ಕಬ್ಬಿನ ಹಾಲು ಏಕೆ ಕುಡಿಯಬೇಕು?

ಕಬ್ಬಿನ ಹಾಲು ಏಕೆ ಕುಡಿಯಬೇಕು?

Why drink sugarcane milk?

ಪೌಷ್ಟಿಕಾಂಶಗಳ ಆಗರ,ಬಡವರ ಅಮೃತ ಎಂದು ಹೆಸರಾಗಿರುವ ಕಬ್ಬಿನಹಾಲು ನಮ್ಮ ನಿಮ್ಮೆಲ್ಲರ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು,ಆರೋಗ್ಯ ಹಾಗು ಸ್ಪೂರ್ತಿದಾಯಕವಾದ ನೈಸರ್ಗಿಕ ಪಾನೀಯ ವಾಗಿದೆ.ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆ ಯುವ ಹಾಗು ಸಕ್ಕರೆಯನ್ನು ಉತ್ಪಾದಿಸುವ ದೇಶ ವೆಂದರೆ ಅದು ನಮ್ಮ ಭಾರತ.

ಕಬ್ಬಿನಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು.

1. ಸ್ಪೂರ್ತಿ, ಚೈತನ್ಯ ಉಂಟು ಮಾಡು ತ್ತದೆ.

ಇದರಲ್ಲಿರುವ ನೈಸರ್ಗಿಕ ಗ್ಲುಕೋಸ್ , ಎಲೆಕ್ಟ್ರೋ ಲೈಟ್ಗಳು ,ಉತ್ತಮ ರೀತಿಯ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳು ದೇಹದಲ್ಲಿ ಸುಲಭವಾಗಿ ಬೆರೆತು ತಕ್ಷಣಕ್ಕೆ ಸ್ಪೂರ್ತಿ, ಚೈತನ್ಯ ಉಂಟು ಮಾಡು ತ್ತವೆ. ದೇಹವನ್ನು ಪುನರ್ಜಲೀಕರಣಗೊಳಿಸಿ ಆಯಾಸವನ್ನು ಹೋಗಲಾಡಿಸುತ್ತದೆ.

2. ಮೂತ್ರವಿಸರ್ಜನೆಗೆ ಪರಿಣಾಮಕಾರಿ.

ಕಬ್ಬಿನಹಾಲಿಗೆ ಒಂದು ಚಮಚ ಲಿಂಬೆರಸ ಹಾಗು ಶುಂಠಿ ರಸವನ್ನು ಬೆರೆಸಿ ಕುಡಿಯು ವುದರಿಂದ ಉರಿಮೂತ್ರ ಶಮನ ಮಾಡಿ ಸರಳ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ. ಮೂತ್ರಪಿಂಡ ಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸು ವಂತೆ ಮಾಡುತ್ತದೆ, ಹೀಗಾಗಿ ಮೂತ್ರ ಪಿಂಡದ ಕಲ್ಲುಗಳು ಮತ್ತು ಮೂತ್ರದ ಸೋಂಕಿನಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುತ್ತದೆ.

3.ದಂತಕುಳಿ ಮತ್ತು ಕೆಟ್ಟ ಉಸಿರಾಟವ ನ್ನು ಹೋಗಲಾಡಿಸುತ್ತದೆ.

ಇದರಲ್ಲಿರುವ ಕ್ಯಾಲ್ಸಿಯಂ, ರಂಜಕ ಹಾಗು ಇತರ ಪೋಷಕಾಂಶಗಳು ಹಲ್ಲುಗಳ ದಂತ ಕವಚವನ್ನು ಬಲಪಡಿಸಿ ಕೊಳೆಯದಂತೆ ರಕ್ಷಿಸುವುದಲ್ಲದೆ ದುರ್ವಾಸನೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

4.ಅರಿಶಿನಕಾಯಿಲೆಗೆ ಪರಿಹಾರ.

ಆಯುರ್ವೇದ ಆರೋಗ್ಯ ಶಾಸ್ತ್ರದ ಪ್ರಕಾರ, ಕಬ್ಬಿನ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತ ನ್ನು ಸೋಂಕಿನಿಂದ ರಕ್ಷಿಸುತ್ತವೆ.ಕಬ್ಬಿನ ರಸವು ಕ್ಷಾರೀಯವಾಗಿ ದ್ದು, ನಿಮ್ಮ ದೇಹದಲ್ಲಿನ ಎಲೆಕ್ಟ್ರೋ ಲೈಟ್ ಸಮತೋಲನ ಮತ್ತು ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಕಾಮಾಲೆಯಂತಹ ಅನೇಕ ಯಕೃತ್ತಿನ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ

5.ಜೀರ್ಣಕ್ರಿಯೆಯನ್ನು ಸುಲಭ ಗೊಳಿಸುತ್ತದೆ.

ಇದರಲ್ಲಿರುವ ಅಧಿಕ ಪೊಟ್ಯಾಸಿಯಮ್ ಕರುಳಿ ನಲ್ಲಿರುವ ಆಮ್ಲದ ph ಮಟ್ಟವನ್ನು ಸಮತೋಲ ನದಲ್ಲಿರಿಸಿ ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ.

6. ಚರ್ಮದ ಆರೋಗ್ಯಕ್ಕೆ ಸಹಾಯ ಕಾರಿ.

ಇದರಲ್ಲಿರುವ ಉತ್ಕರ್ಷಣ ನಿರೋಧಕ ಗಳು, ಫೀನಾ ಲಿಕ್ ಆಮ್ಲ ಮತ್ತು ಫ್ಲೇವನಾಯ್ಡ್ ಗಳು ಚರ್ಮವನ್ನು ಒಳಗಿನಿಂದ ಆರ್ದ್ರಗೊಳಿಸಿ ಮೃದುವಾಗಿ ಹೊಳೆಯು ವಂತೆ ಮಾಡಲು ಸಹಾಯ ಮಾಡುತ್ತದೆ.

7. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಬ್ಬಿನಹಾಲು ವಿಟಮಿನ್ ಸಿ, ಉತ್ಕರ್ಷಣ ನಿರೋ ಧಕಗಳು ಹಾಗು ಫ್ಲೇವನಾಯ್ಡುಗಳ ಉತ್ತಮ ಮೂಲ ವಾಗಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

8. ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ .

ಇದರಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲಗಳು ಹಾಗು ಗ್ಲೈಕೋಲಿಕ್ ಆಸಿಡ್ ಗಳು ಚರ್ಮ ದಲ್ಲಿರುವ ಕೊಬ್ಬಿನಾಂಶಗಳನ್ನು ನಿಯಂತ್ರಿಸಿ ಮೊಡವೆಗಳನ್ನು ಹೋಗಲಾಡಿಸುತ್ತವೆ.

9. ದೇಹದ ತೂಕ ಹಾಗು ಬೊಜ್ಜು ನಿಯಂತ್ರಿಸಲು ಸಹಕಾರಿ.

ಇದರಲ್ಲಿರುವ ಅಧಿಕ ನಾರಿನಂಶಗಳು, ಪ್ರೋಟೀನ್ಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ವಿವಿಧ ಪೋಷಕಾಂಶಗಳು ಅನಗತ್ಯವಾದ ಕೊಲೆ ಸ್ಟ್ರಾಲ್ ಕರಗಿಸುವಲ್ಲಿ ಸಹಕಾರಿಯಾಗಿವೆ.

ಯಾವುದೇ ಅವ್ಯವಸ್ಥೆ ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಮಾಡಿ: ಡಾ.ಸುರೇಶ ಬಿ.ಇಟ್ನಾಳ

2025-26ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ

ಯಾವುದೇ ಅವ್ಯವಸ್ಥೆ ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಮಾಡಿ: ಡಾ.ಸುರೇಶ ಬಿ.ಇಟ್ನಾಳ

Make arrangements to avoid any chaos: Dr. Suresh B. Itnal

ಕೊಪ್ಪಳ ಫೆಬ್ರವರಿ 04, (ಕರ್ನಾಟಕ ವಾರ್ತೆ): ಇದೇ ಫೆಬ್ರವರಿ 7 ಮತ್ತು 8 ರಂದು ಕಾರಟಗಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ನೂರಾರು ಮಕ್ಕಳು ಭಾಗವಹಿಸಲಿದ್ದು, ಅವರಿಗೆ ಯಾವುದೇ ವಿಷಯಗಳಲ್ಲಿ ಅವ್ಯವಸ್ಥೆ ಉಂಟಾಗದAತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಅನುಕೂಲ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಬುಧವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿರುವ 2025-26ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರಟಗಿಯ ಕೆ.ಪಿ.ಎಸ್ ಪ್ರೌಢಶಾಲೆ ವಿಭಾಗದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ 1295 ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ರೈಲು ಹಾಗೂ ಬಸ್‌ಗಳ ಮೂಲಕ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕಾರಟಗಿ ಹಾಗೂ ಕಾರ್ಯಕ್ರಮದ ವೇದಿಕೆ, ವಸತಿ ನಿಲಯಗಳನ್ನು ತಲುಪಲು ಅನುಕೂಲವಾಗುಂತೆ ಹೆಲ್ಪ್ಡೆಸ್ಕ್ ಸ್ಥಾಪಿಸಿ, ಮಾರ್ಗಸೂಚಕಗಳನ್ನು ಒದಗಿಸಿ. ವಿದ್ಯಾರ್ಥಿಗಳು ತಂಗುವ ವಸತಿ ನಿಲಯಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬಿಸಿನೀರಿನ ವ್ಯವಸ್ಥೆ ಕಲ್ಪಿಸಿ. ಗುಣಮಟ್ಟದ ಹಾಗೂ ಶುದ್ಧ ಆಹಾರವನ್ನು ಒದಗಿಸಿ. ವಸತಿ ನಿಲಯಗಳಿಂದ ಕಾರ್ಯಕ್ರಮ ಸ್ಥಳ ಹಾಗೂ ಊಟದ ಸ್ಥಳಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿ. ಬಸ್‌ಗಳು ಸುವ್ಯವಸ್ಥೆಯಲ್ಲಿರಬೇಕು. ಸಾರಿಗೆ ಅಧಿಕಾರಿಗಳು ಬಸ್‌ಗಳನ್ನು ಪರಿಶೀಲಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಿದ್ಯಾರ್ಥಿಗಳು ತಂಗುವ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಬಸ್‌ಗಳಲ್ಲಿ, ವಸತಿ ನಿಲಯಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯ ಇರಬೇಕು. ಕಾರ್ಯಕ್ರಮ ಸ್ಥಳಗಳಲ್ಲಿ ವೈದ್ಯರ ತಂಡವನ್ನು ಆರೋಗ್ಯ ಇಲಾಖೆಯಿಂದ ಒದಗಿಸಬೇಕು. ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮ ಸ್ಥಳದ ಸ್ವಚ್ಛತೆ, ಶೌಚಾಲಯಗಳ ಸ್ಥಾಪನೆಗೆ ಕ್ರಮ ವಹಿಸಬೇಕು. ಕಡ್ಡಾಯವಾಗಿ ಶಿಷ್ಠಾಚಾರ ಪಾಲಿಸಬೇಕು. ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಮುತುವರ್ಜಿ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಮಾತನಾಡಿ, ಯಾವ ಶಾಲೆಯಲ್ಲಿ ಯಾವ ಸ್ಪರ್ಧೆ ನಡೆಯಲಿದೆ ಎಂಬ ಮಾಹಿತಿಯನ್ನು ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಒದಗಿಸಬೇಕು. ಇದರಿಂದ ಅನಗತ್ಯ ಗೊಂದಲ ತಪ್ಪುತ್ತದೆ. ವಿದ್ಯಾರ್ಥಿಗಳಿಗೆ ನೀಡುವ ಊಟ, ಉಪಹಾರ ಸುರಕ್ಷಿತ ಹಾಗೂ ಶುದ್ಧವಾಗಿರಬೇಕು. ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಕಾರ್ಯಕ್ರಮದ ಕುರಿತು ವಿವರಗಳನ್ನು ನೀಡಿದರು.
ಸಭೆಯಲ್ಲಿ ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ, ಇಒ ಲಕ್ಷಿö್ಮÃದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಪ್ರಜಾ ಸೇನೆ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಪದಾಧಿಕಾರಿಗಳನ್ನು ಆಯ್ಕೆ

ಭಾರತೀಯ ಪ್ರಜಾ ಸೇನೆ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಪದಾಧಿಕಾರಿಗಳನ್ನು ಆಯ್ಕೆ

Bharatiya Praja Sena Koppal District Committee elects office bearers

ಗಂಗಾವತಿ,04.02.2026 : ಭಾರತೀಯ ಪ್ರಜಾ ಸೇನಾ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಹೊಸದಾಗಿ ಗಂಗಾವತಿ ತಾಲೂಕಿನಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಸಂಸ್ಥಾಪಕರು ಮಂಜುನಾಥ್ ಆರ್ ರಾಜ್ಯ ಅಧ್ಯಕ್ಷರು. ಹಾಗೂ ಟಿ ವೇಣುಗೋಪಾಲ್ ಸರ್ ಅವರ ಆದೇಶದ ಮೇರೆಗೆ ಪಂಪಾಪತಿ ಸಿದ್ದಾಪುರ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿ ಅವರ ನೇತೃತ್ವದಲ್ಲಿ ಗಂಗಾವತಿಯ ಹಳೆ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಆಯ್ಕೆ ಸಂಘಟನೆಯ ಸಕ್ರಿಯವಾಗಿ ಮಾಡಲಾಯಿತು. ಚಟುವಟಿಕೆಗಳ ಪಾಲ್ಗೊಂಡು ಬಡವರ ದೀನ ದಲಿತರ ಅನ್ಯಾಯ ಒಳಗಾದವರೊಂದವರ ಶೋಷಿತರ

ಪರ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ರಾಜ್ಯ ಸಮಿತಿ ಸದಸ್ಯರು ತಿಮ್ಮಣ್ಣ ಹಂಚಿನಾಳ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಮರಿಯಪ್ಪ MD ಹೊಸಳ್ಳಿ ಜಿಲ್ಲಾ ಉಪಾಧ್ಯಕ್ಷರಾಗಿ ನರಸಿಂಹ ಹಿರೇ ಜಂತಕಲ್ ಕನಕಗಿರಿ ತಾಲೂಕು ಅಧ್ಯಕ್ಷರಾಗಿ ನಿಂಗಪ್ಪ ರಾಂಪುರ ಇನ್ನು ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು

ದಲಿತ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಭೆ

ದಲಿತ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಭೆ

Meeting organized by the Samana Manaskar Forum of Dalit Organizations

ತಿಪಟೂರು. ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಮಾನ ಮಸ್ಕರರ ವೇದಿಕೆಯ ಅಧ್ಯಕ್ಷತೆ ವಹಿಸಿ ಬೈರಾಪುರದ ಚನ್ನಕೇಶವ ರವರು ಮಾತನಾಡಿ
ತಾಲೂಕಿನಲ್ಲಿ ಮಾದಿಗ ಸಮುದಾಯದ ತಾಲ್ಲೂಕಿನ ಎಲ್ಲಾ ಸಂಘಟನೆಗಳು ಒಟ್ಟಿಗೆ ಒಗ್ಗೂಡಿ ಮುಂಬರುವ ಜಿಲ್ಲಾ ಪಂಚಾಯತಿ. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಕ್ಷೇತ್ರಗಳಿಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಿರುವ ಕ್ಷೇತ್ರಗಳಿಗೆ ಮಾದಿಗ ಸಮುದಾಯದ ಅಭ್ಯರ್ಥಿಗಳನ್ನು ಯಾವುದೇ ಪಕ್ಷದವರಾಗಲಿ ಆಯ್ಕೆ ಮಾಡಬೇಕೆಂದು ದಲಿತ ಸಮುದಾಯಗಳು ಸಭೆ ಸೇರಿ ತೀರ್ಮಾನ ತ ತೆಗೆದುಕೊಂಡಿದ್ದೇವೆ
ನಾನು ಸಹ ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಸಮುದಾಯದಯ ಎಲ್ಲಾ ಬಾಂಧವರು ನನಗೆ ಸಹ ಮತ ಬೆಂಬಲ ನೀಡಬೇಕಾಗಿ ಎಲ್ಲರಿಗೂ ಮನವಿ ಮಾಡಿಕೊಂಡರು

ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಶಾಂತಪ್ಪ ಕೊಪ್ಪ.ದಲಿತ ಮುಖಂಡ
ಮಾರಶೆಟ್ಟಿಹಳ್ಳಿ ಬಸವರಾಜ್ ನಾಗತಿಹಳ್ಳಿ ಕೃಷ್ಣಮೂರ್ತಿ. ಕೊಪ್ಪದ ಜಗದಾರ್ ಸ್ವಾಮಿ ಗೌಡನಕಟ್ಟೆ ಅಶೋಕ್. ಶೆಟ್ಟಿಹಳ್ಳಿ ಕಲ್ಲೇಶ್. ನೊಣವಿನಕೆರೆ ಪ್ರಸನ್ನ ಕುಮಾರ್.ಈಚನೂರು ಮೂರ್ತಿ ರಾಜು ಲಾಯರ್ ವೆಂಕಟೇಶ್. ಹತ್ಯಾಳ ಮೂರ್ತಿ. ಗಾಂಧಿನಗರದ ಬಸವರಾಜ್. ಮತ್ತಿಹಳ್ಳಿ ಮಂಜುನಾಥ್ ರವಿ.ರಂಗಸ್ವಾಮಿ
.ಶಾಂತಕುಮಾರ್ ಸೇರಿದಂತೆ ಇನ್ನು ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು
ವರದಿ ಮಂಜು ಗುರುಗದಹಳ್ಳಿ

ಮಾದಪ್ಪನ ಸನ್ನಿದಿಯಲ್ಲಿ ವಾಸವಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ

ಮಾದಪ್ಪನ ಸನ್ನಿದಿಯಲ್ಲಿ ವಾಸವಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ

NSS camp at Vasavi First Grade College in the presence of Madappa

ವರದಿ: ಬಂಗಾರಪ್ಪ .ಸಿ.
ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ
ಶ್ರೀ ಮಲೈ ಮಹದೇಶ್ವರನ ಸನ್ನಿಧಿಯಲ್ಲಿ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ NSS (ರಾಷ್ಟ್ರೀಯ ಸೇವಾ ಯೋಜನೆ) ವಾರ್ಷಿಕ ವಿಶೇಷ ಶಿಬಿರ

ಕರ್ನಾಟಕದ ಪ್ರಸಿದ್ಧ ಶೈವ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜನಗರದ ಹೆಮ್ಮೆಯ ಮಲೈ ಮಹದೇಶ್ವರನ ಸನ್ನಿಧಿಯಲ್ಲಿ 2025-26ನೇ ಸಾಲಿನ NSS ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಗೊಂಡಿತು.

ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ॥ ಪಿ.ಜಿ. ಶ್ರೀಧರ್‌ರವರು, ಉಪಕಾರ್ಯದರ್ಶಿಗಳಾದ ನಾಗರಾಜಬಾಬು ಕೆ.ಎಸ್.ರವರು, ಚಾಮರಾಜನಗರ ವಿವಿಯ NSS ಸಂಯೋಜಕರಾದ তেত. ಆರ್.ಮಹೇಶ್ ರವರು, ಮುಖ್ಯ ಅತಿಥಿಗಳಾಗಿ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿಗಳಾದ ಚಂದ್ರಶೇಖರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ|| ಪಿ.ಜಿ. ಶ್ರೀಧರ್‌ರವರು ಮಾತನಾಡಿ ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತವಾಗಿ NSS ಸ್ಥಾಪಿತಗೊಂಡಿತು. ಇದರ ಧೈಯ ವಾಕ್ಯ “ನನಗಲ್ಲ ನಿನಗೆ (Not me. But you)” ಇದು ನಿಸ್ವಾರ್ಥ ಸೇವೆ ಮತ್ತು ಸಮುದಾಯದ ಕಲ್ಯಾಣವನ್ನು ಬೆಳೆಸುವುದು ಎಂದು ತಿಳಿಸಿದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ COO. ಮಹೇಶ್‌.ಆರ್‌ರವರು ವಿದ್ಯಾರ್ಥಿಗಳ ವ್ಯಕ್ತತ್ವವನ್ನು ಸಮುದಾಯ ಸೇವೆ ಮೂಲಕ ಅಭಿವೃದ್ಧಿಪಡಿಸುವುದು ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು ಎಂಬ NSSನ ಧೈಯೋದ್ದೇಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ 77ನೇ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಎಂ.ಪಿ.ತ್ರಿಶಾ ಅವರನ್ನು ಅಭಿನಂದಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿಕುಮಾರ್.ಜೆ, NSSಸಂಯೋಜಕರಾದ ಶ್ರೀ ಆನಂದ್.ಆರ್, ಲತಾಶ್ರೀ.ಎಂ ಹಾಗೂ ಕಾಲೇಜಿನ ಉಪನ್ಯಾಸಕರಾದ ನಿವೇದ್.ಎನ್ ಸೇರಿದಂತೆ ಹಲವಾರು ಹಾಜರಿದ್ದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರ ಪರಿಷ್ಕೃತ ಪ್ರವಾಸ ಕಾರ್ಯಕ್ರಮ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರ ಪರಿಷ್ಕೃತ ಪ್ರವಾಸ ಕಾರ್ಯಕ್ರಮ

Revised tour program of Dr. Nagalakshmi Chaudhary, Chairperson of the State Women's Commission

ಕೊಪ್ಪಳ ಫೆಬ್ರವರಿ 03, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಫೆಬ್ರವರಿ 5 ರಿಂದ 7 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷರು ಫೆ.5 ರಂದು ಬೆಳಿಗ್ಗೆ 6.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸುವರು. ಬೆಳಿಗ್ಗೆ 11 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ ಮಧ್ಯಾಹ್ನ 12.45 ಗಂಟೆಗೆ ಕಾರಟಗಿ ತಾಲ್ಲೂಕಿನ ಈಳಿಗನೂರು ಗ್ರಾಮಕ್ಕೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ಈಳಿಗನೂರಿನಿಂದ ಹೊರಟು ಮಧ್ಯಾಹ್ನ 3.30 ಗಂಟೆಗೆ ಕಾರಟಗಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುವರು. ಸಂಜೆ 4.30 ಗಂಟೆಗೆ ಕಾರಟಗಿ ಪೊಲೀಸ್ ಠಾಣೆಗೆ ಭೇಟಿ ನೀಡುವರು. ಸಂಜೆ 5.30 ಗಂಟೆಗೆ ಕಾರಟಗಿಯಿಂದ ಹೊರಟು ಸಂಜೆ 6 ಗಂಟೆಗೆ ಗಂಗಾವತಿಯ ಹಿಂದುಳಿದ ವರ್ಗಗಳ ಡಿ.ದೇವರಾಜ ಅರಸು ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಸಂಜೆ 7 ಗಂಟೆಗೆ ಗಂಗಾವತಿಯಿAದ ಹೊರಟು 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ಅಂದು ರಾತ್ರಿ ಕೊಪ್ಪಳದಲ್ಲಿಯೇ ವಾಸ್ತವ್ಯ ಮಾಡುವರು.
ಫೆ.6 ರಂದು ಬೆಳಿಗ್ಗೆ 10 ಗಂಟೆಗೆ ಅಧ್ಯಕ್ಷರು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ PಔSಊ ಅಧಿನಿಯಮ 2013ರ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಕೊಪ್ಪಳದ ವಾರ್ಡ್ ನಂ.28, ಸಿದ್ದೇಶ್ವರ ನಗರದ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ, ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸುವರು. ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸ್ನೇಹ ಸಂಸ್ಥೆ ಕೊಪ್ಪಳ ಇವರು ಆಯೋಜಿಸಿರುವ ದೇವದಾಸಿ ಮಹಿಳೆಯರೊಂದಿಗೆ ಸಂವಾದ ನಡೆಸುವರು. ಸಂಜೆ 5 ಗಂಟೆಗೆ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿನಿಲಯಕ್ಕೆ ಭೇಟಿ ನೀಡುವರು. ಅಂದು ರಾತ್ರಿ ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.
ಫೆ.7 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಸ್ಪಂದನಾ ಕಾರ್ಯಕ್ರಮ ಹಾಗೂ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ವಿವಿಧ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸುವರು. ಸಂಜೆ 6.30 ಗಂಟೆಗೆ ಕೊಪ್ಪಳದಿಂದ ರೈಲಿನ ಮೂಲಕ ನಿರ್ಗಮಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.7 ರಂದು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ

————–

ಕೊಪ್ಪಳ ಫೆಬ್ರವರಿ 03, (ಕರ್ನಾಟಕ ವಾರ್ತೆ): ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನಲ್ಲಿ 9ನೇ ಮತ್ತು 11ನೇ ತರಗತಿಯ ಪ್ರವೇಶಕ್ಕಾಗಿ ಫೆಬ್ರವರಿ 7 ರಂದು ಈಗಾಗಲೇ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
9ನೇ ತರಗತಿ ಪ್ರವೇಶಕ್ಕಾಗಿ ರೂಲ್ ನಂಬರ್ 159219 ನಿಂದ 159732 ರವರೆಗೆ ಕುಕನೂರಿನ ಪಿ.ಎಮ್. ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. 11ನೇ ತರಗತಿ ಪ್ರವೇಶಕ್ಕಾಗಿ ರೂಲ್ ನಂಬರ್ 146981 ನಿಂದ 147268 ರವರೆಗೆ ಕುಕನೂರಿನ ಎಸ್.ಎಫ್.ಎಸ್. ಹೈಸ್ಕೂಲಿನಲ್ಲಿ ಹಾಗೂ ರೂಲ್ ನಂಬರ್ 147269 ನಿಂದ 147483 ರವರೆಗೆ ಕುಕನೂರಿನ ವಿದ್ಯಾನಂದ ಗುರುಕುಲ (ಹೈಸ್ಕೂಲು ಸೆಕ್ಷನ್) ದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು ಫೆಬ್ರವರಿ 7 ರಂದು ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕೆಂದು ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಮಗು ಜಂತುನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ- ಸಿಇಒ ವರ್ಣಿತ್ ನೇಗಿ
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಜಿಲ್ಲಾಮಟ್ಟದ ಜಾಗೃತ ಸಮಿತಿ ಸಭೆ
ಯಾವುದೇ ಮಗು ಜಂತುನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ- ಸಿಇಒ ವರ್ಣಿತ್ ನೇಗಿ

No child should be deprived of disinfectant pills - CEO Varnit Negi

ಕೊಪ್ಪಳ ಫೆಬ್ರುವರಿ 03 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಯಾವುದೇ ಮಗು ಜಂತುನಿವಾರಕ ಮಾತ್ರೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.
ಅವರು ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಕೊಠಡಿಯಲ್ಲಿ ರಾಷ್ಟ್ರೀಯಜಂತುಹುಳು ನಿವಾರಣಾ ಕಾರ್ಯಕ್ರಮದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರುವರಿ 10 ರಂದು ನಡೆಯುವ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಜಂತುನಿವಾರಕ ಮಾತ್ರೆಯಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮ ವಹಿಸುವುದರ ಜೊತೆಗೆ ಅರ್ಹರಿರುವ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಈ ಮಾತ್ರೆ ನೀಡುವಂತಾಗಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಂತು ರಹಿತ ಮಗು ದೇಶದ ಸಂಪತ್ತು, ಮಕ್ಕಳ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಈ ಕಾರ್ಯðಕ್ರಮದ ಬಗ್ಗೆ ಹೆಚ್ಚು ಪ್ರಚಾರ ನಡೆಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಅವರು ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಮತ್ತು ಹದಿ-ಹರೆಯದವರಲ್ಲಿ ಕಂಡಬರುವ ಜಂತುಬಾದೆ, ಅಪೌಷ್ಠಿಕತೆ ಮತ್ತು ರಕ್ತಹೀನತೆ ತಡೆಗಟ್ಟುವುದು ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿ ಬೆಳವಣಿಗೆ ಹೊಂದಲು ಪ್ರತಿ 6 ತಿಂಗಳಿಗೊಮ್ಮೆ ಈ ಜಂತುನಿವಾರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಕಾಶ ವಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ಫೆಬ್ರವರಿ 10 ರಂದು “ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ”ವನ್ನು ಆಯೋಜಿಸಲಾಗಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜಂತುನಿವಾರಕ ಅಲ್ಬೆಂಡಾಜೋಲ್ ಮಾತ್ರೆಯನ್ನು ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಶಾಲೆ, ಕಾಲೇಜು (ಸರಕಾರಿ, ಖಾಸಗಿ)ಗಳ ವಿದ್ಯಾರ್ಥಿಗಳಿಗೆ ಮಾತ್ರೆಯನ್ನು ನೀಡಲಾಗುತ್ತಿದೆ. ಈ ದಿನಾಂಕದಂದು ಗೈರು ಹಾಜರಾದ ಮಕ್ಕಳಿಗೆ ಫೆ. 16ರಂದು ಮಾತ್ರೆಗಳನ್ನು ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಸಹ ಈ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧಮಾತ್ರೆ (200ಎಂಜಿ) 2 ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ತಿಮಾತ್ರೆ (400ಎಂಜಿ) ನೀಡಬೇಕಿರುತ್ತದೆ. ಸಣ್ಣ ಮಕ್ಕಳಿಗೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ನಿದಾನವಾಗಿ ಕುಡಿಸಬೇಕು. ಈ ಕಾರ್ಯಕ್ರಮ ಕುರಿತು, ವಿವಿಧ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಆರೋಗ್ಯ ಕೇಂದ್ರದ ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ಆರೋಗ್ಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಕ್ಷಯರೋಗ ಹಾಗೂ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್., ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ. ಕುಮಾರಸ್ವಾಮಿ ಗೋನಾಳ ಸೇರಿದಂತೆ ಎಲ್ಲಾ ತಾಲೂಕಾ ಆರೋಗ್ಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

೩೦ ದಿನ ಅನ್ನ ಸೇವಿಸೋದನ್ನ ನಿಲ್ಲಿಸಿದ್ರೆ, ದೇಹದಲ್ಲಿ ಈ ಎಲ್ಲಾ ಬದಲಾವಣೆಗಳು ಕಂಡು ಬರುತ್ತವೆ..!

೩೦ ದಿನ ಅನ್ನ ಸೇವಿಸೋದನ್ನ ನಿಲ್ಲಿಸಿದ್ರೆ, ದೇಹದಲ್ಲಿ ಈ ಎಲ್ಲಾ ಬದಲಾವಣೆಗಳು ಕಂಡು ಬರುತ್ತವೆ..!

If you stop eating for 30 days, all these changes will occur in your body..!

ಒಂದು ತಿಂಗಳುಗಳ ಕಾಲ ಅನ್ನ ಸೇವಿಸೋದನ್ನ ನಿಲ್ಲಿಸಿದ್ರೆ, ಅದರಿಂದ ದೇಹಕ್ಕೆ ಈ ಎಲ್ಲಾ ಪ್ರಯೋಜನ ಆಗಲಿದೆಯಂತೆ. ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಯಾವುದೇ ಆದ್ರು ಇತಿ-ಮಿತಿಯಲ್ಲಿ ಸೇವಿಸಿದ್ರೆ ಒಳಿತು.

ಅನ್ನ ತಿನ್ನುವುದನ್ನು ನಿಲ್ಲಿಸಿದರೆ ಮೊದಲಿಗಿಂತ ಹೆಚ್ಚು ಕ್ರಿಯಾಶೀಲರಾಗಿರುತ್ತೀರಿ. ಆಲಸ್ಯ ಕಾಡುವುದಿಲ್ಲ ಮತ್ತು ಹೆಚ್ಚು ನಿದ್ದೆ ಬರುವುದಿಲ್ಲ. ನಿಮ್ಮ ದೇಹದಲ್ಲಿ ನೀವು ಈ ಹಿಂದೆ ಗಮನಿಸದೇ ಇರುವ ಅನೇಕ ಬದಲಾವಣೆಗಳನ್ನು ನೀವು ನೋಡುತ್ತೀರಿ. ದೇಹದ ಜೊತೆಗೆ, ನಿಮ್ಮ ಮೆದುಳು ಇತರರಿಗಿಂತ ಹೆಚ್ಚು ಜಾಗರೂಕತೆ ಮತ್ತು ವೇಗವಾಗಿ ಕೆಲಸ ಮಾಡುತ್ತದೆ.

ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಅನ್ನವನ್ನು ತಿನ್ನುವುದನ್ನು ನಿಲ್ಲಿಸಿ. ಒಂದು ತಿಂಗಳೊಳಗೆ ನೀವು ವ್ಯತ್ಯಾಸವನ್ನು ನೋಡುತ್ತೀರಿ. ಯಾಕಂದ್ರೆ ಅಕ್ಕಿ ತ್ವರಿತವಾಗಿ ಕ್ಯಾಲೊರಿಗಳನ್ನು ಸೇರಿಸುತ್ತದೆ ಮತ್ತು ಚಯಾಪಚಯವನ್ನು ನಿಧಾನಗೊಳಿಸುತ್ತದೆ.

ಹೊಟ್ಟೆಯ ಕೊಬ್ಬು ಮತ್ತು ಒಂದು ತಿಂಗಳು ಅನ್ನ ತಿನ್ನದೇ ಇದ್ದರೆ ತೂಕ ಕಡಿಮೆಯಾಗುವುದಲ್ಲದೇ ಹಲವು ಬದಲಾವಣೆಗಳನ್ನು ಕಾಣಬಹುದು.
ಸಂಪರ‍್ಣವಾಗಿ ಅನ್ನವನ್ನು ತ್ಯಜಿಸುವ ಅನೇಕರಿಗೆ ಕಷ್ಟಕರವಾಗಿರುತ್ತದೆ. ಹಾಗಾಗಿ ಅನ್ನ ತಿನ್ನುವುದಾದರೆ ಎಷ್ಟು ಅನ್ನ ಮತ್ತು ಯಾವಾಗ ತಿನ್ನಬೇಕು ಎಂಬುದು ಮುಖ್ಯ. ಒಂದು ಬಟ್ಟಲು ಅನ್ನವನ್ನು ಸರಿಯಾಗಿ ತಿನ್ನುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ.

ಕೆಲವರಂತೂ ಮೂರು ಹೊತ್ತು ಅನ್ನ ಸೇವಿಸುತ್ತಾರೆ. ಅಷ್ಟೇ ಅಲ್ಲ ಬೆಳಗ್ಗಿನ ಉಪಹಾರಕ್ಕೆ ಅಕ್ಕಿಯಿಂದ ತಯಾರಿಸಿದ ತಿನಿಸುಗಳಾದ ದೋಸೆ, ಇಡ್ಲಿ, ಕಡುಬು ಹೀಗೆ ನಾನಾ ರೀತಿಯ ತಿಂಡಿಗಳನ್ನು ತಿನ್ನುತ್ತಾರೆ. ಅವರಿಗೆ ಅಕ್ಕಿ ಅವರ ಜೀವನದ ಪ್ರಮುಖ ಆಹಾರವಾಗಿಬಿಟ್ಟಿದೆ. ಅನ್ನ ತಿನ್ನದೇ ಅವರ ಹೊಟ್ಟೆ ತುಂಬೋದಿಲ್ಲ.

ಅಕ್ಕಿಯ ಅತಿಯಾದ ಸೇವನೆಯು ನಿಮ್ಮ ತೂಕ ಹೆಚ್ಚಾಗಲು ಕಾರಣವಾಗಬಹುದು. ಆದಾಗ್ಯೂ, ಅಂತಹ ಅನ್ನವನ್ನು ಅತಿಯಾಗಿ ತಿನ್ನುವುದರ ಜೊತೆಗೆ, ನೀವು ಅನ್ನವನ್ನು ತಿಂದ ತಕ್ಷಣ ಮಲಗುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

ಪಪ್ಪಾಯಿ ಹಣ್ಣು ಮತ್ತು ಬಾಳೆ ಹಣ್ಣು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ?
ಹುಡುಗ ೩೧ ರ‍್ಷ ೬ ತಿಂಗಳು ಹುಡುಗಿ ೩೧ರ‍್ಷ ೨ ತಿಂಗಳು ವಯಸ್ಸಿನ ಅಂತರ ೪ ತಿಂಗಳು ಹುಡುಗಿ ಚಿಕ್ಕವಳು. ಮದ್ವೆ ಆಗಬಹುದಾ?

37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆಯ ಸಮಾರೋಪ
37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆಯ ಸಮಾರೋಪ

ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ- ನ್ಯಾ. ಮಹಾಂತೇಶ ದರಗದ

37th National Road Safety Month Celebrations Concluded

ಕೊಪ್ಪಳ ಫೆಬ್ರುವರಿ 03 (ಕರ್ನಾಟಕ ವಾರ್ತೆ): ವಾಹನಗಳ ವೇಗದ ಮಿತಿ, ಚಾಲನೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಎಲ್ಲಾ ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ-2026ರ ಸಮಾರೋಪ ಸಮಾರಂಭ ನೆರವೇರಿಸಿ ಮಾತನಾಡಿದರು.
ಪ್ರತಿಯೊಬ್ಬರು ಸಾರಿಗೆ, ಸಂಚಾರ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಅಳವಡಿಸಿಕೊಂಡು, ಕಟ್ಟು ನಿಟ್ಟಾಗಿ ಪಾಲಿಸಿದರೆ ರಸ್ತೆ ಸುರಕ್ಷತೆಯನ್ನು ಪರಿಣಾಮಕಾರಿಗೊಳಿಸಲು ಸಾಧ್ಯವಾಗಿದೆ. ಹಾಗಾಗಿ ವಾಹನ ಸವಾರರು ವೇಗದ ಮಿತಿ ಹಾಗೂ ಚಾಲನೆಯ ಇತಿಮಿತಿಗಳನ್ನು ತಿಳಿದುಕೊಳ್ಳಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮಟ್ ಧರಿಸುವುದು ಮತ್ತು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇದರ ಜೊತೆಗೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡದಿರುವುದು ಹಾಗೂ ಇತರೆ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಅನೇಕ ಅಪಘಾತಗಳನ್ನು ತಪ್ಪಿಸಬಹುದು ಎಂದರು.
ಕಾನೂನುಗಳು ಇರುವುದು ನಮ್ಮ ಸುರಕ್ಷತೆಗೆ. ನಾವೆಲ್ಲರೂ ಅವುಗಳನ್ನು ಪಾಲನೆ ಮಾಡಬೇಕು. 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ಸೇರಿದಂತೆ ಇತರೆ ಯಾವುದೇ ವಾಹನಗಳ ಚಾಲನೆಗೆ ಕೊಡಬಾರದು. ವಾಹನಗಳ ಮಾರಾಟ ಮಾಡಿದ ತಕ್ಷಣ ಅದನ್ನು ವಾಹನ ಖರೀದಿಸಿದವರ ಹೆಸರಿಗೆ ವರ್ಗಾಯಿಸಬೇಕು. ವಾಹನಗಳ ಸುಸ್ಥಿತಿ ಮತ್ತು ಅವುಗಳ ಮಾಲಿನ್ಯ ತಪಾಸಣೆಯಂತಹ ಕ್ರಮಗಳನ್ನು ಅನುಸರಿಸಬೇಕು. ರಸ್ತೆ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕೆಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್ ಅವರು ಮಾತನಾಡಿ, ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ತೆರಳಬೇಕಾದ ಸ್ಥಳಕ್ಕೆ ನಿಗದಿತ ಅವಧಿಯೊಳಗೆ ತಲುಪಬೇಕೆಂಬ ಕಾರಣಕ್ಕೆ ಅತೀ ವೇಗವಾಗಿ ವಾಹನ ಚಾಲನೆ ಮಾಡಬಾರದು. ವಾಹನಗಳನ್ನು ನಿಧಾನವಾಗಿ ಜಾಗರೂಕತೆಯಿಂದ ಚಾಲನೆ ಮಾಡಬೇಕು. ನಿರ್ದಿಷ್ಟ ಸಮಯಕ್ಕೆ ತಲುಪಲು ಸ್ವಲ್ಪ ಮುಂಚಿತವಾಗಿ ಹೊರಡುವ ಮನೋಭಾವ ರೂಢಿಸಿಕೊಳ್ಳಬೇಕು. ರಸ್ತೆ ಸುರಕ್ಷತೆ ಬಗ್ಗೆ ವಾಹನಗಳ ಸುಸ್ಥಿತಿ, ವಾಹನ ಚಾಲನೆವೇಳೆ ಮದ್ಯ ಪಾನದ ಸೇವನೆ ಮಾಡದಿರುವುದು, ಮೊಬೈಲ್ ಬಳಕೆ ಮಾಡದಿರುವುದು ಮತ್ತು ಸರಿಯಾದ ಕ್ರಮದಲ್ಲಿ ವಾಹನಗಳ ಪಾರ್ಕಿಂಗ್ ಸೇರಿದಂತೆ ಇತರೆ ಸಂಚಾರಿ ನಿಯಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ಕೊಪ್ಪಳ ಜಿಲ್ಲೆಯಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಪಾಲನೆ ಮತ್ತು ಸುರಕ್ಷಿತ ವಾಹನಗಳ ಚಾಲನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ರಸ್ತೆ ಅಫಘಾತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಹಾಗೂ ಸುರಕ್ಷಿತ ಚಾಲನೆ ಮೂಲಕ ವಾಹನಗಳ ಮತ್ತು ಅವುಗಳ ದಾಖಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜನರಿಗೆ ಅರಿವು ಮೂಡಿಸುವುದು ಈ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ರಸ್ತೆ ಸುರಕ್ಷತಾ ನಿಯಮಗಳು ಇರುವುದು ನಮಗಾಗಿ, ಅವುಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಶಾಲಾ ಶಿಕ್ಷಣ ಇಲಾಖೆಯ ಎಪಿಸಿಒ ದುಂಡಪ್ಪಗೌಡ ಪಾಟೀಲ, ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಜಿ.ಎಂ ಸುರೇಶ್, ಪ್ರಭಾಕರ್ ಹಾಗೂ ವಿನಾಯಕ ನಾಯಕ, ಮೋಟಾರು ವಾಹನ ನಿರೀಕ್ಷಕರಾದ ವಿಜೇಂದ್ರ ಡವಳಗಿ, ಪಿ.ಮಂಜುನಾಥನ & ಆರ್.ಪ್ರದೀಪ್ ಕುಮಾರ್ ಸೇರಿದಂತೆ ಸಾರಿಗೆ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೊಪ್ಪಳ ಜಿಲ್ಲೆಯ ಲಾರಿ, ಬಸ್, ಮ್ಯಾಕ್ಸಿ, ಕ್ಯಾಬ್, ಟ್ಯಾಕ್ಸಿ, ಆಟೋಗಳ ಚಾಲಕರು & ಮಾಲಕರ ಸಂಘದ ಪ್ರತಿನಿಧಿಗಳು, ವಾಹನ ತರಬೆತಿ ಶಾಲೆಯ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿವಿಧ ವಾಹನಗಳ ಮಾರಾಟ ಸಂಸ್ಥೆಯ ಮತ್ತು ಇತರೆ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು. ಸುರೇಶ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.
*ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ:* ಸಮಾರೋಪ ಸಮಾರಂಭದ ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆವರಣದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ-2026ರ ಪ್ರಯುಕ್ತ ಸುರಕ್ಷತೆಯ ಭಾಗವಾಗಿ ಜಿಲ್ಲೆಯ ವಿವಿಧ ವಾಹನಗಳ ಮಾರಾಟ ಸಂಸ್ಥೆಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
****

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವ.

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವ.

ವೈ ಮನಸ್ಸು ತ್ಯಜಿಸಿ ಗುರುಸ್ವಾಮಿ ಸೇರಿದಂತೆ ಶಿಷ್ಯರು ಭಾಗವಿಸುವಂತೆ ಅಧ್ಯಕ್ಷ ಜಟ್ಟಿ ವೀರಪ್ರಸಾದ್ ಕರೆ.

12th anniversary of Sri Ayyappa Swamy Temple.

ಗಂಗಾವತಿ. ಕೊಪ್ಪಳ ಜಿಲ್ಲೆಯ ಗಂಗಾವತಿ ಮಹಾನಗರದ ಸುಕ್ಷೇತ್ರ ಅಯ್ಯಪ್ಪ ಗಿರಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಆಚರಣೆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳು ಆರಂಭಗೊಂಡಿದ್ದು ಈ ಸಂದರ್ಭದಲ್ಲಿ ಮಾಧ್ಯಮದವರು ದೇವಸ್ಥಾನ ಸಮಿತಿಯ ಅಧ್ಯಕ್ಷ ಜಟ್ಟಿ ವೀರ ಪ್ರಸಾದ್ ಅವರೊಂದಿಗೆ ಮಾತನಾಡಿದಾಗ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಯಾವುದೇ ಒಬ್ಬ ವ್ಯಕ್ತಿಯ ಹಕ್ಕು ಅಲ್ಲ ಸಾರ್ವಜನಿಕ ಭಕ್ತಾದಿಗಳಿಗಾಗಿ ನಿರ್ಮಿಸಲಾದ ಸದರಿ ದೇವಸ್ಥಾನಕ್ಕೆ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತದೆ. ದಿನಾಂಕ 2ರಿಂದ ಆರಂಭಗೊಂಡ ದಿನಂಪತಿ ಪೂಜಾ ಕಾರ್ಯಕ್ರಮಗಳ ಜೊತೆಗೆ ದಿನಾಂಕ 12ರಂದು ಕುಂಭೋತ್ಸವ ಹೋಮ ಹ ವನ ಕಾರ್ಯಕ್ರಮಗಳು ಜರುಗಲಿದ್ದು ತಾಲೂಕಾ ಸೇರಿದಂತೆ ವಿವಿಧ ಭಾಗಗಳಿಂದ ಬರುವ ಗುರುಸ್ವಾಮಿಗಳು ಸೇರಿದಂತೆ ಅವರ ಶಿಷ್ಯ ಬಾಂಧವರು ಯಾವುದೇ ಒಂದು ವೈ ಮನಸ್ಸು ಬೇದ ಭಾವ ಸಂಕುಚಿತ ಮನೋಭಾವನೆಗಳನ್ನು ತೊರೆದು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೈ ಮುಗಿದು ಮುಕ್ತ ಕಂಠ ದಿಂದ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಎಂದಿನಂತೆ ಹೋಮ ಶ್ರೀ ಗಂಗಾದೇಶ್ವರ ಮಹಿಳಾ ಭಜನಾ ಸಂಘದಿಂದ ಭಜನೆ ಲಲಿತ ಸಹಸ್ರ ಪಾರಾಯಣ ಜರುಗಿದವು. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 18 ಮೆಟ್ಟಿಲುಗಳಿಗೆ ಪಂಚಲೋಹದ ಕವಚಸಮರ್ಪಣೆಯ ಕಾರ್ಯ ಹಾಗೂ ಗುಡಿ ಗೋಪುರದ ಸುಣ್ಣ ಬಣ್ಣ ಹಚ್ಚುವ ಕೆಲಸ ಕಾರ್ಯಗಳು ಭರದಿಂದ ಸಾಗಿದವು. ಒಟ್ಟಾರೆ ಅಯ್ಯಪ್ಪ ಗಿರಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎರಡನೆಯ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನಾಗಿಸಲು ಸರ್ವ ಜನಾಂಗದವರ ಸಹಕಾರ ಅವಶ್ಯವಾಗಿದೆ ಎಂದು ಹೇಳಿದರು