ಇ-ಸ್ವತ್ತು ತಂತ್ರಾಂಶ: ಸಹಾಯವಾಣಿ ಕಾರ್ಯಕ್ಕೆ ಅಧಿಕಾರಿಗಳ ನಿಯೋಜನೆ

E-Asset Software: Officers assigned to helpline work
ಕೊಪ್ಪಳ ಫೆಬ್ರವರಿ 10, (ಕರ್ನಾಟಕ ವಾರ್ತೆ): ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅನುಷ್ಠಾನ ಮಾಡಿರುವುದರಿಂದ ಪ್ರಾರಂಭದಲ್ಲಿ ಸಾರ್ವಜನಿಕರ ಕರೆಗಳಿಗೆ ಸಂಬಂಧಿಸಿ ದಂತೆ ಜಿಲ್ಲಾ ಪಂಚಾಯತಿ ವತಿಯಿಂದ ಸಹಾಯವಾಣಿ ಪ್ರಾರಂಭಿಸಿದ್ದು, ಇ-ಸ್ವತ್ತು ತಂತ್ರಾಂಶದ ಹಾಗೂ ನಿಯಮಗಳನ್ವಯ ಉತ್ತರಿಸುವ ಬಗ್ಗೆ, ಮಾರ್ಗದರ್ಶನ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.
ಜಿಲ್ಲಾ ಪಂಚಾಯತಿಯ ಆದೇಶದನ್ವಯ ಪಿಡಿಒ ಪ್ರಶಾಂತ್ ಹಿರೇಮಠ್ ಅವರು ಫೆಬ್ರವರಿ 13, ಫೆ.19 ಹಾಗೂ ಫೆ.24 ರಂದು, ಪಿಡಿಒ ರಮೇಶ್ ತಿಮ್ಮಾರೆಡ್ಡಿ ಅವರು ಫೆ.16, ಫೆ.20 ಹಾಗೂ ಫೆ.25 ರಂದು, ಪಿಡಿಒ ಶಂಶೀರ್ ಅಲಿ ಅವರು ಫೆ.11, ಫೆ.17, ಫೆ.21 ಹಾಗೂ ಫೆ.26 ರಂದು ಮತ್ತು ಪಿಡಿಒ ಅಬ್ದುಲ್ ಗಫರ್ ಅವರು ಫೆ.12, ಫೆ.18, ಫೆ.23 ಹಾಗೂ ಫೆ.27 ರಂದು ಜಿಲ್ಲಾ ಪಂಚಾಯತಿ ಕಾರ್ಯಾಲಯಕ್ಕೆ ಹಾಜರಾಗಿ ಬೆಳಿಗ್ಗೆ 9 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕು.
ಸಹಾಯವಾಣಿ ಸಂಖ್ಯೆ:08539221207 ಆಗಿದ್ದು, ಸಾರ್ವಜನಿಕರು 2 ಮತ್ತು 4ನೇ ಶನಿವಾರ, ಭಾನುವಾರ ಹಾಗೂ ರಜೆ ದಿನಗಳನ್ನು ಹೊರತುಪಡಿಸಿ ಮೇಲೆ ತಿಳಿಸಿದ ದಿನಾಂಕಗಳAದು ಬೆಳಿಗ್ಗೆ 10 ಗಂಟೆಯಿAದ ಸಂಜೆ 5.30 ಗಂಟೆಯವರೆಗೆ ಕಚೇರಿ ಅವಧಿಯಲ್ಲಿ ಸಹಾಯವಾಣಿಗೆ ಸಂಪರ್ಕಿಸಿ ನಿಯೋಜಿತ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




