
ಫೆ.21ಕ್ಕೆ ನಿಗಧಿ: ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಒತ್ತು
ಪಶ್ಚಿಮ ಭಾಗದ ಹಿಂದು ಸಮ್ಮೇಳನ: ಕರಪತ್ರ ಬಿಡುಗಡೆ
Scheduled for Feb. 21: Greater emphasis on door-to-door contact
Western Hindu Sammelan: Pamphlet released

ಗಂಗಾವತಿ:ನಗರದ 1ರಿಂದ 6ನೇ ವಾಡರ್ಿನ ಸಾರ್ವಜನಿಕರು ಒಳಗೊಂಡಂತೆ ಆಯೋಜಿಸಲು ಉದ್ದೇಶಿಸಿರುವ ಪಶ್ಚಿಮ ಭಾಗದ ಹಿಂದು ಸಮ್ಮೇಳನದ ಯಶಸ್ವಿಗೊಳಿಸಲು ಶನಿವಾರ ಸಂಜೆ ನಗರದ 1ನೇ ವಾಡರ್ಿನ ಪಾಂಡುರಂಗ ದೇವಸ್ಥಾನದಲ್ಲಿ ಹಿಂದು ಸಮ್ಮೇಳನ ಸಮಿತಿಯಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ನಗರದ ಹಿಂದು ಸಮ್ಮೇಳದ ಸಂಚಾಲಕ ಡಾ. ಅಮರೇಶ ಪಾಟೀಲ್ ಮತ್ತು ಪಶ್ಚಿಮ ಭಾಗದ ಹಿಂದು ಸಮ್ಮೇಳನದ ಅಧ್ಯಕ್ಷೆ ಕಂಚಿಕಾರಾಣಿ ರಾಯ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗೆ ಸಂಬಂಧಿಸಿದಂತೆ ವಿವಿಧ ವಿಷಯ ಚಚರ್ಿಸಲಾಯಿತು.
ಹೆಚ್ಚು ಜನರನ್ನು ಭಾಗಿಯಾಗುವಂತೆ ಮಾಡಲು ಮನೆಮನೆ ಸಂಪರ್ಕ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಮಾಡುವುದು, ನಗರದಲ್ಲಿ ಬಟ್ಟೆಯ ಬ್ಯಾನರ್ ಹಾಕಿಸುವುದು ಸೇರಿದಂತೆ ನಾನಾ ವಿಷಯಗಳನ್ನು ಚಚರ್ಿಸಲಾಯಿತು.
ಕಲ್ಮಠದಿಂದ ಪಂಪಾಆನಗರ ವೃತ್ತದ ಮಾರ್ಗವಾಗಿ ವಾಲ್ಮಿಕಿ ವೃತ್ತದ ಮೂಲಕ ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಕೇಸರಿ ಬಣ್ಣದ ಬ್ಯಾನರ್, ಬಂಟಿಂಗ್, ತೋರಣ ಸೇರಿದಂತೆ ಸಮ್ಮೇಳನದ ಪರಿಕರಗಳನ್ನು ಅಲಂಕರಿಸುವ ಬಗ್ಗೆ ನಿಧರ್ಾರ ಕೈಗೊಳ್ಳಲಾಯಿತು.
ಅಲ್ಲದೇ ಈಗಾಗಲೆ ಮೂರು ಮತ್ತು ನಾಲ್ಕನೇ ವಾಡರ್ಿನ ಪ್ರತಿನಿಧಿಗಳನ್ನು ಒಳಗೊಂಡಂತೆ ಜಯನಗರದ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಒಂದನೇ ವಾಡರ್ಿನ ಪಂಪಾನಗರದ ಪಾಂಡುರಂಗ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.
ಸೋಮವಾರ ಫೆ.16ರಿಂದ ಗುರುವಾರದವರೆಗೆ ಅಂದರೆ ಫೆ.19ರವರೆಗೆ ಎರಡನೇ ವಾಡರ್ಿನ ವಾಲ್ಮಿಕಿ ವೃತ್ತದದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಹಾಗೂ ಐದನೇ ವಾಡರ್ಿನ ಸಭೆಯನ್ನು ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿ ಆಯಾ ಸ್ಥಳೀಯರನ್ನು ಹೆಚ್ಚು ಭಾಗಿಯಾಗಿಸಿಕೊಳ್ಳುವ ಬಗ್ಗೆ ನಿಧರ್ಾರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಫೆ.,21ರಂದು ಶರದಾಂಬ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಗಧಿಯಾಗಿರುವ `ವಿರಾಟ ಹಿಂದು ಸಮ್ಮೇಳನ’ದ ಕರಪತ್ರಗಳನ್ನು ಪಾಂಡುರಂಗ ದೇವಸ್ಥಾನದಲ್ಲಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ ಬಿಡುಗಡೆ ಮಾಡಲಾಯಿತು.
ಮೌನೇಶ ಬಡಿಗೇರ, ವೀರೇಶ ಗುಡೂರು, ವಾಸುದೇವ ನವಲಿ, ವಿಠ್ಠಲ್ ನಾವಡೆ, ಮಹಾಲಿಂಗಪ್ಪ ಬಿ. ರಘುನಾಥ ಪವಾರ್, ರಂಗನಾಥ ವಟಗಲ್, ಕಾಳೇಶ ಬಡಿಗೇರ, ದಿಲೀಪ್ ಪವಾರ್, ಅಮರಪ್ಪ ಪ್ರಧಾನಿ, ಸತ್ಯನಾರಾಯಣ ದರೋಜಿ, ಶ್ರೀನಿವಾಸ ಎಂ.ಜೆ, ಶಂಕರ್ ಹೊಸಳ್ಳಿ, ರಾಂಘವೇಂದ್ರ ಕಟ್ಟಿಮನಿ, ಲೇಶಪ್ಪ, ಪ್ರಸಾದ್, ಕಮಲ್ ಸುರಭಿ, ಸುಶೀಲ್ ಜನಾದ್ರಿ, ಪಾಂಡುರಂಗ ಜಾಧವ, ಸಿ.ಜಿ. ಜವಳಿ, ಸುರೇಶ ಗೌರಪ್ಪ, ಈರಣ್ಣ, ವೀರಗಂಟಿ ಚಿದಾನಂದಪ್ಪ, ವೆಂಕಟೇಶ ಕುಲಕಣರ್ಿ, ತುಕರಾಮ್, ನಾಗರಾಜ್ ಗುತ್ತೇದಾರ, ಶೃತಿ ವಣರ್ೇಕರ್, ಕಾವೇರಿ ಪಾಟೀಲ್ ಇತರರಿದ್ದರು.




