ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಇಲಾಖೆಯಿಂದ ಬುಕ್ಕಿಂಗ್ ಅವಧಿ ವಿಸ್ತರಣೆ

Mallikarjun
2 Min Read
ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಇಲಾಖೆಯಿಂದ ಬುಕ್ಕಿಂಗ್ ಅವಧಿ ವಿಸ್ತರಣೆ
Postal Department extends booking period for public convenience

ಕೊಪ್ಪಳ ಫೆಬ್ರವರಿ 09, (ಕರ್ನಾಟಕ ವಾರ್ತೆ): ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರ ಸೌಲಭ್ಯಕ್ಕಾಗಿ ಅಂಚೆ ಕಚೇರಿ ಮುಚ್ಚುವ ಸಮಯದ 30 ನಿಮಿಷಗಳ ಮುಂಚಿತವರೆಗೆ ಪತ್ರಗಳು, ಪಾರ್ಸೆಲ್‌ಗಳು ಹಾಗೂ ಅಂತರರಾಷ್ಟಿçÃಯ ಪತ್ರಗಳು ಮತ್ತು ಪಾರ್ಸೆಲ್‌ಗಳ ಬುಕ್ಕಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಮೂರು ಉಪಕ್ರಮಗಳಾಗಿ ಜಾರಿಗೆ ತಂದಿದೆ.
ಮೊದಲನೆಯದಾಗಿ, ಸ್ಪೀಡ್ ಪೋಸ್ಟ್ ಮತ್ತು ಇತರ ಪತ್ರ ಹಾಗೂ ಪಾರ್ಸೆಲ್‌ಗಳ ಬುಕ್ಕಿಂಗ್ ಅವಧಿ ವಿಸ್ತರಣೆ ಮಾಡಿದ್ದು, ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ವ್ಯವಸ್ಥೆಯಡಿ, ಕಾರ್ಯದಿನಗಳಲ್ಲಿ ಇಲಾಖಾ ಅಂಚೆಕಚೇರಿಗಳ ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ ಮುಂಚಿತವಾಗಿ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತರರಾಷ್ಟಿçÃಯ ಸ್ಪೀಡ್‌ಪೋಸ್ಟ್, ಪಾರ್ಸೆಲ್‌ಗಳನ್ನು ಬುಕ್ ಮಾಡಬಹುದಾಗಿದೆ. ಇದರಿಂದ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ದೊರೆಯುತ್ತದೆ.
ಎರಡನೆಯದಾಗಿ ಮನೆಯಲ್ಲಿಯೇ ಕುಳಿತು ಪತ್ರ, ಪಾರ್ಸೆಲ್‌ಗಳ ಬುಕ್ಕಿಂಗ್ ಸೌಲಭ್ಯ (Customer Self Service Portal) ಒದಗಿಸಿದ್ದು, ಸಾರ್ವಜನಿಕರ ಸೌಕರ್ಯಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ (Customer Self Service Portal: https://app.indiapost.gov.in/customer-selfservice/login) ಲಭ್ಯವಿದ್ದು, ಇದರ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರಾö್ಯಕಿಂಗ್, ದೂರು ಸಲ್ಲಿಕೆ, ಸೇವೆಗಳ ವಿವರಗಳು ಹಾಗೂ ಇತರ ಅನೇಕ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದು. ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದೆ.
ಮೂರನೆಯದಾಗಿ, ಡಾಕ್ ಸೇವಾ ಆ್ಯಪ್ (DAK SEVA APP) ಬಿಡುಗಡೆ ಮಾಡಿದ್ದು, ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ “Dak Seva App” ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಆ್ಯಪ್ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರಾö್ಯಕಿಂಗ್, ದೂರು ನೋಂದಣಿ, ಸೇವಾ ಮಾಹಿತಿ ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್‌ನಲ್ಲಿಯೇ ಲಭ್ಯವಿರುತ್ತವೆ ಮತ್ತು ಸಾರ್ವಜನಿಕರು ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಡೌನ್‌ಲೋಡ್ ಮಾಡಲು ಅಗತ್ಯವಾದ QR code, India Post ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment