ABVP vandalism at Azim Premji University: SFI demands arrest
ವಿಜಯನಗರ (ಹೊಸಪೇಟೆ): ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಕ್ಕೆ ಅಕ್ರಮ ಪ್ರವೇಶ ಮಾಡಿ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಎಬಿವಿಪಿ ಗೂಂಡಾಗಳನ್ನು ಬಂಧಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ಎಸ್ ಎಫ್ ಐ ಒತ್ತಾಯ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸರ್ಜಾಪುರ ಬಳಿಯ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ 20 ಜನರ ಎಬಿವಿಪಿ ಗುಂಡಾ ಗುಂಪು ಕ್ಯಾಂಪಸ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ ವಿಶ್ವ ವಿದ್ಯಾಲಯದ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ ಹಾಗೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಎಸ್ ಎಫ್ ಐ ನಿಲ್ಲುತ್ತದೆ.
ಮಂಗಳವಾರ ಸಂಜೆ ಕಾಶ್ಮೀರದ ಬಗ್ಗೆ ಅನೌಪಚಾರಿಕ ಚರ್ಚೆ ಮಾಡಲು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಆದರೆ ಇದರ ಕುರಿತು ವಿಶ್ವ ವಿದ್ಯಾಲಯದಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ 20 ಕ್ಕೂ ಹೆಚ್ಚು ಎಬಿವಿಪಿ ಗೂಂಡಾಗಳು ವಿಶ್ವ ವಿದ್ಯಾಲಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ವಿಶ್ವವಿದ್ಯಾಲಯದ ಆಸ್ತಿಗಳನ್ನು ಧ್ವಂಸ ಮಾಡಿ, ಭದ್ರತಾ ಸಿಬ್ಬಂದಿಗಳ ಮೇಲೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ನಮ್ಮ ಕ್ಯಾಂಪಸ್‌ನಲ್ಲಿ ಹೊರಗಿನ ಜನರ ಗುಂಪೊಂದು ನಡೆಸಿದ ಗದ್ದಲ ಮತ್ತು ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ವಿಶ್ವವಿದ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮವು ನಡೆಯಲೇ ಇಲ್ಲ ಸ್ಪಷ್ಟಪಡಿಸಿದೆ.
ಈಗಾಗಲೇ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸಗೊಳಿಸಿ, ಕ್ಯಾಂಪಸ್‌ಗೆ ನುಗ್ಗಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆ ಸೇರಿದ ವಿದ್ಯಾರ್ಥಿಗಳ ಗುಂಪನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳು, ಪ್ರಸ್ತುತ ಆರ್ಥಿಕ, ಸಾಮಾಜಿಕ, ರಾಜಕೀಯ ಚರ್ಚೆ ನಡೆಸುವುದು ಸಾಮಾನ್ಯ ಇದು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮಟ್ಟ ಹೆಚ್ಚಿಸುವುದಕ್ಕೆ ಸಹಾಯವಾಗುತ್ತದೆ. ಇದು ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವವಾಗಿದೆ. ವಿಶ್ವ ವಿದ್ಯಾಲಯಗಳಲ್ಲಿ ಕ್ಯಾಂಪಸ್ ಡೆಮಾಕ್ರಸಿ ಇರಬೇಕೆಂದು ಎಸ್ ಎಫ್ ಐ ಒತ್ತಾಯಿಸುತ್ತದೆ. ಎಬಿವಿಪಿ ವಿದ್ಯಾರ್ಥಿ ಸಂಘಟನೆ ವಿಶ್ವ ವಿದ್ಯಾಲಯಗಳಲ್ಲಿ ಕೋಮುವಾದವನ್ನು ಉಂಟು ಮಾಡುತ್ತಿದೆ. ಕಾಲೇಜು ಕ್ಯಾಂಪಸ್ ಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ಹಿಂಸೆ, ಪ್ರಚೋದನೆ ಹಾಗೂ ಉದ್ದೇಶ ಪೂರ್ವಕವಾಗಿ ಗಲಭೆಗಳನ್ನು ಸೃಷ್ಟಿಸಿ ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ನಡುವೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದೆ. JNU ಸೇರಿದಂತೆ ದೇಶದ ಹಲವು ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ಗಮನಿಸಬಹುದು. ಅದೇ ರೀತಿಯಲ್ಲಿ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಹಲ್ಲೆ ಹಾಗೂ ಗಲಭೆಗಳನ್ನು ಸೃಷ್ಟಿ ಮಾಡಲು ಮುಂದಾಗಿದೆ. ಆದರಿಂದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಕ್ಕೆ ಅಕ್ರಮ ಪ್ರವೇಶ ಮಾಡಿ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿರುವ ಎಬಿವಿಪಿ ಗೂಂಡಾಗಳ ಮೇಲೆ ಪ್ರಕರಣ ದಾಖಲು ಮಾಡಬೇಕು ಹಾಗೂ ತಕ್ಷಣ ಈ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಎಬಿವಿಪಿ ಗುಂಡಾಗಳನ್ನು ಬಂಧಿಸಬೇಕೆಂದು ಹಾಗೂ ಎಬಿವಿಪಿ ಗೂಂಡಾಗಳನ್ನು ಉದ್ದೇಶ ಪೂರ್ವಕವಾಗಿ ನಡೆಸಿರುವ ಈ ಹಲ್ಲೆಯ ಬಗ್ಗೆ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಪ್ರಜಾಪ್ರಭುತ್ವ ( ಕ್ಯಾಂಪಸ್ ಡೆಮಾಕ್ರಸಿ ) ಉಳಿಸಬೇಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್, ವಿಜಯನಗರ ಜಿಲ್ಲೆ ಸಮಿತಿ ಒತ್ತಾಯಿಸುತ್ತದೆ.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಜಯಸೂರ್ಯ,ಕಾರ್ಯದರ್ಶಿ ಶಿವಾರೆಡ್ಡಿ,ಜಿಲ್ಲೆ ಜಂಟಿ ಕಾರ್ಯದರ್ಶಿ ಕೆ.ಎ.ಪವನ ಕುಮಾರ್ ಉಪಸ್ಥಿತರಿದ್ದರು.
ಗಂಗಾವತಿ.:ನಗರ ಶಂಕರ ಮಠದಲ್ಲಿ ಶುಕ್ರವಾರದಂದು ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀಥ೯ ಮಹಾಸ್ವಾಮಿಗಳ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳ ಇವರ ಅಮೃತ ಹಸ್ತದಿಂದ ಗಂಗಾವತಿಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜರುಗಿದ ಶ್ರೀ ಶಾರದಾಂಬಾ ,ಶ್ರೀ ಶಕ್ತಿ ಗಣಪತಿ ಹಾಗೂ ಶ್ರೀ ಚಂದ್ರ ಮೌಳೀಶ್ವರ ಸಹೀತ ಶ್ರೀ ಶಂಕರಾಚಾಯ೯ ಮೂತಿ೯ಗಳ ಪ್ರತಿಷ್ಠಾಪನಾ ಎಂಟನೇಯ ವಾಷಿ೯ಕೋತ್ಸವವನ್ನು ಇದೇ ಶ್ರೀ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರ ಫಾಲ್ಗುಣ ಶುಧ್ಧ ಎಕಾದಶೀ ಶುಕ್ರವಾರ ದಿನಾಂಕ 27/02/2026 ರಂದು ಆಚರಿಸಲಾಗುತ್ತಿದ್ದು ತಾವು ಸಪರಿವಾರದೊಂದಿಗೆ ಆಗಮಿಸಿ ಜಗನ್ಮಾತೆ ಶ್ರೀ ಶಾರದಾಂಬಾ ದೇವಿಯ ಕೃಪೆಗೆ,ಹಾಗೂ ಶಂಕರ ಭಗತ್ಪಾದರ ಮತ್ತು ಉಭಯ ಪರಮಪೂಜ್ಯ ಶ್ರೀಗಳ ಪರಮಾನುಗ್ರಹಕ್ಕೆ ಪಾತ್ರರಾಗಬೆಕೆಂದು ಧರ್ಮದರ್ಶಿ ನಾರಾಯಣರಾವ್ ತಿಳಿಸಿದ್ದಾನೆ
೧೧೯ ನೇ ದಿನದ ಬಲ್ಡೋಟ ಹಟಾವೋ ಧರಣಿಗೆ ಸಾಹಿತಿ ಹಿರೇಮಠ ಬೆಂಬಲ
Sahitya Hiremath supports the 119th day of Baldota Hatao Dharani
ಕೊಪ್ಪಳ: ಭಾಗ್ಯನಗರ ಬಂದ್ ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತಾ ಪತ್ರ ಬರೆದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಅಭಿನಂದಿಸಿದೆ. ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ೧೧೯ನೇ ದಿನದಂದು ಮುಂಡರಗಿ ನಿವಾಸಿ, ಹಿರಿಯ ಸಾಹಿತಿ ಎ.ಬಿ. ಹಿರೇಮಠ ಅವರು ಧರಣಿಗೆ ಬೆಂಬಲಿಸಿ, ಕಾರ್ಖಾನೆ ಕಟ್ಟಲು ಅಭಿವೃದ್ಧಿ ಹೆಸರೇಳುವುದು ನಾಚಿಕೆಗೇಡಿನ ಸಂಗತಿ. ಜೀವ ಹಾರಿ ಹೋಗುವಾಗ ಆರ್ಥಿಕ ಅಭಿವೃದ್ಧಿ ಎಂದರೆ ಏನರ್ಥ. ಜನರು ಇಷ್ಟೊಂದು ಕೆಟ್ಟ ಪರಸ್ಥಿತಿ ಎದುರಿಸಲಾಗದೆ ಪರಿತಪಿಸುವ ಚಿತ್ರಣ ರಾಜ್ಯದ ಜನ ನೋಡುತ್ತಿದ್ದಾರೆ, ಈಗಲಾದರೂ ಸರ್ಕಾರ ಕರುಣೆ ತೋರದೆ ಹೋದರೆ ಬಾಧಿತರು ಏನು ಮಾಡಬೇಕು ಎಂದರು. ಇನ್ನಷ್ಟು ಜನರ ಪರೀಕ್ಷೆ ಸರ್ಕಾರ ಮಾಡಬಾರದು. ನಿಮ್ಮ ರಾಜಕೀಯ ಏನೇ ಇರಲಿ. ಜನರ ಜೀವ, ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯತೆಯಾಗಲಿ ಎಂದರು. ಬAದ್ ಗೆ ಸಹಕರಿಸಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ ಎಲ್ಲ ವರ್ತಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಎ.ಪಿ.ಎಂ.ಸಿ ಗಂಜ್ ವರ್ತಕರ ಸಂಘಕ್ಕೆ, ಗಂಜ್ ಖರೀದಿದಾರರ ಸಂಘಕ್ಕೆ, ಜಿಲ್ಲಾ ವಕೀಲರ ಸಂಘಕ್ಕೆ, ಕಿರಾಣಿ ವರ್ತಕರ ಸಂಘಕ್ಕೆ, ಮಾಲ್ ಮಾಲೀಕರಿಗೆ, ಹೋಟೆಲ್ ಮತ್ತು ಖಾನಾವಳಿಗಳ ಮಾಲೀಕರಿಗೆ, ೧೧೭ ದಿನ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸಂಘ ಸಂಸ್ಥೆಗಳಿಗೆ, ಅನ್ನದಾಸೋಹ ಮಾಡಿದ ಖಾನಾವಳಿ, ಹೋಟೆಲ್ ಮಾಲೀಕರಿಗೆ, ೬೦ ದಿನ ದಾಸೋಹ ಮಾಡಿದ ಸುಪ್ತ ದಾನಿಗಳಿಗೆ, ಮೆರವಣಿಗೆಯಲ್ಲಿ ಪಾಲ್ಗೊಂಡ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಎಲ್ಲರಿಗೂ, ಶಾಲಾ, ಕಾಲೇಜು ಮುಚ್ಚಿ ಸಹಕರಿಸಿದ ಕೊಪ್ಪಳ ಭಾಗ್ಯನಗರದ ಶಿಕ್ಷಣ ಸಂಸ್ಥೆಗಳ (ಎರಡು ಒಕ್ಕೂಟಗಳಿಗೆ) ಮುಖ್ಯಸ್ಥರಿಗೆ, ಪರೀಕ್ಷೆ ಮುಂದೂಡಿ ಸಹಕರಿಸಿದ ಕೊಪ್ಪಳ ವಿಶ್ವ ವಿದ್ಯಾಲಯಕ್ಕೆ, ಸಾರಿಗೆ ಬಂದ್ ಮಾಡಿ ಸಹಕಾರ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಚಾಲಕ, ನಿರ್ವಾಹಕರುಗಳಿಗೆ, ೧೦ ಸಾವಿರ ಬಣ್ಣದ ಕರಪತ್ರ ಉಚಿತವಾಗಿ ಮುದ್ರಿಸಿಕೊಟ್ಟ ಕೊಪ್ಪಳ ಆಫ್ ಸೆಟ್ ಪ್ರಿಂಟರ್ಸ್ ಅಸೋಸಿಯೇಶನ್ ಮತ್ತು ಆರಂಭದಿAದ ಅನೇಕ ಸಲ ಉಚಿತವಾಗಿ ಕರಪತ್ರ ಮುದ್ರಿಸಿ ಸೇವೆ ಮಾಡಿದ ಐಶ್ವರ್ಯ ಪ್ರಿಂಟರ್ಸ್ ಗೊಂಡಬಾಳ ಸಹೋದರರಿಗೆ, ಟೀ ಶರ್ಟ್ ಸೇವೆ, ಘೋಷಣಾ ಫಲಕ ಸೇವೆ, ಅಂಚೆ ಪತ್ರ ಸೇವೆ ಮಾಡಿದ ಮಹನೀಯರಿಗೆ ವೇದಿಕೆಯಿಂದ ಕೃತಜ್ಞತೆಗಳು ಸಲ್ಲುತ್ತವೆ. ಕೊಪ್ಪಳ ಭಾಗ್ಯನಗರದ ಪ್ರಮುಖರು, ಮಾಲಿನ್ಯಕಾರಕ ಕಾರ್ಖಾನೆಗಳಿಂದ ಬಾಧಿತರಾದ ೨೦ ಗ್ರಾಮಗಳ ರೈತರು ಹತ್ತಾರು ಟ್ರಾ÷್ಯಕ್ಟರ್ ಸಮೇತ ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ದೊಡ್ಡ ಬೆಂಬಲ ನೀಡಿದ, ಎಲೆಮರೆ ಕಾಯಿಯಂತೆ ಹೋರಾಟ ವೇದಿಕೆಗೆ ಗೊತ್ತಿಲ್ಲದಂತೆ ಕೆಲಸ ಮಾಡಿದ, ಬಾಧಿತ ಸುತ್ತಲ ಗ್ರಾಮಗಳ ಜನರಿಗೆ, ಕೊಪ್ಪಳ ಭಾಗ್ಯನಗರದ ಜಾಗೃತ ಮಹಿಳೆಯರು, ಸರ್ವ ಧರ್ಮದವರು, ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಜನಪ್ರತಿನಿಧಿಗಳು ಪರಿಸರ ಧರ್ಮ ಪರಿಪಾಲಿಸಿದ್ದಾರೆ. ಎಲ್ಲ ದಾನಿಗಳಿಗೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ದಾನಿಗಳಿಗೆ, ಇಡೀ ಹೋರಾಟಕ್ಕೆ ದೊಡ್ಡ ಆರ್ಥಿಕ ಶಕ್ತಿಯಾಗಿ ೨ ಲಕ್ಷ ರೂಪಾಯಿ ನೀಡಿದ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ, ೧೦೦ನೇ ದಿನದ ಸಮಾವೇಶ ಮತ್ತು ಬಂದ್ ದಿನದ ಮುಂಜಾನೆ ಮತ್ತು ಮಧ್ಯಾಹ್ನ ದಾಸೋಹ ನಡೆಸಿದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಗೆ, ಅಲ್ಲಿಯ ಪದಾಧಿಕಾರಿಗಳಿಗೆ, ಶ್ರೀಮಠದ ಸೇವಕರಿಗೆ ವಂದಿಸುತ್ತೇವೆ. ನಮ್ಮ ಹೋರಾಟಕ್ಕೆ ಶಕ್ತಿ ಕುಂದದAತೆ ನೋಡಿಕೊಳ್ಳುತ್ತಾ ಬಂದಿರುವ ಎಲ್ಲಾ ಪತ್ರಿಕಾ, ಟಿವಿ ಮಾಧ್ಯಮದವರಿಗೆ, ಸೋಸಿಯಲ್ ಮೀಡಿಯಾ ಬಳಸಿ ಪ್ರಚಾರ ಕೈಗೊಂಡ ಎಲ್ಲರಿಗೂ, ಪೊಲೀಸ್ ಮುಖ್ಯಾಧಿಕಾರಿಗಳು, ನಿರಂತರ ಹೋರಾಟ ಸಮಿತಿಯೊಂದಿಗೆ ಸಂಪರ್ಕ ಇಟ್ಟುಕೊಂಡು ನಿಭಾಯಿಸಿದ ರೀತಿ ಗಮನಾರ್ಹ. ಸಭೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಪೊಲೀಸರಿಗೆ ಹೋರಾಟ ಸಮಿತಿ ಕೃತಜ್ಞವಾಗಿದೆ. ಹೋರಾಟಕ್ಕೆ ಅಡೆತಡೆಗಳು ಎದುರಾದಾಗ ಸಹಾಯಕ್ಕೆ ಬಂದ ಜನಪ್ರತಿನಿಧಿಗಳಿಗೆ, ಹೋರಾಟ ಸಮಿತಿಯ ಬೆನ್ನೆಲುಬಾದ ನಿವೃತ್ತ ನೌಕರರು, ಹಿರಿಯ ಜೀವಗಳು, ಉತ್ಸಾಹದ ಚಿಲುಮೆಯಾದ ಮಹಿಳಾ ನಾಯಕಿಯರಿಗೆ ಮತ್ತು ಹಿರಿಯ ನಾಗರಿಕರಿಗೆ, ಗಾಂಧಿನಗರದ ಬಂಧುಗಳಿಗೆ, ಸ್ವಚ್ಚತೆ ಸೇವೆ ಮಾಡಿದ ಪುರಸಭೆಯ ಪೌರಾಯುಕ್ತರು ಮತ್ತು ಪೌರ ಸೇವಕರಿಗೆ, ಪ್ರತಿದಿನ ಧರಣಿ ಸತ್ಯಾಗ್ರಹದ ಶಿಬಿರ ಸ್ವಚ್ಛಗೊಳಿಸಿ, ಕುರ್ಚಿ ಹಾಕಿ ದಣಿವರಿಯದ ಸೇವೆ ಸಲ್ಲಿಸುತ್ತಿರುವ ಮಕ್ಬೂಲ್ ಸಾಬ್ ರಾಯಚೂರು ಅವರಿಗೆ, ಆಟೋ ಸಂಚಾರ ನಿಲ್ಲಿಸಿ ಸಹಕಾರ ನೀಡಿದ ಆಟೋ ಚಾಲಕರು, ಮಾಲಿಕರಿಗೆ, ಹಮಾಲಿ ಕೆಲಸ ಸ್ಥಗಿತ ಮಾಡಿದ, ಎಲ್ಲಾ ದುಡಿಯುವ ಹಮಾಲರುಗಳಿಗೆ, ಶ್ರಮಿಕರಾದ ಕಾರ್ಮಿಕರಿಗೆ, ರೈತರಿಗೆ ಹೋರಾಟ ಸಮಿತಿ ಋಣಿಯಾಗಿದೆ. ಕುಡಿಯುವ ನೀರಿನ ಸೇವೆ ಒದಗಿಸಿದ ಮಾನವ ಬಂಧುತ್ವ ವೇದಿಕೆಗೆ, ಆರಂಭದ ದಿನದಿಂದ ಧರಣಿಗೆ ನೀರಿನ ಸೇವೆ ಮಾಡುತ್ತಿರುವ ಮಹಾಂತೇಶ ಕೊತಬಾಳ ಅವರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಎಲ್ಲ ಅತಿಥಿಗಳಿಗೆ, ಸ್ವಾಮಿಗಳಿಗೆ, ಹೋರಾಟದ ಐಕ್ಯ ಶಕ್ತಿಯಾದ ಭಾಗ್ಯನಗರ ಬಂಧುಗಳಿಗೆ, ಸರ್ವ ಧರ್ಮಗಳ, ಸರ್ವ ಸಮಾಜದ, ಸರ್ವ ಸಮುದಾಯದ ಜನಗಳಿಗೆ ಹೋರಾಟ ಬೆಂಬಲಿಸಿದ್ದಕ್ಕಾಗಿ ವಂದಿಸಿದರು. ೧೧೯ನೇ ದಿನದ ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಮುಂಡರಗಿಯ ಎ.ಕೆ. ಮುಲ್ಲಾನವರ, ವೀರೇಶ ಬ. ಕಟಗಾಲಿ, ನಿವೃತ್ತ ಇಂಜಿನೀಯರ್ ಡಿ.ವಿ. ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎನ್.ಕೆ.ಪಿ.ಎಂ. ಶಾಲೆಯ ಸಂಸ್ಥಾಪಕ ಬಿ.ಕೆ. ಪಟ್ಟಣಶೆಟ್ಟಿ, ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ ಕೊತಬಾಳ, ಯಮನೂರಪ್ಪ ಹಳ್ಳಿಕೇರಿ, ರವಿ ಕಾಂತನವರ, ಬಿ. ಜಿ ಕರಿಗಾರ, ಜಿಬಿ. ಪಾಟೀಲ್, ಬೆಟ್ಟಪ್ಪ ಯತ್ನಟ್ಟಿ ಮೂಕಪ್ಪ ಮೇಸ್ತಿç ಬಸಾಪುರ ಇದ್ದರು.
Veerakumar Gadada, the state working president of the Rashtriya Sangharsh Samiti, organized a struggle to increase pensions.
ಗಂಗಾವತಿ:ಸಮೀಪದ ಮರಳಿಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಕೊಪ್ಪಳ ಜಿಲ್ಲೆಯ ಸಭೆ ಜರುಗಿತು. ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟದ ಮುಖಾಂತರ ಸಾಧ್ಯ ಎಂದು ತಿಳಿಸಿದರು, ಉಪಾಧ್ಯಕ್ಷರಾದ ಚನ್ನಬಸಯ್ಯ ಅವರು ದಿನಾಂಕ 9, 10 ಹಾಗೂ 11 ಮಾರ್ಚನಲ್ಲಿ ದೆಹಲಿಯ ಜಂತರ ಮಂತರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಕರೆ ನೀಡಿದರು. ಮಾಹಿತಿ ಸಂಚಾಲಕರಾದ ಅನೀಲ ಇನಾಮದಾರ ಅವರು ವಾರ್ಷಿಕ ಚಂದಾ, ಅಜೀವ ಚಂದಾದಾರರಾಗಬೇಕೆಂದು ವಿನಂತಿಸಿದರು. ಇನ್ನುಳಿದ ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ, ಎಸ್. ಎಸ್. ಅಲಸುಂಡಿ, ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಶ್ಯಾಮೀದ, ಮೌನೇಶ್ ಪತ್ತಾರ ಆಗಮಿಸಿದ್ದರು. ಸಕ್ಕರೆ ಕಾರ್ಖಾನೆಯ ನಿವೃತ್ತ ಕಾರ್ಮಿಕರು, ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು, ಸಹಕಾರಿ ಇಲಾಖೆ ಮತ್ತು ಸಾರಿಗೆ ಇಲಾಖೆಯ ನಿವೃತ್ತ ನೌಕರದಾರರು ಭಾಗವಹಿಸಿದ್ದರು.
ಕಾರ್ಯಕ್ರಮ ರಮೇಶ್ ಕುಲಕರ್ಣಿ, ಮೌನಪ್ಪ ನಾಯಕ, ವೀರಯ್ಯಸ್ವಾಮಿ, ಮುದಗಲ್ ಬಸಪ್ಪ, ಎಂ. ಹೊನ್ನಪ್ಪ, ಬಸಪ್ಪ ಉಮಲೂಟಿ, ಆಲಮಯ್ಯ, ಶಿವರಾಜ್ ಹಾಗೂ ಸುಭಾನಿ ಇವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಿತು ಎಂದು ಸಂಘಟಕರಾದ ಶಾಂತಿನಾಥ ಪಾಟೀಲ್ ತಿಳಿಸಿದರು.
ಕೊಪ್ಪಳ: ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ಅಗ್ರಹಿಸಿ ಪ್ರತಿಭಟನೆ
Protest demanding immediate halt to the process of laying off around 7,000 ASHA workers in the name of rationalization.
.
ಕೊಪ್ಪಳ:ಈ ಬರುವ ಮಾರ್ಚ್ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಬೇಕು, ಹಾಗೂ ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು
ಎಂದು ಆಗ್ರಹಿಸಿ ನಾಳೆ (ಫೆಬ್ರವರಿ 28) ಕೊಪ್ಪಳ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶರಣು ಗಡ್ಡಿ ತಿಳಿಸಿದ್ದಾರೆ.
ಈ ಮೆರವಣಿಗೆ ಕೊಪ್ಪಳ ನಗರದ ಈಶ್ವರ್ ಪಾರ್ಕ್‌ನಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದ್ದು, ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಶಕ್ತಿಯಾಗಿದ್ದು, ಗರ್ಭಿಣಿ ಮಹಿಳೆಯರು, ನವಜಾತ ಶಿಶುಗಳು, ಲಸಿಕೆ ಅಭಿಯಾನ, ಸಾಂಕ್ರಾಮಿಕ ರೋಗ ನಿಯಂತ್ರಣ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅತ್ಯಲ್ಪ ಗೌರವಧನ, ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಉದ್ಯೋಗ ಭದ್ರತೆ ಇಲ್ಲದ ಪರಿಸ್ಥಿತಿ ಅವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಹಿಂದೆ ನೀಡಿದ ಭರವಸೆಗಳನ್ನು ಇಂದಿಗೂ ಈಡೇರಿಸದಿರುವುದು ವಿಷಾದಕರ ಸಂಗತಿಯಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಆಗ್ರಹದೊಂದಿಗೆ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಅದರ ಭಾಗವಾಗಿ ಕೊಪ್ಪಳದಲ್ಲಿ ಈ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ನಾಳೆಯ ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ
Application invited for implementation of Sheep-Goat Unit Project
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2025-26 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ (10+1) ಕುರಿ-ಮೇಕೆ ಘಟಕ ಯೋಜನೆಯ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಕ್ಕೆ 1 ಲಕ್ಷ ಘಟಕದ ವೆಚ್ಚವನ್ನು ನಿಗದಿಪಡಿಸಿ ಶೇ.90 ರಷ್ಟು ಸಹಾಯಧನ ಮತ್ತು ಶೇ.10 ರಷ್ಟು ಫಲಾನುಭವಿ ವಂತಿಕೆ ಅಥವಾ ಬ್ಯಾಂಕ್ ಸಾಲದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 17, ಪರಿಶಿಷ್ಠ ಪಂಗಡಕ್ಕೆ 10 ಗುರಿಗಳನ್ನು ನಿಗದಿ ಪಡಿಸಿದೆ. ಅರ್ಜಿ ಸಲ್ಲಿಸಲು ಅರ್ಜಿದಾರರು ಫ್ರೂಟ್ಸ್ ಐಡಿ (ಗುರುತಿನ ಸಂಖ್ಯೆ) ಹೊಂದಿರಬೇಕು. ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಕುರಿ-ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಆರ್.ಡಿ ನಂಬರ್ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸರ್ಕಾರದ ನಿಯಮಗಳಂತೆ ವಿಧಾನ ಸಭಾ ಮತಕ್ಷೇತ್ರವಾರು ಹಾಗೂ ಮಹಿಳೆಯರಿಗೆ ಶೇ.33 ರಷ್ಟು, ವಿಶೇಷ ಚೇತನರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು. ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆ ಅಥವಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ವಿವಿಧ ಯೋಜನೆಗಳಲ್ಲಿ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಮತ್ತೆ ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದ್ದು, ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿ ಮತ್ತು ಫಲಾನುಭವಿ ಭಾವಚಿತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ಇಲ್ಲಿ ಸಂಪರ್ಕಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಜಿಲ್ಲೆಯ ಅರ್ಹ ಕುರಿ-ಮೇಕೆ ಸಾಕಾಣಿಕೆದಾರರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಪ್ಲಸ್ ಅಡಿ ಅರಿವು ಕಾರ್ಯಾಗಾರ
Awareness workshop under Yuvanidhi Plus at Government First Grade College
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಯುವನಿಧಿ ಪ್ಲಸ್ ಅಡಿಯಲ್ಲಿ ಉಚಿತವಾಗಿ ಕೌಶಲ್ಯ ತರಬೇತಿ ನೀಡಲು ಗುರುವಾರದಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗವಿಶಂಕರ್ ಕೆ., ಜಿಲ್ಲಾ ಉದ್ಯೋಗಾಧಿಕಾರಿ ಮಂಜುಳಾ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ವೈ.ಬಿ ಅಂಗಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಪ್ರಾಂಶುಪಾಲರಾದ ಮೌನೇಶ ರಾಠೋಡ್, ಸಹಾಯಕ ನಿರ್ದೇಶಕ ಮಂಜುನಾಥ ಬೆಲ್ಲದ್, ಸಿಡಾಕ್ ತರಬೇತಿ ಅಧಿಕಾರಿ ಶೋಭಾ, ಕುಕನೂರಿನ ಸರ್ಕಾರಿ ಕೈಗಾರಿಕಾ ಕೇಂದ್ರದ ಪ್ರಭಾರಿ ಪ್ರಾಂಶುಪಾಲರಾದ ಮಂಜಪ್ಪ, ಸರ್ಕಾರಿ ಕೈಗಾರಿಕಾ ಕೇಂದ್ರ ತಳಕಲ್‌ನ ಪ್ರಭಾರಿ ಪ್ರಾಂಶುಪಾಲರಾದ ಮಹ್ಮದ ರಫಿ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು ಮತ್ತು 250ಕ್ಕೂ ಹೆಚ್ಚು ಅಭ್ಯರ್ಥಿಗಳು, ಯುವನಿಧಿ ಫಲಾನುಭವಿಗಳು ತರಬೇತಿ ಕಾರ್ಯಾಗಾರದಲ್ಲಿ ಹಾಜರಿದ್ದು ಮಾಹಿತಿ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು ಜಿಲ್ಲೆಯಾದ್ಯಂತ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ ಕೊಪ್ಪಳದ 6 ಪರೀಕ್ಷಾ ಕೇಂದ್ರಗಳಲ್ಲಿ 4943 ವಿದ್ಯಾರ್ಥಿಗಳು, ಗಂಗಾವತಿಯ 9 ಪರೀಕ್ಷಾ ಕೇಂದ್ರಗಳಲ್ಲಿ 5489 ವಿದ್ಯಾರ್ಥಿಗಳು, ಕುಷ್ಟಗಿಯ 4 ಪರೀಕ್ಷಾ ಕೇಂದ್ರಗಳಲ್ಲಿ 2209 ವಿದ್ಯಾರ್ಥಿಗಳು, ಯಲಬುರ್ಗಾದ 2 ಪರೀಕ್ಷಾ ಕೇಂದ್ರಗಳಲ್ಲಿ 932 ವಿದ್ಯಾರ್ಥಿಗಳು, ಕುಕನೂರಿನ 2 ಪರೀಕ್ಷಾ ಕೇಂದ್ರಗಳಲ್ಲಿ 1078 ವಿದ್ಯಾರ್ಥಿಗಳು, ಕಾರಟಗಿಯ 1 ಪರೀಕ್ಷಾ ಕೇಂದ್ರದಲ್ಲಿ 646 ವಿದ್ಯಾರ್ಥಿಗಳು ಹಾಗೂ ಕನಕಗಿರಿಯ 1 ಪರೀಕ್ಷಾ ಕೇಂದ್ರದಲ್ಲಿ 547 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 15,844 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋAದಣಿ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ರೆಗ್ಯುಲರ್ 13580, ಖಾಸಗಿ 463, ಪುನರಾವರ್ತಿತ 1794, ಫಲಿತಾಂಶ ಸುಧಾರಣೆಗೆ 7 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.