ಮಾ.1 ರಂದು ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ

ಮಾ.1 ರಂದು ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ

Sri Jagadguru Sri Renukacharya Jayanti program on March 1




ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ(ಯುಗಮಾನೋತ್ಸವ) ಆಚರಣೆ ಕಾರ್ಯಕ್ರಮವನ್ನು ಮಾರ್ಚ್ 1 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ರಾಬಕೊವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನ್ ಸಾಬ್ ನಬೀಸಾಬ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ.ಮೋಹನ್ ರಾಜ್ ಅವರು ಭಾಗವಹಿಸುವರು.
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ವಿಭಾಗದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಹಾ.ಮಾ.ನಾಗಾರ್ಜುನ  ಅವರು ಜಗದ್ಗುರು ಶ್ರೀ ರೇಣುಕಾಚಾರ್ಯ ರವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿನ ದೇಶ ದ್ರೋಹ ಚಟುವಟಿಕೆ ಆರೋಪ: ತನಿಖೆಗೆ ಪ್ರೌಢ ಶಿಕ್ಷಣ ಇಲಾಖೆ ಆದೇಶ

ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿನ ದೇಶ ದ್ರೋಹ ಚಟುವಟಿಕೆ ಆರೋಪ: ತನಿಖೆಗೆ ಪ್ರೌಢ ಶಿಕ್ಷಣ ಇಲಾಖೆ ಆದೇಶ

Allegations of treasonous activities at Samara International Islamic School: Secondary Education Department orders investigation




ಬೆಂಗಳೂರು: ಧಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿ ನಡೆಯುತ್ತಿದೆ ಎನ್ನಲಾದ ದೇಶ ದ್ರೋಹ ಚಟುವಟಿಕೆ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ [ಪ್ರೌಢ ಶಿಕ್ಷಣ] ನಿರ್ದೇಶಕರು ಆದೇಶಿಸಿದ್ದಾರೆ.

ಎಚ್.ಬಿ.ಆರ್ ಬಡಾವಣೆಯ ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಸಲಾಂ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ದೂರುದಾರರ ಪುತ್ರ ಇದೇ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಸದರಿ ಶಾಲೆಯು ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದೆ. ಇಲ್ಲಿನ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಕೋರಿದ್ದರು.

ಕಳೆದ 2019 ರ ನವೆಂಬರ್ 24 ರಂದು ಯೂ ಟ್ಯೂಬ್ ಚಾಲನ್ನ ವರದಿಯ ಪ್ರಕಾರ ಸದರಿ ಶಾಲೆಯಲ್ಲಿ ದೇಶ ವಿರೋಧಿ ಚಟುಟಿಕೆ ನಡೆಯುತ್ತಿದೆ. ಮುಸ್ಲಿಂ ಜನಾಂಗದವರ ಚರಿತ್ರೆಯನ್ನು ವಿವರಿಸುವ ಸಂದರ್ಭದಲ್ಲಿ ರಾಷ್ಟ್ರವನ್ನು ಮುಸ್ಮಾಂನರ ಆಡಳಿತಕ್ಕೆ ಒಳಪಡಿಸಬೇಕಾದ ಅಗತ್ಯಗಳ ಬಗ್ಗೆ ಪ್ರಸ್ತಾವನೆ ಮತ್ತು ಚರ್ಚೆಯನ್ನು ಜಾಮಿಯ ಮೊಹಮ್ಮದೀಯ ಮನ್ನೂರ ಎಜುಕೇಷನ್ ಸೊಸೈಟಿಯವರು ಮಾಡಿರುತ್ತಾರೆ ಎಂದು ಆಪಾದಿಸಿದ್ದಾರೆ.

ಸದರಿ ಇಸ್ಲಾಂ ಟ್ರಸ್ಟ್ ನವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾವಲ್ಲಿರುವ ಜಾಮಿಯ ಮೊಹಮ್ಮದೀಯ ಮನ್ಸೂರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ನಾಜಿಯ ಅನ್ಸಾರಿ ಬೆಂಗಳೂರಿನಲ್ಲಿ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಗೆ ಸಮಾವೇಶಕ್ಕಾಗಿ ಬಂದಿದ್ದರು. ಅವರು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿರುವ ಕಾರಣಕ್ಕಾಗಿ ಆಕೆಯ ಪತಿಯನ್ನು ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು ಇದಕ್ಕೆ ನೊಂದು ಸಂಸ್ಥೆ ವಿರುದ್ಧ ಮಹಾರಾಷ್ಟ್ರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ ಕಾರಣ ಆಕೆಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದು ರಾಷ್ಟ್ರದ ಏಕತೆಗೆ ಭಂಗ ಬರುವಂತಹ ವಿಷಯವಾಗಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರ ರಾಜ್ಯದಿಂದ ಬಂದ್ದ ವಿದ್ಯಾರ್ಥಿಯೊಬ್ಬ ಈ ಶಾಲೆಯಲ್ಲಿನ ಕಾನೂನು ಬಾಹಿರ ಚಟುವಟಿಕೆಗಳ ಕುರಿತು 2024ರ ಏಪ್ರಿಲ್ ನಲ್ಲಿ 25 ರಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಎಲ್ಲಾ ದೂರುಗಳನ್ನು ಪರಿಗಣಿಸಿ ಸದರಿ ದೂರನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ

ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ

43rd Punya Smaranotsavam program of Lingaykya Sri Virupaksheshwara Shivacharya Mahaswamy

ಕೊಪ್ಪಳ ಜಿಲ್ಲೆಯ ಕಾರಟಗಿ ನಗರದ ಮಹಾ ತಪೋನಿಧಿ ಸ್ವಾತಂತ್ರ್ಯ ಸಂತ,, ತ್ರಿವಿಧ ದಾಸೋಹಿ ಹಾಗೂ ಮಹಿಮಾ ಪುರುಷರಾಗಿರುವ ಪರಮಪೂಜ್ಯ ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ತಲೆಕಾನ್ ಹಿರೇಮಠದಲ್ಲಿ ನಡೆಯಿತು,,, ಪರಮಪೂಜ್ಯ ಶ್ರೀ ವೀರಭದ್ರ ಶರಣರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಕಾರಟಗಿ ಪಟ್ಟಣದ ತಲೆಕಾನ್ ಹಿರೇಮಠಕ್ಕೆ ಆಗಮಿಸಿದ್ದ ಭಕ್ತಾದಿಗಳು ಪರಮಪೂಜ್ಯರ ಆಶೀರ್ವಾದ ಪಡೆದರು

ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

Dalit woman attempts suicide after being harassed by Equitas Small Finance Bank staff in Tiptur




ವರದಿ :ಮಂಜು ಗುರುಗದಹಳ್ಳಿ

ತಿಪಟೂರು. ತಾಲ್ಲೂಕಿನ ಹರಚನಹಳ್ಳಿ ಕಾಲೋನಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಸಾಲದ ಕಂತನ್ನು ಪಾವತಿಸುವಂತೆ ತೀವ್ರ ಒತ್ತಡ ಮತ್ತು ಬೆದರಿಕೆ ಹಾಕಿದ್ದರಿಂದ ಕಳೆನಾಶಕ ಮತ್ತು ಕೆಲ ಮಾತ್ರೆಗಳನ್ನು ನುಂಗಿದ್ದಾರೆ ಎಂದು ಅವರ ಮಗ ಆರೋಪಿಸಿದ್ದಾರೆ

ಮಂಜುಳಾ ರವರ ಪತ್ನಿ ಗಂಗಾಧರಯ್ಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 10 ಲಕ್ಷ ಸಾಲ ಪಡೆದಿದ್ದು 5 ಲಕ್ಷವನ್ನು ಸಾಲದ ಕಂತನ್ನು ಕಟ್ಟಿದ್ದಾರೆ
ಆದರೆ ಮನೆ ಮಾಲೀಕ ಗಂಗಾಧರ್ ಅವರಿಗೆ ಅನಾರೋಗ್ಯ ಇರುವ ಕಾರಣ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿಲ್ಲ. ಇನ್ನು ಫೈನಾನ್ಸ್ ಸಿಬ್ಬಂದಿಯವರು ಬಡ್ಡಿಯ ಸಮೇತ 11 ಲಕ್ಷ ಕಟ್ಟಲು ಒತ್ತಡ ಏರಿದ್ದಾರೆ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ.

ದಿನೇ ದಿನೇ ರಾಜ್ಯದಲ್ಲಿ ಮುಂದುವರಿದ ಕೆಲ
ಫೈನಾನ್ಸ್ ಗಳಿಂದ ನಿಂದ ಕಿರುಕು

ಳ ಅದೆಷ್ಟೋ ಬಡ ಕುಟುಂಬಳು ಬೀದಿಗೆ ಬೀದಿವೆ

ಇನ್ನಾದರೂ ಖಾಸಗಿ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ಕ್ರಮ ಕೈಗೊಂಡು ಬಡ ಸಮುದಾಯಗಳ ಪರ ನೊಂದ ಜನಕ್ಕೆ ಕಣ್ಣೀರು ಒರೆಸುತ್ತಾ ಎಂದು ಕಾದು ನೋಡಬೇಕಾಗಿದೆ.


ವರದಿ :ಮಂಜು ಗುರುಗದಹಳ್ಳಿ

ಮೈದಾ ಹಿಟ್ಟು ಒಳ್ಳೇದಲ್ಲ ಅಂತ ಹೇಳತಾರೆ ಯಾಕೆ? ಇದರಿಂದ ದೇಹದ ಮೇಲೆ ಆಗುವ ಪರಿಣಾಮಗಳು ಏನು?

ಮೈದಾ ಹಿಟ್ಟು ಒಳ್ಳೇದಲ್ಲ ಅಂತ ಹೇಳತಾರೆ ಯಾಕೆ? ಇದರಿಂದ ದೇಹದ ಮೇಲೆ ಆಗುವ ಪರಿಣಾಮಗಳು ಏನು?

Why do you say that maida flour is not good? What are the effects of this on the body?




  ಮೈದಾ ಒಳ್ಳೆಯದಲ್ಲ ಎಂದು ನಾನೂ ಕೇಳಿದ್ದೇನೆ. ಈ ವಿಷಯಕ್ಕೆ ನಾನು ಕೊಡುವ ಪ್ರಾಮುಖ್ಯತೆ – ‘ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು’ಮೈದಾ ಎಂಬುದು ಗೋಧಿಯಿಂದ ತೆಗೆದ ಹಿಟ್ಟಿನ ರಿಫೈನ್ ಮಾಡಿದ ಅಂಶ. ಇದನ್ನು ತಯಾರಿಸುವಾಗ ಶುದ್ಧೀಕರಿಸಲು, ಬೆಳ್ಳಗೆ ಮಾಡಲು ಕೆಲವು ರಾಸಾಯನಿಕಗಳನ್ನು ಬಳಸುತ್ತಾರೆ, ಇದರಿಂದ ಕ್ಯಾನ್ಸರ, ಬೊಜ್ಜು ಹಾಗೂ ಮಧುಮೇಹದಂತಹ ರೋಗಗಳು ಬರುತ್ತವೆಂದು ವರದಿಗಳು ಹೇಳಿವೆ. ಕೆನಡಾ ದೇಶದ ವಿಶ್ವವಿದ್ಯಾಲಯಗಳು ಇದರ ಮೇಲೆ ಪ್ರಯೋಗ ನಡೆಸಿದ್ದಾಗಿ ಹೇಳಿದ್ದಾರೆ.ಕೆನಡಾದ ಜನ ಬೆಳಗಿನ ತಿಂಡಿಗೆ, ಮದ್ಯಾಹ್ನದ ಊಟಕ್ಕೆ, ರಾತ್ರಿಯ ಊಟಕ್ಕೆ ವಿವಿಧ ರೀತಿಯ ಬ್ರೆಡಗಳನ್ನು ಉಪಯೋಗಿಸುತ್ತಾರೆ. ಅವರ ಬ್ರೆಡ್, ಬ್ರೆಡ ರೋಲ, ಕೇಕ್, ಬರ್ಗರ, ಪಿಜ್ಜಾ ಇತ್ಯಾದಿ ಎಲ್ಲದರಲ್ಲೂ ಮೈದಾ ಉಪಯೋಗಿಸುತ್ತಾರೆ. ಇವರು ದಿನದ ಮೂರೂ ಹೊತ್ತು ಮೈದಾ ಸೇವನೆ ಮಾಡುವವರು. ನಮ್ಮ ಈಗಿನ ಊಟದ ಪದ್ಧತಿ ನೋಡಿದರೆ ನಾವು ಮೂಲತಃ ಅಕ್ಕಿ, ಗೋಧಿ, ಜೋಳ, ರಾಗಿಯನ್ನು ಉಪಯೋಗಿಸುತ್ತೇವೆ. ನಾವು ಬ್ರೆಡ್ ಅಥವಾ ಇತರ ಮೈದಾದಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಸರಾಸರಿ ವಾರಕ್ಕೊಮ್ಮೆ ಅಥವಾ ಇನ್ನೂ ಕಡಿಮೆ. ನಮಗೂ ಅವರಿಗೂ ಮೈದಾ ಸೇವನೆಯ ವಿಷಯದಲ್ಲಿ ಅಂತರ ಬಹಳವಿದೆ.ಇಷ್ಟಕ್ಕೂ ಮೈದಾ ಸರಿಯಲ್ಲ ಎಂದು ಹೇಳುವ ಪಾಶ್ಚಾತ್ಯ ದೇಶಗಳಲ್ಲಿ ಎಷ್ಟು ದೇಶಗಳಲ್ಲಿ ಮೈದಾ ಬ್ಯಾನ ಮಾಡಿದ್ದಾರೆ ?ನಾವು ರಸ್ತೆ ಬದಿ ತಯಾರಿಸುವ, ಧೂಳು ಸೇರಿದ ಮಿರ್ಚಿಭಜಿ, ಪಾಣಿಪುರಿ, ಇತರ ತಿಂಡಿಗಳನ್ನು ತಿಂದು ಅರಗಿಸಿಕೊಳ್ಳುತ್ತೇವೆ. ಕೀಟನಾಶಕ ಸಿಂಪಡಿಸಿದ ತರಕಾರಿ, ಹಣ್ಣುಗಳನ್ನು ತಿಂದು ಅರಗಿಸಿಕೊಳ್ಳುತ್ತೇವೆ. ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಮೆಣಸು, ದಾಲ್ಚಿನ್ನಿ, ಲವಂಗ, ಕರಿಬೇವಿನಂತಹ ಔಷಧಿಯುಕ್ತ ಪದಾರ್ಥಗಳನ್ನು ಅವರಿಗಿಂತ ಹೇರಳವಾಗಿ ಸೇವಿಸುತ್ತೇವೆ. ನಾವು ದಿನನಿತ್ಯ ತಿನ್ನುವ ಮಸಾಲೆ ಭರಿತ ಸಾಮಾನುಗಳನ್ನು ಅವರಿಗೆ ಒಂದು ಹೊತ್ತೂ ತಿನಲಾಗುವುದಿಲ್ಲ. ಅವರ ಇಮ್ಯುನಿಟಿ ಲೆವಲ್ಲೇ ಬೇರೆ ನಮ್ಮ ಇಮ್ಯುನಿಟಿ ಲೆವಲ್ಲೇ ಬೇರೆ. ಅವರಿಗೆ ತೊಂದರೆ ಕೊಡಬಹುದಾದ ಮೈದಾದಲ್ಲಿನ ರಸಾಯನಿಕಗಳು ನಮಗೇನೂ ಮಾಡಲಾರವು.೫೦ ವರ್ಷಗಳ ಹಿಂದೆ ಇದ್ದ ಕೀಟನಾಶಕಗಳು ಈಗ ಪ್ರಯೋಜನವಿಲ್ಲವೆಂದು ವಿಜ್ಞಾನ ಹೇಳುತ್ತದೆ. ಏಕೆಂದರೆ ಈ ಅವಧಿಯಲ್ಲಿ ಕೀಟಗಳು ಆ ರಾಸಾಯನಿಕಕ್ಕೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಮೈದಾ ಕೆಟ್ಟದ್ದು ಎಂದು ಕೇಳಿ ಬಂದದ್ದು ಇತ್ತೀಚೆಗಷ್ಟೇ. ನಾವೆಲ್ಲ ಈ ವರಗೆ ಸಾಮಾನ್ಯ ರೀತಿಯಲ್ಲಿ ಮೈದಾ ತಿನ್ನುತ್ತಲೇ ಇದ್ದೇವೆ. ಈಗ ನನಗೆ ೬೦ ವರ್ಷ. ನಾವೂ ಮೈದಾದಲ್ಲಿರುವ ರಸಾಯನಿಕಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದೇವೆ. ಹೀಗಾಗಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

.

ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

GTTC: Invited applications for the post of Guest Lecturer




ಕೊಪ್ಪಳ ಫೆಬ್ರವರಿ 25, (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ದದೇಗಲ್‌ನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿ.ಟಿ.ಡಿ.ಎಮ್, ಡಿ.ಎಮ್.ಸಿ.ಹೆಚ್ ಮತ್ತು ಇ&ಸಿ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ  ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೊಮಾ ಟೂಲ್ ಮತ್ತು ಡೈ ಮೇಕಿಂಗ್(ಡಿ.ಟಿ.ಡಿ.ಎಮ್), ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್(ಪಿ.ಟಿ.ಡಿ.ಟಿ), ಎಲೆಕ್ಟಾçನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿAಗ್ ಪದವಿ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಮಾರ್ಚ್ 6 ರೊಳಗಾಗಿ ಜಿಟಿಟಿಸಿ ಕೊಪ್ಪಳ ಕಛೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಇ-ಮೇಲ್ ಐಡಿ:  gttckoppal@gmail.com  ಗೆ ನಿಮ್ಮ ಸ್ವ-ವಿವರವುಳ್ಳ ಬಯೋಡೆಟಾವನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ಅಥವಾ ಮೌನೇಶ್, ವಿಭಾಗದ ಮುಖ್ಯಸ್ಥರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್, ಮೊ. ಸಂಖ್ಯೆ-7507094445 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಿಸಿಲಿನ ಪ್ರಖರತೆ ಹಾಗೂ ತೀವ್ರತೆಯಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಸಲಹೆಗಳು

ಬಿಸಿಲಿನ ಪ್ರಖರತೆ ಹಾಗೂ ತೀವ್ರತೆಯಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಸಲಹೆಗಳು

Health Department's tips to avoid the harsh and intense sun

ಕೊಪ್ಪಳ ಫೆಬ್ರವರಿ 25, (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬAದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಇವರು ಸಲಹೆಗಳನ್ನು ನೀಡಿದ್ದಾರೆ.
ಬೇಸಿಗೆ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ/ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸಬೇಕು. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ/ಶಾಖ ತರಂಗ(ಹೀಟ್ ವೇವ್)ದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕು.
ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ/ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಿ. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯಿರಿ. ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ- ಡಾ. ಸುರೇಶ ಬಿ.ಇಟ್ನಾಳ

ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ- ಡಾ. ಸುರೇಶ ಬಿ.ಇಟ್ನಾಳ





Create awareness to prevent loss of life due to snakebite - Dr. Suresh B. Itnal


ಕೊಪ್ಪಳ ಫೆಬ್ರುವರಿ 25 (ಕರ್ನಾಟಕ ವಾರ್ತೆ): ಹಾವು ಕಡಿತದಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ಭಾರತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೇಶ ಮತ್ತು ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ಹಾವುಗಳ ತಿರುಗಾಟ ಹೆಚ್ಚಿರುತ್ತದೆ. ಕೃಷಿ ಮತ್ತು ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂತಹ ಕೃಷಿ ಕುಲಕಸುಬುಗಳಲ್ಲಿ ತೊಡಗಿರುವ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಗಳ ಕುರಿತು ಅರಿವು ಮೂಡಸಬೇಕು ಎಂದರು.
ಮನೆಗಳ ಸುತ್ತ ಮುತ್ತಲಿನ ತಾಣಗಳಲ್ಲಿ ಕಸದ ರಾಸಿ ಇದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ. ಗಿಡಗಂಟೆಗಳು ತುಂಬಿದ ದಾರಿ ಹಾವು ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾರ್ವಜನಿಕರು ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 24*7 ಚಿಕಿತ್ಸೆಯನ್ನು ನೀಡಲು ಎಲ್ಲಾ ಆಸ್ಪತ್ರೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾವು ಕಡಿತ ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ನಾಟಿ ವೈದ್ಯರ ಬಳಿ ಹೋಗದೇ ಕೂಡಲೇ 40 ನಿಮಿಷದೊಳಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯದುಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ಮನೆಯ ಹೊರಗಡೆ ನೆಲದ ಮೇಲೆ ಮಲಗುವುದರಿಂದ ಹಾವು ಅಥವಾ ಇತರೆ ಕೀಟಗಳು ಸಂಚರಿಸಬಹುದು. ಹಾಗಾಗಿ ಮೇಜು, ದಿವಾನ ಕಾಟ್, ಕಟ್ಟೆ ಅಥವಾ ಎತ್ತರ ಸ್ಥಳಗಳಲ್ಲಿ ಮಲಗುವುದು ಸೂಕ್ತವಾಗಿದೆ. ಬೆಳಕಿನಲ್ಲದೆ ಬರಿಗಾಲಲ್ಲಿ ನಡೆಯುವುದು ಹಾವು ಕಡಿತದ ಸಂಭವವನ್ನು ಹೆಚ್ಚಿಸುತ್ತದೆ. ಸ್ವಚ್ಛ ವಾಗಿರದ ಹೊಲ ಗದ್ದೆಗಳು ಹಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಹಾಗೂ ಅಲ್ಲಿ ನಡೆದಾಡುವುದು ಅಪಾಯಕಾರಿ ಮತ್ತು ಸೌದೆಗಳ ಕಟ್ಟನ್ನು ಪರಿಶೀಲಿಸದೇ ಎತ್ತುವುದು ಅಪಾಯಕಾರಿಯಾಗಿದ್ದು, ಹಾವು ಕಡಿತದಿಂದ ಪಾರಾಗಲು ಸಾರ್ವಜನಿಕರು ಕಸವನ್ನು ಬುಟ್ಟಿಗಳಲ್ಲಿ ಹಾಕಿ, ತಮ್ಮ ಮನೆ ಸುತ್ತಮುತ್ತ ಗಿಡಗಂಟೆಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಡೆದಾಡುವ ದಾರಿಗಳನ್ನು ಕಳೆ ಮುಕ್ತ ಮಾಡುವದರಿಂದ ಹಾವಿನ ಕಡಿತವನ್ನು ಕಡಿಮೆ ಮಾಡಬಹುದು. ರಾತ್ರಿ ಸಮಯದಲ್ಲಿ ಓಡಾಡುವಾಗ ಟಾರ್ಚನ್ನು ಉಪಯೋಗಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಹೆಚ್ಚು ಸುರಕ್ಷಿತ. ರೈತರು ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ಗಮ್ ಪೂನ್ (ರಬ್ಬರ ಬೂಟ್) ಉಪಯೋಗಿಸಬೇಕು. ಹೊಲ ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಬೇಕು. ಸೌದೆ ಕಟ್ಟುಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸುವ ಅಥವಾ ಎತ್ತಿಕೊಳ್ಳುವ ಮೊದಲು ಪರಿಶೀಲಿಸಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ವಿಶೇಷವಾಗಿ ರೈತರು ಈ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವು ಕಡಿತವನ್ನು ತಡೆಗಟ್ಟಬೇಕೆಂದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾ ಮಹಾಂತೇಶ ಎಸ್. ದರಗದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಆರ್.ಸಿ.ಹೆಚ್. ಅಧಿಕಾರಿ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಕಾಶ ವಿ., ಆರೋಗ್ಯ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವಿಂದ್ರನಾಥ ಎಂ.ಹೆಚ್., ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ ಪ್ರಕಾಶ ಹೆಚ್. ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಸ್ಥಿತರಿದ್ದರು.

ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ AIMSS ನಿಂದ ಮನವಿ

ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ AIMSS ನಿಂದ ಮನವಿ

AIMSS appeals for solutions to women and children's issues

ಕೊಪ್ಪಳ:ಇಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS)ಯ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ AIMSS ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳಾ ಮಜ್ಜಿಗಿ ಅವರು ಮಾತನಾಡಿ “ಉದ್ಯೋಗದ ಸ್ಥಳಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ (ICC) ರಚಿಸಬೇಕು. ಕೊಪ್ಪಳವೂ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚುತ್ತಿರುವ
ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಕೂಡಲೇ ಮಾನ್ಯ ಕಾಯ್ದೆಯನ್ನು ಜಾರಿಗೊಳಿಸಿಬೇಕು. ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಹಾಗೂ ಸ್ತ್ರೀ ಭ್ರೂಣ ಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಏಟು ಕೊಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳನ್ನು ಬಲಪಡಿಸಿ, ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಬೇಕು.

ಆರೋಗ್ಯದ ಖಾಸಗೀಕರಣದಿಂದಾಗಿ ಬಡ ಮತ್ತು ಕೆಳವರ್ಗದ ಹೆಣ್ಣು ಮಕ್ಕಳು ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು PHC ಗಳೂ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಮೂಲಭೂತ ಸೌಲಭ್ಯಗಳು, ತಜ್ಞ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರು ಎಲ್ಲಾ ಸಮಯದಲ್ಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಮಧ್ಯಾಹ್ನದ ಬಿಸಿ ಊಟವನ್ನು ಪದವಿ ಕಾಲೇಜು ಹಂತದವರೆಗೂ ವಿಸ್ತರಿಸಬೇಕು.

ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಶ್ಲೀಲ ಸಿನಿಮಾ-ಸಾಹಿತ್ಯ, ಮದ್ಯ – ಮಾದಕ ವಸ್ತುಗಳನ್ನು ನಿಷೇಧಿಸಬೇಕು ಮತ್ತು ಅವರ ಆತ್ಮ ರಕ್ಷಣೆಗಾಗಿ ಜೋಡೋ- ಕರಾಟೆಯಂತಹ ಕೌಶಲ್ಯ ತರಬೇತಿಗಳನ್ನು ನೀಡಬೇಕು. ಶುಚಿ ವಿತರಣಾ ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಶಿಶು ಪಾಲನಾ ಕೇಂದ್ರದಂತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಇತ್ಯಾದಿ ಹಕ್ಕೊತ್ತಾಯಗಳನ್ನು ಮಹಿಳಾ ಸಮುದಾಯದ ಧ್ವನಿಯಾಗಿ AIMSS ತಮ್ಮ ಮುಂದಿಡುತ್ತಿದೆ . ಈ ಮೇಲಿನ ಹಕ್ಕೊತ್ತಾಯಗಳನ್ನು ಈಡೇರಿಸಲು 2026ರ ಮಾರ್ಚ್ ನ ರಾಜ್ಯ ಬಜೆಟ್ ನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ AIMSS ನ ಜಿಲ್ಲಾ ಕಾರ್ಯದರ್ಶಿಗಳಾದ ಶಾರದಾ ಗಡ್ಡಿ, ಸದಸ್ಯರಾದ ಪವಿತ್ರಾ, ಹುಲಿಗೆಮ್ಮ ಉಪಸ್ಥಿತರಿದ್ದರು.

ಗಣಿತ ಜ್ಞಾನಕ್ಕೆ ಸರ್ವ ಕ್ಷೇತ್ರದಲ್ಲಿ ಬೇಡಿಕೆ- ಡಾ. ಶಿವರಾಜ ಗುರಿಕಾರ

ಗಣಿತ ಜ್ಞಾನಕ್ಕೆ ಸರ್ವ ಕ್ಷೇತ್ರದಲ್ಲಿ ಬೇಡಿಕೆ- ಡಾ. ಶಿವರಾಜ ಗುರಿಕಾರ

Mathematical knowledge is in demand in all fields - Dr. Shivaraj Gurikar

ಗಂಗಾವತಿ,ಫೆ, 25: ಕೃಷಿ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ರಾಕೆಟ್ ತಂತ್ರಜ಼್ಞಾನ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಗಣಿತ ಜ್ಞಾನಕ್ಕೆ ಬಹಳಷ್ಟು ಬೇಡಿಕೆ ಇದ್ದು, ವಿದ್ಯಾರ್ಥಿಗಳು ಇದರ ಅಧ್ಯಯನ, ಸದ್ಬಳಕೆಯೊಂದಿಗೆ ಕಾಲೇಜಿನ ಘನತೆ ಎತ್ತಿ‌ ಹಿಡಿಯಬೇಕೆಂದು ಎಸ್.ಜೆ.ಎನ್.ಜಿ‌.ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ‌ ಅವರು ಹೇಳಿದರು.

ನಗರದ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಹಾಗೂ ಗಣಿತ ವಿಭಾಗದಿಂದ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಗಣಿತ ಹಾಗೂ ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್.ಕೆ.ಎನ್.ಜಿ‌.ಕಾಲೇಜಿಗೆ ಒಳ್ಳೆಯ ಹೆಸರಿದ್ದು, ಗ್ರಂಥಾಲಯ, ಕಂಪ್ಯೂಟರ್ ಸೇರಿದ ಬಹಳಷ್ಟು ಒಳ್ಳೆಯ ಸೌಲಭ್ಯಗಳು ಕಾಲೇಜಿನಲ್ಲಿವೆ. ಇವುಗಳ ಸದ್ಬಳಕೆ ಮಾಡಿಕೊಂಡು‌ ಕಾಲೇಜಿನ‌ ಘನತೆ ಹೆಚ್ಚಿಸುವಂತಹ ಸಾಧನೆ ಮಾಡಲು‌ ವಿದ್ಯಾರ್ಥಿಗಳಿಗೆ ಇದೇ ವೇಳೆ ಕರೆ ನೀಡಿದರು.
ವಿಶೇಷ ಉಪನ್ಯಾಸರಾಗಿ ಆಗಮಿಸಿದ್ದ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಬಿ.ಪರ್ವತಲು ಮಾತನಾಡಿ ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಗುಂಪು ಚರ್ಚೆಗಳ‌ ಮೂಲಕ ಗಣಿತ ವಿಷಯದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲು ತಿಳಿಸಿ, ಇಂದಿನ ದಿನಗಳಲ್ಲಿ‌ ಗಣಿತಕ್ಕಿರುವ ಮಹತ್ವದ ಬಗ್ಗೆ ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಮುಖ್ಯಸ್ಥರಾದ ಡಾ. ಮಂಜುನಾಥ ಕೆ‌.ಎಸ್. ಭೌತ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಡಾ. ಅಣ್ಣೋಜಿರೆಡ್ಡಿ, ಗಣಿತ ವಿಭಾಗದ ಮುಖ್ಯಸ್ಥರಾದ ಅಶೋಕ ನಾಯಕ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಸಹ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಿರೋಷಾ ಎಂ. ಸ್ವಾಗತಿಸಿದರೆ, ನೇತ್ರಾ ಸಜ್ಜನ‌್ ವಂದಿಸಿದರು‌, ಚಂದನಾ ಹಾಗೂ ಸುನಿತಾ ನಿರೂಪಿಸಿದರು.

ದಯವಿಟ್ಟು ಮೇಲ್ಕಂಡ☝️ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ‌ ಪ್ರಕಟಿಸಲು ವಿನಂತಿ,

ಡಾ‌.ಬಸವರಾಜ್ ಎಸ್ ಗಡಾದ,
ಪತ್ರಿಕೋದ್ಯಮ ವಿಭಾಗ,
ಎಸ್.ಕೆ‌.ಎನ್.ಜಿ‌.ಕಾಲೇಜು,
ಗಂಗಾವತಿ