
ಸಿದ್ದರಾಮಯ್ಯ ನಗರ ಹೆಸರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಮೋಸ : ಕ್ರಮಕ್ಕೆ ಎಸ್.ಕೆ.ದಾನಕೈ ಒತ್ತಾಯ
Fraud in allotment of plots in the name of Siddaramaiah Nagar: S.K. Danakai demands action

ಯಲಬುರ್ಗಾ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಲಬುರ್ಗಾ ದ ಮಲಕ ಸಮುದ್ರ ರಸ್ತೆಗೆ ಇರುವ ಶ್ರೀ ಸಿದ್ದರಾಮಯ್ಯ ನಗರದ ಸರ್ವೇ ನಂಬರ ೨೨೨ ಮತ್ತು ಸರ್ವೆ ನಂಬರ್ ೨೨೪ ರಲ್ಲಿ ಹಾಲುಮತ ಸಮಾಜದ ಹೆಸರಿನಲ್ಲಿ ನಿವೇಶನಗಳು ಮಾಯವಾಗಿವೆ, ಭ್ರಷ್ಡಚಾರದಲ್ಲಿ ಭಾಗಿಯಾದ ತಪಿತಸ್ಥರ ಮೇಲೆ ಬೆಂಗಳೂರಿನ ಉಪ ಲೋಕಯುಕ್ತರು ದಾಳಿನಡೆಸಿ ತನಿಖೆಮಾಡಿ ಹಾಲುಮತ ಸಮಾಜದ ಸಂಘ,ಸಂಸ್ಥೆಗಳಿಗೆ ಹಾಗು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣದ) ಯಲಬುರ್ಗಾ ತಾಲೂಕಾ ಅದ್ಯಕ್ಷ ಶರಣಬಸಪ್ಪ ದಾನದಕೈ ಅವರು ಅಕ್ಟೋಬರ್ .೩೦ ರಂದು ಉಪ ಲೋಕಯುಕ್ತರಿಗೆ ದೂರನ್ನು ಸಲ್ಲಿಸಿದ್ದಾರೆ.ದೂರಿನಲ್ಲಿ ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಮತ್ತು ಸಮಾಜದ ಸಂಘ ಸಂಸ್ಥೆಗಳಿಗೆ ನಿವೇಶನಗಳನ್ನು ವಿತರಿಸಿ, ಹಣ ಕೊಟ್ಟಿರುವ ಸದಸ್ಯರಿಗೆ ೩೦× ೪೦ ಸೈಜ್ ಪ್ಲಾಟುಗಳನ್ನು ಹಂಚಿಕೆ ಮಾಡಿಕೊಡಬೇಕು ಎಂದು ನಿರ್ಧಾರ ಮಾಡಲಾಗಿತ್ತು, ಸರ್ವೆ ನಂಬರ ೨೨೨ ರ ರೇವಣೆಪ್ಪ ಹಿರೇಕುರಬರ ಇವರ ಹೊಲವನ್ನು ಶರಣಬಸಪ್ಪ ದಾನಕೈ ಇವರಿಂದ ಒಂದು ಲಕ್ಷ ಹಣ ಪಡೆದುಕೊಂಡು ೧೧/೦೯/೨೦೦೧ ರಂದು ವಚನಪತ್ರ ಬರೆಸಿದ್ದಾರೆ , ಆದರೆ ವ್ಯವಹಾರದಲ್ಲಿ ಭಾಗವಹಿಸಿದ ಹನುಮಂತಪ್ಪ ಕೊಂಡಗುರಿ ಶಿಕ್ಷಕರು ಲಿಂಗನಬಂಡಿ ಸಾ/ ಹಿರೇ ಅರಳಿಹಳ್ಳಿ ಇವರು ತಮ್ಮ ಸಹೋದರ ಶರಣಪ್ಪ ಕೊಂಡುಗುರಿ ಸಾ/ ಹಿರೇಅರಳಿಹಳ್ಳಿ ಇವರ ಹೆಸರಿಗೆ ೨೨೨ ರ ಸರ್ವೇ ನಂಬರ ಭೂಮಿಯನ್ನು ೨೯/೦೫/೨೦೦೧ ರಂದು ರಂದು ನೋಂದಣಿ ಮಾಡಿಸಿಕೊಂಡು ನಿವೇಶನ ವಿತರಣೆ ಮಾಡುವದಾಗಿ ತಿಳಿಸಿದ್ದಾರೆ ಮತ್ತು ೨೨೪ ರ ಸರ್ವೇ ನಂಬರ ಪೂಜಾರಪ್ಪ ಬಂಡಿಹಾಳ ಇವರ ಜಮೀನನ್ನು ಮಲ್ಲಪ್ಪ ಜೋಗಿನ ಇವರಿಗೆ ೦೫/೧೧/೧೯೯೯ ರಂದು ಖರೀದಿ ವಚನ ಪತ್ರ ಬರೆಯಲಾಗಿತ್ತು ಆದರೆ ನೊಂದಣಿ ಕಾರ್ಯಗಳು ಬೆಗನೆ ಅಗಲಿ ಎನ್ನುವ ದೃಷ್ಟಿಯಿಂದ ೨೦/೧೦/೨೦೦೧ ರಂದು ನಯಪೈಸೆ ಕೊಡಲಾರದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಹಾಗು ಇಂದಿನ ಹಾಲಿ ಯಲಬುರ್ಗಾ ತಾಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆರಿಬಸಪ್ಪ ನಿಡುಗುಂದಿ ಇವರ ಹೆಸರಿಗೆ ಖರಿದಿ ಮಾಡಿ ಎನ್.ಎ ಮಾಡಿಸಿ ಪ್ಲಾಟುಗಳನ್ನು ವಿತರಿಸಬೇಕೆಂದು ಹಾಲುಮತ ಸಮಾಜದ ಹಿರಿಯರು ತೀರ್ಮಾನಿಸಿದ್ದರು ಇದರ ಮುಂದಾಳತ್ವವನ್ಬು ಸೋಮಶೇಖರ ಹರ್ತಿ ನಿವೃತ್ತ ಶಿಕ್ಷಕರು ಭಾಗ್ಯನಗರ ಹಾಗು ಮಲ್ಲಪ್ಪ ಜೋಗಿನ ಇವರು ವಹಿಸಿದ್ದರು. ಆದರೆ ಫ್ಲಾಟುಗಳನ್ನು ಸರಿಯಾಗಿ ವಿತರಣೆ ಮಾಡಲಾರದೆ ಭ್ರಷ್ಟಾಚಾರ ಮಾಡಿದ್ದಾರೆ. ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ ಪಾಟೀಲ ಇವರು ಬಗೆ ಹರಿಸುವದಾಗಿ ಹೇಳಿ ತಾವು ಹುಲಿಯಂತೆ ಗರ್ಜಿಸ ಬೇಕಾದವರು ಈಗ ನೂತನ ಮನೆ ನಿರ್ಮಿಸಿಕೊಂಡಿದ್ದಾರೆ ಆದರೆ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ ಏಕೆ? ಎಂಬ ಪ್ರಶ್ನೆ ಕಾಡುತ್ತಿದೆ, ಭ್ರಷ್ಟಚಾರ ಯಾರಿಂದ ಆಗಿದೆ ಎಂಬುದನ್ನು ತನಿಖೆ ನಡೆಸಬೇಕು . ಇದರಲ್ಲಿ ಶ್ರೀ ಕನಕದಾಸ ಯುವಕ ಮಂಡಳ, ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘ, ಯಲಬುರ್ಗಾ ತಾಲೂಕು ಕುರುಬರ ಸಂಘ, ಕನಕ ಭವನ ಹಾಗು ಪ್ಲಾಟುದಾರರಾದ ಶರಣಬಸಪ್ಪ ದಾನದಕೈ ಯಲಬುರ್ಗಾ, ದೇವಪ್ಪ ಭೀಮಪ್ಪ ಬಾವಿಕಟ್ಟಿ ಭಟಪನಹಳ್ಳಿ ಪುಷ್ಪಲತಾ ಹನುಮಂತಪ್ಪ ದಾನಕೈ ಯಲಬುರ್ಗಾ, ಗವಿಸಿದ್ದಪ್ಪ ಹುಜರತ್ತಿ, ಸರೋಜಮ್ಮ ದೊಡ್ಡಮನಿ,ಬಿ.ಎಂ.ತುಗ್ಗಲಡೋಣಿ ಹಾಗೂ ಇತರ ಜನರಿಗೆ ಮೋಸ ಮಾಡಿದ್ದಾರೆ , ಸಮಾಜದಲ್ಲಿ ತಪ್ಪು ಮಾಡುವದು ತಪ್ಪಲ್ಲ ಮಾಡಿದ ತಪ್ಪನ್ನು ತಪ್ಪಿಲ್ಲ,ತಪ್ಲಿಲ್ಲಾ ಎಂದು ವಾದಿಸುತ್ತವೆ ಅದು ದೊಡ್ಡ ತಪ್ಪು ಅಂತಹ ತಪ್ಪುಗಳನ್ನು ತಿದ್ದಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ “ತಿಳಿದು ಬದುಕ ಬೇಕಾದವರು ತುಳಿದು ಬದುಕುತ್ತಿದ್ದಾರೆ,” “ಬೇಲಿಯೆ ಎದ್ದು ಹೊಲವನ್ನು ಮೆದಂತೆ ಆಗಿದೆ” ” ಕುರುಬ ಸಮಾಜದ ಮುಖಂಡರಿಂದ ಕುರುಬರಿಗೆ ಅನ್ಯಾಯವಾಗಿದೆ” ಇವರು ಹಾಲುಮತ ಸಮಾಜದ ಸಂಘ ಸಂಸ್ಥೆಗಳ ಪ್ಲಾಟುಗಳನ್ನು ಗುಳುಂ ಮಾಡಿದ್ದಾರೆ ,ಸಮಾಜಕ್ಕಾಗಿ ಉಳಿಸಿದ ಪ್ಲಾಟುಗಳನ್ನು ಬೇರೆಯವರಿಗೆ ಮಾರಿ ಹಂಚಿಕೆ ಮಾಡಲಾರದೆ ಮೊಸಮಾಡಿದ್ದಾರೆ, ತಪಿತಸ್ಥರ ಮೇಲೆ ಕ್ರಮ ತಗೆದುಕೊಂಡು ತನಿಖೆ ಮಾಡಿ ನಮ್ಮ ಸಮಾಜಕ್ಕೆ ಹಾಗು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಉಪಲೋಕಯುಕ್ತರಲ್ಲಿ ಶರಣಬಸಪ್ಪ ಕಲ್ಲಪ್ಪ ದಾನದಕೈ ಅವರು ದೂರು ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ. * ಹಿನ್ನಲೆ ಎನು? ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸರ್ವೆ ನಂಬರ ೨೨೪ ರ ಜಮೀನು ಒಂದು ಎಕರೆ ಹನ್ನೊಂದುಗುಂಟೆ ಜಮೀನು ಹಾಗು ಸರ್ವೆ ನಂಬರ ೨೨೨ ರ ಜಮೀನು ಮಾಲಿಕರಿಗೆ ಹಣ ಕೊಟ್ಟು ಖರೀದಿ ಮಾಡಿರುತ್ತದೆ ಆದರೆ ಎನ್.ಎ.ಮಾಡಿಸಿ ಅದರಲ್ಲಿ ಸಮಾಜಕ್ಕೆ ಪ್ರಥಮ ಪ್ರಾಮುಖ್ಯತೆ ಕೊಟ್ಟು ಇತರ ಪ್ಲಾಟುಗಳನ್ನು ಹಣ ಕೊಟ್ಟಿರುವ ಸದಸ್ಯರಿಗೆ ಡ್ರಾ ಮಾಡಿ ವಿತರಿಸಬೇಕು ಎಂದು ತಿರ್ಮಾನಿಸಿ ಹಿರಿಯರು ಮತ್ತು ಸದಸ್ಯರು ಕೂಡಿಕೊಂಡು ಅವರ ಹೆಸರಿಗೆ ಎನ್.ಎ ಮಾಡಿದ್ದಾರೆ ಇಲ್ಲಿಯವರೆಗೆ ಲೇಖ್ಖ ಪತ್ರಗಳನ್ನು ನಿಡಿಲ್ಲ, ಇದರ ಬಗ್ಗೆ ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ, ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರು ಸುಮ್ಮನಿದ್ದಾರೆ,ಸರ್ವೆನಂಬರ ೨೨೨ ರ ಜಮೀನು ಮಾಲಿಕರು ಇವರಿಗೆ ಸಂಚಾಗರ ಒಂದು ಲಕ್ಷ ರೂ ಕೊಟ್ಡವರು ಯಾರು? ಇದನ್ನು ತಿಳಿಯಲಾರದೆ ಪ್ರಥಮ ಹಂತದಲ್ಲಿ ನಯ ಪೈಸೆ ಕೊಡಲಾರದವರು ಪ್ಲಾಟುಗಳನ್ನು ನುಂಗಿ ನೀರು ಕುಡಿದ್ದಾರೆ, ತಾಳಿದವನು ಬಾಳಿಯೆನು ಎನ್ನುವಂತೆ ತಾಳ್ಮೆಯಿಂದ ಸಹಿಸಿಕೊಂಡು ಬಂದಿರುವೆ,ಗುಬ್ಬಿ ಮೇಲೆ ಬ್ರಹ್ಮಷ್ತ್ರ ಬಿಡುತ್ತಾರೆ, ಇವರದು ತಪ್ಪಿಲ್ಲವೆಂದರೆ ಇದುವರೆಗೂ ಬಹಿರಂಗವಾಗಿ ಸಭೆ ಲೇಖ್ಖ ಪತ್ರಗಳನ್ನು ಏಕೆ ನೀಡಲಿಲ್ಲ ? ಇಂತಹ ಭ್ರಷ್ಟಚಾರದಲ್ಲಿ ನಿರತರಾದ ವ್ಯಕ್ತಿ ಹಾಗು ಇವರ ಕುಟುಂಬದವರ ಮನೆಯನ್ನು ಲೋಕಯುಕ್ತರು ಸಮಯ ನೋಡಿ ದಾಳಿ ಮಾಡಿದಾಗ ಇವರ ಭ್ರಷ್ಡಚಾರ ಹೊರ ಬರಲು ಸಾದ್ಯವಾಗುತ್ತದೆ ಎಂದು ರೈತ ಮುಖಂಡ ಹೊರಾಟಗಾರ ಶರಣಬಸಪ್ಪ ದಾನಕೈ ಅವರು ಮಾದ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ, “ಸಮಾಜ ದೇಶ ನನಗೆ ಎನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜ ದೇಶಕ್ಕಾಗಿ ನಾನು ಎನು ಕೊಟ್ಟೆ ,ನನ್ನ ಕೊಡುಗೆ ಎನು” ಎಂಬುದನ್ನು ತಿಳಿಯಾಲಾರದವರು ಇವರು ಸಮಾಜ ಉದ್ದಾರಕರೆ? ಯುವಕರೆ ಜಾಗೃತರಾಗಿರಿ, ಬಾಯಿ ಇದ್ದರು ಮೂಖರಂತೆ, ಕಣ್ಣು ಇದ್ದರು ಕುರುಡರಂತೆ,ಕಿವಿಯಿದ್ದರು ಕಿವಡರಂತೆ ಅಗಿದೆ ನಮ್ಮ ಸಮಾಜದ ಪರಿಸ್ಥಿತಿ ,ಇನ್ನೂ ಮುಂದೆ ಭ್ರಷ್ಟಚಾರಿಗಳನ್ನು ಇವರನ್ನು ಯಾವದೇ ಸಭೆ ಸಮಾರಂಭಗಳಲ್ಲಿ ಕರೆಯಬೇಡಿ , ಮುಂದಿನ ದಿನಮಾನದಲ್ಲಿ ಇವರಿಗೆ ತಕ್ಕ ಪಾಠವನ್ನು ಕಲಿಸಬೇಕು ಅಂದಾಗ ಇವರು ಜಾಗೃತಿ ಹೊಂದಲು ಸಾದ್ಯ , ನಾವೇಲ್ಲರೂ ಹೋರಾಟದ ಹಾದಿಯಲ್ಲಿ ಸಾಗಿದಾಗ ಭಷ್ಡಚಾರ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ,ನಿಮ್ಮದು ತಪ್ಪಿಲ್ಲವೆಂದರೆ ಫೆ ೧೫ ರಂದು ಶ್ರೀ ಬೀರಲಿಂಗೇಶ್ವರ ಜಾತ್ರೆಯಲ್ಲಿ ಜರುಗುವ ಬಹಿರಂಗ ಸಭೆಯಲ್ಲಿ ಶಾಂತಿ ರೀತಿಯಿಂದ ಲೇಖ್ಖ ಪತ್ರವನ್ನು ವಿತರಿಸಬೇಕು ಎಂದು ಹಾಲುಮತ ಸಮಾಜದ ಜಿಲ್ಲಾ ಮುಖಂಡ ಶರಣಬಸಪ್ಪ ದಾನಕೈ ಅವರು ತಿಳಿಸಿದ್ದಾರೆ.




