ತಾಲೂಕಿನಾದ್ಯಾಂತ  ಹಗಲು ರಾತ್ರಿ ಎನ್ನದೆ ಅಕ್ರಮ ಮರಮ, ಮರಳು ಹಗಲು ರಾತ್ರಿ ಎನ್ನದೆ ಅಕ್ರಮ ಧಂದೆ  ಕಂಣ್ಣು ಮುಚ್ಚಿ  ಕುಳಿತ  ಅಧಿಕಾರಿಗಳು

ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮರಮ ಮತ್ತು ಮರಳು ಮಾಫಿಯಾ ನಡೆಯುತ್ತಿದ್ದು ಕಂಡು ಕಾಣದ ಹಾಗೆ ಕುಳಿತಿರುವ ಸಂಬಂಧ ಪಟ್ಟ ಇಲಾಖೆಗಳು ಎಂದು ಅಜಯ್ ಕುಮಾರ್ ಚಲುವಾದಿ ಅವರು ಆರೋಪಿಸಿದ್ದಾರೆ

ತಾಲೂಕಿನಾದ್ಯಾಂತ  ಹಗಲು ರಾತ್ರಿ ಎನ್ನದೆ ಅಕ್ರಮ ಮರಮ, ಮರಳು ಹಗಲು ರಾತ್ರಿ ಎನ್ನದೆ ಅಕ್ರಮ ಧಂದೆ  ಕಂಣ್ಣು ಮುಚ್ಚಿ  ಕುಳಿತ  ಅಧಿಕಾರಿಗಳು

Illegal mining and sand mining are taking place day and night throughout the taluk, with officials turning a blind eye to the illegal business.

ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಮರಮ ಮತ್ತು ಮರಳು ಮಾಫಿಯಾ ವಿರುದ್ಧ ಅನೇಕ ಬಾರಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದರು ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಗಂಗಾವತಿಯಲ್ಲಿ ಹಗಲು ರಾತ್ರಿ ಎನ್ನದೆ ಟ್ರ್ಯಾಕ್ಟರ್ ಮುಖಾಂತರ ಮತ್ತು ಟಿಪ್ಪರ್ ಮುಖಾಂತರ ರಾಜಾರೋಷವಾಗಿ ಯಾವುದೇ ಅಧಿಕಾರಿಗಳ ಭಯವಿಲ್ಲದೆ ಮರುಮ ಮತ್ತು ಮರಳು ಟಿಪ್ಪರಗಳು ಓಡಾಡುತ್ತಿವೆ ಆದರೆ ಇಲ್ಲಿನ ಅಧಿಕಾರಿಗಳು ಕಂಡು ಕಾಣದ ಹಾಗೆ ಕುಳಿತಿರುವುದು ಮರಳು ಮಾಫಿಯ ಮಾಡುವವರ ಜೊತೆಯಲ್ಲಿ ಅಧಿಕಾರಿಗಳು ಶಾಮೀಲಾಗಿದಾರೋ ಏನೋ ಎಂಬ ಸಂಶಯ ಉಂಟಾಗಿದೆ ಅತಿ ಹೆಚ್ಚು ಭಾರವಿರುವ ಟಿಪ್ಪರ್ ಗಳ ಓಡಾಟದಿಂದ ಅತಿಯಾದ ದೂಳು ವಾತಾವರಣದಿಂದ ಜನರಿಗೆ ತೊಂದರೆಯನ್ನು ಉಂಟುಮಾಡಿ ನಾನಾ ರೋಗಗಳಿಗೆ ಆವಾಹನ ನೀಡುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮರಮು ಮತ್ತು ಮರಳು ಮಾಫಿಯಾ ನಡೆಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ಈ ಮಾಫಿಯಾ ವಿರುದ್ಧ ತಾವುಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನ ನಮ್ಮ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ಗಂಗಾವತಿಯಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದರು

Lic ಯಲ್ಲಿ ಮೊದಲ ಮೂರು ವರ್ಷಗಳ ಒಳಗೆ ಪ್ರೀಮಿಯಂ ನಿಲ್ಲಿಸಿದಾಗ ನಾವು ಕಟ್ಟಿದ ಹಣ ಲ್ಯಾಪ್ಸ್ ಆಗುತ್ತೆ ಆದರೆ ಆ ಹಣ ನಮಗೆ ಸೇರಿದ್ದಲ್ಲ ಅನ್ನುತ್ತಾರೆ ಕಂಪನಿಯವರು
The company says that if we stop paying premium within the first three years of Lic, the money we paid will be forfeited, but that money does not belong to us.




Lic ಯಲ್ಲಿ ಮೊದಲ ಮೂರು ವರ್ಷಗಳ ಒಳಗೆ ಪ್ರೀಮಿಯಂ ನಿಲ್ಲಿಸಿದಾಗ ನಾವು ಕಟ್ಟಿದ ಹಣ ಲ್ಯಾಪ್ಸ್ ಆಗುತ್ತೆ ಆದರೆ ಆ ಹಣ ನಮಗೆ ಸೇರಿದ್ದಲ್ಲ ಅನ್ನುತ್ತಾರೆ ಹಾಗಾದರೆ ಆ ಯಾರಿಗೆ ಸೇರುತ್ತದೆ. ಇಲ್ಲ ನಾವು ಅದರ ಹಕ್ಕುದಾರರಾದರೆ ಹಿಂದಕ್ಕೆ ಹೇಗೆ ಪಡೆದುಕೊಳ್ಳಬಹುದು?

ನೀವು LIC ಅಥವಾ ಯಾವುದೇ ವಿಮಾ ಕಂಪನಿಯಿಂದ ಒಂದು ವಿಮಾ ಪಾಲಿಸಿ ಕೊಂಡಾಗ, ಆ ಸಂಸ್ಥೆಯು ಎರಡು ಅಥವಾ ಮೂರು ವರ್ಷದ ಒಳಗೆ ಪ್ರೀಮಿಯಂ ನಿಲ್ಲಿಸಿದರೆ ನೀವು ತುಂಬಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನಿಯಮಾವಳಿ ಮಾಡಿರುತ್ತವೆ. ಹಾಗೇನಾದರೂ ಆದಲ್ಲಿ ಆ ಹಣವನ್ನು ಅವರು ನಿಮಗೆ ಹಿಂದಿರುಗಿಸುವುದಿಲ್ಲ. ಆ ಹಣವು ವಿಮಾ ಸಂಸ್ಥೆಗೆ ಹೋಗುತ್ತದೆ.ಇದಕ್ಕೆ ಕಾರಣಗಳೆಂದರೆ…ಗ್ರಾಹಕರು ಒಂದು ವಿಮೆ ಪಾಲಿಸಿ ಕೊಂಡಾಗ ವಿಮಾ ಕಂಪನಿಯು ಕೆಲವು ವೆಚ್ಚಗಳನ್ನು ಮಾಡಬೇಕಾಗುತ್ತದೆ. ಈ ಪಾಲಿಸಿಯು ಪೂರ್ಣ ಸಮಯ ನಡೆದಾಗ ಅದರಿಂದ ಗಳಿಸಬಹುದಾದ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವೆಚ್ಚವನ್ನು ಸಂಸ್ಥೆ ಗ್ರಾಹಕರ ಮೇಲೆ ಹಾಕದೆ ತಾನೇ ಭರಿಸುತ್ತದೆ. ಇನ್ನು ಪಾಲಿಸಿ ಕೊಂಡವರು ಆ ಪಾಲಿಸಿಯನ್ನು ಪೂರ್ಣಾವಧಿಯ ವರೆಗೆ ಕಟ್ಟದೆ, ೨- ೩ ವರ್ಷದಲ್ಲೇ ನಿಲ್ಲಿಸಿದರೆ, ಸಂಸ

Namma hana, tammadagi madikolluva ondhu vidhadha sulobhopaya aste. Policy join adha nantara, madhyadalli eno kasta bantu, avaga hana kasidhukondu, aa bevarige ondhu rupayiya bele kooda illa. Satyavagi heludadare , idhu ontara anyaya . commission ge hoitu aa hana antha helabahudu aadare astondhu hana commission hogutta ? Adakke janaru sari alochane madbeku. Dodda motthada policy join agle bardhu. 3 varsha kaledha mele adhannu discontinue madidhru astu hindhe sigolla. Sariyagi tale odisidre hagu stock market vishya namage olle knowledge idhre adhakke seri hana galisbahudu. Adralli enu loss agoll

LIC ಪಾಲಿಸಿಯ ಮೊದಲ 3 ವರ್ಷಗಳಲ್ಲಿ ಪ್ರೀಮಿಯಂ ನಿಲ್ಲಿಸಿದರೆ ಏನಾಗುತ್ತದೆ? ಕಟ್ಟಿದ ಹಣ ಯಾರಿಗೆ ಸೇರುತ್ತದೆ?​ಇದು ಅನೇಕ ಪಾಲಿಸಿದಾರರಿಗೆ ಇರುವ ಸಾಮಾನ್ಯ ಪ್ರಶ್ನೆ. ಇದನ್ನು ಸರಳವಾಗಿ ಹೇಳುವುದಾದರೆ:​1. ಕಟ್ಟಿದ ಹಣ ಯಾರಿಗೆ ಸೇರುತ್ತದೆ?​ನೀವು ಕನಿಷ್ಠ 2 ಅಥವಾ 3 ಪೂರ್ಣ ವರ್ಷಗಳ (ನಿಮ್ಮ ಪಾಲಿಸಿ ಯೋಜನೆಯನ್ನು ಅವಲಂಬಿಸಿ) ಪ್ರೀಮಿಯಂ ಪಾವತಿಸದಿದ್ದರೆ, ನಿಮ್ಮ ಪಾಲಿಸಿಯು ಯಾವುದೇ ಸರೆಂಡರ್ ಮೌಲ್ಯ (Surrender Value) ವನ್ನು ಪಡೆದಿರುವುದಿಲ್ಲ.​ಈ ಸಂದರ್ಭದಲ್ಲಿ, ನೀವು ಪಾವತಿಸಿದ ಪ್ರೀಮಿಯಂ ಹಣವು ಲ್ಯಾಪ್ಸ್ (Lapse) ಆಗುತ್ತದೆ ಮತ್ತು ಅದನ್ನು ನಿಮಗೆ ಹಿಂದಿರುಗಿಸಲಾಗುವುದಿಲ್ಲ.​ಈ ಹಣವು ನಿರ್ದಿಷ್ಟ ವ್ಯಕ್ತಿ/ಪಾಲಿಸಿದಾರನಿಗೆ ಹೋಗುವುದಿಲ್ಲ, ಬದಲಿಗೆ LIC ಯ ಒಟ್ಟಾರೆ ಲೈಫ್ ಫಂಡ್ (Life Fund) ನ ಭಾಗವಾಗುತ್ತದೆ. ಈ ಫಂಡ್ ಅನ್ನು ವ

ಕೆಲವು ಪಾಲಿಸಿಗಳಲ್ಲಿ ಮೊದಲ ವರ್ಷದ ಕ0ತನ್ನು ಹೊರತು ಪಡಿಸಿ…ಎರಡನೇಯ ವರ್ಷದ ಪ್ರೀಮಿಯಂ ನ 30% ನಷ್ಟು ಹಿಂಪಡೆಯುವ ಸೌಲಭ್ಯವಿದೆ.ನೀವು ತುಂಬಿದ ದುಡ್ಡಿಗಿಂತ ಕಡಿಮೆ ಮೊತ್ತ ನಿಮಗೆ ಹಿಂದೂರುಗಿಸಲ್ಪಡುವುದು ( ಲಾಕ್ ಇನ್ ಪಿರಿಯಡ್ ಮುಗಿದ ನಂತರ ).ಇನ್ಶೂರೆನ್ಸ್ ಗೆ ನೀವು ಕ್ಲೇಮ್ ಮಾಡಲು ಆರ್ಹರು ಇರುವುದಿಲ್ಲ.ನಿಮ್ಮ ಡಿಸ್ಕಟಿನ್ಯೂಡ್ ಪ್ರೀಮಿಯಂ ಅನ್ನು ” ಡಿಸ್ ಕಂಟಿನ್ಯೂಡ್ ಪಾಲಿಸಿ ಪ್ರೀಮಿಯಂಸ್ ” ಅಕೌಂಟ್ ಗೆ ವರ್ಗಾಯಿಸಲ್ಪಾಡುತ್ತದೆ.ಪೂರ್ಣ ಮಾಹಿತಿಗೆ ಇನ್ಶೂರೆನ್ಸ್ ಏಜೆಂಟ್ ಇಲ್ಲವೇ ಸಿಬ್ಬಂದಿಗೆ ಸಂಪರ್ಕಿಸಿ.ಬದಲಾವಣೆಗಳಿದ್ದರೆ ನನಗೂ ದಯವಿಟ್ಟು ತಿಳಿಸಿ.

LiC policy of life policies is throwing money into flush .When you get back hardened money it won’t be worth toilet paper.India has highest inflation in world in real terms . GOVT PUBLISHES FROM TIME IMMEMORIAL NON SENCE FIGURES.Because of no security and lack of education in this country people took endowment policy. GOVT IS FLUSH WITH LIC money collected bycheating and stealing gullible especially lower middle income insecurity . Govt also followed policy of loot from helpless

ನೂತನ ಬಸ್ ನಿಲ್ದಾಣದ ಹತ್ತಿರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು ಹೆಚ್ ಆರ್ ಶ್ರೀನಾಥ್ ಹೇಳಿಕೆ

ನೂತನ ಬಸ್ ನಿಲ್ದಾಣದ ಹತ್ತಿರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು ಹೆಚ್ ಆರ್ ಶ್ರೀನಾಥ್ ಹೇಳಿಕೆ

A statue of Chhatrapati Shivaji Maharaj should be built near the new bus stand, says HR Srinath

ಗಂಗಾವತಿ ಫೆ 19:ಛತ್ರಪತಿ ಶಿವಾಜಿ ಮಹಾರಾಜರ ವೃತ್ತವನ್ನು ಇಲ್ಲಿ ನಿರ್ಮಿಸಿರುವುದು ಸೂಕ್ತವಲ್ಲ ಅವರು ನಮ್ಮ ದೇಶಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಎಷ್ಟು ಪ್ರತಿಮೆ ಮಾಡಿದರು ಕಡಿಮೆ ಎಂದು ವಿಧಾನ ಪರಿಷತ್ ಮಾಜಿ ಸಚಿವರಾದ ಹೆಚ್ ಆರ್ ಶ್ರೀನಾಥ್ ಹೇಳಿದರು.
ನಗರದ ರಾಯಚೂರ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದ ಸಮೀಪದ ಛತ್ರಪತಿ ಶಿವಾಜಿ ಮಹಾರಾಜರ ಸರ್ಕಲ್ ಹತ್ತಿರ ಗುರುವಾರ ಹಮ್ಮಿಕೊಂಡಿದ್ದ 399 ನೇ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿ, ಇಂದು ಅನೇಕ ನಿಗಮಗಳು ಆಗಿವೆ ಆದರೆ ಕ್ಷತ್ರಿಯ ಒಕ್ಕೂಟ ಸಮಾಜದ ನಿಗಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ನೀಡುತ್ತಿಲ್ಲ. ಈ ಒಂದು ಸಮಾಜವನ್ನು ಗುರುತಿಸಿ ಅನುದಾನ ನೀಡುವಂತಹ ಕೆಲಸ ಮಾಡಬೇಕು. ಇನ್ನು ನಮ್ಮ ಗಂಗಾವತಿ ನಗರದಲ್ಲಿ ಮುಂದಿನ ವರ್ಷದೊಳಗೆ ಶಿವಾಜಿ ಮಹಾರಾಜ ದೊಡ್ಡ ಪ್ರತಿಮೆ ನೂತನ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಟಾಪನೆ ಮಾಡಬೇಕು ಎಂದರು.
ನಂತರ ಬಿಜೆಪಿಯ ಹಿರಿಯ ಮುಖಂಡ ತಿಪ್ಪೇರುದ್ರಸ್ವಾಮಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಅವರು ಕೇವಲ ಮರಾಠರಿಗೆ ಸೀಮಿತವಲ್ಲ, ಇಡಿ ಭಾರತ ದೇಶದಲ್ಲಿ ಹಿಂದುತ್ವ ನಶಿಸುವ ಸಮಯದಲ್ಲಿ ಹಿಂದುತ್ವಕ್ಕೆ ಮತ್ತೆ ಪುನರ್ ಜನ್ಮ ನೀಡಿದ ಮಹಾನ್ ವ್ಯಕ್ತಿ. ಹಾಗೂ ಮಹಾರಾಜರು ನಮ್ಮ ಕರ್ನಾಟಕದ ಶ್ರೀಮಂತ ಗಡ ಎಂಬ ಗ್ರಾಮಕ್ಕೆ ಆಗಮಿಸಿ ಅಲ್ಲಿರುವಂತಹ ಹೋಳಲಮ್ಮ ದೇವಿ ಶಿವಾಜಿಯ ಸೌರ್ಯಾವನ್ನು ಮೆಚ್ಚಿ ಅವರಿಗೆ ಖಡ್ಗವನ್ನು ನೀಡಿದರು ಎಂಬ ಮಾಹಿತಿ ಇದೆ. ಅಂತಹ ಒಬ್ಬ ಶ್ರೇಷ್ಠ ಮಹಾರಾಜ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಎಂದು ಹೇಳಿದರು.
ನಂತರ ಸಂತೋಷ್ ಕೇಲೋಜಿ ಹಾಗೂ ವಕೀಲರಾದ ನಾಗರಾಜ ಗುತ್ತೇದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಯುವ ಮುಖಂಡರಾದ ಸರ್ವೇಶ್ ಮಾಂತ ಗೊಂಡ , ಕ್ಷತ್ರಿಯ ಸಮಾಜ ಅಧ್ಯಕ್ಷರಾದ ತಿಪ್ಪಣ್ಣ ಬೀದರ್ ಕರ್, ಮರಾಠ ಸಮಾಜದ ಅಧ್ಯಕ್ಷರಾದ ಶರಬೋಜಿ ರಾವ್ ಗಾಯಕವಾಡ, ಅಮರ ಜ್ಯೋತಿ ವೆಂಕಟೇಶ, ಮಾತಾ ಅನ್ನಪೂರ್ಣ ಸಿಂಗ್, ಅಯ್ಯನಗೌಡ ಹೇರೂರು, ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾಗಿರುವ ಚನ್ನಬಸವ ಜೆಕಿನ್, ಉಪತಾಸಿಲ್ದಾರರಾದ ಮಹಾಂತಗೌಡ ಪಾಟೀಲ್, ಮರಾಠ ಸಮಾಜದ ಮುಖಂಡರಾದ, ಕಾಶಿನಾಥ್ ಚಿತ್ರಗಾರ, ಮಾರ್ತಾಂಡ ರಾವ್ ಗಾಯಕವಾಡ, ರಮೇಶ್ ರಾವ್, ಅರವಿಂದ ಕುಟ್ರೆ, ರಮೇಶ್ ರಾವ್ ಎನ್, ಸಿದ್ದು ಗೌಳಿ, ಹಾಗೂ ಇತರರು ಪಾಲ್ಗೊಂಡಿದ್ದರು.

ಸಹೋದರನೇ ನಾಲ್ಕು ತಿಂಗಳ ಗರ್ಭಿಣಿ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆಗೆ AIMSS ಖಂಡನೆ

ಸಹೋದರನೇ ನಾಲ್ಕು ತಿಂಗಳ ಗರ್ಭಿಣಿ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆಗೆ AIMSS ಖಂಡನೆ

AIMSS condemns the incident where a brother attempted to murder his four-month pregnant sister by chopping her with an axe




ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಸಹೋದರನೇ ನಾಲ್ಕು ತಿಂಗಳ ಗರ್ಭಿಣಿ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆಗೆ AIMSS ಖಂಡನೆ

ಪತ್ರಿಕೆಗಳಲ್ಲಿ ವರದಿಯಾದಂತೆ ಕುರುಬ ಜನಾಂಗಕ್ಕೆ ಸೇರಿದ ಮೀನಾಕ್ಷಿ ಒಂದು ವರ್ಷದ ಹಿಂದೆ ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆಯಾಗಿದ್ದರು. ಸಂಬಂಧಿಕರ ಮದುವೆ ಕಾರಣ ಊರಿಗೆ ಬಂದಿದ್ದಾಗ ಆರೋಪಿ ಸಹೋದರ ಮಂಜುನಾಥ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಬರಿಗೊಂಡ ಯುವತಿ ಮದುವೆ ಮಂಟಪದ ಕಡೆ ಓಡಿ ಬಂದಿದ್ದು, ಈ ವೇಳೆ ನೂರಾರು ಜನರ ಸಮ್ಮುಖದಲ್ಲಿಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ಖಾತ್ರಿಪಡಿಸಬೇಕು ಮತ್ತು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಆಗ್ರಹಿಸುತ್ತದೆ.

ಮರ್ಯಾದಾಗೇಡು ಹತ್ಯೆಗೆ ಮುಖ್ಯ ಕಾರಣವೆಂದರೆ ಜಾತಿ ಪದ್ಧತಿಯ ಕಪಿಮುಷ್ಠಿ. ಅಂತರ್ಜಾತಿಯ, ಅಂತರ್ ಧರ್ಮಿಯ ಮದುವೆಗಳ ಬಗ್ಗೆ ಇರುವ ಅತೀವ ಅಸಹನೆಯಿಂದಾಗಿ ನೂರಾರು ಯುವ ಜೋಡಿಗಳು ಹತ್ಯೆಗೀಡಾಗುತ್ತಿದ್ದಾರೆ. ಒಂದು ಸಮುದಾಯ ಅಥವಾ ಕುಟುಂಬದ ಘನತೆಯನ್ನು ಉಳಿಸಿಕೊಳ್ಳಲು ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿಯೂ ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಸಮಾಜವನ್ನು ಪ್ರಜಾತಾಂತೀಕರಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು, ಹಾಗೆಯೇ ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಮಾನ್ಯ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು AIMSS ಮನವಿ ಮಾಡುತ್ತದೆ.

ಹಕ್ಕೊತಾಯಗಳು

1.ಘಟನೆಯನ್ನು ಕೊಲೆ ಯತ್ನ ಎಂದು ಪರಿಗಣಿಸಿ ಪ್ರಕರಣವನ್ನು ಕೂಡಲೇ ದಾಖಲಿಸಿಕೊಂಡು ತನಿಖೆ ನಡೆಸಬೇಕು.

2.ಆರೋಪಿಗೆ ಕಠಿಣ ನಿದರ್ಶನೀಯ ಶಿಕ್ಷೆ ಖಾತ್ರಿಪಡಿಸಬೇಕು.

3.ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಮಾನ್ಯ ಕಾಯ್ದೆಯನ್ನು ಈ ಕೂಡಲೇ ಜಾರಿಗೊಳಿಸಬೇಕು.

4.ಸಮಾಜವನ್ನು ಪ್ರಜಾತಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು.

ನಮ್ಮೂರ ಶಾಲೆ ನಮ್ಮ ಹಕ್ಕು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡುವಂತೆ ತಾಲ್ಲೂಕಿನ ರಾಜ ರಾಮ್ ಪೇಟೆ ಗ್ರಾಮಸ್ಥರ ಆಗ್ರಹ

ನಮ್ಮೂರ ಶಾಲೆ ನಮ್ಮ ಹಕ್ಕು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡುವಂತೆ ತಾಲ್ಲೂಕಿನ ರಾಜ ರಾಮ್ ಪೇಟೆ ಗ್ರಾಮಸ್ಥರ ಆಗ್ರಹ

Our school is our right, demand of villagers of Raja Rampet in the taluk to abandon the KPS magnet project




  ಕೊಪ್ಪಳ: ಹಳ್ಳಿಯ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡಲು ಆಗ್ರಹಿಸಿ ತಾಲೂಕಿನ ರಾಜ ರಾಮ ಪೇಟೆ ಸರ್ಕಾರಿ ಶಾಲೆ ಉಳಿಸಲು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌದಿ ಅವರು ಮಾತನಾಡಿ, ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ರಾಜ್ಯಾದಂತ 5900 ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರವು ನಿರ್ಧರಿಸಿದೆ. ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ಬರುವ ಉಳಿದ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ ಎಂದರು.
ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾ ರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಈ ಯೋಜನೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಈ ಭಾಗಕ್ಕೆ ಸಣ್ಣ ಬೆಲೆ ಇಲ್ಲದಂತಾಗಿದೆ. ಜನಗಳ ಅನುಕೂಲಕ್ಕೆ ಇರುವಂತ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದ ನಿಧಿಯನ್ನು ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಜನ ವಿರೋಧಿ ನೀತಿಯಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು. ರೈತರು-ಕಾರ್ಮಿಕರು-ದಿನಗೂಲಿ ಮಾಡುವವರು ತಮ್ಮ ಮಕ್ಕಳನ್ನು ಕೂಲಿ ಕೆಲಸ ಮಾಡಿ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆ ಮುಚ್ಚಿದರೆ ಅವರ ಮಕ್ಕಳ ಗತಿ ಏನು?”
ರಾಜರಾಮ್ ಪೇಟೆ ಸರ್ಕಾರಿ ಶಾಲೆಯಲ್ಲಿ 50 ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಂದ ಹೊಸಬಂಡಿ ಹರ್ಲಾಪುರ ಕೆಪಿಎಸ್ ಶಾಲೆಗೆ ವೀಲಿನಗೊಂಡು, ಶಾಲೆ ಮುಚ್ಚುದರೆ ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದು ಕೈ ಬಿಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯರಾದ ತುಳಜರಾಮ್ ಏನ್.ಕೆ ಹಾಗೂ ಊರಿನ ಮುಖಂಡರಾದ ಮಂಜುನಾಥ, ಅಶೋಕ, ಸಂಜೀವ ಪೋಷಕರಾದ ಲಕ್ಷ್ಮಿ,ಶ್ರೀನಿವಾಸ್ ವೆಂಕಟೇಶ್,ಸಂಜು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮನೆಯಲ್ಲಿ ನೆಮ್ಮದಿ ಇರಲು ಏನು ಮಾಡಬೇಕು?

ಮನೆಯಲ್ಲಿ ನೆಮ್ಮದಿ ಇರಲು ಏನು ಮಾಡಬೇಕು?

What should you do to feel comfortable at home?




ಮನೆಯಲ್ಲಿ ನೆಮ್ಮದಿಯಿಂದ ಇರಲು ಕಷ್ಟವೇ ಬಿಡಿ. ಮನೆ ಅಂತ ಅಂದ ಮೇಲೆ ಏನಾದ್ರೂ ಒಂದು ಸಮಸ್ಯೆ ಇದ್ದೇ ಇರುತ್ತೆ. ಆಗ ನೆಮ್ಮದಿ ಹೇಗೆ ಇರುತ್ತೆ..??ಮನುಷ್ಯನ ಜೀವನ ಅಂದ ಮೇಲೆ ಹೊಂದಾಣಿಕೆ ತುಂಬಾ ಮುಖ್ಯ. ಏನೇ ಇದ್ರೂ ಕೂಡ compromise ಅನ್ನೋದೇ ಜೀವನ. “Compromise ಆಗಿದ್ರೇನೇ ನೆಮ್ಮದಿ.”ಇತ್ತೀಚಿನ ವರ್ಷಗಳ ತನಕ ಜೀವನವು ಹೇಗೋ ನೆಮ್ಮದಿಯಾಗಿಯೇ ಇತ್ತು.ಕಳೆದ 10 ವರ್ಷಗಳನ್ನು ನೋಡಿದಾಗ ಡಿವೋರ್ಸ್ ಗಳು ತುಂಬಾ ಜಾಸ್ತಿ ಆಗಿವೆ. ಮನೆಯಲ್ಲಿ ನೆಮ್ಮದಿ ಇಲ್ಲ.ಬೇಕಾದಷ್ಟು ಸಂಪಾದನೆ ಇದ್ದವರು ಕೂಡ ಅವರ ಬೇರೆ ಬೇರೆ ಸಮಸ್ಯೆಗಳಿಂದ ನೆಮ್ಮದಿಯಾಗಿಲ್ಲ.ಸಂಪಾದನೆ ಇಲ್ಲದವರು , ಸಂಪಾದನೆ ಸರಿಯಾಗಿಲ್ಲ ಅಂತ ನೆಮ್ಮದಿಯಾಗಿಲ್ಲ.ಮಧ್ಯಮ ವರ್ಗದವರು ಎರಡೂ ರೀತಿಯಲ್ಲೂ ನೆಮ್ಮದಿಯಾಗಿಲ್ಲ.ಅತ್ಯಂತ ಶ್ರೀಮಂತರು, ಅತ್ಯಂತ ಬಡವರು ಹೀಗೆ ಯಾರ ಮನೆಯಲ್ಲಿ ಕೂಡ ನೆಮ್ಮದಿಯಾಗಿಲ್ಲ.ಸಣ್ಣ ಸಮಸ್ಯೆಯೇ ಆದರೂ ಅವರವರಿಗೆ ಅದು ತುಂಬಾ ದೊಡ್ಡ ಸಮಸ್ಯೆ. ತುಂಬಾ ದೊಡ್ಡ ಸಮಸ್ಯೆ ಕೆಲವರಿಗೆ ಸಣ್ಣ ಸಮಸ್ಯೆ..!! ಇದು ವಿಚಿತ್ರ ಆದರೂ ಸತ್ಯ..!!ಒಟ್ನಲ್ಲಿ ಮನೆಯಲ್ಲಿ ನೆಮ್ಮದಿ ಕಷ್ಟವಾಗಿದೆ. ಆದ್ದರಿಂದ “ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ” ಅಂತ ಅಂದ್ಕೊಂಡು ಜೀವನ ಮಾಡ್ಬೇಕಾಗುತ್ತೆ.ಮನೆಯಲ್ಲಿ ನೆಮ್ಮದಿ ಪಡೆಯಲು ಮನೆಯವರು ಕುಳಿತು ಅವರೇ ಮಾತುಕತೆ ಮೂಲಕ ಬಗೆಹರಿಸಿ ಕೊಂಡು ಅವರವರ ನೆಮ್ಮದಿ ಅವರೇ ತಗೋಬೇಕೇ ಹೊರತು, ಇವತ್ತಿನ ದಿನ ಬೇರೆಯವರ ಯಾವ ಉಪದೇಶಗಳನ್ನು ಅವರು ಕೇಳಲು ರೆಡಿ ಇರೋದಿಲ್ಲ. ಬೇರೆಯವರು ಸಲಹೆ ಕೊಡುವುದು ಕೂಡ ಸೂಕ್ತ ಅಲ್ಲ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಆಗುವ ಪರಿಣಾಮ ಏನು?

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಆಗುವ ಪರಿಣಾಮ ಏನು?

What are the effects of drinking tea on an empty stomach?




ಖಾಲಿ ಹೊಟ್ಟೆಗೆ ಯಾವುದೇ ಕಾರಣಕ್ಕೂ ಚಹಾ ಗಳನ್ನು ಕುಡಿಯಬಾರದು ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿಯುವುದರಿಂದ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಖಾಲಿ ಹೊಟ್ಟೆಯಲ್ಲಿ ಕಾಫಿ ಟೀ ಕುಡಿದೆ, ಗ್ಯಾಸ್ಟ್ರಿಕ್ ಬರುತ್ತದೆ ಬೆಳಿಗ್ಗೆ 6:00 ಒಳಗೆ ಬಿಸಿ ನೀರಿನ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಡಾ. ಕೋಲ್ಕಾರ ಪುಸ್ತಕ ಪ್ರಶಸ್ತಿಗೆ ಭಾಜನ

ಡಾ. ಕೋಲ್ಕಾರ ಪುಸ್ತಕ ಪ್ರಶಸ್ತಿಗೆ ಭಾಜನ

Dr. Kolkara Book Award Winner




ಗಂಗಾವತಿಯ ಕಲ್ಮಠ ಮಹಿಳಾ ಕಾಲೇಜಿನ ಪ್ರಾಚಾರ್ಯ ಹಾಗೂ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಅವರ ಪುಸ್ತಕ ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಂಘದ  ‘ಸಾಹಿತ್ಯ ಕೃತಿ’ ಪ್ರಶಸ್ತಿಗೆ ಭಾಜನವಾಗಿದೆ. ಸಂಘವು  ಪ್ರತಿವರ್ಷ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸಾಹಿತಿಗಳ ಆರು ಪುಸ್ತಕಗಳಿಗೆ  ಪ್ರಶಸ್ತಿ ನೀಡುತ್ತಾ ಬರುತ್ತಿದೆ. 2025 ರ ಸಾಲಿನಲ್ಲಿ ಸಂಕೀರ್ಣ ಸಾಹಿತ್ಯ ಪ್ರಕಾರದಲ್ಲಿ ಡಾ. ಶರಣಬಸಪ್ಪ ಕೋಲ್ಕಾರ ಅವರ ‘ ಕಲ್ಯಾಣ ಕರ್ನಾಟಕದ ಪ್ರಾಗಿತಿಹಾಸ ಮತ್ತು ಆದಿಮ ಸಂಸ್ಕೃತಿ’ ಎಂಬ ಪುಸ್ತಕ ಪರಿಗಣಿಸಲ್ಪಟ್ಟಿದೆ. ಲೇಖಕರಿಗೆ ಇದೆ ಫೆಬ್ರವರಿ 22 ರಂದು ಕಲಬುರಗಿಯಲ್ಲಿ  ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ್ ಸ್ಮರಣಾರ್ಥ  ಸಾಹಿತ್ಯ ಕೃತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಮತ್ತು ಪ್ರಶಸ್ತಿಯು ನಗದು ಹಣ ಮತ್ತು ಅಭಿನಂಧನಾ ಪತ್ರ ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೊಣೆಯವರು ತಿಳಿಸಿದ್ದಾರೆ

ದೇಶವೇ ಮೊದಲೆಂದ ಭಾರತೀಯ ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ : ಪ್ರೊ. ಕರಿಗೂಳಿ

ದೇಶವೇ ಮೊದಲೆಂದ ಭಾರತೀಯ ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ : ಪ್ರೊ. ಕರಿಗೂಳಿ


Chhatrapati Shivaji is the source of inspiration for Indian youth as the nation comes first: Prof. Kariguli




ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 19-02-2026 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ದೇಶಪ್ರೇಮಿ ರಾಷ್ಟ್ರೀಯ ಚೈತನ್ಯದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಂಕ್ರಪ್ಪ ಎಂ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರು ಕೇವಲ ಒಬ್ಬ ಯೋಧನಲ್ಲ, ರಾಷ್ಟ್ರದ ಪುನರುಜ್ಜೀವನದ ಸಂಕೇತವಾಗಿದ್ದರು ಎಂದು ತಿಳಿಸಿದರು. “ಸ್ವರಾಜ್ಯವೆಂಬ ಕನಸು ಕಾಣಲು ಧೈರ್ಯ ಬೇಕು; ಆದರೆ ಅದನ್ನು ಸಾಧಿಸಲು ಶಿವಾಜಿಯಂತಹ ಆತ್ಮಶಕ್ತಿ ಬೇಕು” ಎಂದು ಉಲ್ಲೇಖಿಸುತ್ತಾ ಮಾತನಾಡಿದ ಅವರು
ಗೆರಿಲ್ಲಾ ಯುದ್ಧತಂತ್ರ ,ಕೋಟೆ ನಿರ್ಮಾಣ ಮತ್ತು ಸಮುದ್ರ ನೌಕಾಪಡೆಯ ಸ್ಥಾಪನೆ, ಅಷ್ಟಪ್ರಧಾನ ಮಂಡಳಿ ವ್ಯವಸ್ಥೆ ಮುಂತಾದವುಗಳ ಮೂಲಕ ಶಿವಾಜಿಯವರು ಆಡಳಿತದ ಆಧುನಿಕ ದೃಷ್ಟಿಕೋನವನ್ನು ರೂಪಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರೀ ಕರಿಗೂಳಿ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರ ಸಮಾಧಿ ಸ್ಥಳವನ್ನು ಹಾಗೂ ಮುಚ್ಚಲ್ಪಟ್ಟ ಇತಿಹಾಸವನ್ನು ಶೋಧಿಸಿ ಹೊರತೆಗೆದು ಪ್ರಪ್ರಥಮ ಬಾರಿಗೆ ಶಿವಾಜಿಯವರ ಜಯಂತ್ಯೋತ್ಸವವನ್ನು ಆಚರಣೆ ಮಾಡಿ, ನೈಜ ಇತಿಹಾಸವನ್ನು ಜಗತ್ತಿಗೆ ಪರಿಚಯ ಮಾಡಿರುವ ಕೀರ್ತಿಯು ಸಾಮಾಜಿಕ ಪರಿವರ್ತನೆಯ ಪಿತಾಮಹರಾದ ಮಹಾತ್ಮ ಜ್ಯೋತಿರಾವ್ ಫುಲೆಯವರಿಗೆ ಸಲ್ಲುತ್ತದೆ ಎಂದರು, ಶಿವಾಜಿ ಮಹಾರಾಜರು ಧರ್ಮಸಹಿಷ್ಣುತೆ ಮತ್ತು ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು,ತಾಯ್ತನಕ್ಕೆ ಅವರು ನೀಡಿದ ಗೌರವ, ಯಾರಿಗೂ ತಲೆತಗ್ಗಿಸದೆ ತಲೆಯೆತ್ತಿ ನಿಲ್ಲಿರಿ ಎಂಬ ಅವರ ಸ್ವಾಭಿಮಾನಯುಕ್ತ ಕರೆ, ದೇಶವೇ ಮೊದಲು ಎಂಬ ಅವರ ಗುಣಗಳು ಭಾರತದ ಎಲ್ಲಾ ಯುವಕರಿಗೆ ಸದಾ ಸ್ಫೂರ್ತಿ ಎಂದರು ತಿಳಿಸಿದರು.
‘ಛತ್ರಪತಿ ಎಂದರೆ ರಕ್ಷಕ’ ಹಾಗೆಯೇ
ಇಂದಿನ ಯುವಕರು ಸಾoವಿಧಾನಿಕ ಭಾರತದಲ್ಲಿ ಶಿವಾಜಿಯ ಆದರ್ಶಗಳನ್ನು ರೂಡಿಸಿಕೊಂಡು ‘ಸಂವಿಧಾನ- ಭಾರತದ ರಕ್ಷಕರಾಗಿ’ ದೇಶದ ಏಳಿಗೆಗೆ ಕಂಕಣಬದ್ಧರಾಗಿ,
ಶಿವಾಜಿ ಜಯಂತಿ ಆಚರಣೆ ಕೇವಲ ಸ್ಮರಣೆ ಮಾತ್ರವಲ್ಲ, ಅದು ಯುವಜನತೆಗೆ ಆತ್ಮಗೌರವ, ನಾಯಕತ್ವ ಮತ್ತು ರಾಷ್ಟ್ರಪ್ರೇಮದ ಪಾಠವಾಗಿದೆ ಎಂದು ಅವರು ಸಮಾರೋಪಿಸಿದರು.

ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕದ & ಐಕ್ಯೂಎಸಿ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಅಧ್ಯಾಪಕಾರದ, ಡಾ.ಸರಪರಾಜ್ ಅಹಮದ್ ವೀರೇಶ್, ಐಕ್ಯೂಎಸಿ ಸಂಚಾಲಕ ರವಿಕುಮಾರ, ಡಾ. ಶಶಿಕುಮಾರ, ವಿರೂಪಾಕ್ಷ ಕೆ, ಉಪನ್ಯಾಸಕರಾದ ವೆಂಕಟರಾಜು, ಈಶಪ್ಪ,ಅಯ್ಯಪ್ಪ, ಬಾಲಚಂದ್ರ ಸಾಯಿಕುಮಾರ, ಪ್ರವೀಣ್ ಕುಮಾರ್, ಪೆನಜಾ, ಮಲ್ಲಯ್ಯ, ಸುರೇಶ ಗೌಡ, ಚೆನ್ನಮಲ್ಲ, ಸಹಾಯಕ ಸಿಬ್ಬಂದಿ, ಶಾಂತಿ, ಚಿನ್ನವರಪ್ರಸಾದ್, ಶರಣಬಸವ ಹಾಗೂ ಕಾಲೇಜಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಹಾಜರಿದ್ದರು.

ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ- ಸಚಿವ ಶಿವರಾಜ ಎಸ್. ತಂಗಡಗಿ

ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ- ಸಚಿವ ಶಿವರಾಜ ಎಸ್. ತಂಗಡಗಿ

Work hard to increase SSLC results in the district - Minister Shivaraj S. Thangadgi





ಕೊಪ್ಪಳ ಫೆಬ್ರುವರಿ 17 (ಕರ್ನಾಟಕ ವಾರ್ತೆ): ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದ್ದು, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳ ಸಮೀಪಕ್ಕೆ ಬಂದು ಅನುತ್ತೀರ್ಣರಾಗಿರುವ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲಾ ಶಿಕ್ಷಕರು ಶ್ರಮವಹಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೊಪ್ಪಳ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಮುಖ್ಯೋಪಾಧ್ಯರುಗಳಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಗಮನವನ್ನು ಹರಿಸಬೇಕು. ಈ ಅವಧಿಯನ್ನು ಮಕ್ಕಳಿಗಾಗಿಯೇ ಮೀಸಲಿಡಬೇಕು. ಮಕ್ಕಳಿಗೆ ಪರೀಕ್ಷೆಗೆ ತೇರ್ಗಡೆಗೆ ಅನುಕೂಲವಾಗುವಂತಹ ಸಾಮಾನ್ಯ ಜ್ಞಾನವನ್ನು ಹೇಳಿಕೊಡಬೇಕು. ವಿಶೇಷ ತರಗತಿಗಳ ಮೂಲಕ ಅವರ ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ಕ್ರಮವಹಿಸಬೇಕು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನ, ಚಿಂತನೆಗಳಿಂದ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ತಂದೆ-ತಾಯಿಗೆ ನೀಡುವ ಗೌರವಕ್ಕಿಂತಲೂ ಹೆಚ್ಚಾಗಿ ಗುರುಗಳಿಗೆ ಗೌರವನ್ನು ನೀಡುತ್ತಾರೆ. ಜೀವ ಉಳಿಸುವ ಶಕ್ತಿ ವೈದ್ಯರ ಕೈಯಲ್ಲಿದ್ದರೆ, ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಗುರುಗಳಲ್ಲಿದೆ. ಈ ನಿಟ್ಟಿನಲ್ಲಿ ತಾವುಗಳು ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ವಿಶೇಷ ಕಾಳಜಿವಹಿಸಬೇಕು. ಭವಿಷ್ಯದಲ್ಲಿ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆದಾಗ, ಆ ಕೀರ್ತಿ ನಿಮಗೆ ಸಲ್ಲುತ್ತದೆ. ಶೇ.100 ರಷ್ಟು ಫಲಿತಾಂಶ ಬರುವ ಶಾಲೆಗೆ ಬಹುಮಾನವನ್ನು ನೀಡಿ ಆ ಶಾಲೆಯ ಮುಖ್ಯೋಪಾಧ್ಯಯರಿಗೆ ಮತ್ತು ಉತ್ತಮ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವುದು ಎಂದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ಇಲ್ಲಿಂದಲೇ ವಿದ್ಯಾರ್ಥಿಗಳ ಜೀವನದಲ್ಲಿ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಈ ಎರಡು ಹಂತದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಈ ಬಗ್ಗೆ ಆಯಾ ಶಾಲಾ, ಕಾಲೇಜುಗಳ ಮುಖ್ಯಸ್ಥರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಜಿಲ್ಲೆಯ ದ್ವಿತಿಯ ಪಿಯುಸಿಯ ಫಲಿತಾಂಶವು ಉತ್ತಮ ಸ್ಥಾನದಲ್ಲಿದೆ. ಇದು ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು. ಮುಖ್ಯಮಂತ್ರಿಗಳು ಪ್ರತಿ ವರ್ಷದಲ್ಲಿ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಸಿಇಒ ಮತ್ತು ಎಸ್.ಪಿ ಅವರೊಂದಿಗೆ ಸಭೆ ತೆಗೆದುಕೊಳ್ಳುತ್ತಾರೆ. ಆ ಸಭೆಯಲ್ಲಿ ಶಿಕ್ಷಣದ ಬಗ್ಗೆಯೇ ಪ್ರಮುಖ ಚರ್ಚೆಗಳಾಗುತ್ತವೆ. ಹಾಗಾಗಿ ನಮ್ಮ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯುವಂತೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.  
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಬಹಳ ಮುಖ್ಯ, ವಿದ್ಯಾರ್ಥಿಗಳು ಜೀವನದ ತಿರುವು ಇದಾಗಿದೆ. ಒಂದನೇ ಮತ್ತು ಎರಡನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಲು ಹೆಚ್ಚಿನ ಕ್ರಮ ವಹಿಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಆದಷ್ಟ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನ ಮತ್ತು ಭೋದನೆ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ, ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತಾನಾಡಿ, ವಿದ್ಯಾರ್ಥಿಗಳು ಯಾವ ವಿಷಯ ಕಷ್ಟ ಅಂತ ಹೇಳತಾರೆ, ಅಂತಹ ವಿಷಯಗಳನ್ನು ಮತ್ತೆ ಮತ್ತೆ ಅವರಿಗೆ ಹೇಳಿ ಕೊಡಿ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕ್ರಮವಹಿಸಿ. ಪೂರ್ವ ಸಿದ್ದತಾ ಪರೀಕ್ಷೆಗೆ ಯಾವೊಬ್ಬ ವಿದ್ಯಾರ್ಥಿ ಕೂಡ ಗೈರುಹಾಜರಿಯಲ್ಲಿ ಇರದಂತೆ ಸಹ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಷಯ ಪರಿವೀಕ್ಷಕರು, ವಿವಿಧ ಪ್ರೌಢ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.