ಆಡಳಿತ ಮಂಡಳಿ ಸಾಮಾನ್ಯ ಸಭೆ.

ಆಡಳಿತ ಮಂಡಳಿ ಸಾಮಾನ್ಯ ಸಭೆ.

General meeting of the Board of Directors.





ಕಾರಟಗಿ: ತಾಲೂಕಿನ ಸಿಂಗನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯನ್ನು ದಿನಾಂಕ: 26/02/2026 ರಂದು ಗುರುವಾರ ಬೆಳಗ್ಗೆ 8: 40 ನಿಮಿಸಕ್ಕೆ ಸಂಘದ ಆವರಣದಲ್ಲಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯನ್ನು ಜರಗಿಸಲಾಗುವುದು ಆಡಳಿತ ಮಂಡಳಿಯವರು ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಸಂಘದ ಸಹಾಯಕ ಕಾರ್ಯದರ್ಶಿಯಾದ ಯಮನೂರ ಎಂ ಸಿಂಗನಾಳ ಪತ್ರಿಕ ಪ್ರಕಟಣೆಗೆ ತಿಳಿಸಿದ್ದಾರೆ.

ನಗರ ಸಭೆ ವ್ಯಾಪ್ತಿಯ ವಾರ್ಡ್ ನಂಬರ್ 31 ರಲ್ಲಿನ ಸರಸ್ವತಿ ನ್ಯಾಯಬೆಲೆ ಅಂಗಡಿಯನ್ನು ರದ್ದುಪಡಿಸಲು ಮುಂದಾದ ಕ್ರಮವನ್ನು ಖಂಡಿಸಿ ಪ್ರತಿಭಟನೆ.

ನಗರ ಸಭೆ ವ್ಯಾಪ್ತಿಯ ವಾರ್ಡ್ ನಂಬರ್ 31 ರಲ್ಲಿನ ಸರಸ್ವತಿ ನ್ಯಾಯಬೆಲೆ ಅಂಗಡಿಯನ್ನು ರದ್ದುಪಡಿಸಲು ಮುಂದಾದ ಕ್ರಮವನ್ನು ಖಂಡಿಸಿ ಪ್ರತಿಭಟನೆ.

Protest condemning the move to close down the Saraswati Fair Price Shop in Ward No. 31 of the city council.


ಗಂಗಾವತಿ.. ಇಲ್ಲಿನ ನಗರಸಭೆ ವ್ಯಾಪ್ತಿಯ ವಿರುಪಾಪುರ ತಾಂಡಾದಲ್ಲಿರುವ ಹಲವು ವರ್ಷಗಳಿಂದ ನ್ಯಾಯಬೆಲೆ ಅಂಗಡಿಯನ್ನು ನಡೆಸಿಕೊಂಡು ಬರುತ್ತಿರುವ ಸರಸ್ವತಿ ನ್ಯಾಯಬೆಲೆ ಅಂಗಡಿಯನ್ನು ವಿನಾಕಾರಣ ಸುಳ್ಳು ಆರೋಪಗಳನ್ನು ನಡೆಸಿ ರದ್ದುಪಡಿಸಲು ಮುಂದಾದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು ಸದಸ್ಯರು ಸೇರಿದಂತೆ ವಾರ್ಡಿನ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದರು. ವಿರುಪಾಪುರ್ ತಂಡ ದಿಂದ ಹೊರಟ ಪ್ರತಿಭಟನೆಕಾರರು ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಆಗಮಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಾಂಡು ನಾಯ್ಕ್ ಮಾತನಾಡಿ. ಸರಸ್ವತಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಯಾವುದೇ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಜೊತೆಗೆ ಹಲವು ಲೋಪಗಳನ್ನು ವೆ ಸಗಿದ್ದಾರೆ ಎಂದು ಆರೋಪಿಸಿ ನ್ಯಾಯಬೆಲೆ ಅಂಗಡಿಯಲ್ಲೂ ರದ್ದುಗೊಳಿಸಿ ತಮಗೆ ಬೇಕಾದವರಿಗೆ ಅವಕಾಶ ನೀಡಲು ಮುಂದಾದ ಕ್ರಮ ಸೂಕ್ತದಾಯಕವಲ್ಲ ಈ ಹಿನ್ನೆಲೆಯಲ್ಲಿ ಈ ಎಂದಿನಂತೆಯೇ ನ್ಯಾಯಬೆಲೆ ಅಂಗಡಿಯನ್ನು ಮುಂದುವರಿಸಿ ಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಯಾವುದೇ ಕಾರಣಕ್ಕೂ ರದ್ದುಪಡಿಸಲು ಮುಂದಾದಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಾಲಾಜಿ ಮೇಸ್ತ್ರಿ ಪ್ರಧಾನ ಕಾರ್ಯದರ್ಶಿ ಶಿವಪ್ಪ ಸಹಕಾರಿ. ಶಿವಪ್ಪ ರಾಥೋಡ್ ಮೇಸ್ತ್ರಿ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಮೇಸ್ತ್ರಿ ಹಾಗೂ ಖಜಾಂಚಿ ರವಿಚಂದ್ರ ಮೇಸ್ತ್ರಿ ಸೇರಿದಂತೆ ವಾರ್ಡಿನ ಮಹಿಳೆಯರು ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪತಸಿಲ್ದಾರ್ ಮಹಾಂತಗೌಡ ಪಾಟೀಲ್ ಅವರಿ ಗೆ ಮನವಿ ಪತ್ರ ಸಲ್ಲಿಸಿದರು

ಬೆಲವಾಲ್ ಫೌಂಡೇಶನ್ ನಿಂದ ಒಂದು ಕೋಟಿ ವೃಕ್ಷಾರೋಪಣಾ ಅಭಿಯಾನ

ಬೆಲವಾಲ್ ಫೌಂಡೇಶನ್ ನಿಂದ ಒಂದು ಕೋಟಿ ವೃಕ್ಷಾರೋಪಣಾ ಅಭಿಯಾನ

Belawal Foundation launches one crore tree plantation campaign




ಬೆಂಗಳೂರು,ಫೆ,21:ಬೆಲವಾಲ್ ಫೌಂಡೇಶನ್ ಕರ್ನಾಟಕ ಮತ್ತು ಭಾರತದಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅನೇಕ ಎನ್ಜಿಒಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸ್ವಯಂಸೇವಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಪರಿಸರ ಸಂರಕ್ಷಣೆಯ ಈ ಬೃಹತ್ತಾದ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಲವಾಲ್ ಫೌಂಡೇಷನ್ ಸಂಸ್ಥಾಪಕ ಮತ್ತು ಸಿಡಿಒ ಸಂಜಯ್ ಬೆನವಾಲ್, ಪ್ರಗತಿ ಫೌಂಡೇಷನ್ ಸಂಸ್ಥಾಪಕರಾದ ಕಲ್ಯಾಣಮ್ಮ, ಎನ್ಜಿಒಗಳು ಹಾಗೂ ಕಾರ್ಪೊರೇಟ್ಗಳ ಬೆಂಬಲದೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ.
ಪ್ರತಿಯೊಬ್ಬರೂ ಒಂದು ಗಿಡ ನೆಡಿ. ಆರೋಗ್ಯಕರ ಜೀವನ ಮತ್ತು ಶುದ್ಧ ಗಾಳಿಯಲ್ಲಿ ಉಸಿರಾಡುವ ಹಕ್ಕಿಗಾಗಿ ತಾಯಿ ಭೂಮಿ ಹಾಗೂ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ವರದಿಯ ಪ್ರಕಾರ, ಮಾರ್ಚ್ 2024ರ ವೇಳೆಗೆ ಕರ್ನಾಟಕದಲ್ಲಿ ಒಟ್ಟು 86,308.44 ಹೆಕ್ಟೇರ್ ಅರಣ್ಯ ಭೂಮಿಯನ್ನು ಅತಿಕ್ರಮಿಸಲಾಗಿದೆ. ಹೀಗಾಗಿ ಇಂದಿನ ಸಮಯದಲ್ಲಿ ವೃಕ್ಷಾರೋಪಣೆ ಅತ್ಯಂತ ಅಗತ್ಯವಾಗಿದೆ ಎಂದರು.

ಇದೀಗ ಭೂಮಿ ಸಹಾಯಕ್ಕಾಗಿ ಬೇಡುತ್ತಿದ್ದು, ಮರಗಳು ಅದರ ಮೌನ ರಕ್ಷಕರಾಗಿದ್ದಾರೆ. ಒಂದು ಕಾಲದಲ್ಲಿ ಹಸಿರು ಕಾಡುಗಳಿಂದ ಆವೃತವಾಗಿದ್ದ ನಮ್ಮ ಗ್ರಹ ಇಂದು ಅತಿರೇಕದ ಅರಣ್ಯನಾಶ ಮತ್ತು ಮಾಲಿನ್ಯದಿಂದ ಉಸಿರುಗಟ್ಟುತ್ತಿದೆ. ಪ್ರತಿಯೊಂದು ಮರ ಕಡಿತವಾಗುವಾಗಲೂ ನಾವು ಅಸುರಕ್ಷಿತ ಮತ್ತು ಜೀವವಿಲ್ಲದ ಭವಿಷ್ಯಕ್ಕೆ ಇನ್ನೊಂದು ಹೆಜ್ಜೆ ಹತ್ತಿರವಾಗುತ್ತೇವೆ. ಹೆಚ್ಚುತ್ತಿರುವ ತಾಪಮಾನ, ಮಾಲಿನ್ಯಗೊಂಡ ಗಾಳಿ, ಒಣಗುತ್ತಿರುವ ನದಿಗಳು ಹಾಗೂ ಅನಿಶ್ಚಿತ ಹವಾಮಾನವು ಪ್ರಕೃತಿಯ ನೋವಿನ ಸ್ಪಷ್ಟ ಸೂಚನೆಗಳಾಗಿವೆ ಎಂದು ಹೇಳಿದರು.

ಮರಗಳು ಕೇವಲ ಸಸ್ಯಗಳಲ್ಲ; ಅವು ಜೀವದಾತು. ಮರಗಳಿಲ್ಲದೇ ಭೂಮಿಯ ಮೇಲೆ ಜೀವನ ಸಾಧ್ಯವಿಲ್ಲ. ವೃಕ್ಷಾರೋಪಣೆ ಈಗ ಆಯ್ಕೆಯಲ್ಲ ಅದು ಸಮಯದ ತುರ್ತು ಅಗತ್ಯವಾಗಿದೆ. ಮರ ನೆಟ್ಟಾಗ, ಜೀವನ, ಕನಸುಗಳನ್ನು ನೆಡುತ್ತೇವೆ ಮತ್ತು ನಮ್ಮ ಮಕ್ಕಳಿಗಾಗಿ ಭವಿಷ್ಯವನ್ನು ರೂಪಿಸಲು ಮುಂದಾಗುತ್ತೇವೆ. ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ಮದುವೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಒಂದು ಮರವನ್ನು ನೆಡುವುದು ಅತ್ಯಂತ ಅಗತ್ಯ, ಪ್ರತಿ ಗಿಡಕ್ಕೂ ಜಿಯೋ-ಟ್ಯಾಗ್ ಮಾಡಲಾಗುತ್ತಿದ್ದು, ನೀತಿಗಳು ಅಭಿವೃದ್ಧಿಯಾಗುವಂತೆ ಕಾರ್ಬನ್ ಕ್ರೆಡಿಟ್ಗಳನ್ನು ಸಂಗ್ರಹಿಸಲಾಗುವುದು ಹೆಚ್ಚಿನ ಮಾಹಿತಿಗೆ: 9740466377 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥಾನ್ ತತ್ವ ಸಂಸ್ಥೆಯ ಸಂಸ್ಥಾಪಕ ಶ್ರೀ ಬ್ರಜಾ ಚತುರ್ವೇದಿ, ಸುರಕ್ಷಾ ಎನ್ವಿರೋ ಸಲ್ಯೂಷನ್ಸ್ ನ ಸಂಸ್ಥಾಪಕ ಬಾಲಗಂಗಾಧರ್, ವರ್ಲ್ಡ್ ಸ್ಪಿರಿಚುಯಲ್ ಆರ್ಗನೈಸೇಷನ್ ಸಂಸ್ಥಾಪಕರಾದ ನಾರಾಯಣ್ ಕುಡ್ವ, ನಮ್ಮಹಲ್ಲಿ ರೇಡಿಯೋ ಸಂಸ್ಥೆಯ ಸಿಇಒ ಗಿರೀಶ್, ಹರಿತೋತ್ಸವ್ ಫೋರಂನ ನಿರ್ದೇಶಕ ಆರತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿಂಹ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಸಮು ದಾ ಯದತ್ತ ಸರ್ಕಾ ರಿ ಪ್ರೌ ಢಶಾ ಲೆ ಶಾ ಲೆ ಹಿರೇ ಜಂ ತಕಲ್

ಸಮು ದಾ ಯದತ್ತ ಸರ್ಕಾ ರಿ ಪ್ರೌ ಢಶಾ ಲೆ ಶಾ ಲೆ ಹಿರೇ ಜಂ ತಕಲ್

The government has a great responsibility to protect the people of Samudra.


ಗಂಗಾವತಿ: ಫೆ.19 ಗು ರು ವಾ ರದಂ ದು ಸಾ ಯಂ ಕಾ ಲ 5:30 ರಿಂ ದ ರಾ ತ್ರಿ 9:00 ವರೆಗೆ ಗಂ ಗಾ ವತಿಯ 32ನೇ ವಾ ರ್ಡ್
ಹಿರೇ ಜಂ ತಕಲ್ ಬಸವಣ್ಣ ದೇ ವರ ದೇ ವಸ್ಥಾ ನದಲ್ಲಿ ಸರಕಾ ರಿ ಪ್ರೌ ಢಶಾ ಲೆ ಹಿರೇ ಜಂ ತಕಲ್ ವತಿಯಿಂ ದ ಸಮು ದಾ ಯ
ಜಾ ಗೃತಿ ಕಾ ರ್ಯ ಕ್ರಮ ಹಾ ಗೂ ಪ್ರತಿಭಾ ಪು ರಸ್ಕಾ ರ ಕಾ ರ್ಯ ಕ್ರಮವನ್ನು ಆಯೋ ಜನೆ ಮಾ ಡಲಾ ಗಿತ್ತು .
ಈ ಕಾ ರ್ಯ ಕ್ರಮದಲ್ಲಿ ಮಾ ಜಿ ನಗರಸಭಾ ಅಧ್ಯ ಕ್ಷರಾ ದ ರಾ ಘವೇಂ ದ್ರ ಶ್ರೇ ಷ್ಠಿ, ಮಾ ಜಿ ನಗರಸಭಾ ಸದಸ್ಯ ರಾ ದ
ಹು ಸೇ ನಪ್ಪ ಹಂ ಚಿನಾ ಳ, ಶ್ರೀ ಮತಿ ಹು ಲಿಗೆಮ್ಮ ಕಿರಿಕಿರಿ, ಪರಮೇ ಶ್ವರಪ್ಪ ಈಡಿಗೇ ರ್, ಗಂ ಗಾ ವತಿ ತಾ ಲೂ ಕ ಗ್ಯಾ ರಂ ಟಿ
ಯೋ ಜನೆಗಳ ಸದಸ್ಯ ರಾ ದ ಪರಶು ರಾ ಮ ಕಿರಿಕಿರಿ ಇವರು ಭಾ ಗವಹಿಸಿದ್ದರು .
ಈ ಸಂ ದರ್ಭ ದಲ್ಲಿ SSLC ಪರೀ ಕ್ಷೆಗೆ ಉಳಿದಿರು ವ 25 ದಿನಗಳಲ್ಲಿ ಮಕ್ಕ ಳು ಓದಲು ಮನೆಯಲ್ಲಿ ಪಾ ಲಕರು
ಪೂ ರಕ ವಾ ತಾ ವರಣ ನಿರ್ಮಾ ಣ ಮಾ ಡಲು ತಿಳಿಸಿದರು ಹಾ ಗೂ ಸಮಾ ಜದಲ್ಲಿರು ವ ಬಾ ಲ್ಯ ವಿವಾ ಹ ವಿವಾ ಹ ಹಾ ಗೂ
ಬಾ ಲಕಾ ರ್ಮಿ ಕ ಪದ್ಧತಿಗಳ ಕೈ ಬಿಡು ವಂ ತೆ ಜಾ ಗೃತಿ ಮೂ ಡಿಸು ವ ಬಗ್ಗೆ ಮನವಿ ಮಾ ಡಿದರು .
ಈ ಸಂ ದರ್ಭ ದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀ ಕ್ಷೆಯಲ್ಲಿ ಉತ್ತಮ ಸಾ ಧನೆ ಮಾ ಡಿದ ವಿದ್ಯಾ ರ್ಥಿ ಗಳನ್ನು
ಸನ್ಮಾ ನಿಸಲಾ ಯಿತು ಹಾ ಗೂ ಪ್ರಸ್ತು ತ ಸಾ ಲಿನ ಎರಡನೇ ರಾ ಜ್ಯ ಮಟ್ಟದ ಪೂ ರ್ವ ಸಿದ್ಧತಾ ಪರೀ ಕ್ಷೆಯಲ್ಲಿ ಮೊದಲ 10
ಸ್ಥಾ ನ ಪಡೆದ ವಿದ್ಯಾ ರ್ಥಿ ಗಳಿಗೆ ಮೆಡಲು ಗಳನ್ನು ನೀ ಡಿ ಪ್ರೋ ತ್ಸಾ ಹಿಸಲಾ ಯಿತು ಹಾ ಗೂ ಸದರಿ ಕಾ ರ್ಯ ಕ್ರಮವನ್ನು ಸರ್ಕಾ ರಿ
ಪ್ರೌ ಢಶಾ ಲೆ ಮು ಖೊ ಪಾ ಧ್ಯಾ ಯರಾ ದ ವಿ.ವಿ. ಗೊಂ ಡಬಾ ಳ ಇವರ ಮಾ ರ್ಗ ದರ್ಶ ನದಲ್ಲಿ ಶಾ ಲೆಯ ಎಲ್ಲ ಶಿಕ್ಷಕರು
ಪಾ ಲ್ಗೊಂ ಡಿದ್ದರು . ಸದರಿ ಕಾ ರ್ಯ ಕ್ರಮವು ಸತತವಾ ಗಿ ನಾ ಲ್ಕು ವರ್ಷ ಗಳಿಂ ದ ನಡೆಯು ತ್ತಿರು ವು ದು ಹೆಮ್ಮೆ ಯ ವಿಷಯ.
ಈ ಸಂ ದರ್ಭ ದಲ್ಲಿ ನೂ ರಕ್ಕೂ ಹೆಚ್ಚು ಪಾ ಲಕರು , ಪೋ ಷಕರು , ಹಳೆಯ ವಿದ್ಯಾ ರ್ಥಿ ಗಳು , ಸಮಾ ಜದ
ಮು ಖಂ ಡರಾ ದ ಹರೀ ಶ್ ಕೋ ರಿ, ಹನು ಮಂ ತಪ್ಪ, ಮಲ್ಲಿಕಾ ರ್ಜು ನ್ ಗೋ ಟೂ ರ್, ರಾ ಮಣ್ಣ ಗು ಗ್ಗರಿ, ಹು ಸೇ ನಪ್ಪ ಕಲ್ಮ ನಿ,
ರಾ ಜಪ್ಪ ಮ್ಯಾ ಗಡಿಕೇ ರಿ, ನಾ ಗರಾ ಜ, ಶಿಕ್ಷಣ ಪ್ರೇ ಮಿಗಳು ಭಾ ಗವಹಿಸಿದ್ದರು .

ರಾಜಕೀಯ ಪಕ್ಷಗಳು ಬಿಎಲ್.ಎ.ಗಳನ್ನು ನೇಮಕ ಮಾಡಿ – ಡಾ. ಸುರೇಶ ಬಿ. ಇಟ್ನಾಳ

ರಾಜಕೀಯ ಪಕ್ಷಗಳು ಬಿಎಲ್.ಎ.ಗಳನ್ನು ನೇಮಕ ಮಾಡಿ – ಡಾ. ಸುರೇಶ ಬಿ. ಇಟ್ನಾಳ

Political parties appoint BLAs - Dr. Suresh B. Itnal



ಕೊಪ್ಪಳ ಫೆಬ್ರುವರಿ 20 (ಕರ್ನಾಟಕ ವಾರ್ತೆ): ಎಸ್.ಐ.ಆರ್ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯ ಸಿದ್ದತೆಗಾಗಿ ಜಿಲ್ಲೆಯಲ್ಲಿ ಮ್ಯಾಪಿಂಗ್ ಕಾರ್ಯ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಬಿಎಲ್.ಎ.ಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯದ ಪೂರ್ವಭಾವಿ ಸಿದ್ದತೆಯ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಪ್ರೀಲ್-2026 ರಿಂದ ಎಸ್.ಐ.ಆರ್ ಜಾರಿಯಾಗುವ ಸಾಧ್ಯತೆಯಿದ್ದು, ಅದಕ್ಕೂ ಪೂರ್ವದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮ್ಯಾಂಪಿಂಗ್ ಕಾರ್ಯವನ್ನು ಮಾಡುತ್ತಿದ್ದೇವೆ. ಮ್ಯಾಪಿಂಗ್ & ಪ್ರೋಜೆನಿ ಆಫ್ ಎಲೆಕ್ಟರ್ಸ್ (Mapping and Progeny of Electors) ಆಧಾರದಮೇಲೆ ಪ್ರಕಟಿಸಲಾದ ಮತದಾರರ ಪಟ್ಟಿಗಳಲ್ಲಿಯ ಮತದಾರರನ್ನು 2002ರ ಮಾತದಾರರ ಪಟ್ಟಿಗಳೊಂದಿಗೆ ಪರಿಶೀಲಿಸಿ, ಬಿ.ಎಲ್.ಓ ಆ್ಯಪ್‌ನಲ್ಲಿ ಮ್ಯಾಪಿಂಗ್ ಕಾರ್ಯವನ್ನು ಮತ್ತು 2002ರ ಮತದಾರರ ಪಟ್ಟಿಯಲ್ಲಿ ಇರದೇ ಇರುವ ಮತದಾರರನ್ನು ಪ್ರೋಜೆನಿ ಮಾಡುವ ಮುಖಾಂತರ ಮ್ಯಾಪಿಂಗ್ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
2025ರಂತೆ ಕೊಪ್ಪಳ ಜಿಲ್ಲೆಯಲ್ಲಿ 12,06,287 ಮತದಾರರಿದ್ದು, 1315 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಇದುವರೆಗೂ ಶೇ. 86.79 ರಷ್ಟು ಮ್ಯಾಪಿಂಗ್ ಆಗಿದ್ದು, ಇದರಲ್ಲಿ ಶೇ. 77ರಷ್ಟು ಜನರು 2002ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಅರ್ಹ ಮತದಾರರಾಗಿದ್ದಾರೆ ಮತ್ತು ಉಳಿದವರು ಆ ಅರ್ಹ ಮತದಾರರ ಪ್ರಸ್ತುತ 18 ವರ್ಷ ಪೂರ್ಣಗೊಂಡ ಮಕ್ಕಳು ಒಳಗೊಂಡಿದ್ದಾರೆ. ಒಟ್ಟಾರೆ 10,46,968 ಮತದಾರರ ಮ್ಯಾಪಿಂಗ್ ಮಾಡಲಾಗಿದ್ದು, 1,59,319 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಇದರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ 35,562 ಮತದಾರರ, ಕನಕಗಿರಿ ವಿಧಾನಸಭಾ ಕ್ಷೇತ್ರದ 26,741 ಮತದಾರರ, ಗಂಗಾವತಿ ವಿಧಾನಸಭಾ ಕ್ಷೇತ್ರದ 36,946 ಮತದಾರರ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ 24,532 ಮತದಾರರ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ 35,538 ಮತದಾರರ ಮ್ಯಾಪಿಂಗ್ ಬಾಕಿ ಇರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್‌ಐಆರ್ ಪೂರ್ವ ತಯಾರಿ ಆರಂಭವಾಗಿ ಅಕ್ಟೋಬರ್-2025 ರಿಂದ ಸಾಕಷ್ಟು ಸಮಯ ಕಳೆದಿದೆ. ರಾಜ್ಯ ಮಟ್ಟದಿಂದ ಬಿಎಲ್‌ಒ ಮಟ್ಟದವರೆಗೆ ಎಲ್ಲಾ ಅಧಿಕಾರಿಗಳಿಗೆ ಮ್ಯಾಪಿಂಗ್ ಮತ್ತು ಅವರ ಜವಾಬ್ದಾರಿಗಳ ಕುರಿತು ತರಬೇತಿ ನೀಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರಾಜಕೀಯ ಪಕ್ಷಗಳ ಸಭೆ ನಡೆಸಿ, ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿರುತ್ತದೆ. ಇನ್ನು ಎಸ್‌ಐಆರ್ ಪೂರ್ವ ಪ್ರಕ್ರಿಯೆ ಭಾಗವಾಗಿ ಮೂರು ಹಂತದ ಮ್ಯಾಪಿಂಗ್ ನಡೆಯುತ್ತದೆ. 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮತ್ತು ಪ್ರಸ್ತುತ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರನ್ನು ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೊಬೈಲ್ ಅಪ್ಲಿಕೇಷನ್ ಮೂಲಕ ದೃಢೀಕರಿಸಿ ಮ್ಯಾಪಿಂಗ್ ಮಾಡುತ್ತಿದ್ದಾರೆ ಎಂದರು.
2002ರ ಪಟ್ಟಿಯಲ್ಲಿ ಹೆಸರು ಇರದೇ ಇರುವ ಯುವ ಮತದಾರರನ್ನು ಅವರ ವಂಶಸ್ಥರೊಂದಿಗೆ (ತಂದೆ, ತಾಯಿ, ತಾತ ಅಥವಾ ಅಜ್ಜಿ) ಮ್ಯಾಪಿಂಗ್ ಮಾಡಲಾಗುತ್ತಿದೆ. ಇದು ಮಗ, ಮಗಳು, ಮೊಮ್ಮಗ ಹಾಗೂ ಮೊಮ್ಮಗಳಿಗೆ (ತೃತಿಯ ಲಿಂಗಿಗಳು ಸೇರಿದಂತೆ) ಅನ್ವಯಿಸುತ್ತದೆ. 2002 ರ ಅವಧಿಯಲ್ಲಿ ಕರ್ನಾಟಕದ ಪಟ್ಟಿಯಲ್ಲಿ ಇಲ್ಲದೆ, ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಪಟ್ಟಿಯಲ್ಲಿ ಹೆಸರಿದ್ದ ಮತದಾರರಿಗೂ ಮ್ಯಾಪಿಂಗ್ ಮಾಡಲು ಬಿಎಲ್‌ಒ ಆಪ್‌ನಲ್ಲಿ ಅವಕಾಶ ನೀಡಲಾಗಿದೆ. ಮಾನ್ಯತೆ ಪಡೆದ ರಾಷ್ಟ್ರ, ರಾಜ್ಯ ರಾಜಕೀಯ ಪಕ್ಷದವರು ಬಿಎಲ್‌ಎ-1ರ ಮುಖಾಂತರ ಬಿಎಲ್‌ಎಗಳನ್ನು ನೇಮಕ ಮಾಡಲು ಪ್ರತಿ ಜಿಲ್ಲೆಗೆ, ವಿಧಾನಸಭಾ ಕ್ಷೇತ್ರಕ್ಕೆ ಅಧಿಕೃತ ಪ್ರತಿನಿಧಿಗಳನ್ನು ನೇಮಕ ಮಾಡಬಹುದಾಗಿರುತ್ತದೆ. ಬಿಎಲ್‌ಎ-1 ರವರ ಮುಖಾಂತರ ರಾಜಕೀಯ ಪ್ರತಿನಿಧಿಗಳು ಪ್ರತಿ ಮತಗಟ್ಟೆಗೆ ಬಿಎಲ್‌ಎ-2 ಮುಖಾಂತರ ಬಿಎಲ್‌ಎಗಳನ್ನು ನೇಮಕ ಮಾಡಬಹುದಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಸಾಮಾನ್ಯವಾಗಿ ಒಂದು ಮತಗಟ್ಟೆಗೆ ಒಬ್ಬ ಬಿಎಲ್‌ಎ ರವರನ್ನು ನೇಮಕ ಮಾಡಬೇಕಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಬೂತ್‌ಗಳಿಗೆ ಒಬ್ಬ ಬಿಎಲ್‌ಎರವನ್ನು ನೇಮಕ ಮಾಡಬೇಕಾದಲ್ಲಿ ಈ ಬೂತ್‌ಗಳು ಒಂದೇ ಮತಗಟ್ಟೆಯ (Cluster Booth with one location) ವ್ಯಾಪ್ತಿಯೊಳಗೆ ಒಳಪಡಬೇಕಾಗಿರುತ್ತದೆ. ಮತಗಟ್ಟೆಗಳು ನೇಮಗೊಂಡ ಬಿಎಲ್‌ಎ ರವರು ಸಾಮಾನ್ಯವಾಗಿ ಆ ಮತಗಟ್ಟೆಯ ಮತದಾರರಾಗಿರಬೇಕಾಗಿರುತ್ತದೆ. ಆ ಮತಗಟ್ಟೆಯಲ್ಲಿ ನೋಂದಣಿಯಾಗದೇ ಇರುವ ಬಿಎಲ್‌ಎಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರನ್ನು ಬಿಎಲ್‌ಎ ಎಂದು ನೇಮಕ ಮಾಡಬಹುದಾಗಿರುತ್ತದೆ ಎಂದರು.
2002 ರಲ್ಲಿಯ ಮತದಾರರ ಪಟ್ಟಿಯಲ್ಲಿರುವ ಮತದಾರರ ನಮೂದುಗಳನ್ನು ಪರಿಶೀಲಿಸಲು https://ceo.karnataka.gov.in/search/kn ಹಾಗೂ https://voters.eci.gov.in/searchInSIR/S2UA4DPDF-JK4QWODSE ನಲ್ಲಿ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೇಮಕ ಮಾಡಲಾಗಿರುವ ಬೂತ್ ಮಟ್ಟದ ಅಧಿಕಾರಿಗಳ ವಿವರಗಳನ್ನು https://ceo.karnataka.gov.in/113/gallery/en ರ ಮೂಲಕ ಹಾಗೂ ECI NET App ಮೂಲಕ ಪಡೆಯಬಹುದಾಗಿರುತ್ತದೆ. ಪ್ರಸ್ತುತ ಇರುವ ಮತದಾರರ ಪಟ್ಟಿಗಳಲ್ಲಿ ಭಾವಚಿತ್ರವು ಸರಿಯಾಗಿ ಮುದ್ರಣವಾಗದಿದ್ದಲ್ಲಿ ಮತ್ತು ಇತರೆ ನಮೂದುಗಳು ಸರಿಯಾಗಿ ಇರದೇ ಇದ್ದಲ್ಲಿ ಸೂಕ್ತ ಭಾವಚಿತ್ರದೊಂದಿಗೆ ನಮೂನೆ 8 ಹಾಗೂ ಇತರೆ ದೋಷಗಳಿದ್ದಲ್ಲಿ ಸೂಕ್ತ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ಈ ಕುರಿತು ರಾಜಕೀಯ ಪಕ್ಷಗಳು ಗಮನ ಹರಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೂರ್ಯಕುಮಾರ, ಜಿಲ್ಲಾ ಚುನಾವಣಾ ಶಾಖೆಯ ತಹಶಿಲ್ದಾರ ರವಿಕುಮಾರ ವಸ್ತ್ರದ್, ಶಿರಸ್ತೆದಾರ ನಾಗರಾಜ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ಸೋಮನಗೌಡ, ಕೃಷ್ಣ ಶೆಟ್ಟರ್, ಸೈಯದ್ ನಾಸೀರ ಹುಸೈನಿ, ಅಮರೇಶ್ ಮುರಳಿ, ಮೈಲಾರಪ್ಪ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸಂತ ಕವಿ ಸರ್ವಜ್ಞ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಸಂತ ಕವಿ ಸರ್ವಜ್ಞ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ


Saint poet Sarvajna Jayanti: Floral tributes paid by the district administration




ಕೊಪ್ಪಳ ಫೆಬ್ರುವರಿ 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸಂತ ಕವಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕರ್ಣಕುಮಾರ ಸೇರಿದಂತೆ ಜಿಲ್ಲಾಡಳಿತ ಭವನದ ಇತರೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ವಾಹನಕ್ಕೆ ಚಾಲನೆ


ಹೆಚ್ಚಿನ ಜನರಿರುವ ಪ್ರದೇಶಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸಿ – ರೆಡ್ಡಿ ಶ್ರೀನಿವಾಸ

Launch of the promotional vehicle for the five guarantee schemes





ಕೊಪ್ಪಳ ಫೆಬ್ರುವರಿ 20 (ಕರ್ನಾಟಕ ವಾರ್ತೆ): ಹೆಚ್ಚಿನ ಜನರಿರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಹಮ್ಮಿಕೊಳ್ಳುವ ಮೂಲಕ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ವಾಹನ ಹಾಗೂ ಕಲಾ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

  ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಎಲ್ಲಾ ಅರ್ಹ ಫಲಾನುಭವಿಗಳಿಗೆ ನೇರವಾಗಿ ಈ ಯೋಜನೆಗಳ ಲಾಭವನ್ನು ತಲುಪಿಸುವಂತಹ ಕೆಲಸ ನಮ್ಮ ಸರ್ಕಾರದಿಂದ ಆಗುತ್ತಿದೆ. ಈ ಎಲ್ಲಾ ಐದು ಯೋಜನೆಗಳ ಬಗ್ಗೆ ಪ್ರತಿಯೊಂದು ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರಚಾರ ಆಗಬೇಕೆಂದು ಸರ್ಕಾರವು ಪ್ರಚಾರ ವಾಹನಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸಿಗುತ್ತಿರುವ ಲಾಭಗಳ ಕುರಿತು ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಲಾವಿದರು ಮಾಹಿತಿ ನೀಡಿ, ಐದು ಗ್ಯಾರಂಟಿ ಯೋಜನೆಗಳ ಪ್ರಚಾರ ಕಾರ್ಯಕ್ರಮವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕೆಂದರು.

ಕೊಪ್ಪಳ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 3 ಲಕ್ಷ 19 ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 1581 ಕೋಟಿ ರೂ.ಗಳನ್ನು ಗೃಹಲಕ್ಷ್ಮೀ ಫಲಾನುಭವಿಗಳಿಗೆ ನೀಡಲಾಗಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 11 ಕೋಟಿ ಮಹಿಳಾ ಫಲಾನುಭವಿಗಳು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯು ಪಡಿತರ ಚೀಟಿದಾರರಿಗೆ ತುಂಬಾ ಅನುಕೂಲವಾಗಿದೆ. ಯುವನಿಧಿಯಡಿ 13 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಗೃಹಜ್ಯೋತಿಯಡಿ ಜಿಲ್ಲೆಯ ಶೇ. 98.5 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಮತ್ತು ಸ್ವಾವಲಂಬನೆಯತ್ತ ತೆಗೆದುಕೊಂಡು ಹೋಗುವ ಕೆಲಸವಾಗುತ್ತಿದೆ. ಈ ಯೋಜನೆಗಳಿಗಾಗಿ ಸರ್ಕಾರವು 52 ಸಾವಿರ ಕೋಟಿ ರೂ.ಗಳನ್ನು ಪ್ರತಿವರ್ಷ ಮೀಸಲಿಟ್ಟು, ಬಡವರಿಗೆ, ಮಹಿಳೆಯರಿಗೆ ಆರ್ಥಿಕ ಧನ ಸಹಾಯವನ್ನು ಮಾಡಲಾಗುತ್ತಿದೆ. ಯಾವುದೇ ಒಂದು ಮಾನವನ ಸಬಲೀಕರಣವಾಗಬೇಕಾದರೆ, ಕನಿಷ್ಠ ಮೂಲಭೂತ ಬದುಕುವ ಹಕ್ಕನ್ನು ಕೊಡಬೇಕೆಂದು ಸಂವಿಧಾನ ಹೇಳುತ್ತದೆ. ಅಂತಹ ಹಕ್ಕನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ನೀಡುತ್ತಿದೆ. ಈ ಎಲ್ಲಾ ಯೋಜನೆಗಳ ಮೂಲಕ ಯುವ ಜನರಿಗೆ ಮಹಿಳೆಯರಿಗೆ ಮತ್ತು ಎಲ್ಲರಿಗೂ ಶಕ್ತಿ ಕೊಡುವ ಕೆಲಸ ಆಗುತ್ತಿದೆ. ಇಂತಹ ಯೋಜನೆಗಳನ್ನು ಮತ್ತಷ್ಟು ಜನರಿಗೆ ತಲುಪಿಸುವ ಮತ್ತು ಅವುಗಳ ಬಗ್ಗೆ ಮಾಹಿತಿ ಒದಗಿಸುವ ಕೆಲಸ ಈ ಪ್ರಚಾರ ಕಾರ್ಯಕ್ರಮದ ಮೂಲಕ ಆಗಲಿ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮಾನ್ವಿ ಪಾಶಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುರೇಶ್ ಜಿ., ಕಾರಟಗಿ ತಾ.ಪಂ ಕೆ.ಡಿ.ಪಿ ಸದಸ್ಯರಾದ ದಾವಲಸಾಬ್, ದೇಸಾಯಿ ಕ್ಯಾಂಪ್ ಗ್ರಾ.ಪಂ ಸದಸ್ಯರಾದ ಮಹೇಬೂಬ್, ಕಲಾವಿದ ಭಾಷು ಹಿರೇಮನಿ, ರಮೇಶ ಸಿಂಧನೂರು, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಎನ್.ತಿಪ್ಪಯ್ಯ ನಾಯ್ಡು, ಆರೀಫ್ ಅಹ್ಮದ್, ಶಿಬಿರಾರ್ಥಿಗಳಾದ ಪ್ರಕಾಶ ಹಾಗೂ ಕಿರಣ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತು ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕೃತಿ ಕಲಾ ಸಂಸ್ಥೆಯ ಕಲಾವಿದರಾದ ಕಾಳೇಶ್, ಶರಣಪ್ಪ ಮೇಟಿ, ವೀರಯ್ಯ, ಸುಲೋಚನಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಫೆ.23 ರಂದು ಕೊಪ್ಪಳದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ

ಫೆ.23 ರಂದು ಕೊಪ್ಪಳದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ

Chhatrapati Shivaji Jayanti program in Koppal on Feb. 23




ಕೊಪ್ಪಳ ಫೆಬ್ರವರಿ 20, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಫೆಬ್ರವರಿ 23 ರಂದು ಬೆಳಿಗ್ಗೆ 10:30 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ ಮೋಹನರಾಜ್ ಅವರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ವಕೀಲರು ಹಾಗೂ ನಿವೃತ್ತ ಉಪನ್ಯಾಸಕರಾದ ಉದಯಸಿಂಗ್ ಠಾಕೂರ ಅವರು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪಾಲ್ಗೊಳ್ಳುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ತೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಪತ್ತೆ: ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲು ಸೂಚನೆ

ಚಿತ್ತೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಪತ್ತೆ: ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲು ಸೂಚನೆ


ಕೋಳಿ ಫಾರಂ ಮಾಲೀಕರು ಮತ್ತು ಅಧಿಕಾರಿಗಳು ಎಚ್ಚರಿಕೆ ವಹಿಸಿ: ಡಾ. ಸುರೇಶ ಬಿ. ಇಟ್ನಾಳ್

Bird flu detected in Chittoor district: Koppal district advised to maintain close vigil




ಕೊಪ್ಪಳ ಫೆಬ್ರವರಿ 20, (ಕರ್ನಾಟಕ ವಾರ್ತೆ): ಪಕ್ಕದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಶೀತ ಜ್ವರ (ಹಕ್ಕಿ ಜ್ವರ) ಪ್ರಕರಣ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಕೋಳಿ ಫಾರಂ ಮಾಲೀಕರು ಹಾಗೂ ಸಂಬAಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರು ಸೂಚನೆ ನೀಡಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೋಳಿ ಶೀತ ಜ್ವರದ ರೋಗೋದ್ರೇಕದ ಕುರಿತು ಮುಂಜಾಗ್ರತೆ ವಹಿಸುವ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಣಿ ಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 25 ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳು ಹಾಗೂ 14 ಮಾಂಸ ಉತ್ಪಾದನಾ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿದ್ದು, ಕೋಳಿ ಶೀತ ಜ್ವರ ಹರಡುವಿಕೆ ತಡೆಯಲು ತೀವ್ರ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಪಕ್ಕದ ರಾಜ್ಯದಲ್ಲಿ ರೋಗೋದ್ರೇಕ ಕಂಡುಬAದಿರುವುದರಿAದ, ಜಿಲ್ಲೆಯ ಪಶುವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಕೋಳಿ ಫಾರಂ ಮಾಲೀಕರು ಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕೋಳಿಗಳಲ್ಲಿ ಅಸಹಜ ಸಾವಿನ ಪ್ರಕರಣಗಳು ಕಂಡುಬAದರೆ ತಕ್ಷಣವೇ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ರೋಗಪೀಡಿತ ಕೋಳಿಗಳನ್ನು ಆರೋಗ್ಯಕರ ಕೋಳಿಗಳಿಂದ ಬೇರ್ಪಡಿಸುವುದು ಮತ್ತು ಸತ್ತ ಕೋಳಿಗಳನ್ನು ಸುರಕ್ಷಿತವಾಗಿ ಹೂತು ಹಾಕುವ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಜನವಸತಿ ಪ್ರದೇಶದಿಂದ ಕೋಳಿ ಫಾರಂಗಳನ್ನು ದೂರವಿಡುವುದು ಹಾಗೂ ಜನರು ಕೋಳಿ ಮತ್ತು ಅದರ ಉತ್ಪನ್ನಗಳನ್ನು ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 70 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಯಾವುದೇ ಸೋಂಕಿನ ಅಪಾಯ ತಪ್ಪಿಸಬಹುದು. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದರು.
ಕೋಳಿ ಫಾರಂ ಮಾಲೀಕರಿಗೆ ವಿಶೇಷ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕೋಳಿಗಳಲ್ಲಿ ರೋಗ ಲಕ್ಷಣಗಳು ಕಂಡುಬAದರೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸಾವಿನ ಪ್ರಕರಣಗಳು ಸಂಭವಿಸಿದರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಫಾರಂ ಪ್ರದೇಶಕ್ಕೆ ವಲಸೆ ಪಕ್ಷಿಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಮತ್ತು ಫಾರಂ ಕೆಲಸಗಾರರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಗ್ರಾಮಗಳಲ್ಲಿ ಕೋಳಿಗಳು ಅಥವಾ ವಲಸೆ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬAದರೆ ಕೂಡಲೇ ವರದಿ ಮಾಡಬೇಕು ಎಂದು ಅವರು ತಿಳಿಸಿದರು. ಗ್ರಾಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿದ್ದು, ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಹಕ್ಕಿ ಜ್ವರ ಅನುಮಾನ ಉಂಟಾದಲ್ಲಿ 24 ಗಂಟೆಗಳೊಳಗೆ ಪಶುವೈದ್ಯರ ತಂಡಗಳನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ರಾಷ್ಟಿçÃಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಡಿಎಫ್‌ಒ ನಿರ್ಮಲಾ, ಕೊಪ್ಪಳ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು(ಆಡಳಿತ )ಡಾ. ಪಿ.ಎಂ.ಮಲ್ಲಯ್ಯ, ಕೊಪ್ಪಳ ಪಶು ಪಾಲನಾ ಮತ್ತು ಪಶು ವ್ಯದ್ಯ ಸೇವಾ ಇಲಾಖೆಯ ಉಪನಿರ್ದೇಶಕರು(ಪಾಲಿಕ್ಲಿನಿಕ)ಡಾ. ಶರಣಬಸಪ್ಪ ರೋಣ, ಕಾರಟಗಿ ಪಶು ಚಿಕಿತ್ಸಾಲಯ ಬೆನ್ನೂರ ಪಶು ವೈದ್ಯಧಿಕಾರಿ ಡಾ.ಲಕ್ಮಣ ನಾಯ್ಕ, ಯಲಬುರ್ಗಾ ಮುಖ್ಯ ಪಶು ವೈಧ್ಯಾಧಿಕಾರಿ(ಆಡಳಿತ) ಡಾ. ಪ್ರಕಾಶ ಚೂರಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಮತ್ತು ಕೊಪ್ಪಳ ಜಿಲ್ಲೆಯ ಕೋಳಿ ಫಾರಂಗಳ ಮಾಲೀಕರು ಉಪಸ್ಥಿತರಿದ್ದರು.

ಇಂದು ರಾಜ್ಯದೆಲ್ಲೆಡೆ ಸಂಭ್ರಮದ ಸರ್ವಜ್ಞ ಜಯಂತಿ ಆಚರಣೆ

ಇಂದು ರಾಜ್ಯದೆಲ್ಲೆಡೆ ಸಂಭ್ರಮದ ಸರ್ವಜ್ಞ ಜಯಂತಿ ಆಚರಣೆ

Sarvajna Jayanti celebrated with fervor across the state today


ಗಂಗಾವತಿ:20 ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಕುಂಬಾರ ಸಮಾಜದ ಯುವ ಮುಖಂಡ ಶರಣಪ್ಪ ಕುಂಬಾರ ಹೇಳಿದ್ದಾರೆ. 

16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ, ಕುಂಬಾರ ಕವಿ ಸರ್ವಜ್ಞನ ಜಯಂತಿ ಆಚರಣೆಯನ್ನು ಇಂದು ಮಾಡಲಾಗುತ್ತಿದೆ.
ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಜನ್ಮಸ್ಥಳ. ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.
ಶುಕ್ರವಾರದಂದು ಗಂಗಾವತಿ ತಾಲೂಕು ಗಂಗಾವತಿ ನಗರದ ವಿರುಪಾಪೂರು ಆನೆಗೊಂದಿ ರೋಡ ಹತ್ತಿರ ಕುಂಬಾರ ಸಮಾಜದ ಸರ್ಕಲ್ ನಲ್ಲಿ ಕುಂಬಾರ ಸಂಘದಿಂದ ನಡೆದ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.
ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿಯು, ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವನ್ನು ಅಳೆಯುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಜಾಸ್ತಿ ಇದ್ದು, ಶ್ರೀಸಾಮಾನ್ಯರಿಗೂ ಅರ್ಥವಾಗುವಂತಿರುತ್ತದೆ. ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂಥ ಕೆಲಸವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಹಿರಿಯ ಮುಖಂಡರಾದ ಪಕೀರಪ್ಪ ಕುಂಬಾರ, ಸಮಾಜದ ಮುಖಂಡರಾದ ರುದ್ರಪ್ಪ ಕುಂಬಾರ, ವೀರಭದ್ರಪ್ಪ ಕೆ. ಕೊಟ್ರೇಶ್ ಕೆ. ರಮೇಶ ಕೆ, ನಾಗರಾಜ್ ಉಪ್ಪಿ, ಗವಿಸಿದ್ದಪ್ಪ‌ ಕುಂಬಾರ, ಬಸವರಾಜ, ರುದ್ರೇಶ, ಸುರೇಶ, ಸಂಗಪ್ಪ ಕಂಡಕ್ಟರ್, ಸಿದ್ದಲಿಂಗಪ್ಪ, ಗುಂಡಪ್ಪ ,ಮಂಜುನಾಥ್ ಮತ್ತು ಮಹಿಳಾ ಅಧ್ಯಕ್ಷೆ ಗೌರಮ್ಮ ಕುಂಬಾರ, ಪಾರ್ವತಿ, ಈರಮ್ಮ, ಜಯಶ್ರೀ ,ರೇಣುಕಾ, ಸೇರಿದಂತೆ ಇತರರು ಇದ್ದರು