ಶಿವಾಜಿ ಮಹಾರಾಜರು ಯುವ ಪೀಳಿಗೆಗೆ ಸ್ಫೂರ್ತಿ : ಕೆ.ರಾಘವೇಂದ್ರ ಹಿಟ್ನಾಳ
Shree Chhatrapati Shivaji Jayanti Programme
ಕೊಪ್ಪಳ ಫೆಬ್ರವರಿ 23, (ಕರ್ನಾಟಕ ವಾರ್ತೆ): ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ರಾಷ್ಟçಪ್ರೇಮಿ ಹಾಗೂ ಶೂರ ಯೋಧರಾಗಿದ್ದು, ಅವರ ಜಯಂತಿಯನ್ನು ಆಚರಿಸುವುದರಿಂದ ಅವರು ನೀಡಿದ ಸೇನಾ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು. ಅವರು ಸೋಮವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ನಿಮಿತ್ತ ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಮಹಾರಾಜರು ಸಣ್ಣ ವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿದವರು. ಅವರ ಆಡಳಿತಾತ್ಮಕ ಸುಧಾರಣೆಗಳು ಇಂದಿಗೂ ಪ್ರೇರಣಾದಾಯಕವಾಗಿವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಹಾಗೆ ಸಮಾಜದ ಪ್ರತಿಯೊಬ್ಬರು ಶಿಕ್ಷಣ, ಹೋರಾಟ, ಸಂಘಟನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರು ಅಪ್ಪಟ ದೇಶಪ್ರೇಮಿ, ತಾಯಿ ಜೀಜಾಬಾಯಿಯ ಪ್ರೇರಣೆಯಿಂದ ಶಿವಾಜಿ ಮಹಾರಾಜರು ಸಂಸ್ಕಾರವAತರಾಗಿ ಆದರ್ಶ ಜೀವನ ನಡೆಸಿದರು. ಜೀಜಾಬಾಯಿ ಅವರ ಸ್ವರಾಜ್ಯದ ಕನಸು ನನಸು ಮಾಡಿದ ಅಪ್ರತಿಮ ವೀರ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಛತ್ರಪತಿ ಶಿವಾಜಿ ಕೇವಲ ಒಬ್ಬ ಯೋಧನಲ್ಲ. ರಾಜಕೀಯವಾಗಿ ಅವರ ಕೊಡುಗೆ ಅತ್ಯಂತ ಪ್ರಸ್ತುತವಾಗಿವೆ. ಶಿವಾಜಿ ಅವರ ಜೀವನ ಕೇವಲ ಹಿಂದೂ ಧರ್ಮಕ್ಕೆ ಸಂಬAಧಿಸಿದಲ್ಲ, ಅವರು ಎಲ್ಲ ಧರ್ಮವನ್ನು ಗೌರವದಿಂದ ಕಾಣುತ್ತಿದ್ದರು. ಅವರು ನೀಡಿದ ಕೊಡುಗೆಗಳನ್ನು ನಾವು ಗಮನದಲ್ಲಿಟ್ಟುಕೊಂಡು ಭಾರತದ ಸಂಸ್ಕೃತಿಯನ್ನ ಎತ್ತಿಹಿಡಿಯಬೇಕು. ಶಿವಾಜಿಯವರು ಮಾನವ ಕುಲಕ್ಕೆ ಸಂಬAಧಪಟ್ಟವರು. ಅವರ ಕೊಡುಗೆ ಮತ್ತು ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದರು. ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ವಕೀಲರು ಹಾಗೂ ನಿವೃತ್ತ ಉಪನ್ಯಾಸಕ ಉದಯಸಿಂಗ್ ಠಾಕೂರ ಅವರು, ತಾಯಿ ಜೀಜಾಬಾಯಿ ಅವರು ಛತ್ರಪತಿ ಶಿವಾಜಿ ಅವರನ್ನು ತುಂಬಾ ಧೈರ್ಯ, ಸಹನೆಯಿಂದ ಬೆಳಸಿದ್ದಾರೆ. ಭಾರತೀಯ ಸ್ತಿçÃಯರ ಬಗ್ಗೆ ಶಿವಾಜಿ ಅವರಿಗೆ ಅಪಾರವಾದ ಗೌರವ ಅವರಲ್ಲಿ ಇತ್ತು. ಇಂದಿನ ಯುವ ಪೀಳಿಗೆಯು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವೀರಣ್ಣ ಗಡಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಹಾಗೂ ಸಮಾಜದ ಮುಖಂಡರಾದ ಮಾರುತಿ, ವಿಶ್ವನಾಥ, ಗವಿಸಿದ್ದಪ್ಪ, ಉಮೇಶ್ ಬಾಬು, ಪ್ರಭು ಕಿಡದಾಳ, ರಮೇಶ, ಸರೋಜಾ ಬಾಕಳೆ, ಮೈಲಾರಪ್ಪ, ಕೃಷ್ಣ, ಮಹಾಂತೇಶ ಸೇರಿದಂತೆ ಇತರರು ಇದ್ದರು.
Training program on the Pre-Conception and Pre-Natal Sex Determination Techniques and Methods Prohibition Act PCPNDT Act
ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯ್ದೆ ಪಿಸಿಪಿಎನ್‌ಡಿಟಿ ಕಾಯ್ದೆಯ ಕುರಿತು ತರಬೇತಿ ಕಾರ್ಯಕ್ರಮ
ಕೊಪ್ಪಳ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯ ಕೊಪ್ಪಳ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯ್ದೆ ಪಿಸಿಪಿಎನ್‌ಡಿಟಿ ಕಾಯ್ದೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಾಹಾಂತೇಶ ದರಗದ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳರವರು ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನಗಳ (ನಿಯಂತ್ರಣ ಮತ್ತು ದುರುಪಯೋಗ ತಡೆ) ಕಾಯ್ದೆ-1994 (PCPNDT Act) ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಮುಖ್ಯ ಕಾನೂನು. ಇದು ಗರ್ಭಧಾರಣೆಯ ಮುನ್ನ ಅಥವಾ ನಂತರದ ಲಿಂಗ ಪರೀಕ್ಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಈ ಕಾಯ್ದೆಯು ಹೆಣ್ಣು ಮಕ್ಕಳ ಲಿಂಗ ಅನುಪಾತವನ್ನು ಸುಧಾರಿಸಲು ಮತ್ತು ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿದೆ. ಮೂರು ವರ್ಷ ಜೈಲು ಶಿಕ್ಷೆ ಮತ್ರು ದಂಡ ಹಾಗೂ ಮರುಕಳಿಸುವ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ ಇದಕ್ಕೆ ಸಂಬಂಧಿಸಿದ ಕುಟುಂಬಸ್ಥರ ವಿರುದ್ಧ ಕೂಡ ಕಾನೂನು ಕ್ರಮದ ಅಡಿಯಲ್ಲಿ ಶಿಕ್ಷಣಕ್ಕೆ ಒಳಪಡಿಸಲಾಗುತ್ತದೆಂದು ಇಂಥ ತಪ್ಪುಗಳು ಆಗದಂತೆ ಜಾಗೃತ ಮಾಹಿತಿಯ ನಾಮಫಲಕಗಳನ್ನು ಹಾಕುವುದರೊಂದಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಶ್ರೀ ನಟರಾಜ ಯೋಜನಾ ನಿರೂಪಣಾಧಿಕಾರಿಗಳು ಅನೋಮಲಿ ನ್ಯೂನ್ಯತೆಯ ಗರ್ಭಾವಸ್ಥೆಯ 18 ರಿಂದ 22 ನೇ ವಾರದ ನಡುವೆ ಭ್ರೂಣದ ಬೆಳವಣಿಗೆ ಮತ್ತು ರಚನೆಯನ್ನು ಪರೀಕ್ಷಿಸಲು ಈ ಸ್ಕ್ಯಾನ್ ಮಾಡಲಾಗುತ್ತದೆ. ಇದು ಮಗುವಿನ ಮೆದುಳು, ಹೃದಯ, ಬೆನ್ನೆಲುಬು ಮತ್ತು ಇತರ ಅಂಗಗಳಲ್ಲಿನ ಯಾವುದೇ ಅಸಹಜತೆಗಳನ್ನು ಪತ್ತೆಹಚ್ಚಲು ನಿರ್ಣಾಯಕವಾಗಿದೆಂದು ಪ್ರಕರಣಗಳ ನೈಜ ಸನ್ನಿವೇಶಗಳನ್ನು ತಿಳಿಸಿ ವೈದ್ಯಾಧಿಕಾರಿಗಳು ಸ್ವಯಂ ತಪ್ಪುಗಳ ಇಕ್ಕಟ್ಟಿಗೆ ಸಿಕ್ಕಿಬಿದ್ದು, ತಮ್ಮ ಜೀವನವನ್ನು ಅಂತ್ಯಗೊಳಿಸಿದ ನೈಜ ಸನ್ನಿವೇಶಗಳನ್ನು ಉದಾಹರಣೆಯೊಂದಿಗೆ ತಿಳಿಸಿದರು. ಹೆಣ್ಣು ಮಕ್ಕಳು ಹುಟ್ಟುತ್ತಲೇ ಜನಿಟಿಕ್ಕಲಿ ಫಿಟ್ ಆಗಿರುತ್ತಾರೆಂದು ಮತ್ತು ಹಲವಾರು ಕೆಲಸಗಳನ್ನು ನಿಭಾಯಿಸುವ ಶಕ್ತಿಯನ್ನು ನಿರ್ವಹಣೆ ಮಾಡುವಲ್ಲಿ ಬಲಿಷ್ಠರಾಗಿರುತ್ತಾರೆಂದು ಪ್ರಕೃತಿಯು ಗಂಡು ಮತ್ತು ಹೆಣ್ಣುಗಳ ಹುಟ್ಟುವಿಕೆಯಲ್ಲಿ ನೈಜತೆಯನ್ನು ಸೃಷ್ಟಿಸುತ್ತದೆ. ಆದರೆ ನಾವುಗಳು ಸಾಮಾಜಿಕ ಮೌಲ್ಯಗಳಿಗೆ ಒತ್ತುಕೊಟ್ಟು ಹೆಣ್ಣು ಸಂತತಿಯ ಅವಹೇಳನಕಾರಿಯಾಗಿ ಮತ್ತು ಗಂಡು ಸಂತತಿಗೆ ಒತ್ತು ನೀಡುವುದರ ಮೂಲಕ ಪ್ರಚೋದನೆ ನೀಡುವಂತಹ ಮೂಡುತೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಡಾಕ್ಟರ್ ಸುರೇಖಾ ಮುಖ್ಯ ವೈದ್ಯಧಿಕಾರಿಗಳು, ಪ್ರಸವ ಪೂರ್ವ ಪ್ರಸವ ವೈದ್ಯರ ತಜ್ಞ ವಿಭಾಗ, ಕಿಮ್ಸ್ ರವರು ಹೆಣ್ಣು ಮಕ್ಕಳು ನೈಜ್ಯವಾಗಿ ಉತ್ತಮವಾಗಿ ಬಲಿಷ್ಠರಾಗಿರುತ್ತಾರೆ ಎಂದು ತಿಳಿಸಿದರು. ನ್ಯೂ ಸೆಫ್ ಸಮನ್ವಯಾಧಿಕಾರಿಯಾದ ಹರೀಶ್ ಜೋಗಿ ಅವರು ಹೆಣ್ಣು ಮಕ್ಕಳ ಶಿಶು ಹತ್ಯವನ್ನು ತಡೆಗಟ್ಟುವಲ್ಲಿ ಮುಖ್ಯವಾಗಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ರೇಶೋ ಮುಂದುವರೆದ ಕೇರಳ ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಇರುವುದನ್ನು ಕಾಣುತ್ತೇವೆ. ಆದರೆ ಇತರೆ ಕೆಲವು ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ರೇಶೋ ತೀರ ವ್ಯತ್ಯಾಸವಾಗಿದ್ದು ಇದನ್ನು ತಡೆಗಟ್ಟುವಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಸುರಕ್ಷತೆ ಭದ್ರತೆಗೆ ಹಾಗೂ ಅವರ ಸಬಲೀಕರಣಕ್ಕೆ ಸಮಾಜದ ವತಿಯಿಂದ ಎಲ್ಲರೂ ಬೆಂಬಲ ನೀಡಬೇಕೆಂದು ತಿಳಿಸಿದರು. ಡಾಕ್ಟರ್ ರಾಜೇಶ್ ಪ್ರಾಧ್ಯಾಪಕರು ಕಿಂಗ್ಸ್ ರವರು ಮಾತನಾಡುತ್ತಾ ಹೆಣ್ಣು ಮಕ್ಕಳ ಸಂರಕ್ಷಣೆಗೆ ಒಂದಾಗಬೇಕು. ಮಕ್ಕಳ ರಕ್ಷಣೆಯಲ್ಲಿ ವಿರುದ್ಧ ಕ್ರಮವನ್ನು ಕೈಗೊಂಡಲ್ಲಿ ನಮ್ಮ ಕರ್ಮ ರಿಟರ್ನ್ಸ್ ಆಗುತ್ತದೆ ಎಂದು ಮಕ್ಕಳ ಪಾಪ ಕರ್ಮಗಳು ನಮ್ಮನ್ನು ಹಿಂತಿರುಗಿಸಿ ಹಿಂಬಾಲಿಸುತ್ತವೆ ಎಂದು ತಿಳಿಸಿದರು.
ಡಾಕ್ಟರ್ ಕೃಷ್ಣ ಓಂಕಾರ್ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಹೆಣ್ಣು ಮಕ್ಕಳ ಸಂತತಿಯಿಇಲ್ಲದೇ ಹೋದರೆ ಮುಂದೆ ಮನುಷ್ಯ ಪ್ರಕೃತಿಯೇ ಇಲ್ಲದಂತಾಗುತ್ತದೆ. ಹಾಗೂ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲೆ ದೌರ್ಜನ್ಯ ಶೋಷಣೆಗಳು ಹೆಚ್ಚುತ್ತವೆ, ಸಾಮಾಜಿಕ ಮೌಲ್ಯಗಳನ್ನು ಅಧೋಗತಿಗಿಳಿಸಿ ಸಂಧಿಗ್ಧ ಪರಿಸ್ಥಿತಿಯನ್ನು ಉಂಟುಮಾಡುತ್ತದೆಂದು ನಾವುಗಳು ಪ್ರಜ್ಞಾವಂತರಾಗಿ ಮಕ್ಕಳ ರಕ್ಷಣೆಗೆ ಬದ್ಧರಾಗಬೇಕೆಂದು ತಿಳಿಸಿದರು.
ಶ್ರೀ ಪರಶುರಾಮ್ ವೈ ಶೆಟೆಪ್ಪನವರ್ ಉಪನಿರ್ದೇಶಕರು ರವರು ಹೆಣ್ಣು ಮಗುವಿನ ರಕ್ಷಣೆಗಾಗಿ ಸರ್ಕಾರವು ಬೇಟಿ ಬಚಾವೋ ಬೇಟಿ ಪಡಾವೋ ನಂತಹ ಯೋಜನೆಗಳನ್ನು ಜಾರಿಗೆ ತಂದಿದೆಂದು ತಿಳಿಸಿದರು. ಸದರಿ ಕಾರ್ಯಕ್ರಮದದಲ್ಲಿ ಅಂಗನವಾಡಿ ಶಿಕ್ಷಕರು , ಮೇಲ್ವಿಚಾರಕರು , ಕಿಮ್ಸ್ ವೈದ್ಯಕೀಯ ಕಾಲೇಜಿನ ಕಲಿಕಾರ್ಥಿಗಳು, ನರ್ಸಿಂಗ್ ಆಫೀಸರ್ ರವರು ಭಾಗವಹಿಸಿರುತ್ತಾರೆ. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಯಮುನಾ ಸಖಿ ಘಟಕ ಆಡಳಿತಾಧಿಕಾರಿಗಳು, ಪ್ರಾರ್ಥನೆ ಮಹಾಲಕ್ಷ್ಮಿ ಎಸ್.ಎನ್.ಸಿ.ಯು ವಿಭಾಗ, ಸಖಿ ಒನ್ ಸ್ಟಾಪ್ ಸೆಂಟರ್ ಸ್ವಾಗತ ಶರಣಪ್ಪ ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯ, ವಂದನಾರ್ಪಣೆ ಶ್ರೀಮತಿ ಫಾತಿಮಾ ಮಹಿಳಾ ಸಬಲೀಕರಣ ಘಟಕ ಕೊಪ್ಪಳ ರವರು ನೆರವೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಹ್ಯಾಟಿ ಗ್ರಾಮದ ಸುತ್ತಲಿನ ಶಾಲೆಗಳನ್ನು ಮುಚ್ಚುವ ಹುನ್ನಾರದಿಂದ ಕೆಪಿಎಸ್ ಮಾಗ್ನೆಟ್ ಶಾಲೆಯನ್ನು ಮಾಡಲು ಮುಂದಾಗಿರುವ ಕೊಪ್ಪಳದ ಮಾನ್ಯ ಶಾಸಕರ ನಡೆಗೆ ಎಐಡಿಎಸ್ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಖಂಡನೆ!
Condemnation of the Koppal MLA's move to build a KPS magnet school with the intention of closing the schools around Hatti village!
ಕೊಪ್ಪಳ:ಗ್ರಾಮೀಣ ಭಾಗದ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆ ಮಾಡಲು ಆದೇಶಿಸಲಾಗಿದೆ. ಈ ಆದೇಶದಂತೆ ಕೊಪ್ಪಳದಲ್ಲಿನ 350 ಕ್ಕೂ ಹೆಚ್ಚು ಶಾಲೆಗಳು ಮುಚ್ಚುವ ಪಟ್ಟಿಯಲ್ಲಿವೆ, ಹ್ಯಾಟಿಯಲ್ಲಿ ಅಧಿಕೃತವಾಗಿ ಮಾನ್ಯ ಶಾಸಕರು ಇದಕ್ಕೆ ಚಾಲನೆ ನೀಡುತ್ತಿರುವುದು ಅವರ ಶಿಕ್ಷಣ ವಿರೋಧಿ ಬಡವರ ವಿರೋಧಿ ನಡೆಯನ್ನು ಎತ್ತಿ ತೋರಿಸುತ್ತದೆ.
ಈ ಉದ್ದೇಶಕ್ಕಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗಾಗಿ ಇರುವ KKRDB ನಿಧಿಯಿಂದ 700ಕೋಟಿ ಹಣ ಪಡೆಯಲಾಗಿದೆ. ಅಲ್ಪಸಂಖ್ಯಾತರ ನಿಧಿಯಿಂದ 100ಕೋಟಿ ಪಡೆಯಲಾಗಿದೆ. ಜನಕಲ್ಯಾಣಕ್ಕಾಗಿ ಬಳಸಬೇಕಾದ ನಿಧಿಯನ್ನು ಅದೇ ಜನರ ಮಕ್ಕಳು ಓದುವ ಗ್ರಾಮೀಣ ಶಾಲೆಗಳನ್ನು ಮುಚ್ಚಲು ಬಳಸಲಾಗುತ್ತಿದೆ. ಇದು ಈ ಜನರಿಗೆ ಮಾಡುತ್ತಿರುವ ವಿಶ್ವಾಸ ದ್ರೋಹವಾಗಿದೆ. ಮೂಲಭೂತ ಸೌಲಭ್ಯಗಳಿಲ್ಲದೇ ನರಳುತ್ತಿರುವ ಶಾಲೆಗಳ ದುರಸ್ತಿಗೆ ಯಾವುದೇ ಕಾರಣಕ್ಕೂ ಈ ಅನುದಾನ ಬಳಸಬಾರದೆಂಬ ಆಘಾತಕಾರಿ ಅಂಶವನ್ನು ಡಿ. 30ರಂದು ಹೊರಡಿಸಿರುವ ಈ ಆದೇಶದಲ್ಲಿ ತಿಳಿಸಲಾಗಿದೆ.
ಎಐಡಿಎಸ್ಓ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಜನ ಹೋರಾಟ ನಡೆಯುತ್ತಿದೆ. ಈಗಾಗಲೇ ಹಿರೇಕಾಸನಕಂಡಿ, ಹೆರೆಬಗನಾಳ್, ರಾಜರಾಮ್ ಪೇಟೆ ಮತ್ತು ಮಹಮ್ಮದ್ ನಗರದ ನೂರಾರು ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಬೀದಿಗಿಳಿದು ಊರಿನ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತೀವ್ರ ಜನವಿರೋಧದ ನಡುವೆಯೂ ಶಾಸಕರು ಹ್ಯಾಟಿಯಲ್ಲಿ ಕೆಪಿಎಸ್ ಮಾಗ್ನೆಟ್ ಶಾಲೆ ತೆರೆದು ಅದರ ಸುತ್ತಲಿನ ಶಾಲೆಗಳನ್ನು ಮುಚ್ಚುವ ನೀತಿಗೆ ಅಡಿಗಲ್ಲು ಇಡುತ್ತಿದ್ದಾರೆ. ಜನಾಭಿಪ್ರಾಯವನ್ನು ಧಿಕ್ಕರಿಸಿರುವ ಸರ್ಕಾರದ ಈ ನಿರಂಕುಶ ಮತ್ತು ಅಪ್ರಜಾತಾಂತ್ರಿಕ ನಡೆಯನ್ನು ಎಐಡಿಎಸ್‌ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. ಕೂಡಲೇ ಕರಾಳ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು ಮತ್ತು ಶಿಕ್ಷಕರು ಹಾಗೂ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಮರ್ಪಕ ಸೌಲಭ್ಯ ನೀಡಿ ಅಭಿವೃದ್ಧಿಪಡಿಸಬೇಕೆಂದು ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಕರು ಪಾಲಕರು ಹಾಗೂ ಶಿಕ್ಷಣ ಪ್ರೇಮಿ ಜನತೆಯ ಪರವಾಗಿ ಸರ್ಕಾರವನ್ನು ಆಗ್ರಹಿಸುತ್ತದ
ಭೀಮ್ ಸೇನ ಸಮಿತಿ(ರಿ) ಕೊಪ್ಪಳ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕ ಪದಾಧಿಕಾರಿಗಳು ನೇಮಕ
Bhim Sen Samiti (R) Koppal District Unit and various Taluk office bearers appointed
ಕೊಪ್ಪಳ,ಇಲ್ಲಿನ ಪ್ರವಾಸ ಮಂದಿರದಲ್ಲಿ ಭೀಮಸೇನ ಸಮಿತಿ ಬೆಂಗಳೂರು ರಾಜ್ಯಧ್ಯಾಕ್ಷರಾದ ಎಂ.ಡಿ. ಬೋಜರಾಜ ಬೆಂಗಳೂರು ಮತ್ತು ತಿಮ್ಮಣ್ಣ, ಸವಿತಾ ಮೇಡಂ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲೆಯ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಂಡಿ ಭೋಜರಾಜ ಅವರು ಸಂಘದ ತತ್ವ ಸಿದ್ಧಾಂತಗಳನ್ನು ಪದಾಧಿಕಾರಿಗಳು ಅಳವಡಿಸಿಕೊಳ್ಳುವುದರ ಮೂಲಕ ಸಂಘಟನೆಯ ಬಲವರ್ಧನಿಗೆ ಮುಂದಾಗಬೇಕು. ವಿಶೇಷವಾಗಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ತಲ್ಪಿಸುವಲ್ಲಿ ಪ್ರಾಮಾಣಿಕ ಸೇವೆಯ ಬದ್ಧರಾಗಬೇಕು. ಶಿಕ್ಷಣ ಉದ್ಯೋಗ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಧ್ವನಿ ಎತ್ತಬೇಕು ಎಂದು ತಿಳಿಸಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ನೀಡಿದರು.
ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಅಬ್ಬರದ ನಡುವೆ ನಲುಗಿಹೋದ ಬಿಜೆಪಿ ಪಕ್ಷ .
BJP party is shaken amidst the uproar of JDS and Congress party in Hanur constituency
ವರದಿ:ಬಂಗಾರಪ್ಪ .ಸಿ. ಹನೂರು : ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ವಜನರು ಸದಾಕಾಲವೂ ರಾಜಕೀಯ. ಮಾಡದಿದ್ದರು ಇಂದಿನ ಪರಿಸ್ಥಿತಿಯಲ್ಲಿ ಅವರಿಗಿರುವ ಸಾಮಾನ್ಯ ಜ್ಞಾನದ ಮಟ್ಟಿಗೆ ಹೇಳುವುದಾದರೆ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿಯೆ ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ವಿಶೇಷವಾಗಿ ಆಯ್ಕೆ ಮಾಡುವ ಮೂಲಕ ತಮ್ಮ ತನವನ್ನು ತೋರಿಸಿ ಬದಲಾವಣೆ ಮಾಡಿಕೊಳ್ಳುವ ಶಕ್ತಿಯ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿದ್ದಾರೆ ಎನ್ನಬಹುದು ಎನ್ನಲಾಗಿದೆ ಎಂದು ಪ್ರಾಮಾಣಿಕ ಕಾರ್ಯಕರ್ತರು ತಿಳಿಸಿದರು .
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಜನಾಂಗದವರು ಸೇರಿದಂತೆ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ಮತದಾರರಿದ್ದಾರೆ ಕಳೆದ ಎರಡು ಸಲವು ಬಹು ಸುಲಭವಾಗಿ ಗೆಲುವು ಕಾಣುವ ಅವಕಾಶಗಳನ್ನು ,ಕೇಲವು ಕ್ಷೇತ್ರದ ಹೊರಗಿನ ಭಟ್ಟಂಗಿಗಳಿಂದ ಕಳೆದುಕೊಂಡಿದ ಬಿಜೆಪಿ ಅದಕ್ಕೆ ಕಾರಣ ಆಂತರಿಕ ಕಚ್ಚಾಟ ಸರಿಯಾದ ನಾಯಕರ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಪಕ್ಷಕ್ಕೆ ಸಾದ್ಯವಾಗಿಲ್ಲ ,ಜನ ಬಿಜೆಪಿ ಬಯಸಿದರು ಸಹ ಅನ್ಯ ಕ್ಷೇತ್ರದಿಂದ ಬಂದಿರುವ ಅಮಾವಾಸ್ಯೆ ಮತ್ತು ಹುಣ್ಣಿಮೆ ಎಂಬ ಎರಡು ಗಿರಾಕಿಗಳಿಂದ ಹನೂರು ಕ್ಷೇತ್ರವು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಾಗಿದೆ ಎಂದರು ತಪ್ಪಾಗಲಾರದು. ಇದರ ಜೊತೆಯಲ್ಲಿ ಇತ್ತಿಚಿನ ದಿನಗಳಲ್ಲಿ ಮತ್ತೋಬ್ಬ ಗಿರಾಕಿ ಸೇರಿಕೊಂಡು ಗ್ರಹಣವು ಸೇರಿದರೆ ಸೂರ್ಯನಿಗೆ ಮಂಕಾದಂತೆ ಬಿಜಿಪಿ ಪಕ್ಷದ ಕಥೆಯು ಮುಗಿಯಿತು ಎನ್ನಬಹುದು . ಹನೂರು ಕ್ಷೇತ್ರದಲ್ಲಿ ಸರಿಯಾದ ಮಂಡಲ ಅದ್ಯಕ್ಷರುಗಳಾಧಿಯಾಗಿ ತಮ್ಮ ಕೆಲಸ ನಿರ್ವಹಿಸುತ್ತಿಲ್ಲ ಅವರಿಗೆ ನಾನೆ ಸಂಬಳ ಕೊಟ್ಟಿದ್ದೆನೆ ಎಂದು ಒಬ್ಬ ಹುಣ್ಣಿಮೆ ಗಿರಾಕಿ ಹೇಳಿಕೊಂಡು ಮಂಡಲ ಅಧ್ಯಕ್ಷರಾದ ಒಬ್ಬರನ್ನು ಇವರು ಬಂದಾಗ ತಮ್ಮ ಕಛೇರಿಗೆ ಕರೆಯಿಸಿ ಮೆಲ್ಮಟ್ಟದ ಮುಖಂಡರಿಗೆ ಕೇವಲ ಕಥೆ ಹೇಳಿಸುವ ಮೂಲಕ ತಮ್ಮ ನಾಟಕ ಕಂಪನಿಯನ್ನು ನಡೆಸುತ್ತಿದ್ದಾನೆ ,ಮಂಡಲ ಅಧ್ಯಕ್ಷರಾದವರ ಜೊತೆಯಲ್ಲಿ ಜಿಲ್ಲಾಧ್ಯಕ್ಷರ ಕಥೆಗಳು ಸಹ ಕೇವಲ ಅಲ್ಲೊಂದು ಇಲ್ಲೊಂದು ಪೋಟೊಗೆ ಪೋಜು ನೀಡಿ ಒಂದು ಕಾಪಿ ಕುಡಿದು ಹನೂರು ಖಾಲಿ ಮಾಡಿದರೆ ಪಕ್ಷ ಸಂಘಟನೆ ಮಾಡಲಾಗಿದೆ ಎಂಬ ಭಾವನೆ ಅವರದು ,ಇಂತವರಿಗೆಲ್ಲ ಬಿಜೆಪಿ ಜವಬ್ದಾರಿ ನೀಡಿದರೆ ಪಕ್ಷದ ಕತೆ ಗೋತವಾಗಲಿದೆ ,ಇನ್ನು ಸಂಘಟನೆಯ ಕೊರತೆಯನ್ನು ತುಂಬಲು ಕಾರ್ಯಕರ್ತರು ಅಗಾದ ಕಷ್ಟ ಪಡುವ ಸ್ಥಿತಿಯನ್ನು ನಿರ್ಮಾಣಮಾಡಲಾಗಿದೆ . ಇನ್ನು ಒಬ್ಬ ಅಮಾವಾಸ್ಯೆ ಗಿರಾಕಿಯು ಕೇವಲ ಜಾತಿಗೆ ಸೀಮಿತ ಎಂಬಂತೆ ಬಿಂಬಿಸಿ ಜಾತಿಗೆ ಕಳಂಕ ತರುವಂತೆ ಮಾಡಿದ್ದಾನೆ , ಹನೂರು ಕ್ಷೇತ್ರದಲ್ಲಿನ ಮೂಲ ಪಕ್ಷದ ಅಭ್ಯಾರ್ಥಿಗಳನ್ನು ಸೋಲಿಸುವಲ್ಲಿ ಅಂಗೊ ಇಂಗೊ ಯಶಸ್ವಿಯಾಗಿ ನಿಬಾಯಿಸುವಲ್ಲಿ ಯಶಸ್ವಿಯಾಗಿ ಮಾಡಿದ್ದಾನೆ, ಕಳೆದ ಚುನಾವಣಾ ಸಮಯದಲ್ಲಿ ಸ್ವಲ್ಪ ದರದಲ್ಲಿ ಕಾರ್ಯಕರ್ತರಿಂದ ಘೇರಾವ್ ಹಾಕಿಸಿಕೊಂಡು ಮುಂದುವರೆಯುವಷ್ಟರಲ್ಲಿ ಪಾರಾದ, ಆದರೆ ಅವನ ಆಟ ಇನ್ನು ಮುಗಿದಿಲ್ಲ ಮುಂದುವರಿದು ಮೈಸೂರು ಭಾಗದ ಶಾಸಕರಾದ ಜಿಟಿ ಹರಿಶ್ ಗೌಡರ ಸಖ್ಯ ಬೆಳೆಸಿ ಅವರಿಂದ ಎಮ್ ಡಿ ಸಿಸಿ ಬ್ಯಾಂಕಿನಲ್ಲಿ ಹನೂರು ಕ್ಷೇತ್ರವನ್ನೆ ಇತಿಹಾಸದ ಬದಲಿಸಿವೆ ಎಂದು ಮುನ್ನೂಗ್ಗಿ ಮುಗ್ಗರಿಸಿದ ಕಥೆಯು ನಮ್ಮ ಕಣ್ಣಮುಂದೆ ಕಾಣುತ್ತಿದೆ , ಜವಾಬ್ದಾರಿ ನನ್ನದೆ ಎಂಬುವಂತೆ ಬಿಂಬಿಸಿ ಮಲ್ಲೇಶ್ ಎಂಬುವವರನ್ನು ನಯವಾಗಿ ಸೋಲಿಸಿದ ಬೂಪರಾಗಿದ್ದಾರೆ ,
ಇನ್ನೊಬ್ಬ ಉಣ್ಣಿಮೆ ಗಿರಾಕಿ ಚುನಾವಣಾ ಬಂದರೆ ಕ್ಷೇತ್ರದಲ್ಲಿ ಕೈ ಎತ್ತುವ ಮೂಲಕ ನನ್ನ ಪ್ರಾಣ ಇಲ್ಲೆ ಎನ್ನುತ್ತ ,ಕ್ಷೇತ್ರದಲ್ಲಿ ಅಪಘಾತ ಅಥವಾ ಸಣ್ಣಪುಟ್ಟ ಕಾಯಿಲೆಗಳಿಂದ ಅನಾರೋಗ್ಯದ ದೃಷ್ಟಿಯಿಂದ ಪ್ರಾಣ ಹೊದವರ ಹತ್ತಿರವು ಸುಳಿಯದೆ ಕಣ್ಮರೆಯಾಗಿ ಹೋಗುವ ಇವರು, ಕ್ಷೇತ್ರಕ್ಕೆ ಯಾರಾದರು ಗಣ್ಯ ವ್ಯಕ್ತಿಗಳು ಬಂದರೆ ತಟ್ಟಂತ ನಾನೆ ಮಹನಾಯಕನೆಂಬಂತೆ ಹಾರಿ ಬರುವ ಜಾರುಬಂಡಿ ನಾಯಕರ ಸ್ಥಿತಿಯು ಬಿಜೆಪಿಯಲ್ಲಿ ಚಿಂತಜನಕವಾಗಿದೆ ಅವರಿಗೆ ಬಿ ಪಾರ್ಮ್ ಸಿಗುವ ವಿಶ್ವಾಸವು ಇವರಿಗಿಲ್ಲ , ಇನ್ನು ಕಳೆದ ಸಲದಲ್ಲಿ ಪರಜಿತರಾದ ಪ್ರೀತನ್ ರವರು ಮತ್ತು ಅವರ ತಾಯಿ ಪರಿಮಳಮ್ಮರವರು ತಾವು ಮಾಡುವ ಕೆಲಸದಲ್ಲಿ ಪ್ರಚಾರ ಕಾರ್ಯದಿಂದ ದೂರವೆ ಉಳಿದಿದ್ದಾರೆ . ಹಾಗೆ ನೋಡುವುದಾದರೆ .ಇದೇ ಕ್ಷೇತ್ರದ ದತ್ತೇಶ್ ಕುಮಾರ್ ರವರು ಸಹ ಪಕ್ಷದ ಅಭ್ಯರ್ಥಿಯಾಗಿ ಯಾರು ಬಂದು ಸ್ಪರ್ದಿಸಿದರು ಸರಿ ನಾನೆ ಮೊದಲು ಪಕ್ಷದ ಅಭ್ಯರ್ಥಿಯಾಗಿರುವವರ ಜೊತೆಯಲ್ಲಿ ಸೇರಿ ಬಿಜೆಪಿ ಗೆಲುವು ಕಾಣಲಿ ಎನ್ನುತ್ತಿದ್ದಾರೆ ,ಆದಾರೆ ಇವೆಲ್ಲವು ಸಾದ್ಯನ , ಬಿಜೆಯಲ್ಲಿ ತಿಂಗಳಿಗೊ ಮೂರು ತಿಂಗಳಿಗೊಮ್ಮೆ ಹಾಗೂ ಇಗೋ ಬರುವ ರಾಜಕೀಯ ಮಹನಾಯಕರಾದರವರು ನನ್ನ ನಾಯಕತ್ವ ದೆಹಲಿ ನಾಯಕರಿಗೆ ಗೊತ್ತು ಎನ್ನುತ್ತ ಧರ್ಮಸ್ಥಳದ ಬುರುಡೆ ಗ್ಯಾಂಗ್ ನ ರೀತಿಯಲ್ಲಿ ಬುರುಡೆ ಬಿಡುವುದೆ ಇವರ ಕಾಯಕವಾಗಿದೆ ಒಟ್ಟರೆ ಹೇಳುವುದಾದರೆ ಇವರುಗಳು ,ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವುದಿಲ್ಲ ಕ್ಷೇತ್ರ ಬಿಟ್ಟು ಹೋರಡುವುದಿಲ್ಲ ಜೆಡಿಎಸ್ ಪಕ್ಷದ ಬಿ ಟೀಮ್ ನಂತೆ ಕಾರ್ಯನಿರ್ವಹಿಸುವ ಇವರಕಾರ್ಯ ಅಲ್ಲೊಬ್ಬ ಇಲ್ಲೊಬ್ಬರು ನೋಡ್ತ ನಗ್ತಿದ್ದಾರೆ , ಆದರೆ ಪ್ರಾಮಾಣಿಕ ಕಾರ್ಯಕರ್ತರ ಕತೆ ಅಯೋಮಯವಾಗಲಿದೆ ಎಂದು ಬಿಜೇಪಿಯ ರಾಜಕೀಯ ಮುಖಂಡರಾದ... ತಿಳಿಸಿದರು.
ಕೊಪ್ಪಳ: ಸಹಕಾರ ಇಲಾಖೆಯಿಂದ ಜಿಲ್ಲಾ ಆಡಳಿತ ಭವನ ಆಡಿಟೋರಿಯoಹಾಲ್ ಕೊಪ್ಪಳ ಇದರಲ್ಲಿ ಯಶಸ್ವಿನಿ ಯೋಜನೆಯ ಕುರಿತು ಒಂದು ದಿನ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ ಸಹಕಾರಿ ವಿನಿಯನ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಹಕಾರ ಇಲಾಖೆಯ ಮುಖ್ಯ ಅಧಿಕಾರಿಗಳು, ನೇತೃತ್ವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಮಾತನಾಡಿ, ಸಹಕಾರ ಇಲಾಖೆಯಿಂದ, ರೈತರು ಮತ್ತು ಸಾರ್ವಜನಿಕರು ಹತ್ತಿರದಿಂದ ಸಹಕಾರ ಸಂಘದಲ್ಲಿ ವ್ಯವಹಾರಗಳನ್ನು ಮಾಡುತ್ತಾರೆ, ಅದರಿಂದ ನೇರವಾಗಿ ಸೌಲಭ್ಯವನ್ನು ಕಲ್ಪಿಸಬಹುದು, ಇದೇ ವರ್ಷ ಸಂಘದ ಕೋಡ್ ಮೂಲಕ ಆನ್ಲೈನ್ ಮೂಲಕ ಯಶಸ್ವಿನಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ನೇರವಾಗಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಕರು ನಿಮ್ಮ ಗಣಕಯಂತ್ರದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಈ ಒಂದು ತರಬೇತಿಯಿಂದ ಸದುಪಯೋಗವನ್ನು ಪಡೆದುಕೊಂಡು, ರೈತರಿಗೆ ಮತ್ತು ಸಾರ್ವಜನಿಕರಿಗೆ ಸಂಘದಿಂದ ಸೌಲಭ್ಯವನ್ನು ಕೊಟ್ಟಂತೆ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳು, ಸೌಹಾರ್ದ ಸರಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು, ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ, ಸರಕಾರ ಇಲಾಖೆ ಮುಖ್ಯಅಧಿಕಾರಿಗಳು, ಸಹಾಯಕರು ಭಾಗಿಯಾಗಿದ್ದರು.
ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ನಿಸ್ವಾರ್ಥ ಸೇವೆಯಿಂದ ಮಾಡುತ್ತೇನೆ: ಎ.ಭಾರತಿ
I will fulfill the responsibility given by the party with selfless service: A. Bharathi
ಗಂಗಾವತಿ: ಭಾರತೀಯ ಜನತಾ ಪಾರ್ಟಿ ನಗರ ಘಟಕ ಮತ್ತು ಗ್ರಾಮೀಣ ಘಟಕದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದ್ದು, ಬಿಜೆಪಿ ನಗರ ಘಟಕ ಅಧ್ಯಕ್ಷ ಚಂದ್ರಶೇಖರ್ ಹೀರೂರು ಮತ್ತು ಗ್ರಾಮೀಣ ಘಟಕ ಅಧ್ಯಕ್ಷ ಡಿ.ಕೆ.ಆಗೋಲಿ ಇಬ್ಬರೂ ಕೂಡಿಕೊಂಡು ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಹೊಸ ಸಾರಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಪಕ್ಷಕ್ಕೆ ನಿಷ್ಠೆ ಮತ್ತು ಸ್ವಾಭಿಮಾನದಿಂದ ಕೆಲಸ ಮಾಡುವ ಕಾರ್ಯಕರ್ತರಿಗೆ ಈ ಬಾರಿ ಆಯ್ಕೆ ಮಾಡಿದ್ದಾರೆ. ನಗರದಲ್ಲಿ ಎ.ಭಾರತಿ ಗಂಡ ಕೃಷ್ಣ ಆಗಲೂರು ಇವರು ಬಿಜೆಪಿ ಪಕ್ಷದಲ್ಲಿ ಸುಮಾರು 20 ವರ್ಷಗಳ ಹೆಚ್ಚು ಕಾಲ ಪಕ್ಷಕ್ಕಾಗಿ ಸಕ್ರಿಯವಾಗಿ ಕಾರ್ಯಕರ್ತೆಯಾಗಿ ನಿರಂತರ ಪಕ್ಷದಲ್ಲಿದ್ದರೂ ಸಹ ಗುರುತಿಸಲಿಲ್ಲ ಆದರೆ, ಗಂಗಾವತಿ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರು ಬಂದು ಕೆ.ಆರ್.ಪಿ ಪಕ್ಷಕ್ಕೆ ವಿಧಾನಸಭೆಗೆ ಸ್ಪರ್ಧಿಸಿದ್ದರು ಆನಂತರ ಬಿಜೆಪಿಯಲ್ಲಿದ್ದ ಇವರು ಗಾಲಿ ಜನಾರ್ದನ್ ರೆಡ್ಡಿ ಅವರ ಕೆಆರ್‌ಪಿಗೆ ಸೇರಿಕೊಂಡು ನಗರ ಮಂಡಲ ಮಹಿಳಾ ಸದಸ್ಯರಾಗಿ ಸಕ್ರಿಯವಾಗಿ ಕೆಲಸವನ್ನು ಮಾಡಿದ್ದು, ಇವರ ಸೇವೆಯನ್ನು ಗುರುತಿಸಿದ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ನಮ್ಮ ನಿರ್ದೇಶನ ಮಾಡಿದ್ದರು ಮತ್ತು ಈಗ ಬಿಜೆಪಿ ಬಿಜೆಪಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡುವಲ್ಲಿ ಶಾಸಕರಾದ ಜನಾರ್ದನ ರೆಡ್ಡಿ ಅವರು ನಗರ ಬಿಜೆಪಿ ಮಹಿಳಾ ಮೊರ್ಚ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಬಹಳ ವರ್ಷಗಳಿಂದ ಬಿಜೆಪಿಯಲ್ಲಿ ವರ್ತಿಸಿಕೊಂಡೆ ಸಕ್ರಿಯ ರಾಜಕಾರಣದಲ್ಲಿ ತೊಡಗಿರುವ ಇವರು ಮುಂದಿನ ದಿನಮಾನಗಳಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರನ್ನು ಒಗ್ಗೂಡಿಸಿ ಮತ್ತು ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ ಮತ್ತು ಈ ಹಿಂದೆ ನಡೆಸಿದ ರಾಜ್ಯ ಸರ್ಕಾರದ ಅಭಿವೃದ್ಧಿಗಳ ಬಗ್ಗೆ ಯೋಜನೆಗಳ ಬಗ್ಗೆ ವಿವರವಾದ ವಿಷಯಗಳನ್ನು ಪ್ರತಿಯೊಬ್ಬರ ಮಹಿಳೆಯರಿಗೆ ಮನಮುಟ್ಟುವಂತೆ ತಲುಪಿಸಿ, ಮಹಿಳೆಯರ ಮತಗಳನ್ನು ಸೆಳೆದುಕೊಳ್ಳುವ ಚಾಣಾಕ್ಷತನ ಇವರಿಗೆ ಇರುವುದರಿಂದ, ಕ್ಷೇತ್ರದ ಶಾಸಕರು ಇವರನ್ನು ನಗರ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆಂದು ತಿಳಿದು ಬಂದಿದೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಕ್ಷ ನನ್ನನ್ನು ಗುರುತಿಸಿ ಒಂದು ಜವಾಬ್ದಾರಿಯನ್ನು ನೀಡಿ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಮತ್ತು ನಿಸ್ವಾರ್ಥ ಸೇವೆಯಿಂದ ಪಕ್ಷಕ್ಕಾಗಿ ಸಂಘಟನೆ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆಂದು ತಿಳಿಸಿದರು.
ಪ್ರತಿದಿನ ಸಾವಿರಾರು ರೋಗಿಗಳಿಗೆ ಆರೋಗ್ಯ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆ (SJRI),…
St. John's Research Institute (SJRI), Bangalore, which serves as a health shield for thousands of patients every day,…
Hon. French President Emmanuel Jean-Michel Frédéric Macron, announcing the Partnership between H Company and SJRI at the AI India Summit.
ಬೆಂಗಳೂರು, ಪೆ,23 :ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ (CBCI ಸೊಸೈಟಿ ಫಾರ್ ಮೆಡಿಕಲ್ ಎಜುಕೇಶನ್‌ನ ಒಂದು ಘಟಕ)ದ ಭಾಗವಾಗಿದ್ದು, ಆರೋಗ್ಯ ರಕ್ಷಣೆ ಆಡಳಿತದಲ್ಲಿ ಏಜೆಂಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಅನ್ವಯವನ್ನು ಮೌಲ್ಯಮಾಪನ ಮಾಡಲು ಫ್ರೆಂಚ್ ಸ್ಟಾರ್ಟ್ಅಪ್ H ಕಂಪನಿಯೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಮಾಡಿಕೊಂಡಿದೆ, ಈ ಸಹಯೋಗವನ್ನು ಗೌರವಾನ್ವಿತ ಫ್ರೆಂಚ್ ಅಧ್ಯಕ್ಷರಾದ ಹಿಸ್ ಎಕ್ಸಲೆನ್ಸಿ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂಡಿಯಾ ಅಲ್ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೈಲೈಟ್ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ, ಅಧ್ಯಕ್ಷ ಮ್ಯಾಕ್ರನ್ ಜವಾಬ್ದಾರಿಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾರ್ವಭೌಮ ಅಲ್ ಮೂಲಕ ಒಟ್ಟಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳಿದರು. ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯನ್ನು ಒಳಗೊಂಡ ಇಂಡೋ-ಫ್ರೆಂಚ್ ಸಹಯೋಗವನ್ನು ಕೃತಕ ಬುದ್ಧಿಮತ್ತೆಯು ಆಸ್ಪತ್ರೆ ಆಡಳಿತವನ್ನು ಹೇಗೆ ಪರಿವರ್ತಿಸುತ್ತದೆ ಮತ್ತು ಆರೋಗ್ಯ ರಕ್ಷಣೆಯಂತಹ ನಿರ್ಣಾಯಕ ಸಾರ್ವಜನಿಕ ಸೇವಾ ಪರಿಸರದಲ್ಲಿ ನೈಜ-ಪ್ರಪಂಚದ ಪ್ರಭಾವವನ್ನು ಹೇಗೆ ನೀಡುತ್ತದೆ ಎಂಬುದಕ್ಕೆ ಒಂದು ಕಾಂಕ್ರೀಟ್ ಉದಾಹರಣೆ ಎಂದು ಅವರು ಉಲ್ಲೇಖಿಸಿದರು.
Hon. French President Emmanuel Jean-Michel Frédéric Macron, announcing the Partnership between H Company and SJRI at the AI India Summit.
ಪ್ರತಿದಿನ ಸಾವಿರಾರು ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಬೆಂಗಳೂರಿನ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯ ಒಂದು ಮೂಲಾಧಾರವಾಗಿದೆ. ಸೇಂಟ್ ಜಾನ್ಸ್‌ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಸುಗಮಗೊಳಿಸುವ ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆ, ವೈದ್ಯಕೀಯ ಮತ್ತು ಕ್ಲಿನಿಕಲ್ ಸಿಬ್ಬಂದಿಯ ಮೇಲಿನ ಆಡಳಿತಾತ್ಮಕ ಹೊರೆಯನ್ನು ರಚನಾತ್ಮಕವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಅಲ್-ಚಾಲಿತ ಪರಿಹಾರಗಳನ್ನು ನಿಯೋಜಿಸಲು H ಕಂಪನಿಯೊಂದಿಗೆ ಕೆಲಸ ಮಾಡುತ್ತದೆ. ಪುನರಾವರ್ತಿತ ಮತ್ತು ಸಮಯ-ತೀವ್ರ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ, ಈ ಉಪಕ್ರಮವು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಆರೋಗ್ಯ ವೃತ್ತಿಪರರು ರೋಗಿಗಳ ಆರೈಕೆಯ ಮೇಲೆ ಹೆಚ್ಚು ಗಮ�
Hon. French President Emmanuel Jean-Michel Frédéric Macron, announcing the Partnership between H Company and SJRI at the AI India Summit.
St. John’s Research Institute (SJRI), Bangalore, part of St. John’s National Academy of Health Sciences (a Unit of CBCI Society for Medical Education), has entered into a strategic partnership with A French startup H Company, to evaluate the application of Agentic Artificial Intelligence in Healthcare Administration, a collaboration highlighted by Honorable French President, His Excellency Emmanuel Macron, during his inaugural address at the India AI Impact Summit 2026. In his address, President Macron underscored the importance of doing better together through responsible, inclusive, and sovereign AI. He referenced the Indo-French collaboration involving St. John’s Research Institute as a concrete example of how artificial intelligence can transform hospital administration as well as deliver real-world impact in critical public service environments such as healthcare. St. John’s Medical College Hospital, which serves thousands of patients daily is a cornerstone of Bengaluru’s healthcare ecosystem. St. John’s Research Institute, which facilitates research and innovation at St. John’s will work with H Company to deploy AI- driven solutions aimed at structurally reducing administrative burden on medical and clinical staff. By automating repetitive and time-intensive tasks, the initiative seeks to enhance operational efficiency and enable healthcare professionals to focus more on patient care. The collaboration begins with an operational deployment focused on an extensive understanding of resource management processes and clinical staff coordination. Once tailored to work with the existing Technology Platform at St. John’s, technology will operate in a live hospital environment, performing backstage automated tasks in resource allocation and management. The partnership has been jointly designed by the H Company and with the SJRI leadership, including Dr. Tony D. S. Raj, Dean, St. John’s Research Institute, and Head, Division of Medical Informatics and Dr. Dhinagaran D. Assistant Professor in collaboration with Ms. Sara Oomen, the Chief of Nursing services at St. John’s. St. John’s Research Institute acknowledges the support of the Government of Karnataka, including Dr. Sharan Prakash Patil, Minister for Skill Development, Entrepreneurship and Livelihood, and Shri Priyank M Kharge, Minister for Electronics, IT & BT and support from the Government of India, Shri Jitin Prasada, Union Minister of Commerce and Industry and Shri Abhishek Singh, DG, NIC and Additional Secretary, MeitY, Gove. of India. The MoU was signed in the presence of Ms. Anne Le Hénanff, French Minister of Artificial Intelligence and Digital Affairs. The announcement was enabled through the collaborative efforts of key Indo-French stakeholders and ecosystem leaders, including leaders of La French Tech Ms. Souad Tenfiche-Ancelle and Ms. Julie Huguet. This partnership reflects a shared Indo-French commitment to deploying responsible and impactful AI solutions that strengthen healthcare ecosystems, improve workforce efficiency, and deliver long-term societal valu
ನೂತನ ಕಟ್ಟಡ ಭೂಮಿ ಪೂಜೆಗೆ ಒಕ್ಕೂಟದ ಉಪಾಧ್ಯಕ್ಷರು ಹೆಸರು ಖಡಗಡನೆ
Union vice president to be named for groundbreaking ceremony for new building
ಕೊಪ್ಪಳ: ತಾಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಭೂಮಿ ಪೂಜೆಯನ್ನು ದಿನಾಂಕ 23.02.2026 ರಂದು ಸೋಮವಾರ ಅಧ್ಯಕ್ಷರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು, ಆದರೆ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ, ಒಳಗೊಂಡು ಒಕ್ಕೂಟದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಮುಖ ಸ್ಥಾನವಾಗಿದೆ ಆದರೆ ಒಕ್ಕೂಟದ ಉಪಾಧ್ಯಕ್ಷರಾದ ಎನ್ ಸತ್ಯನಾರಾಯಣ ಕೋಟೆಯ ಕ್ಯಾಂಪ್ ಇವರನ್ನು, ಲೆಕ್ಕಿಸದೆ ಬ್ಯಾನರ್ ಅಳವಡಿಸಲಾಗಿದೆ. ಶಾಸಕರು ಮತ್ತು ಒಕ್ಕೂಟದ ಅಧ್ಯಕ್ಷರಾದ ಶ್ರೀ ಮಾನ್ಯ ಕೆ ರಾಘವೇಂದ್ರ ಇಟ್ನಾಳ್ ಇವರು ಒಕ್ಕೂಟದ ಅಧಿಕಾರಿಗಳು ಮತ್ತು ಉಪಾಧ್ಯಕ್ಷರನ್ನು ಭೂಮಿ ಪೂಜೆ ಸಂಭ್ರಮಕ್ಕೆ ಪರಿಗಣಿಸದೆ ಭೂಮಿ ಪೂಜೆ ಗೆ ಬ್ಯಾನರನ್ನು ಅಳವಡಿಸಿದ್ದಾರೆರಿಂದ, ಗಂಗಾವತಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಾವಿಗೆ ಬಿದ್ದ ಹಂದಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಗ್ನಿಶಾಮಕ ಸಿಬ್ಬಂದಿಗಳು.
Firefighters rescued a pig that had fallen into a well and released it into the forest.
ವರದಿ: ಬಂಗಾರಪ್ಪ. ಸಿ.
ಹನೂರು ಅಗ್ನಿಶಾಮಕ ಠಾಣೆ.ರಕ್ಷಣಾ ಕರೆ ಸಂಖ್ಯೆ:01/2026 ದಿ, 22/02/2026 ರಂದು ಸಮಯ 09-59 ರಲ್ಲಿ ಶ್ರೀ ಲಿಂಗರಾಜು ಎಂಬುವವರು ಕರೆ ಮಾಡಿ ಹನೂರು ತಾಲ್ಲೂಕು, ವೈಶ್ಯಂಪಾಳ್ಯ ಗ್ರಾಮದಲ್ಲಿ 30*30 ಅಡಿ ಉದ್ದ ಅಗಲದ 70 ಅಡಿ ಆಳದ 5 ಅಡಿ ನೀರು ತುಂಬಿದ್ದ ಬಾವಿಗೆ 01 ಹಂದಿ ಬಿದ್ದಿದೆ ಎಂದು ತಿಳಿಸಿರುತ್ತಾರೆ KA 42 G 430 ಜಲವಾಹನದಲ್ಲಿ LF-696 ,04 ಸಿಬ್ಬಂದಿಯೊಂದಿಗೆ ತೆರಳಿ ಹಂದಿಯನ್ನು ಬಾವಿಯಿಂದ ಮಲೆತ್ತಿ ರಕ್ಷಿಸಿ , ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಬಯಲು ಪ್ರದೇಶಕ್ಕೆ ಬಿಟ್ಟು ಘಟನೆಯ ವಿವರ ಮಾಹಿತಿ ಪಡೆದು 13-00 ಗಂಟೆಗೆ ಠಾಣೆಗೆ ಮರಳಿ ಬಂದಿರುತ್ತಾರೆ . ಇದೇ ಸಂದರ್ಭದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿಯವರಾದ ಪೆರಿಯ ನಾಯಗಂ ಮಹೇಶ್ ಕುಮಾರ್ ಹರ್ಷ ಲೋಕೇಶ್,ಅರಣ್ಯ ಇಲಾಖೆ ಸಿಬ್ಬಂದಿ ಚಿನ್ನಸ್ವಾಮಿ ಲಾಯಪ್ಪ ನಿಂಗರಾಜ್ ನಂದೀಶ್ ಅಭಿ ಕೃಷ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.