಸೋಮವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ ಸಭಾಂಗಣದಲ್ಲಿ ಮಾರ್ಚ್/ಏಪ್ರಿಲ್-2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
 ಇದೇ ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ಕೊಡದೇ ಪರೀಕ್ಷಾ ನಿಯಮಗಳಂತೆ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ವಯ ನಡೆಸಬೇಕು. ಕೊಪ್ಪಳ ಜಿಲ್ಲೆಯಲ್ಲಿ 2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪರೀಕ್ಷೆ ಮುಖ್ಯ ಅಧೀಕ್ಷಕರು ಮಾರ್ಗಸೂಚಿಗಳನ್ನು ಓದಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಅಗತ್ಯ ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಸಹ ಕಲ್ಪಿಸಬೇಕು. ಪರೀಕ್ಷೆ ಬರೆಯುವ ವಿಕಲಚೇತನ ವಿದ್ಯಾರ್ಥಿಗಳಿಗೆ ನೆಲ ಮಹಡಿಯಲ್ಲಿ ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು. ಅಂಧ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮತ್ತು ಬರವಣಿಗೆ ಸಹಾಯಕರ ಒಪ್ಪಿಗೆ ಪತ್ರವನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದರು.
 ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆಯಲು ಮೂರು ಬಾರಿ ಅವಕಾಶವಿದ್ದು, ಮೊದಲ ಪರೀಕ್ಷೆಯಲ್ಲಿ ಮಕ್ಕಳು ಭಯ ಪಡುವ ಅವಶ್ಯಕತೆಯಿಲ್ಲ. ಇದರ ಬದಲಿ ಇನ್ನೂ ಎರಡು ಬಾರಿ ಅವಕಾಶವಿದೆ ಎಂದು ಮಕ್ಕಳಿಗೆ ತಿಳಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಮತ್ತು ಪರೀಕ್ಷಾ ಅವಧಿಯಲ್ಲಿ ಕೊಠಡಿ ಮೇಲ್ವಿಚಾರಕರು ಮೊಬೈಲ್ ಬಳಕೆ ಮಾಡುವುದನ್ನು ಸಹ ನಿಷೇಧಿಸಲಾಗಿದ್ದು, ಈ ಬಗ್ಗೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಅವರು ಮಾತನಾಡಿ, ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ 23,001 ಹೊಸ ವಿದ್ಯಾರ್ಥಿಗಳು ಸೇರಿ ಜಿಲ್ಲೆಯ ಒಟ್ಟು 25,556 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಯ ಗಂಗಾವತಿ ತಾಲ್ಲೂಕಿನ 23, ಕೊಪ್ಪಳ ತಾಲ್ಲೂಕಿನ 21, ಕುಷ್ಟಗಿ ತಾಲ್ಲೂಕಿನ 15 ಹಾಗೂ ಯಲಬುರ್ಗಾ ತಾಲ್ಲೂಕಿನ 14 ಸೇರಿದಂತೆ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ ಹಾಗೂ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ವಿಭಾಗಗಳ ಪ್ರಶ್ನೆ ಪತ್ರಿಕೆ ಪಾಲಕರಾಗಿರುತ್ತಾರೆ. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರಿಗೆ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷತೆ, ವಿದ್ಯಾರ್ಥಿಗಳ ಕುಳಿತುಕೊಳ್ಳುವ ವ್ಯವಸ್ಥೆ, ಪರೀಕ್ಷಾ ಸಾಮಗ್ರಿಗಳ ಲಭ್ಯತೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
 ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಮುನಿರಾಬಾದ್‌ನಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆ ಡಯೆಟ್ ಪ್ರಾಶುಂಪಾಲರಾದ ಅನಂತಕುಮಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿಗಳು, ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಮಾದಪ್ಪನ ರಸ್ತೆಯ ಆನೆ ತಲೆ ದಿಂಬದಲ್ಲಿ ಪ್ರತ್ಯಕ್ಷವಾದ ಚಿರತೆ ,
A leopard spotted on the elephant's head pillow on Madappa's road,

ಮಾದಪ್ಪನ ರಸ್ತೆಯ ಆನೆ ತಲೆ ದಿಂಬದಲ್ಲಿ ಪ್ರತ್ಯಕ್ಷವಾದ ಚಿರತೆ ,


ವರದಿ: ಬಂಗಾರಪ್ಪ .ಸಿ.‌
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ಕಾಟವು ಹೆಚ್ಚಾಗಿದ್ದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ ಎಂದು
ಪ್ರತ್ಯಕ್ಷದರ್ಶಿ ಶಿಕ್ಷಕರಾದ ಪುಟ್ಬಸ್ವಾಮಿ ತಿಳಿಸಿದರು.

ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ವೃತ್ತಿ ಸಂಬಂದಿಸಿದ ಕಾರ್ಯದ ನಿಮಿತ್ತವಾಗಿ ತೆರಳುವಾಗ ಆನೆ ತಲೆದಿಂಬದ ತಿರುವುನಲ್ಲಿರುವ ಅಣೆ ಹೊಲದ ಬಳಿ ಚಿರತೆ ಪ್ರತ್ಯಕ್ಷ ವಾಗಿ ಸಾಮನ್ಯ ಜನರು ತಿರುಗಾಡಲು ಕಷ್ಟ ಪಡುವವಂತಾಗಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಡೆಯುವ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ತೆರೆ ಎಳೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ನಾವು ಪಡಬೇಕಾಗುತ್ತದೆ ಎಂದು ತಿಳಿಸಿದರು,

ಅದ್ದೂರಿಯಾಗಿ ಜರುಗಿದ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ತಂಪು ಸೇವೆ ಹಾಗೂ ರಥೋತ್ಸವ.

The grand Bettalli Marammana Jatra cold drinks and chariot festival.

ಅದ್ದೂರಿಯಾಗಿ ಜರುಗಿದ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ತಂಪು ಸೇವೆ ಹಾಗೂ ರಥೋತ್ಸವ.


ವರದಿ: ಬಂಗಾರಪ್ಪ .ಸಿ .

ಹನೂರು:ಭಕ್ತರ ಆರಾಧ್ಯದೇವತೆ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಎರಡನೇ ದಿನ ಮಂಗಳವಾರ ತಂಪು ಜ್ಯೋತಿ ಮಾಡುವ ಮೂಲಕ ದೇವಿಯ ರಥೋತ್ಸವಕ್ಕೆ ಗರುಡ ಪಕ್ಷಿಯು ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಾದಿಗಳಿಗೆ ಆರ್ಶಿವಾದಿಸಿ ದೇವಿಯ ಜಾತ್ರೆಯು ಅದ್ದೂರಿಯಾಗಿ ನೆರವೇರಿತು.

ಹನೂರು ಪಟ್ಟಣದ
ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ತೇರು ನಿರ್ಮಾಣ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು
ನಂತರ ಅದು ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ತೇರು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ,ಇದರ ವಿನ್ಯಾಶವು ನಾಲ್ಕು ಚಕ್ರಗಳುಳ್ಳ, ತಳಭಾಗದಲ್ಲಿ ಕುದುರೆ, ಸಿಂಹ ಲಾಂಛನ ಸೇರಿ ಎಂಟು ಅಷ್ಟ ಕಂಬಗಳುಳ್ಳ 14.5 ಅಡಿಯ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಣನ ಸೆಳೆಯಿತು.

ರಥೋತ್ಸವದ ತೇರಿಗೆ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜುರಾವ್ ವಿಶೇಷ ಪೂಜೆ ಸಲ್ಲಿಸಿದ ನಂತರ ಆಕಾಶದಲ್ಲಿ ಗರುಡ ತೇರಿನ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ದವಸ ಧಾನ್ಯ,ನಾಣ್ಯಗಳನ್ನು ಎಸೆದು ಹರಕೆ ಸಲ್ಲಿಸಿದರು. ರಥೋತ್ಸವದ ವೇಳೆ ಭಕ್ತಾದಿಗಳು ಜೈ ಬೆಟ್ಟಳ್ಳಿ ಮಾರಮ್ಮನಿಗೆ, ಬೆಟ್ಟಳ್ಳಿ ತಾಯಿಗೆ ಎಂದು ಘೋಷಣೆ ಕೂಗಿದರು

ಪ್ರತಿ ಮಂಗಳವಾರ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಪ್ರತಿವಾರವೂ ಬರುವಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಇಷ್ಟಾರ್ಥ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.

ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕಾರ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಹನೂರು ಪಟ್ಟಣದ ಬೆನಕ ಡೆಕೋರೇಷನ್ ತಂಡದ ವತಿಯಿಂದ ಮೋಸಂಬಿ ಮುಸುಕಿನ ಜೋಳ ವಿವಿಧ ಬಗೆಯ ಫಲ ಪುಷ್ಪಗಳಿಂದ ದೇವಸ್ಥಾನದ ಒಳ ಆವರಣ ಹೊರ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮುಂಭಾಗದ ಗಣಪತಿ ದೇವರ ತಳ ಭಾಗದಲ್ಲಿ ದೇವಿಯ ಕಣ್ಣುಗಳ ಮಾದರಿಯಲ್ಲಿ ಮಾಡಲಾಗಿದ್ದ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು.

ವಿಶೇಷ ವಿದ್ಯುತ್ ದೀಪಾಲಂಕಾರ : ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದ ಹೊರ ಆವರಣ, ಮುಖ್ಯ ರಸ್ತೆ ಮೈಸೂರು ಮಾರಮ್ಮ ದೇವಸ್ಥಾನದ ರಸ್ತೆ, ಮಲೆ ಮಹದೇಶ್ವರ ಬೆಟ್ಟದ ರಸ್ತೆ ಬಂಡಳ್ಳಿ ರಸ್ತೆ ಸೇರಿದಂತೆ ಮಾಡಲಾಗಿದೆ.

ಸೋಮವಾರ ತಡರಾತ್ರಿ ನೆರವೇರಿದ ಜಾಗರ ಸಮರ್ಪಣೆ : ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಮೊದಲ ದಿನವಾದ ಸೋಮವಾರ ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು . ಈ ಜಾಗರ ಸಮರ್ಪಣೆಗೆ ಜನರು ಒಂದು ವಾರದ ಮುಂಚೆ ಅವರೆ, ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮೊಳಕೆ ಬರಿಸಿ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ದೇವಾಲಯಕ್ಕೆ ಸಮರ್ಪಿಸುತ್ತಾರೆ. ಜಾಗರ ವನ್ನು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಸಮರ್ಪಿಸಲಾಯಿತು
ಈ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಎರಡು ದಿನಗಳ ನಂತರ ಪ್ರತಿನಿತ್ಯ ದೇವಸ್ಥಾನದ ಆವರಣದಲ್ಲಿ ಮಾರಿಕುಣಿತ ಕುಣಿಯುವುದು ವಾಡಿಕೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ ವಿವಿಧ ಸಮುದಾಯದ ಮಹಿಳೆಯರು , ಮಕ್ಕಳು ಪುರುಷರು ಸೇರಿದಂತೆ ಒಟ್ಟಾಗಿ ಕುಣಿಯುವುದರ ಮೂಲಕ ಸಂಭ್ರಮಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ರಾಜರೋಷವಾಗಿ ಪಡಿತರ ಅಕ್ಕಿ ಅಕ್ರಮ ಸಾಗಾಟ : ಕ್ರಮಕ್ಕೆ ಆಗ್ರಹ.

Illegal transportation of ration rice is a royal outrage: Demand for action.

ರಾಜರೋಷವಾಗಿ ಪಡಿತರ ಅಕ್ಕಿ ಅಕ್ರಮ ಸಾಗಾಟ : ಕ್ರಮಕ್ಕೆ ಆಗ್ರಹ.

ಯಲಬುರ್ಗಾ, ಮಾ.10:ಯಲಬುರ್ಗಾ ತಾಲೂಕಿನ ಯಡ್ಡೋಣಿ ಮತ್ತು ಕುಟುಗಮರಿ ಗ್ರಾಮಗಳ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶಾರದಮ್ಮ ಅಕ್ಕಿ ಎಂಬವರು ನಿರಂತರವಾಗಿ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಬಡವರ ಪಾಲಿಗೆ ಸರ್ಕಾರ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಈ ಕುರಿತು ಆಹಾರ ಇಲಾಖೆಯ ಅಧಿಕಾರಿಗಳಾದ ಹನುಮನಗೌಡ ಪಾಟೀಲ್ ಹಾಗೂ ದತ್ತಪಯ್ಯ ಅವರಿಗೆ ಹಲವು ಬಾರಿ ದೂರು ನೀಡಲಾಗಿದೆ ಎನ್ನಲಾಗುತ್ತಿದೆ.

ಆದರೆ ಈವರೆಗೂ ಅಕ್ರಮ ದಂಧೆಕೋರರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಬಡವರಿಗೆ ದೊರೆಯಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕವಾದರೆ,ಶಿಕ್ಷಣ ಸಚಿವರು ಶ್ವಾನ ಕಾಯುವ ಸಚಿವ ಖಾತೆ ಹೊಂದಿದ್ದಾರೆಯೇ ? ಮ್ಯಾಗಳಮನಿ ಪ್ರಶ್ನೆ.

If teachers have the job of guarding dogs, does the Education Minister have the ministry of guarding dogs? Magalamani's question.

ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕವಾದರೆ,ಶಿಕ್ಷಣ ಸಚಿವರು ಶ್ವಾನ ಕಾಯುವ ಸಚಿವ ಖಾತೆ ಹೊಂದಿದ್ದಾರೆಯೇ ? ಮ್ಯಾಗಳಮನಿ ಪ್ರಶ್ನೆ.

 ಗಂಗಾವತಿ,10: ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ ಶಾಲಾ ಆವರಣದಲ್ಲಿ ಬೀದಿ ನಾಯಿ ನಿಯಂತ್ರಿಸಲು ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಸೂಚನೆ ನೀಡಿರುವದನ್ನು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ.

ಸಚಿವರು ಕೂಡ ಶ್ವಾನ ಖಾತೆ ಹೊಂದಿದ್ದಾರೆಯೇ? ಎಂದು ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಶಾಲಾ ಆವರಣದಲ್ಲಿ ಏನೇ ಸಮಸ್ಯೆ ಯಾದರೂ ಶಿಕ್ಷಕರ ಜವಾಬ್ದಾರಿ ಯಾವಾಗಲೂ ಇದೆ. ಅದನ್ನು ಶಿಕ್ಷಕರು ಸರಿಯಾಗಿ ನಿಭಾಯಿಸುತ್ತಿದ್ದಾರೆ.ಈ ಆದೇಶ ಹೊರಡಿಸುವ ಅಗತ್ಯ ಇರಲಿಲ್ಲ.

ಬೀದಿ ನಾಯಿಗಳ ನಿಯಂತ್ರಿಸುವ ಕಾರ್ಯವನ್ನು ಸರ್ಕಾರ ರಚಿಸಿರುವ ಗ್ಯಾರಂಟಿ ಸಮಿತಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕೆಂದು ಒತ್ತಾಯಿಸಿದರು. ಶಿಕ್ಷಕರ ಕೊರತೆಯಿಂದ, ಮೂಲ ಸೌಕರ್ಯಗಳ ಕೊರತೆ, ಅನ್ಯ ಕೆಲಸಗಳ ಕಾರಣ ಗಳಿಂದ ಮಕ್ಕಳ ಕಲಿಕೆಯ ಮೇಲೆ ವ್ಯತೀರಿಕ್ತ ಪರಿಣಾಮದಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕ್ಷಿಣಿಸುತ್ತಾ ಸರ್ಕಾರಿ ಶಾಲೆಗಳು ಮುಚ್ಚಿವೆ ಇನ್ನೂ ಮುಚ್ಚುತ್ತಲಿವೆ ಇಂತಹ ಸಂದರ್ಭದಲ್ಲಿ ಅನವಶ್ಯಕ ಆದೇಶಗಳು ಶಿಕ್ಷಕರಿಗೆ ಮಾತ್ರವಲ್ಲ ಬಡ ವರ್ಗದ ಪಾಲಕರಿಗೂ ಆತಂಕ ಉಂಟುಮಾಡಿದೆ ಕೂಡಲೇ ಇದನ್ನು ವಾಪಸ್ ಪಡೆಯಬೇಕು.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾತಿಯಾಗಲು ಸರ್ಕಾರ ರೂಪರೇಷಗಳನ್ನು ಮಾಡಬೇಕು ಹಾಗೂ ಹೊರಡಿಸಿದ ಆದೇಶ ಹಿಂಪಡೆಯದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವದೆ0ದು ಮ್ಯಾಗಳಮನಿ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ದುರಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ,ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್, ಹನುಮೇಶ್,ಹನುಮಂತಪ್ಪ ಮತ್ತಿತರರು ಇದ್ದರು.

ರೋಟರಿ ಕ್ಲಬ್‌ ವತಿಯಿಂದ ಹಣವಾಳ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ದಿನಾಚರಣೆ
Rotary Club celebrates Women's Day at Hanaval Gram Panchayat

ರೋಟರಿ ಕ್ಲಬ್‌ ವತಿಯಿಂದ ಹಣವಾಳ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ದಿನಾಚರಣೆ


ಗಂಗಾವತಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.9 ರಂದು ಹಣವಾಳ ಗ್ರಾಮ ಪಂಚಾಯಿತಿಯಲ್ಲಿ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಮಹಿಳಾ ಘಟಕದ ವತಿಯಿಂದ ಪಂಚಾಯಿತಿಯ ಸ್ವಚ್ಛತಾ ಮಹಿಳಾ ಸಿಬ್ಬಂದಿ ಹಾಗೂ NRLM ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಡಂ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೇಕ್‌ ಕತ್ತರಿಸಿ ವಸ್ತ್ರಗಳನ್ನು ವಿತರಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಖಜಾಂಚಿಯಾದ ಬಸಮ್ಮ ಅವರು ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇವರು ಮಹಿಳೆಯರು ಇವರಿಂದ ಏನು ಮಾಡಲು ಸಾಧ್ಯ ಎಂದು ಹೀಯಾಳಿಸುವವರ ಮಧ್ಯೆ, ನಾವುಗಳು ಆದಷ್ಟು ಹೆಲ್ತ್ ಕ್ಯಾಂಪ್ ಗಳನ್ನ ಮತ್ತು ಇತರ ಸೋಶಿಯಲ್ ಆಕ್ಟಿವಿಟೀಸ್ ಗಳನ್ನ ಮಾಡುವ ಮುಖಾಂತರ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ರೈಸ್ ಬೌಲ್ ಆಫ್ ಗಂಗಾವತಿ ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಚೌದ್ರಿ, ಕಾರ್ಯದರ್ಶಿಯಾದ ಬಿ ಶ್ರೀದೇವಿ ಮತ್ತು ಪದಾಧಿಕಾರಿಗಳಾದ ಸೋಫಿಯಾ ರಾಣಿ, ಶಾಹಿನ್ ಕೌಸರ್, ಲಲಿತ ನಾಗರಾಜ್ ಹಾಜರಿದ್ದರು̤

ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್‌ ಹಾಗೂ ವಿವಿಧ ಗಣ್ಯರುಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಭೇಟಿ.
Honorable District Sessions Judge Sadananda Naik and various dignitaries visited Lions Eye Hospital.

ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್‌ ಹಾಗೂ ವಿವಿಧ ಗಣ್ಯರು
ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಭೇಟಿ.

ಗಂಗಾವತಿ: ಇತ್ತೀಚೆಗೆ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿ ಉದ್ಘಾಟನೆಗೊಂಡ ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ ನಾಯ್ಕ್‌̧ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ನಾಗೇಶ ಪಾಟೀಲ್‌, ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್‌ ಅವರು ಭೇಟಿ ನೀಡಿದರು.
ಈ ಲಯನ್ಸ್‌ ಕಣ್ಣಿನ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ನಿತ್ಯ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ನಡೆಯುತ್ತಿರುವ ಬಗ್ಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವೈದ್ಯರಾದ ಡಾ|| ಜಿ. ಚಂದ್ರಪ್ಪ, ಡಾ|| ಸೋಮರಾಜು, ಲಯನ್ಸ್‌ ಕಣ್ಣಿನ ಆಸ್ಪತ್ರೆಯ ಚೇರಮನ್‌ರಾದ ಟಿ. ರಾಮಕೃಷ್ಣ, ವೈದ್ಯರಾದ ಡಾ|| ಸ್ನೇಹಲತಾ, ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್‌, ಕಾರ್ಯದರ್ಶಿಯಾದ ಜಂಬಣ್ಣ ಐಲಿ ಹಾಗೂ ಖಚಾಂಚಿಯಾದ ಶಿವಪ್ಪ ಗಾಳಿ ಹಾಗೂ ಇತರೆ ಸದಸ್ಯರು ಭೇಟಿ ನೀಡಿದ ಮಹನೀಯರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಖ್ಯಾತ ಹಾಸ್ಯಭಾಷಣಕಾರರಾದ ಗಂಗಾವತಿ ಪ್ರಾಣೇಶ್‌ ಅವರು ತಮ್ಮ ಕಣ್ಣುಗಳನ್ನು ಲಯನ್ಸ್‌ ಐ ಡೊನೇಷನ್‌ ಸೆಂಟರ್‌ಗೆ ದಾನ ಮಾಡುವುದಾಗಿ ವಾಗ್ಧಾನ ಮಾಡುವ ಮೂಲಕ ಈ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದರು.