
ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಮಹೋತ್ಸವ.
The birthday celebration of Sri Raghavendra Swami was celebrated with devotion and devotion.

ಗಂಗಾವತಿ: ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರದಂದು ಗುರು ಸಾರ್ವಭೌಮ ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ 431ನೆಯ ವರ್ಧಂತಿ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ದೆ ಭಕ್ತಿಯಿಂದ ಜರುಗಿತು.
. ಈ ಸಂದರ್ಭದಲ್ಲಿ ರಾಯರ ಬೃಂದಾವನಕ್ಕೆ ಶ್ರೀ ವೆಂಕಟೇಶ್ವರ ಸ್ವಾಮಿಯ ಅಲಂಕಾರ ಭಕ್ತಾದಿಗಳ ಮನದಲ್ಲಿ ಭಕ್ತಿ ಭಾವ ಮೂಡಿಸುವಲ್ಲಿ ಸಫಲತೆಗೊಂಡಿತು. ವರ್ಧಂತಿ ಮಹೋತ್ಸವದ ಅಂಗವಾಗಿ ಕಳೆದ 18ನೇ ಫೆಬ್ರುವರಿಯಿಂದ ಜರುಗಿದ ಮೈಸೂರು ಡಾಕ್ಟರ್ ವಿಜಯೇಂದ್ರ ಆಚಾರ್ ಅವರ ಶ್ರೀಮದ್ ಭಾಗವತ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಹಿಮೆ ಪ್ರವಚನ ಕಾರ್ಯಕ್ರಮ ಮಂಗಳ ಗೊಂಡಿತು. ವೇದ ಉಪನಿಷತ್ತುಗಳ ಸಾರವೆನಿಸಿದ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ದೊರೆಯುವ ಪುಣ್ಯವೂ ಭಾಗವತ ಪ್ರವಚನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಆಲಿಸುವುದರಿಂದ ಸಮಸ್ತ ಪಾಪ ಕರ್ಮಗಳು ದೂರವಾಗುವುದು ಎಂದು ತಮ್ಮ ಪ್ರವಚನದಲ್ಲಿ ತಿಳಿಸಿದರು ಈ ಸಂದರ್ಭದಲ್ಲಿ ಎಂದಿನಂತೆ ರಾಯರ ಬೃಂದಾವನಕ್ಕೆ ಕ್ಷೀರಭಿಷೇಕ ಪಂಚಾಮೃತ ಅಭಿಷೇಕ ಭಜನೆ ಪಾರಾಯಣ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಅರ್ಚಕ ಭೀಮಸೇನಾಚಾರ್ಯ. ವ್ಯವಸ್ಥಾಪಕ ಗುರುರಾಜ ಆಚಾರ್ಯ ಸಾಮವೇದಿ. ರಾಮಕೃಷ್ಣ ಜಾಗೀರದಾರ್ ಅಪ್ಪಣ್ಣ ದೇಶಪಾಂಡೆ ರಾಘವೇಂದ್ರ ಶ್ರೀನಿವಾಸ್ ದಾಸ್ನಾಳ್ ಅರುಣ ಅಯೋಧ್ಯ ಉದಯ ಜಾಗೀರ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು…



