ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ
ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

Baldota Factory Hathao 99th day of protest successful, 100th day protest pamphlet released

ಕೊಪ್ಪಳ: ನಗರದ ನಗರಸಭೆ ಆವರಣದಲ್ಲಿ ೯೯ನೇ
ದಿನಗಳಿಂದ ನಡೆದಿರುವ ಬಲ್ಡೋಟ ಹಠಾವೋ ಅನಿರ್ದಿಷ್ಟಾವಧಿ
ಧರಣಿ ಸತ್ಯಾಗ್ರಹ ೯೯ನೇ ದಿನ ಪೂರೈಸಿತು. ಕೊಪ್ಪಳ
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ
ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ
ನಡೆಸುತ್ತಿರುವ ಹೋರಾಟ ಶತದಿನ ಕಾರ್ಯಕ್ರಮ ಬೃಹತ್
ಸಮಾವೇಶವನ್ನು ಹಳೆ ಜಿಲ್ಲಾ ಆಸ್ಪತ್ರೆ ಮುಂದೆ
ನಡೆಸಲಾಗುವುದು, ಈ ಕುರಿತು ಹೊರಡಿಸಲಾದ
ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಭಾಗ್ಯನಗರ ಮತ್ತು ಕೊಪ್ಪಳದಲ್ಲಿ ಆಟೋ ಮೂಲಕ
೧೦೦ನೇ ದಿನದ ಹೋರಾಟಕ್ಕೆ ಬರುವಂತೆ ಜನರಿಗೆ ಸಂದೇಶ
ಕೊಡಲಾಗಿದೆ. ಕರಪತ್ರ ಹಂಚಲಾಗಿದೆ.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಮಾತನಾಡಿ, ಸಾವಿರಾರು ಜನರು, ಇದುವರೆಗೆ
ಹೋರಾಟ ಬೆಂಬಲಿಸಿದ ಸಂಘಟನೆಗಳು, ಸಂಸ್ಥೆಗಳ
ಸದಸ್ಯರು, ಪದಾಧಿಕಾರಿಗಳು ಭಾಗವಹಿಸುವರು. ಎಲ್ಲಾ
ಸಮಾಜದ, ಸಮುದಾಯದ, ಧಾರ್ಮಿಕ ಸಂಸ್ಥೆಗಳ
ಮುಖಂಡರು ಭಾಗವಹಿಸುವರು. ವಾಣಿಜ್ಯೋದ್ಯಮಿಗಳು,
ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗಂಜ್
ವರ್ತಕರು, ಮಹಿಳಾ ಸಮುದಾಯದ ಪ್ರಮುಖರು,
ಕಾರ್ಮಿಕ, ರೈತ, ದಲಿತರ ಚಳವಳಿಯ ಸಂಘಟನೆಗಳು
ಭಾಗವಹಿಸುತ್ತವೆ ಎಂದು ಹೇಳಿದರು.
ದಿನಾಂಕ: ೦೭.೦೨.೨೦೨೬ರ ಶನಿವಾರ ಬೆಳಿಗ್ಗೆ ೯ ಗಂಟೆಗೆ ನಗರ
ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ ಉಪಹಾರ ವ್ಯವಸ್ಥೆ
ಮಾಡುತ್ತದೆ. ಬೆ. ೧೦ ಗಂಟೆಗೆ ಸರಿಯಾಗಿ ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಾಧಿತ ಗಿಣಿಗೇರಿ,
ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಜನರನ್ನು ಭೇಟಿ ಮಾಡಿ ೧೧
ಗಂ. ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ
ಸಂದರ್ಭದಲ್ಲಿ ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ
ದರ್ಗಾ ಹಳ್ಳಿ ಭೇಟಿ ಮಾಡುತ್ತಾರೆ. ಗದುಗಿನ ತೊeoಟದ ಶ್ರೀ
ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ

ಸ್ವಾಮಿಗಳು ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು
ಆಗಮಿಸುತ್ತಾರೆ. ಬೆ. ೧೧ ಗಂಟೆಗೆ ಪ್ರತಿಭಟನೆ ಸಮಾವೇಶ
ಆರಂಭವಾಗುತ್ತದೆ.
ಧರಣಿಯಲ್ಲಿ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮಾದರಿ,
ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಂ.
ಬಡಿಗೇರ, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ,
ಪ್ರಮುಖರಾದ ಬಿ.ಜಿ. ಕರಿಗಾರ, ವೀರಣ್ಣ ಹುರಕಡ್ಲಿ, ವಿಶ್ವನಾಥ
ಯಾಳಗಿ, ರಮೇಶ ಕರ್ಮುಡಿ, ಪ್ರಕಾಶ ಎಚ್, ರಾಜಶೇಖರ
ಏಳುಬಾವಿ, ಜಿ.ಬಿ. ಪಾಟೀಲ್, ಗಂಗಾಧರ್ ಖಾನಾಪುರ, ಶಿವಪ್ಪ ಜಲ್ಲಿ,
ಶರಣು ಶೆಟ್ಟರ್, ಸರೋಜಾ ಬಾಕಳೆ, ನಟರಾಜ ಸವಡಿ,
ಮಹಾಂತೇಶ ಮಲ್ಲನಗೌಡರ, ವೀರಯ್ಯ
ನರಸಿಂಗನಮಠ, ಸದಾಶಿವ ಪಾಟೀಲ್, ವಿಜಯಮಹಾಂತೇಶ
ಹಟ್ಟಿ, ರೇಣುಕಾ ಪೂಜಾರ, ಬಸವರಾಜ ನರೇಗಲ್, ಮೂಕಪ್ಪ
ಮೇಸ್ತಿç ಬಸಾಪುರ, ಶರಣು ಗಡ್ಡಿ, ಮಂಗಳಾದೇವಿ
ರಾಠೋಡ್, ಹನುಮಂತ ಕಟಿಗಿ, ಸಂಜೀವಮ್ಮ ಮುಂಡರಗಿ,
ಗಂಗಮ್ಮ ಕೊಡೆಕಲ್, ರತ್ನಮ್ಮ ದೊಡ್ಡಮನಿ
ಬಸವರಾಜಪ್ಪ ವಿ ಶೆಟ್ಟರ್, ವಿಶಾಲಾಕ್ಷಮ್ಮ ಬಿ. ಶೆಟ್ಟರ್
ಮುಂತಾದವರು ಪಾಲ್ಗೊಂಡಿದ್ದರು.

ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

ಬಲ್ಡೋಟ ಕಾರ್ಖಾನೆ ಹಠಾವೋ ೯೯ನೇ
ದಿನದ ಧರಣಿ ಯಶಸ್ವಿ೧೦೦ನೇ ದಿನದ ಹೋರಾಟದಕರಪತ್ರ ಬಿಡುಗಡೆ

Baldota Factory Hathao 99th day of protest successful, 100th day protest pamphlet released

ಕೊಪ್ಪಳ: ನಗರದ ನಗರಸಭೆ ಆವರಣದಲ್ಲಿ ೯೯ನೇ
ದಿನಗಳಿಂದ ನಡೆದಿರುವ ಬಲ್ಡೋಟ ಹಠಾವೋ ಅನಿರ್ದಿಷ್ಟಾವಧಿ
ಧರಣಿ ಸತ್ಯಾಗ್ರಹ ೯೯ನೇ ದಿನ ಪೂರೈಸಿತು. ಕೊಪ್ಪಳ
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ
ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ
ನಡೆಸುತ್ತಿರುವ ಹೋರಾಟ ಶತದಿನ ಕಾರ್ಯಕ್ರಮ ಬೃಹತ್
ಸಮಾವೇಶವನ್ನು ಹಳೆ ಜಿಲ್ಲಾ ಆಸ್ಪತ್ರೆ ಮುಂದೆ
ನಡೆಸಲಾಗುವುದು, ಈ ಕುರಿತು ಹೊರಡಿಸಲಾದ
ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಭಾಗ್ಯನಗರ ಮತ್ತು ಕೊಪ್ಪಳದಲ್ಲಿ ಆಟೋ ಮೂಲಕ
೧೦೦ನೇ ದಿನದ ಹೋರಾಟಕ್ಕೆ ಬರುವಂತೆ ಜನರಿಗೆ ಸಂದೇಶ
ಕೊಡಲಾಗಿದೆ. ಕರಪತ್ರ ಹಂಚಲಾಗಿದೆ.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಮಾತನಾಡಿ, ಸಾವಿರಾರು ಜನರು, ಇದುವರೆಗೆ
ಹೋರಾಟ ಬೆಂಬಲಿಸಿದ ಸಂಘಟನೆಗಳು, ಸಂಸ್ಥೆಗಳ
ಸದಸ್ಯರು, ಪದಾಧಿಕಾರಿಗಳು ಭಾಗವಹಿಸುವರು. ಎಲ್ಲಾ
ಸಮಾಜದ, ಸಮುದಾಯದ, ಧಾರ್ಮಿಕ ಸಂಸ್ಥೆಗಳ
ಮುಖಂಡರು ಭಾಗವಹಿಸುವರು. ವಾಣಿಜ್ಯೋದ್ಯಮಿಗಳು,
ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಗಂಜ್
ವರ್ತಕರು, ಮಹಿಳಾ ಸಮುದಾಯದ ಪ್ರಮುಖರು,
ಕಾರ್ಮಿಕ, ರೈತ, ದಲಿತರ ಚಳವಳಿಯ ಸಂಘಟನೆಗಳು
ಭಾಗವಹಿಸುತ್ತವೆ ಎಂದು ಹೇಳಿದರು.
ದಿನಾಂಕ: ೦೭.೦೨.೨೦೨೬ರ ಶನಿವಾರ ಬೆಳಿಗ್ಗೆ ೯ ಗಂಟೆಗೆ ನಗರ
ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ ಉಪಹಾರ ವ್ಯವಸ್ಥೆ
ಮಾಡುತ್ತದೆ. ಬೆ. ೧೦ ಗಂಟೆಗೆ ಸರಿಯಾಗಿ ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಾಧಿತ ಗಿಣಿಗೇರಿ,
ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಜನರನ್ನು ಭೇಟಿ ಮಾಡಿ ೧೧
ಗಂ. ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ
ಸಂದರ್ಭದಲ್ಲಿ ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ
ದರ್ಗಾ ಹಳ್ಳಿ ಭೇಟಿ ಮಾಡುತ್ತಾರೆ. ಗದುಗಿನ ತೊeoಟದ ಶ್ರೀ
ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ

ಸ್ವಾಮಿಗಳು ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು
ಆಗಮಿಸುತ್ತಾರೆ. ಬೆ. ೧೧ ಗಂಟೆಗೆ ಪ್ರತಿಭಟನೆ ಸಮಾವೇಶ
ಆರಂಭವಾಗುತ್ತದೆ.
ಧರಣಿಯಲ್ಲಿ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮಾದರಿ,
ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಂ.
ಬಡಿಗೇರ, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ,
ಪ್ರಮುಖರಾದ ಬಿ.ಜಿ. ಕರಿಗಾರ, ವೀರಣ್ಣ ಹುರಕಡ್ಲಿ, ವಿಶ್ವನಾಥ
ಯಾಳಗಿ, ರಮೇಶ ಕರ್ಮುಡಿ, ಪ್ರಕಾಶ ಎಚ್, ರಾಜಶೇಖರ
ಏಳುಬಾವಿ, ಜಿ.ಬಿ. ಪಾಟೀಲ್, ಗಂಗಾಧರ್ ಖಾನಾಪುರ, ಶಿವಪ್ಪ ಜಲ್ಲಿ,
ಶರಣು ಶೆಟ್ಟರ್, ಸರೋಜಾ ಬಾಕಳೆ, ನಟರಾಜ ಸವಡಿ,
ಮಹಾಂತೇಶ ಮಲ್ಲನಗೌಡರ, ವೀರಯ್ಯ
ನರಸಿಂಗನಮಠ, ಸದಾಶಿವ ಪಾಟೀಲ್, ವಿಜಯಮಹಾಂತೇಶ
ಹಟ್ಟಿ, ರೇಣುಕಾ ಪೂಜಾರ, ಬಸವರಾಜ ನರೇಗಲ್, ಮೂಕಪ್ಪ
ಮೇಸ್ತಿç ಬಸಾಪುರ, ಶರಣು ಗಡ್ಡಿ, ಮಂಗಳಾದೇವಿ
ರಾಠೋಡ್, ಹನುಮಂತ ಕಟಿಗಿ, ಸಂಜೀವಮ್ಮ ಮುಂಡರಗಿ,
ಗಂಗಮ್ಮ ಕೊಡೆಕಲ್, ರತ್ನಮ್ಮ ದೊಡ್ಡಮನಿ
ಬಸವರಾಜಪ್ಪ ವಿ ಶೆಟ್ಟರ್, ವಿಶಾಲಾಕ್ಷಮ್ಮ ಬಿ. ಶೆಟ್ಟರ್
ಮುಂತಾದವರು ಪಾಲ್ಗೊಂಡಿದ್ದರು.

ಮಹಿಳೆಯರು ಒಳ್ಳೆಯವರಾಗಿರುವುದಕ್ಕಿಂತ ಹೆಚ್ಚು ಧೈರ್ಯವಂತರಾಗಿರಬೇಕು: ಡಾ.ನಾಗಲಕ್ಷ್ಮೀ ಚೌಧರಿ

POSH ಅಧಿನಿಯಮ 2013ರ ತರಬೇತಿ ಹಾಗೂ ಅರಿವು ಕಾರ್ಯಕ್ರಮ

ಮಹಿಳೆಯರು ಒಳ್ಳೆಯವರಾಗಿರುವುದಕ್ಕಿಂತ ಹೆಚ್ಚು ಧೈರ್ಯವಂತರಾಗಿರಬೇಕು: ಡಾ.ನಾಗಲಕ್ಷ್ಮೀ ಚೌಧರಿ

Women should be more courageous than nice: Dr. Nagalakshmi Choudhary

ಕೊಪ್ಪಳ ಫೆಬ್ರವರಿ 06, (ಕರ್ನಾಟಕ ವಾರ್ತೆ): ಮಹಿಳೆಯರು ಒಳ್ಳೆಯವರಾಗಿರುವುದು ತಪ್ಪಲ್ಲ, ಆದರೆ ಅದಕ್ಕೂ ಹೆಚ್ಚು ಧೈರ್ಯವಂತರಾಗಿರಬೇಕು. ತಮಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಇರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2013 (POSH ACT) ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗಸ್ಥ ಅಥವಾ ಕೌಟುಂಬಿಕ ವಲಯಗಳಲ್ಲಿರುವ ಬಹುತೇಕ ಮಹಿಳೆಯರು ತಮ್ಮ ಮೇಲೆ ಉಂಟಾಗುವ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯದಂತ ಘಟನೆಗಳಲ್ಲಿ ಮೌನದಿಂದ ಇದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಭಾವನೆ ಇರುತ್ತದೆ. ಅಥವಾ ತಮ್ಮ ಮೇಲಿನ ದೌರ್ಜನ್ಯದ ಕುರಿತು ಯಾರಿಗಾದರೂ ಹೇಳಿದಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡಬಹುದು ಎಂಬ ಕೀಳರಿಮೆಯೂ ಇರುತ್ತದೆ. ಕೆಲವೊಮ್ಮೆ ಮಾನ, ಪ್ರಾಣದ ಭಯದಿಂದಲೂ ದೌರ್ಜನ್ಯದ ಕುರಿತು ಮಹಿಳೆ ಎಲ್ಲಿಯೂ ಧ್ವನಿ ಎತ್ತುವುದಿಲ್ಲ. ಇದರಿಂದ ಮಹಿಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಬದಲು ಇನ್ನಷ್ಟು ನೋವು, ದೌರ್ಜನ್ಯ ಹೆಚ್ಚಾಗುತ್ತಾ ಹೋಗುತ್ತದೆ. ಮಹಿಳೆಯರು ಮೂಲತಃ ಭಾವನಾತ್ಮಕ ಜೀವಿಗಳು. ಇದನ್ನೇ ಬಂಡವಾಳವಾಗಿಸಿಕೊAಡು ಕೆಲವು ವಿಕೃತ ಮನಸ್ಸಿನವರು ಮಹಿಳೆಯ ಮೇಲೆ ದೌರ್ಜನ್ಯವೆಸುಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಒಳ್ಳೆಯತನ, ಭಾವನೆಗಳು, ಇತರೆ ಹಿಂಜರಿಕೆಗಳನ್ನು ಬಿಟ್ಟು ಧೈರ್ಯದಿಂದ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ನಮ್ಮ ಒಳ್ಳೆಯತನ ದೌರ್ಬಲ್ಯವಾಗಬಾರದು ಎಂದು ಅವರು ಹೇಳಿದರು.
ಮಹಿಳೆಯರು ಆತ್ಮವಿಶ್ವಾಸದಿಂದ ಹಾಗೂ ಭಯವಿಲ್ಲದೆ ಕೆಲಸ ಮಾಡಲು ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಿದೆ. ಈ ಹಿನ್ನೆಲೆ ಪೋಶ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂತಹ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಿತಿಯ ಸದಸ್ಯರು ಕಾಯ್ದೆಯ ನಿಯಮಗಳು, ತನಿಖಾ ವಿಧಾನಗಳು ಹಾಗೂ ಮಹಿಳೆಯರಿಗೆ ನ್ಯಾಯ ಒದಗಿಸುವ ಕ್ರಮಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ಕುರಿತು ಮುಕ್ತವಾಗಿ ದೂರು ಸಲ್ಲಿಸಲು ಧೈರ್ಯ ಹೊಂದಬೇಕು. ಯಾವುದೇ ಸಂಸ್ಥೆಯಲ್ಲಿ ಪೋಶ್ ಕಾಯ್ದೆಯನ್ವಯ ಸಮಿತಿಯನ್ನು ಕಡ್ಡಾಯವಾಗಿ ರಚಿಸಿ, ಅದರ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳ ಸುರಕ್ಷಿತವಾಗಿದ್ದು, ಸಂತೋಷದ ವಾತಾವರಣ ಹೊಂದಿದ್ದರೆ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಮಹಿಳೆಯರು ಮಾನಸಿಕ, ದೈಹಿಕ ಒತ್ತಡ ಅಥವಾ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು. 2013ರ “ಪ್ರಿವೆನ್ಷನ್ ಆಫ್ ಸೆಕ್ಸುವಲ್ ಹೆರಾಸ್ಮೆಂಟ್ (ಪೋಶ್) ಕಾಯ್ದೆ” ಮಹಿಳೆಯರ ರಕ್ಷಣೆಗೆ ಮಹತ್ವದ ಕಾನೂನು ಆಗಿದೆ. ಈ ಕಾರ್ಯಾಗಾರದಿಂದ ಎಲ್ಲರೂ ಜಾಗೃತರಾಗಿ ಇಲ್ಲಿ ಪಡೆದ ಮಾಹಿತಿಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಹೇಳಿದರು.
ಸರ್ಕಾರಿ ಅಥವಾ ಖಾಸಗಿ ಯಾವುದೇ ಕಚೇರಿ, ಸಂಸ್ಥೆಗಳಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ನೆಮ್ಮದಿಯ ವಾತಾವರಣ ಇರಬೇಕು. ಮಹಿಳೆ ಸ್ವತಂತ್ರವಾಗಿ ಕೆಲಸ ಮಾಡಲು ಅವಳಲ್ಲಿ ಸುರಕ್ಷತೆಯ ಭಾವ ಮೂಡಬೇಕು. ಆಗ ಮಾತ್ರ ಅವಳಲ್ಲಿ ಉತ್ತಮ ಕಾರ್ಯಕ್ಷಮತೆ ಮೂಡಲು ಸಾಧ್ಯ ಮತ್ತು ಕೆಲಸದಲ್ಲಿ ಹೆಚ್ಚು ತಲ್ಲೀನತೆ ಹೊಂದಿ ಗುಣಮಟ್ಟದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಹಾನಿ, ಮಾನಸಿಕ ಹಿಂಸೆಯAತಹ ದೌರ್ಜನ್ಯಗಳಿಗೆ ಪ್ರಸ್ತುತ ಕಾನೂನಿನಲ್ಲಿ ಹಲವಾರು ಪರಿಹಾರ ಕ್ರಮಗಳಿವೆ. ದೌರ್ಜನ್ಯವೆಸಗಿದವರ ಮೇಲೆ ಸೂಕ್ತ ಸಾಕ್ಷಾö್ಯಧಾರಗಳೊಂದಿಗೆ ಸಂಬAಧಿಸಿದ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ಸಹ ನ್ಯಾಯಾಲಯ ನೀಡುತ್ತದೆ ಎಂದು ಅವರು ತಿಳಿಸಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2013 (POSH ACT) ಅನ್ವಯ ಪ್ರತಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಅನ್ಯಾಯ ಉಂಟಾದಾಗ ಆಂತರಿಕ ದೂರು ನಿವಾರಣ ಸಮಿತಿಗೆ ದೂರು ಸಲ್ಲಿಸಿ, ನ್ಯಾಯ ಪಡೆಯಬಹುದು. ಸಮಿತಿಯು ತನ್ನ ಕಾರ್ಯವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಯಾವುದೇ ಕಚೇರಿಗಳಲ್ಲಿ ಮಹಿಳೆಯರಿಗೆ ಉತ್ತಮ ಕೆಲಸದ ವಾತಾವರಣ ನಿರ್ಮಿಸಿಕೊಡುವುದು ಮೇಲಧಿಕಾರಿಗಳ ಕರ್ತವ್ಯ. ಸಹೋದ್ಯೋಗಿಗಳೂ ಕೂಡ ಸುರಕ್ಷತಾ ಭಾವನೆ ಮೂಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಡಿಎಫ್‌ಒ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಆಯೋಗದ ಸದಸ್ಯ ಕಾರ್ಯದರ್ಶಿ ರೂಪಾ, ಸಂಪನ್ಮೂಲ ವ್ಯಕ್ತಿ ಚಂದ್ರಿಕಾ ಟಿ.ಎಸ್. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದಿಂದ ಉಚಿತ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ ಅಭಿಯಾನ: 5 ಸಾವಿರ ಮಂದಿಗೆ ತಪಾಸಣೆ

ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದಿಂದ ಉಚಿತ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ ಅಭಿಯಾನ: 5 ಸಾವಿರ ಮಂದಿಗೆ ತಪಾಸಣೆ

Free cervical cancer screening and treatment campaign by All India Thera Panth Mahila Mandal: 5,000 people screened

ಬೆಂಗಳೂರು,: ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಆಶ್ರ ಯದಲ್ಲಿ ಬೆಂಗಳೂರಿನ ಗಾಂಧಿನಗರದ ಶಾಖೆಯಿಂದ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಸರ್ವೈಕಲ್ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಲಕ್ಷ್ಮೀ ಬೋಹ್ರಾ ಈ ಕುರಿತು ಮಾಹಿತಿ ನೀಡಿ,
, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ‌ 21 ರಿಂದ 65 ವಯೋಮಿತಿಯವರಿಗೆ ಈ ಅಭಿಯಾನ ನಡೆಯಿತು. ತಪಾಸಣೆ ನಂತರ ಕ್ಯಾನ್ಸರ್ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಒದಿಸುತ್ತಿದ್ದು, ನಗರದ ಜನತೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಟಿ ಸಂಜನಾ ಗುರ್ಲಾನಿ ಈ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಒಟ್ಟು 20 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು ಬೆಂಗಳೂರು ನಗರದಲ್ಲಿ ಉದ್ಯೋಗಸ್ಥ ಮಹಿಳೆರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಅವರಿಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸರಳ, ಸುರಕ್ಷಿತ ಮತ್ತು ನೋವು ರಹಿತವಾದ ಪರೀಕ್ಷೆ ಇದಾಗಿದ್ದು, ಸ್ಥಳದಲ್ಲಿಯೇ ತಪಾಸಣೆ ನಡೆಯಲಿದೆ. ಇತ್ತೀಚೆಗೆ ಸರ್ವೈಕಲ್ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಇದಕ್ಕೆ ವಿಶೇಷ ಲಸಿಕಾ ಅಭಿಯಾನವನ್ನು ಸಹ ಆರಂಭಿಸಿದೆ. ರೋಗವನ್ನು ತಡೆಗಟ್ಟುವ ಜೊತೆಗೆ ಸಮಸ್ಯೆ ಇರುವವರಿಗೆ ಚಿಕಿತ್ಸೆ ದೊರಕಿಸಿಕೊಡಲಾಗುವುದು ಎಂದರು.
ಶಿಬಿರದಲ್ಲಿ ಕಾರ್ಯದರ್ಶಿ ವಿಜೇತ ಜೈನ್, ಸಂಚಾಲಕರಾದ ಇಂದು ಕಿನ್ವೇಸರ, ನೀತಾ ಗೋಡಿಯಾ ಮತ್ತಿತರರು ಉಪಸ್ಥಿತರಿದ್ದರು.

ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು
Gangavathi court convicts three accused in Israeli woman's rape and youth's murder case

ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಘಟನೆ ನಡೆದ 9 ತಿಂಗಳೊಳಗೆ ತನಿಖೆ ಪೂರ್ಣಗೊಂಡಿದ್ದು, ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಕೊಪ್ಪಳ (ಫೆ.6): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದ ತನಿಖೆ ಈಗ ಮಹತ್ವದ ಹಂತಕ್ಕೆ ಬಂದು ತಲುಪಿದೆ. ಗಂಗಾವತಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಪ್ರಕರಣದ ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿದ್ದು, ಘಟನೆ ನಡೆದ ಕೇವಲ 9 ತಿಂಗಳಲ್ಲಿ ಕಾನೂನು ಹೋರಾಟ ತಾರ್ಕಿಕ ಅಂತ್ಯದತ್ತ ಸಾಗಿದೆ.

ಸಾಣಾಪೂರ ಬಳಿ ನಡೆದಿದ್ದ ಘೋರ ಕೃತ್ಯ
ಕಳೆದ ಮಾರ್ಚ್ ತಿಂಗಳಲ್ಲಿ ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಅಮಾನವೀಯವಾಗಿ ಅತ್ಯಾ೧ಚಾರವೆಸಗಿದ್ದರು. ಈ ಘಟನೆಯಲ್ಲಿ ಯುವಕನೋರ್ವನ ಕೊಲೆಯಾಗಿತ್ತು.ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿದ್ದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಅಭಿಮಾನಿ ಬಳಗದಿಂದ ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬ ಅದ್ದೂರಿ ಆಚರಣೆ.

ಅಭಿಮಾನಿ ಬಳಗದಿಂದ ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬ ಅದ್ದೂರಿ ಆಚರಣೆ.

Manjunath (Davi)'s birthday was celebrated with great fanfare by his fans.

ಗಂಗಾವತಿ:ಮಂಜುನಾಥ್ (ದಾವಿ)ಅಯೋಧ್ಯ ಯೂತ್ ಐಕಾನ್, ಯುವಕರ ಕಣ್ಮಣಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಜನನಾಯಕ ಹಾಗೂ ಗಂಗಾವತಿಯ ಮುಂದಿನ ಭವಿಷ್ಯದ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬವನ್ನು ನಗರದಲ್ಲಿ ಯುವಕರು ಅದ್ದೂರಿಯಾಗಿ ಆಚರಿಸಿದರು.

ನಗರದ ಕೃಷ್ಣ ವೆಜ್ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಮಾರಂಭದಲ್ಲಿ ಮಂಜುನಾಥ್ (ದಾವಿ) ಅಯೋಧ್ಯ ಅಭಿಮಾನಿ ಬಳಗದ ವತಿಯಿಂದ ಯುವಕರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುವಕರು, ಸ್ನೇಹಿತರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಸಂಭ್ರಮಿಸಿದ್ದಾರೆ.

ಹಾಗೂ ಹುಟ್ಟು ಹಬ್ಬದ ಅಂಗವಾಗಿ ನವಜೀವನ ವೃದ್ಧಾಶ್ರಮಕ್ಕೆ ತೆರಳಿ ಯುವಕರು ಅನ್ನಸಂತರ್ಪಣೆ ಕಾರ್ಯಕ್ರಮ ನೆರೆವೇರಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ಕನ್ನಡಪರ ಹಾಗೂ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಮಂಜುನಾಥ್ (ದಾವಿ) ಅವರಿಗೆ ಶಾಲು ಬೃಹತಾಕರದ ಹಾರ ಹಾಕಿ ಗೌರವಿಸಿ, ಸಮಾಜ ಸೇವೆ ಹಾಗೂ ಯುವಜನರ ಪರವಾಗಿ ಅವರ ಹೋರಾಟ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಯುವಕರ ನಂದಾದೀಪವಾಗಿರುವ ಮಂಜುನಾಥ್ (ದಾವಿ) ಅವರು ಸದಾ ಶೋಷಿತ, ದಮನಿತ ವರ್ಗಗಳ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡುತ್ತಿರುವುದು ಈ ಭಾಗದ ಯುವಕರಿಗೆ ಪ್ರೇರಣೆಯಾಗಿದ್ದಾರೆ ಎಂದು ಯುವಕರು ಅಭಿಮಾನಿ ಬಳಗದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹುಟ್ಟು ಹಬ್ಬದ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಯುವಕರು ಪಾಲ್ಗೊಂಡು ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಹಿಂದಿನ ಜನಪ್ರತಿನಿಧಿಗಳ ಪ್ರಯತ್ನದ ಮುಂದಿನ ಭಾಗವಾಗಿ ಪಟ್ಟಣದಲ್ಲಿ 50 ಹಾಸಿಗೆಯ ಆಸ್ಪತ್ರೆಗೆ ಶಂಕುಸ್ಥಾಪನೆ: ಶಾಸಕ ಎಮ್. ಆರ್. ಮಂಜುನಾಥ್

ಹಿಂದಿನ ಜನಪ್ರತಿನಿಧಿಗಳ ಪ್ರಯತ್ನದ ಮುಂದಿನ ಭಾಗವಾಗಿ ಪಟ್ಟಣದಲ್ಲಿ 50 ಹಾಸಿಗೆಯ ಆಸ್ಪತ್ರೆಗೆ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕಿದ್ದೇನೆ : ಶಾಸಕ ಎಮ್. ಆರ್. ಮಂಜುನಾಥ್

Foundation stone laid for 50-bed hospital in town as a continuation of efforts of previous representatives: MLA M. R. Manjunath

ವರದಿ: ಬಂಗಾರಪ್ಪ .ಸಿ .
ಹನೂರು: ಚಾಮರಾಜನಗ ರ ಜಿಲ್ಲೆಯ ಹನೂರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರವು ಸ್ಥಳೀಯ ಹಂತದಲ್ಲೇ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡು, ಹಿಂದಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಾದ ಮಾಜಿ ಶಾಸಕ ಆರ್ ನರೇಂದ್ರರವರ ಹಾಗೂ ಹಾಲಿ ಶಾಸಕರಾಗಿರುವ ಎಮ್ ಆರ್ ಮಂಜುನಾಥ್ ರವರ ನಿರಂತರ ಪರಿಶ್ರಮದಿಂದ ಪ್ರಯತ್ನದ ಫಲವಾಗಿ ಇಂದು 50ಹಾಸಿಗೆಗಳಆಸ್ಪತ್ರೆಗೆಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿ.ಎಚ್.ಒ) ಡಾ. ಚಿದಂಬರಂ ರವರು ತಿಳಿಸಿದರು.
ಹನೂರು ಪಟ್ಟಣದಲ್ಲಿರುವ ಪ್ರಾಥಮಿಕ ಆಸ್ಪತ್ರೆಯನ್ನುತಾಲ್ಲೂಕು ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು.

ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತದೆ. ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ಕುರಿತು ಪ್ರಸ್ತಾಪ ಕೈಗೊಳ್ಳಲಾಗುವುದು ಹಾಗೂ ಶಾಸಕರ ಆದೇಶದಂತೆ ಅಗತ್ಯ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಜೊತೆಗೆ, ಪಾಲಕರು ತಮ್ಮ ಮಕ್ಕಳನ್ನು ವಿದ್ಯಾರ್ಥಿ ದಶೆಯಿಂದಲೇ ಉತ್ತಮ ಶಿಕ್ಷಣದ ಮೂಲಕ ಉನ್ನತ ಮಟ್ಟಕ್ಕೆ ತಲುಪಿಸುವಂತೆ ಕರೆ ನೀಡಿದರು. ಈ ಯೋಜನೆಗಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳು ಹಾಗೂ ನಾಯಕರುಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಹನೂರು ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇಂಜಿನಿಯರಿಂಗ್ ಘಟಕ ಬೆಂಗಳೂರು ಇವರ ವತಿಯಿಂದ ಮಾತನಾಡಿದರು.
ಹಿಂದಿನವರ ಪ್ರಯತ್ನದ ಫಲವಾಗಿ ನನ್ನ ಅವಧಿಯಲ್ಲಿ ಈ ಯೋಜನೆಯನ್ನು ಅಂತಿಮ ಹಂತಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮಾದಪ್ಪನ ಸನ್ನಿಧಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಫಲವಾಗಿ ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು. ಆಸ್ಪತ್ರೆಯ ಕಾಮಗಾರಿಯನ್ನು ತಮ್ಮ ಕನಸಿನಂತೆ ರೂಪಿಸಿ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸುಸಜ್ಜಿತ ಪ್ರಯೋಗಾಲಯಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು. ನಮ್ಮ ಭಾಗದಲ್ಲಿ ಹೆಚ್ಚು ಆರೋಗ್ಯವಂತ ಸಮಾಜ ನಿರ್ಮಿಸುವುದು ಹಾಗೂ ಸ್ಥಳೀಯ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ವೈದ್ಯರಾದ ರಾಜೇಶ್, ಮುಖಂಡರಾದ ಮಂಜೇಶ್, ರಾಜೂಗೌಡ, ವಿಜಯಕುಮಾರ್, ಡಿ.ಆರ್. ಮಾದೇಶ್, ಸಿದ್ದರಾಜು ಹಾಗೂ ನಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ಹೊಸಕೇರಾ: ಪಾರ್ವತಮ್ಮ ಬಸಣ್ಣ ಸೋಮಲಾಪು ನಿಧನ
Hosakera: Parvathamma Basanna Somalapu passes away

ಹೊಸಕೇರಾ: ಪಾರ್ವತಮ್ಮ ಬಸಣ್ಣ ಸೋಮಲಾಪು ನಿಧನ

ಹೊಸಕೇರಾ: ಹೊಸಕೇರಾ ಗ್ರಾಮದ ಪಾಲಾಕ್ಷಿ ಗೌಡ ಸೋಮಲಾಪೂರ ಮಾತೃಶ್ರೀ ಪಾರ್ವತಮ್ಮ ಇವರು ಇಂದು

ದಿ, 6/2/2026 ಶುಕ್ರವಾರ ಬೆಳಗ್ಗೆ 7-30 ಕ್ಕೆ ಅವರ ಮನೆಯಲ್ಲಿ ದೈವಾದೀನರಾಗಿದ್ದಾರೆ.

ಇವರ ಅಂತ್ಯಕ್ರಿಯೆ ಇಂದು ಸಂಜೆ 4:00 ಗಂಟೆಗೆ ಹೊಸಕೇರಾ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದುಎಂದು ಕುಟುಂಬದ ವರು ತಿಳಿಸಿದ್ದರೆ.

ಶುಗರ್ ಇದ್ದವರು ಯಾವ ರೀತಿ ಆಹಾರ ತಿನ್ನಬೇಕು?

ಬೆಳಿಗ್ಗೆ ಬೇಗ ಎದ್ದು 1 ಗಂಟೆ ವಾಕಿಂಗ್, ಚೆನ್ನಾಗಿ ಕುದಿಸಿದ ದಾಲ್ಚಾನಿ ನೀರು 60 ml, 8 ಗಂಟೆಗೆ ತಿಂಡಿ ( ಸಿಹಿ ಪದಾರ್ಥ ಬಿಟ್ಟು) ಆಮೇಲೆ 10 ನಿಮಿಷ ವಾಕಿಂಗ್

11 ಗಂಟೆಗೆ ಮಜ್ಜಿಗೆ 250 ml

1 ಗಂಟೆಗೆ 2 ರೊಟ್ಟಿ or ಚಪಾತಿ, ಸ್ವಲ್ಪ ಅನ್ನ ಕಾಳಿನ ಪಲ್ಯ ಸೋತೆಕಾಯಿ ನಂತರ 10 ನಿಮಿಷ ವಾಕಿಂಗ್,

ರಾತ್ರಿ 7 ಗಂಟೆಗೆ 2 ರೊಟ್ಟಿ or ಚಪಾತಿ ಸ್ವಲ್ಪ ಅನ್ನ ಕಾಳಿನ ಪಲ್ಯ ಸೋತೆಕಾಯಿ ನಂತರ 10 ನಿಮಿಷ ವಾಕಿಂಗ್

ಸಿಹಿ ಪದಾರ್ಥ ಮತ್ತು ಕಾಫಿ ಟೀ ಬಿಡಿ

ಸೊಪ್ಪು,ಕಾಳು, ಜಾಸ್ತಿ ಇರಲಿ

ಮಾಂಸ ಮತ್ತು ಕರಿದ ಪದಾರ್ಥ ಕಡಿಮೆ ಇರಲಿ

ಮಾನಸಿಕವಾಗಿ ನೆಮ್ಮದಿಯಾಗಿ ಇರಿ ಟೆಂಗಶನ್ ಬೇಡ