ಹನೂರು ಕ್ಷೇತ್ರದಲ್ಲಿ ಕೆಲವು ನಾಯಕರಿಂದ ಬಿಜೆಪಿ ಪಕ್ಷಕ್ಕೆ ನಷ್ಟ ವರಿಷ್ಠರು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಬೇಕು: ಆನಾಪುರ ಉಮೇಶ್




BJP party suffers losses due to some leaders in Hanur constituency, senior leaders should expose the confusion among workers: Anapur Umesh

ಹನೂರು ಕ್ಷೇತ್ರದಲ್ಲಿ ಕೆಲವು ನಾಯಕರಿಂದ ಬಿಜೆಪಿ ಪಕ್ಷಕ್ಕೆ ನಷ್ಟ ವರಿಷ್ಠರು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಬೇಕು: ಆನಾಪುರ ಉಮೇಶ್ .


ವರದಿ:ಬಂಗಾರಪ್ಪ .ಸಿ.
ಹನೂರು : ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಪಾರ ಪ್ರಮಾಣದಲ್ಲಿ ದುಡಿದ ಪ್ರಾಮಾಣಿಕ ಕಾರ್ಯಕರ್ತರ ಒಂದು ಪಡೆಯೆ ಇದೆ , ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಗೆಲುವ ತಂದುಕೊಡುವ ಕಾರ್ಯಕರ್ತರನ್ನು ಹುಟ್ಟುಹಾಕುವಂತೆ ಪಕ್ಷದ ವರಿಷ್ಠರು ಇತ್ತ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರು ಗಮನ ಹರಿಸಬೇಕು ,

ಅಲ್ಲದೆ ನಮ್ಮಲ್ಲಿ ನಾಯಕರಾದವರು ಸಹ ಕ್ಷೇತ್ರಗಳಲ್ಲಿ ಹೊರಗಿನವರ ಸಹವಾಸ ಬಿಟ್ಟು ಸ್ಥಳಿಯ ಮುಂಚೂಣಿ ನಾಯಕರ ಜೊತೆಯಲ್ಲಿ ಸೇರಿಕೊಂಡು ಕ್ಷೇತ್ರದ ಹಿತ ಕಾಪಡವಂತೆ ಮಾಡಬೇಕು. ಕಳೆದ ಚುನಾವಣೆಗಳಲ್ಲಿ ಗೆಲುವ ಕಾಣುವ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಅಪಪ್ರಚಾರ ಮಾಡಿ ಸೋಲುವಂತೆ ಕೆಲವರು ಮಾಡಿದ್ದಾರೆ, ಅದನ್ನು ಯಾರು ಮರೆಯಬಾರದು ಅಲ್ಲದೆ,ಇಂತಹವರನ್ನು ಕ್ಷೇತ್ರದ ಜನರು ಮರೆಯುವುದಿಲ್ಲ ,ವರಿಷ್ಠರು ಗಮನ ಹರಿಸಿ ಕ್ಷೇತ್ರದಿಂದ ದೂರವಿರಬೇಕು , ತಮ್ಮ ಪಕ್ಷದ ಕಾರ್ಯಕರ್ತರ ನೋವನ್ನು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರುಗಳಿಗೆ ತಿಳಿಸುವಂತೆ ಪತ್ರಿಕೆಗಳ ಮುಖಾಂತರ ಅನಾಪುರ ಉಮೇಶ್ ರವರು ತೋಡಿಕೊಂಡರು .ಇಂದಿನ ಪರಿಸ್ಥಿತಿಯಲ್ಲಿ ಒಬ್ಬ ಸಾಮನ್ಯ ಕಾರ್ಯಕರ್ತಗಿರುವ ಸಾಮಾನ್ಯ ಜ್ಞಾನದ ಮಟ್ಟಿಗೆ ಹೇಳುವುದಾದರೆ,ಪಕ್ಷದ ಉನ್ನತ ಮಟ್ಟದ ಮುಖಂಡರುಗಳು ಕ್ಷೇತ್ರದ ಬಗ್ಗೆ ಗಮನ ಹರಿಸಬೇಕಾಗಿದೆ ,ಮುಂದಿನ ದಿನಗಳಲ್ಲಿ ನಡೆಯುವ ಸ್ಥಳಿಯ ಮಟ್ಟದ ಚುನಾವಣೆಗಳಿಗೆ ಹೊರಗಿನ ನಾಯಕರುಗಳನ್ನು ದೂರಕ್ಕೆ ಸರಿಸಿ , ಸ್ಥಳಿಯ ನಾಯಕರುಗಳಿಗೆ ಜವಾಬ್ದಾರಿ ನೀಡಿ ಚುನಾವಣಾ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ನಿಲ್ಲಿಸಿ ಜಯಿಸಿ ಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿಯೆ ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲುವಿನತ್ತ ಕೊಡೊಯ್ಯಲು ಗಮನ ಹರಿಸ ಬೇಕಾಗಿದೆ , ಈಗಾಗಲೇ ನಮ್ಮ ಕಾರ್ಯಕರ್ತರು ದಿಕ್ಕಾಪಾಲಾಗಿದ್ದಾರೆ ಅವರನ್ನೆಲ್ಲ ಒಗ್ಗೂಡಿಸಿ ಮುಂದೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವ ಜವಾಬ್ದಾರಿಯು ನಮ್ಮದಾಗಿರುತ್ತದೆ ಎಂದು ಹಲವಾರು ಪ್ರಾಮಾಣಿಕ ಕಾರ್ಯಕರ್ತರು ತಿಳಿಸಿದರು .

ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ಮತದಾರರಿದ್ದಾರೆ ಕಳೆದ ಎರಡು ಸಲವು ಬಹು ಸುಲಭವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲಬಹುದಾಗಿತ್ತು , ಬಿಜೆಪಿ ಪಕ್ಷದ ಆಂತರಿಕ ಕಚ್ಚಾಟವೆ ನಮ್ಮ ಸೋಲಿಗೆ ಕಾರಣ ,
ಹನೂರು ಕ್ಷೇತ್ರದಲ್ಲಿ ಸರಿಯಾದ ಮಂಡಲ ಅದ್ಯಕ್ಷರುಗಳಾಧಿಯಾಗಿ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿಲ್ಲ,
,ಇನ್ನು ಸಂಘಟನೆಯ ಕೊರತೆಯನ್ನು ತುಂಬಲು ಕಾರ್ಯಕರ್ತರು ಅಗಾದವಾಗಿ ಕಷ್ಟ ಪಡುವ ಸ್ಥಿತಿಯನ್ನು ನಿರ್ಮಾಣಮಾಡಲಾಗಿದೆ ,ಮುಂಚೂಣಿ ಘಟಕದಲ್ಲಿ ಕಾರ್ಯನಿರ್ವಹಿಸುವ ಇವರಕಾರ್ಯ ಅಲ್ಲೊಬ್ಬ ಇಲ್ಲೊಬ್ಬರು ನೋಡ್ತ ನಗ್ತಿದ್ದಾರೆ , ಆದರೆ ಪ್ರಾಮಾಣಿಕ ಕಾರ್ಯಕರ್ತರ ಕತೆ ಅಯೋಮಯವಾಗಲಿದೆ ಎಂದು ಬಿಜೇಪಿಯ ಮುಖಂಡರಾದ ಆನಾಪುರ ಉಮೇಶ್ ತಿಳಿಸಿದರು.

ಲಿಟಲ್ ಹಾರ್ಟ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಲಿಟಲ್ ಹಾರ್ಟ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

National Science Day celebration at Little Heart School





ಗಂಗಾವತಿ: ಸರ್ ಸಿ ವಿ ರಾಮನ್ ಅವರ ರಾಮನ್ ಪರಿಣಾಮ ಆವಿಷ್ಕಾರದ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಲಿಟಲ್ ಹಾರ್ಟ್ ಶಾಲೆಯಲ್ಲಿ 28ನೇ ಫೆಬ್ರವರಿ ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಆಲಂಪಲ್ಲಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಪ್ರೀಯಾಕುಮಾರಿ ಪೋಲಿನ ಹಾಗೂ ಶಾಲೆಯ ಎಲ್ಲ ವಿಜ್ಞಾನ ಶಿಕ್ಷಕಿಯರು ಉಪಸ್ಥಿತರಿದ್ದರು. ಮಕ್ಕಳು ಹಲವು ವಿಜ್ಞಾನಿಗಳು ಹಾಗೂ ವಿಜ್ಞಾನ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಹಾಗೆಯೇ ವಿಜ್ಞಾನ ಮಾದರಿಗಳು ಮತ್ತು ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಗಳು ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎನ್ನುವ ಸಂದೇಶವನ್ನು ಮಕ್ಕಳಿಗೆ ನೀಡಿದರು. ಹಾಗೆಯೇ ಮುಖ್ಯೋಪಾಧ್ಯಾಯನಿಯವರು ಮಕ್ಕಳಲ್ಲಿ ಕುತೂಹಲ ಹಾಗೂ ಪ್ರಶ್ನಾ ಮನೋಭಾವನೆ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಮತ್ತು ಶಾಲೆಯಲ್ಲಿ ನೂತನವಾಗಿ ನಿರ್ಮಿತವಾದ STEM Lab ನ ಸದ್ಬಳಕೆಯು ಇದನ್ನು ಪರಿಪೂರ್ಣಗೊಳಿಸುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳು Talk show ಮುಖಾಂತರ ಲ್ಯಾಬ್ ನ ಉಪಯೋಗವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಗೌರಿ, ಶ್ರೀಮತಿ ವಿದ್ಯಾ, ಶ್ರೀಮತಿ ಶ್ವೇತಾ, ಶ್ರೀಮತಿ ಉಷಾ, ಶ್ರೀಮತಿ ವಾಣಿಶ್ರೀ, ಕುಮಾರಿ ಶಾಂತ, ಕುಮಾರಿ ಮಾಹೆಕ್ , ಶ್ರೀಮತಿ ಸುಶ್ಮಿತಾ ಇತರರು ಉಪಸ್ಥಿತರಿದ್ದರು.

ಅನಧಿಕೃತ ರೆಸಾರ್ಟ್ ತೆರವುಗೊಳಿಸಿ ಹಾಗೂ ಆಮಿಷಗೆ ಮಣಿದು ರೆಸಾರ್ಟ್ ನಡೆಸಲು ಅವಕಾಶ ಕೊಟ್ಟ  ಅಧಿಕಾರಿಗಳ ಯುರುದ್ದ ಕ್ರಮ ಕೈಗೊಳುವಂತೆ ಮ್ಯಾಗಳಮನಿ ಒತ್ತಾಯ

ಅನಧಿಕೃತ ರೆಸಾರ್ಟ್ ತೆರವುಗೊಳಿಸಿ ಹಾಗೂ ಆಮಿಷಗೆ ಮಣಿದು ರೆಸಾರ್ಟ್ ನಡೆಸಲು ಅವಕಾಶ ಕೊಟ್ಟ  ಅಧಿಕಾರಿಗಳ ಯುರುದ್ದ ಕ್ರಮ ಕೈಗೊಳುವಂತೆ ಮ್ಯಾಗಳಮನಿ ಒತ್ತಾಯ

Magalamani demands action against officials who gave in to the lure and allowed the resort to be cleared of unauthorized resorts




  ಗಂಗಾವತಿ :-28–ಗಂಗಾವ ತಿ ತಾಲ್ಲೂಕಿನ ಆನೆಗುಂದಿ ಭಾಗದ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು ಹಾಗೂ ಅವುಗಳು ಯಾವಾಗ ನಿರ್ಮಾಣಗೊಂಡಿವೆ ಅಲ್ಲಿಂದ ಇಲ್ಲಿಯವರೆಗೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಭಾಗವು ಐತಿಹಾಸಿಕ ಪ್ರದೇಶವಾಗಿರುವದರಿಂದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದೆ. ವಿದೇಶಿಗರು ಆಗಮಿಸುತ್ತಿದ್ದು ಅವರಿಗೆ ವಾಸ್ತವ್ಯ ಮಾಡುವ ನೆಪದಲ್ಲಿ ಸರಕಾರದ ಪರವಾನಿಗೆ ಇಲ್ಲದೆ ಫಲವತ್ತಾದ ಕೃಷಿ ಭೂಮಿಯಲ್ಲಿ ಹೋಮ್ ಸ್ಟೇ ಎಂಬ ಹೆಸರಿನಿಂದ ಕೃಷಿ ಭೂಮಿ ನಾಶ ಪಡಿಸಿರುವದಲ್ಲದೆ ಮಧ್ಯ, ಗಾಂಜಾ, ಅಫಿಮು ದಂದೆಯಿಂದ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಆನೆಗುಂದಿ ಹಾಗೂ ಅಂಜನಾದ್ರಿಗೆ ಕಳಂಕ ತರುವ ಕೆಲಸ ನಡೆಸಿದ್ದಾರೆ.ಇಂತಹ ರೆಸಾರ್ಟ್ ಗಳು ಪ್ರಾರಂಭ ಮಾಡುವಾಗ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರೋ? ಅಥವಾ ಹಣ ಪಡೆದುಕೊಂಡು ಮೌನ ವಹಿಸಿದ್ದರೋ ? ಎನ್ನುವದು ಯಕ್ಷ ಪ್ರಶ್ನೆ ಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು, ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಅಧಿಕಾರಿಗಳು ಅಥವಾ ಬೇರೆ ಯಾವ ಅಧಿಕಾರಿಗಳ ವ್ಯಾಪ್ತಿಗೆ ಸಂಬಂಧ ಪಡುತ್ತದೆಯೋ ಅಂತಹ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು.ಆಗ ಸುಮ್ಮನಿದ್ದು ಮಾಧ್ಯಮ ದಲ್ಲಿ ವರದಿ ಬಂದ ನಂತರ, ಸಂಘಟನೆಗಳ ಒತ್ತಾಯಕ್ಕೆ ತೆರವುಗೊಳಿಸುವ ನಾಟಕ ವಾಡಿ ಪುನಃ ಮೌನ ವಹಿಸುವ ಅಧಿಕಾರಿಗಳ ಲೋಪವು ಕಾರಣವಾಗಿದೆ.ಅವರ ಮೇಲೆ ಕ್ರಮ ಜರುಗಿಸವುದರ ಜೊತೆಗೆ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು. ವಿದೇಶಿಗರ ರಕ್ಷಣೆ ಹಾಗೂ ಅನುಕೂಲಕ್ಕಾಗಿ ಸರ್ಕಾರವೇ ಹೋಮ್ ಸ್ಟೇ ಅಥವಾ ವಿದೇಶಿಗರ ಯಾತ್ರಾ ನಿವಾಸ ನಿರ್ಮಿಸುವದರಿಂದ ಅಲ್ಲಿ ಮಧ್ಯ, ಗಾಂಜಾ, ಅಫಿಮಿನOತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತೆ ಆಗುತ್ತೆದೆ ಮತ್ತು ನಮ್ಮ ಸಂಸ್ಕೃತಿಗೆ ಆದ್ಯತೆ ನೀಡಿದಂತೆಯಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕೆಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ,ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ್ ಚನ್ನಾದಾಸರ, ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್,ಹನುಮಂತಪ್ಪ,ರವಿಕುಮಾರ್ ಮತ್ತಿತರರು ಇದ್ದರು.

ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ
High Court Justice Ravi Hosamani inaugurates mock court competition at ICFI Law School

ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ

ಬೆಂಗಳೂರು: ಅಣಕು ನ್ಯಾಯಾಲಯಗಳು ನ್ಯಾಯಾಂಗ ಕ್ಷೇತ್ರವನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ನ್ಯಾಯದಾನದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ನೀಡುತ್ತವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದ್ದಾರೆ.

ಐಸಿಎಫ್ಐ ಲಾ ಸ್ಕೂಲ್ನಲ್ಲಿ ಎನ್.ಜೆ. ಯಶಸ್ವಿ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯಕ್ಕೆ ಅಣಕು ನ್ಯಾಯಾಲಯಗಳು ಪ್ರೇರಣೆಯಾಗಬೇಕು. ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ನೈಜ ಚಿತ್ರಣವನ್ನು ಕಟ್ಟಿಕೊಡುತ್ತವೆ. ವಿದ್ಯಾರ್ಥಿ ಸಮುದಾಯ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳಲ್ಲಿ ವಕಾಲತ್ತು ಕೌಶಲ್ಯ ಮತ್ತು ಅನುಭವಾಧಾರಿತ ಕಾನೂನು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಇದು ಮಹತ್ವ ಹೆಜ್ಜೆ ಎಂದರು.
ಈ ಸ್ಪರ್ಧೆಯಲ್ಲಿ 10 ತಂಡಗಳು ಸಂಶೋಧನೆ, ಕರಡು ರಚನೆ, ವಾದ-ಪ್ರತಿವಾದ ಕೌಶಲ್ಯಗಳನ್ನು ಪರೀಕ್ಷಿಸುವ ಬೌದ್ಧಿಕ ಸುತ್ತುಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.

ಪ್ರೊ-ವೈಸ್ ಚಾನ್ಸಲರ್ ಡಾ. ಮುದ್ದು ವಿನಯ್, ವಿಭಾಗದ ಮುಖ್ಯಸ್ಥರಾದ ಡಾ. ರಾಜಶ್ರೀ ಪಾಟೀಲ್ ಮಾರ್ಗದರ್ಶನದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಯಿತು. ಅವರ ಮಾರ್ಗದರ್ಶನದಿಂದ ಸ್ಪರ್ಧೆ ಸುಗಮವಾಗಿ ನಡೆಯಿತು. ಸಂಸ್ಥೆಯ ಶೈಕ್ಷಣಿಕ ವಾತಾವರಣಕ್ಕೆ ಈ ಸ್ಪರ್ಧೆ ಮೆರಗು ತಂದಿತು.

ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್, ಡೀನ್ ಡಾ. ಸಂದೀಪ್ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಅನಕು ನ್ಯಾಯಾಲಯ ಸ್ಪರ್ಧೆಗಳ ಮಹತ್ವವನ್ನು ವಿವರಿಸಿ, ಈ ಸ್ಪರ್ಧೆ, ಸಮರ್ಥ, ಆತ್ಮವಿಶ್ವಾಸಿ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಕಾನೂನು ವೃತ್ತಿಪರರನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಂಶೋಧನಾ ಶ್ರೇಷ್ಠತೆ, ನೈತಿಕ ವಕಾಲತ್ತು ಮತ್ತು ವೃತ್ತಿಪರ ಅಖಂಡತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾನೂನು ಕ್ಷೇತ್ರದ ಗಣ್ಯರು ಮತ್ತು ಅಕಾಡೆಮಿಕ್ ವಲಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Sri Jagadguru Renukacharya Jayanti Yugamanotsava on March 1st




ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 1ರಂದು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಇದರ ಕುರಿತು ಅಖಿಲ-ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಬಿ. ಮುಕ್ತಂಬಾ, ನಗರ ಅಧ್ಯಕ್ಷರಾದ ನವೀನ್ ಕುಮಾರ್ ಬಿಡದಿರವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮನೋಹರ್ ಅಬ್ಬಿಗೆರೆರವರು ಮಾತನಾಡಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಹಾನ್ ಶರಣರು, ಗುರುಶೇಷ್ಠರು. ಕನ್ನಡ ಭಾಷೆಯಲ್ಲಿ ಬದುಕು ಮತ್ತು ಪುರಾಣ ತತ್ವ ಸಿದ್ದಾಂತಗಳ ಹಲವು ಪುರಾಣ, ಗ್ರಂಥಗಳು ಇದೆ. ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಗದ್ದುರು ಶ್ರೀ ರೇಣುಕಾಚಾರ್ಯ ಜಯಂತಿಯನ್ವು ಅಚರಿಸುತ್ತಿದ್ದಾರೆ.

ಶ್ರೀ ಜಗದ್ಗುರು ಶ್ರೀ ರೇಣಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಮಾರ್ಚ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11ಗಂಟೆಗೆ ಆಯೋಜಿಸಲಾಗಿದೆ.
ಉದ್ಘಾಟನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ದಿವ್ಯಸಾನಿಧ್ಯ ರಂಭಾಪುರಿ ಶಾಖ ಹಿರೇಮಠದ ಪೂಜ್ಯ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ , ಅಧ್ಯಕ್ಷತೆ ಶಾಸಕರಾದ ಉದಯ್ ಗರುಡಚಾರ್ ರವರು ಉದ್ಘಾಟನೆ ನೇರವೆರಿಸುವರು.

ವಿಶೇಷ ಆಹ್ವಾನಿತರಾಗಿ ವೀರಶೈವ-ಲಿಂಗಾಯಿತ ಸಮನ್ವಯ ವೇದಿಕೆ ಸಂಚಾಲಕರಾದ ಪಾಲನೇತ್ರ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ, ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ, ಬೆಂಗಳೂರುನಗರದ ಅಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್ ರವರು, ಯುವ ಘಟಕದ ಹರೀಶ್ ಮಹೇಶ್ ರವರು, ಭಾಗವಹಿಸಲಿದ್ದಾರೆ.

ಬೆಳಗ್ಗೆ 10ಗಂಟೆಗೆ ಹಡ್ಸನ್ ಸರ್ಕಲ್ ನಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆಯಲ್ಲಿ ರವೀಂದ್ರ ಕಲಾಕ್ಷೇತ್ರದವರಗೆ ಮೆರವಣಿಗೆ ಸಾಗಲಿದೆ, ವೀರಗಾಸೆ, ಕಂಸಾಳೆ, ತಮಟೆವಾದ್ಯ, ನಾದಸ್ವರ ವಿವಿಧ ಕಲಾತಂಡಗಳು ಭಾಗವಹಿಸಲಿದೆ.

ಸಾಹಿತಿ ಪ್ರಶಾಂತ ರಿಪ್ಬನಪೇಟೆರವರಿಂದ ಉಪನ್ಯಾಸ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಗದ್ದುರು ಶ್ರೀ ರೇಣುಕಾಚಾರ್ಯ ಆದರ್ಶ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಸಮುದಾಯ ಪಾಲಿಸಬೇಕು ಆಗ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ.
ಮಾರ್ಚ್ 1ರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ವಿನಂತಿ ಎಂದು ಹೇಳಿದರು.

ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ,ಮತ್ತು ವೀರಶೈವ ಲಿಂಗಾಯಿತ ಸಮಾಜದ ಮುಖಂಡರುಗಳಾದ ಗುರುಸ್ವಾಮಿ, ಬಸವರಾಜಣ್ಣ, ಅಬ್ಬಿಗೆರೆ ಮಹೇಶ್ ಪಚ್ಚಿ, ಚಿದಾನಂದ ಮಠದ್, ಹುರುಳಿ ಚಿಕ್ಕನಹಳ್ಳಿ ಮಲ್ಲಿಕಾರ್ಜುನ ಸ್ವಾಮಿರವರು ಭಾಗವಹಿಸಿದ್ದರು.

ತುಪ್ಪದಲ್ಲಿದೆ ಈ ಔಷದೀಯ ಗುಣ

ತುಪ್ಪದಲ್ಲಿದೆ ಈ ಔಷದೀಯ ಗುಣ

This medicinal property is found in ghee.




ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ.? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ.

ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಈ ಕ್ರಮವನ್ನು ಅನುಸರಿಸಬಹುದು.

ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ

ಕೊಪ್ಪಳ ಮತ್ತು ಗಂಗಾವತಿ: ಅನಧಿಕೃತ ಹೋಂಸ್ಟೇ, ರೆಸಾರ್ಟಗಳ ಮೇಲೆ ಕಾನೂನು ಕ್ರಮ

ಕೊಪ್ಪಳ ಮತ್ತು ಗಂಗಾವತಿ: ಅನಧಿಕೃತ ಹೋಂಸ್ಟೇ, ರೆಸಾರ್ಟಗಳ ಮೇಲೆ ಕಾನೂನು ಕ್ರಮ

Koppal and Gangavathi: Legal action against unauthorized homestays, resorts

ಕೊಪ್ಪಳ ಫೆಬ್ರುವರಿ 27 (ಕರ್ನಾಟಕ ವಾರ್ತೆ): ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ಬರುವ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
 ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ 10 ಮತ್ತು ಗಂಗಾವತಿ 3 ಸೇರಿ ಒಟ್ಟು 13 ಅಧಿಕೃತ ರೆಸಾರ್ಟಗಳಿವೆ. ಅದೇ ರೀತಿ ಕೊಪ್ಪಳ ತಾಲ್ಲೂಕಿನಲ್ಲಿ 47 ಹೋಂಸ್ಟೇ ಹಾಗೂ 40 ರೆಸಾರ್ಟಗಳು ಮತ್ತು ಗಂಗಾವತಿ ತಾಲ್ಲೂಕಿನ 6 ಹೋಂಸ್ಟೇ ಹಾಗೂ 43 ರೆಸಾರ್ಟಗಳು ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 53 ಹೋಂಸ್ಟೇಗಳು & 83 ರೆಸಾರ್ಟಗಳು ಅನಧಿಕೃತವಾಗಿದ್ದು, ಈ ಎಲ್ಲಾ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳಿಗೆ ಸೂಕ್ತ ಕ್ರಮ ಕೈಗೋಳ್ಳಲಾಗಿದೆ.
 ಕೊಪ್ಪಳ ತಾಲ್ಲೂಕಿನ 28 ಹಾಗೂ ಗಂಗಾವತಿ 87 ಸೇರಿ ಒಟ್ಟು 105 ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 37 ಹೋಂಸ್ಟೇ ಮತ್ತು ರೆಸಾರ್ಟಗಳ ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ ರದ್ದು ಪಡಿಸಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗಂಗಾವತಿ ತಾಲ್ಲೂಕಿನ 5 ರೆಸಾರ್ಟಗಳನ್ನು ತೆರವುಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 5 ಮತ್ತು ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ, ರೆಸಾರ್ಟಗಳಿಗೆ ಸಂಬಂಧಿಸಿದಂತೆ 25 ಪ್ರಕರಣಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುತ್ತವೆ.
 ಕೊಪ್ಪಳ ತಾಲ್ಲೂಕಿನ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ (ಎನ್.ಒ.ಸಿ) ರದ್ದಿನೊಂದಿಗೆ ಒಟ್ಟು 40 ರೆಸಾರ್ಟಗಳನ್ನು ಮತ್ತು ಒಟ್ಟು 4 ಹೋಂಸ್ಟೇಗಳನ್ನು ಬಂದ್ ಮಾಡಿ ಸೀಜ್ ಮಾಡಲಾಗಿದೆ.
 ಮೇಲೆ ವಿವರಿಸಿರುವಂತೆ ಅನಧಿಕೃತವಾಗಿ ನಿರ್ಮಿಸಿದ ಕೊಪ್ಪಳ ತಾಲ್ಲೂಕಿನ ಒಟ್ಟು 49 ಹೋಂಸ್ಟೇ & ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ರದ್ದುಪಡಿಸಿ ಸೀಜ್ ಮಾಡಲಾಗಿರುತ್ತದೆ. ಗಂಗಾವತಿ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 87 ಹೋಂಸ್ಟೇ, ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿರುತ್ತದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ 5 ರೆಸಾರ್ಟಗಳನ್ನು ಅರಣ್ಯ ಇಲಾಖೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲಾಗಿರುತ್ತದೆ.
 ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ & ರೆಸಾರ್ಟ ಹಾಗೂ ಕೊಪ್ಪಳ ತಾಲ್ಲೂಕಿನ 2 ಹೋಂಸ್ಟೇ ಮತ್ತು 3 ರೆಸಾರ್ಟಗಳು ಸೇರಿ ಒಟ್ಟಾರೆ 25 ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ನಿಯಾಮಾನುಸಾರ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿಯಿಂದ ಖಾಸಗಿ ಸ್ವತ್ತಿನಲ್ಲಿ ಮದರಸಾ ಚಟುವಟಿಕೆ: ಕೊತ್ತನೂರು ಪೊಲೀಸ್ ಠಾಣೆಗೆ ದೂರು

ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿಯಿಂದ ಖಾಸಗಿ ಸ್ವತ್ತಿನಲ್ಲಿ ಮದರಸಾ ಚಟುವಟಿಕೆ: ಕೊತ್ತನೂರು ಪೊಲೀಸ್ ಠಾಣೆಗೆ ದೂರು

Madrasa activity on private property by Jamia Muhammadiya Education Society: Complaint to Kothanur Police Station





ಬೆಂಗಳೂರು,ಫೆ.27: ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿ ಮತ್ತು ಜಾಮಿಯಾ ಮಹಮ್ಮದೀಯ ಮನ್ಸೂರ ಎಂಬ ಸಂಸ್ಥೆಗಳು ಥಣಿಸಂದ್ರ ಗ್ರಾಮದ ಕೆ ಆರ್ ಪುರಂ ಹೋಬಳಿಯ ತಮ್ಮ ಜಾಗದಲ್ಲಿ ಮಾರ್ಚ್ 1 ರಂದು ಅನುಮತಿ ಪಡೆಯದೇ ಮದರಸ ಕಾರ್ಯಕ್ರಮ ನಡೆಸಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಜಾಗದ ಮಾಲೀಕರಾದ ಮಸೀಯ ಅಹಮ್ಮದ್ ಬಿನ್ ದಸ್ತಗಿರ್ ಎಂಬುವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಂಸ್ಥೆಯ ಅರ್ಶದ್ ಮುಕ್ತಾರ್ ಅವರನ್ನು ಮದರಸಾ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅವರು, ಏರು ಧ್ವನಿಯಲ್ಲಿ ನಾವು ಕಾರ್ಯಕ್ರಮವನ್ನು ಮಾಡೇ ಮಾಡುತ್ತೇವೆ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ತಮಗೆ ದಮಕಿ ಹಾಕಿದ್ದಾರೆ. ಇದರಿಂದ ನನಗೆ ಆತಂಕವುಂಟಾಗಿದೆ. 1.16 ಎಕರೆಯ ಈ ಸ್ವತ್ತಿನಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು 2022 ರಲ್ಲೇ ನ್ಯಾಯಾಲಯ ಇಂಜೆಕ್ಷನ್ ಆದೇಶ ಹೊರಡಿಸಿದೆ. ನನ್ನ ಮತ್ತು ನಮ್ಮ ಕುಟುಂಬದ ತಂಟೆಗೆ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಜೊತೆಗೆ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮಸೀಯ ಅಹಮ್ಮದ್ ಅವರು ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

“ಏಳುಬೆಂಚಿಯಲ್ಲಿ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಸಾಂಸ್ಕೃತಿಕ

ಏಳುಬೆಂಚಿಯಲ್ಲಿ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಸಾಂಸ್ಕೃತಿಕ

Elehubenchi has a cultural program of mythological recitation, folk songs and pantomime."


ಕುರುಗೋಡು:-ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಫೆಬ್ರವರಿ 27 ರಂದು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಲಾವದರನ್ನು ಗುರುತಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರದರ್ಶನ ನೀಡಿ ಮಕ್ಕಳಿಗೆ ಕಲೆಗಳನ್ನು ಉಣ ಬಡಿಸುವ ಕೆಲಸ ಪ್ರಸ್ತುತ ಮಾಡುವುದು ನಮಗೆ ಬಹಳಷ್ಟು ಸಂತೋಷವಾಗುತ್ತದೆ ಎಂದು ತಬಲಾ ಬಾರಿಸುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ತಬಲಾ ವಾದಕರಾದ ಶ್ರೀ.ಚಾಗೆ ವರಬಸಪ್ಪ ಉದ್ಘಾಕರ ನುಡಿಯನ್ನು ಮಾತಾಡಿದರು.

ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಿವು ಮೂಡಿಸುವ ಕೆಲಸ ಪ್ರತಿಯೋಬ್ಬರ ಜವಾಬ್ದಾರಿ ಆಗಬೇಕು ತಮ್ಮ ತಮ್ಮ ಆಸಕ್ತಿ ಅನುಸರವಾಗಿ ಮಕ್ಕಳು ಭಾಗವಹಿಸುತ್ತಾ ಹೋಗುತ್ತಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಶ್ರೀ ಎಸ್ ಎರ್ರಿಸ್ವಾಮಿ ಮಾತಾಡಿದರು.

ಹಾಡುಗಾರಿಕೆ, ಕುಣಿತ, ನಾಟಕ ,ನೃತ್ಯ ಇಂದಿನ ಮಕ್ಕಳಿಗೆ ಅದರ ಅರಿವು ಇಲ್ಲದಂತೆ ಆಗಿದೆ ಅವುಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಕೆ.ಹೇಮೇಶ್ವರ ಮಾಡುತ್ತಿದ್ದಾರೆ ಎಂದು ಬಯಲಾಟ ಹಾರ್ಮೂನಿಯಂ ಮಾಸ್ತರ್ ಶ್ರೀ. ಮಂಜುನಾಥ್ ಹೇಳಿದರು.

ನಮ್ಮ ಏಳುಬೆಂಚಿ ಗ್ರಾಮದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತೇವೆ.ಇಂದು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಚಯ ಮತ್ತು ಗ್ರಾಮೀಣ ಕಲೆಗಳನ್ನು ನೋಡುವಂತಹ ಸೌಭಾಗ್ಯ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ಜಿ.ಬಸವನಗೌಡ ಹೇಳಿದರು.

ನಮ್ಮ ಏಳುಬೆಂಚಿ ಗ್ರಾಮ ಎಂಬುದು ಸಪ್ತಸ್ವರಗಳು ನಾದಮಯ ನಮ್ಮ ಗ್ರಾಮ ಕಲೆಗಳ ತವರೂರು ನಮ್ಮ ಊರಿನಲ್ಲಿ ಅನೇಕ ಕಲಾವಿದರನ್ನು, ಸಾಹಿತ್ಯಗಳನ್ನು, ಒಳಗೊಂಡಿರುವ ನಮ್ಮ ಗ್ರಾಮ ಅದಕ್ಕಾಗಿ ನಮ್ಮ ಊರಿನಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ಕೆ.ಹೇಮೇಶ್ವರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಕಲೆಯನ್ನು ಬೆಳೆಸುತ್ತಿದ್ದಾರೆ ಎಂದು ಸರಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕರಾದ ಶ್ರೀ. ಕೆ ಮುದಿಯಪ್ಪ ಮಾತಾಡಿದರು.

ಇಂದಿನ ಮಕ್ಕಳು ಜಂಗಮವಾಣಿಗೆ ಅಥವಾ ಮೊಬೈಲ್ ಫೋನ್ಗೆ ಬಲಿಯಾಗಿದ್ದಾರೆ.ಅವರಿಗೆ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮನೆಯಲ್ಲಿ ತಂದೆ ತಾಯಿ ಮತ್ತು ಶಾಲೆಗಳಲ್ಲಿ ಗುರುಗಳು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ವೈ.ನಾಗೇಶ ಶಾಸ್ತ್ರಿ ಸಂಸ್ಥೆ ಸಂಸ್ಥಾಪಕರಾದ ಶ್ರೀ. ನಯನಗೌಡ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:- ” ಪುರಾಣ ವಾಚನ :- ಶ್ರೀ ಕರುಣಾಮೂರ್ತಿ ಶಾಸ್ತ್ರಿಗಳು ಮತ್ತು ತಂಡದವರು” ಜನಪದ ಗೀತೆಗಳು:- ಶ್ರೀ ಮಂಜುನಾಥ ಮತ್ತು ತಂಡದವರು” ಮೂಕಾಭಿನಯ:-ಶ್ರೀ. ಕು.ಉದಯಕುಮಾರ್ ಮತ್ತು ತಂಡದವರು”ನೇರವೇರಿಸಿದರು.

ಕಾರ್ಯಕ್ರಮದಲ್ಲಿ:-ಅಂಗಡಿ ಶ್ರೀ.ದೊಡ್ಡಬಸವನಗೌಡ,ಶ್ರೀ ದೊಡ್ಡಬಸಯ್ಯಸ್ವಾಮಿ,ಶ್ರೀ. ಚಂದ್ರಶೇಖರ,ಶ್ರೀ ಭರ್ಮಪ್ಪ,ಶ್ರೀ. ಸುಧಾಕರ್, ಶಿಕ್ಷಕರಾದ ಶ್ರೀ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಗ ಶ್ರೀ ಗುರುಮಹಾಂತೇಶ. ಬಿ ಕಾರ್ಯದರ್ಶಿ ಕುರುಬರ ಹೇಮೇಶ್ವರ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮತ್ತು ಶಿಕ್ಷಕರು ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ನಿರೂಪಣೆ:- ಕುರುಬರ ಹೇಮೇಶ್ವರ,ಸ್ವಾಗತ ಶ್ರೀ.ಪಂಪಾಣ್ಣ, ಶ್ರೀ ಎಸ್ ಎರ್ರಿಸ್ವಾಮಿ ವಂದಿಸಿದರು.

ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಯೋದಿಲ್ಲ :  ಮಹಿಳೆಯರ ಆಕ್ರೋಶ

ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಯೋದಿಲ್ಲ :  ಮಹಿಳೆಯರ ಆಕ್ರೋಶ

Today's governments are not trying to push our children into ignorance: Women's outrage




ಕೊಪ್ಪಳ:ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ಈಗ ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ. – ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯ ಆಕ್ರೋಶ

ಗುರುವಾರ ಸಂಜೆ ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಶಾಲೆಯನ್ನು ಮುಚ್ಚುವುದನ್ನ ಖಂಡಿಸಿ AIDSO ಮತ್ತು ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಸಮಿತಿ ನೇತೃತ್ವದಲ್ಲಿ ಮಾರುತೇಶ್ವರ ಗುಡಿ ಹತ್ತಿರ ಊರಿನ ಸಾರ್ವಜನಿಕರ ಪ್ರತಿಭಟನಾ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ AIDYO ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ ಕೊಪ್ಪಳ ಇಂದು ಭೀಕರ ಪರಿಸ್ಥಿಯಲ್ಲಿದೆ. ಒಂದ್ ಕಡೆ ಬೇಡದೆ ಇರುವ ಮಾಲಿನ್ಯ ಕಾರಕ ಕಾರ್ಖಾನೆಗಳನ್ನು ತೊಲಗಿಸುವ ಹೋರಾಟ ನಡೆಯುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ರಾಜ್ಯ ಸರಕಾರ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ನಮ್ಮ ಮಾನ್ಯ ಶಾಸಕರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ಕೊಪ್ಪಳದಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸುತ್ತಲು ಬರುವ ಅನೇಕ ಶಾಲೆಗಳನ್ನು ಮುಚ್ಚುವ ಈ ಬಡವರ ವಿರೋಧಿ ಯೋಜನೆಯನ್ನು ವಿರೋಧಿಸಿ ಕೊಪ್ಪಳದ ಜನರಾದ ನಾವು ಒಗ್ಗಟ್ಟಿನಿಂದ ಈ ಹೋರಾಟವನ್ನು ಬೆಳೆಸುವ ಅವಶ್ಯಕತೆಯಿದೆ ಎಂದರು.


ಜಾಗತೀಕರಣ ಉದಾರೀಕರಣ ಖಾಸಗೀಕರಣದ ನೀತಿಗಳ ಅನುಷ್ಠಾನವೇ ಈ ಕೆಪಿಎಸ್ ಮ್ಯಾಗ್ನೆಟ್ ADB ಬ್ಯಾಂಕ್ ನಿಂದ ಸಾಲ ತಂದು ಈ ಯೋಜನೆ ತರುತ್ತಿದ್ದಾರೆ. ಹಾಗೆ ನಮ್ಮ ಕಲ್ಯಾಣ ಕರ್ನಾಟಕ ಜನರ ಅಭಿವೃದ್ಧಿಗಾಗಿ ಮೀಸಲಿರುವ
ಕೆ.ಕೆ ಆರ್.ಡಿ.ಬಿ ಹಣವನ್ನು ನಮ್ಮ ಭಾಗದ ಶಾಲೆಗಳನ್ನು ಮುಚ್ಚುವುದಕ್ಕೆ ಬಳಸುತ್ತಿರುವುದು ನೋವಿನ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶದ ಮೂಲಕ ಪ್ರತಿರೋಧವನ್ನು ಬೆಳೆಸೋಣ ಎಂದರು.
ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯೊಬ್ಬರು ಮಾತನಾಡಿ ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಇದು ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ, ನಮ್ಮ ಶಾಲೆ ನಮ್ಮ ಹಕ್ಕು, ನಮ್ಮೂರಲ್ಲೇ ನಾವು ನಮ್ಮ ಮಕ್ಕಳನ್ನ ಓಡಿಸೋದು ಎಂದ್ರು ಆಕ್ರೋಶ ವ್ಯಕ್ತಪಡಿಸಿದರು.
AIDSO ವಿದ್ಯಾರ್ಥಿ ಸಂಘಟನೆ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರ್ಚ್ 14 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಪ್ರತಿರೋಧ ಸಮಾವೇಶದಲ್ಲಿ ಕೊಪ್ಪಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ AIDSO ಸಂಘಟನಾಕಾರರಾದ ಪ್ರದ್ದೀಪ್, AIDYO ಸದಸ್ಯರಾದ ಸುಭಾನ್, AIMSS ಕಾರ್ಯದರ್ಶಿ ಶಾರದಾ ಗಡ್ಡಿ, ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಚೆನ್ನವೀರಯ್ಯ ದಮ್ಮೂರು, ಉಪಾಧ್ಯಕ್ಷರಾದ – ಮಾರಿತೇಶ್ವರ ಕುರುಬರ ಸದಸ್ಯರುಗಳಾದ ರಾಮಣ್ಣ ಬೆಳಿವಿನಾಳ, ಗವಿಸಿದ್ದಪ್ಪ ಹಲಗಿ, ಶರಣಪ್ಪ ಮಡಿವಾಳ, ಯಮನೂರಪ್ಪ ಹಳ್ಳಿಕೇರಿ, ಗವಿಸಿದಪ್ಪ ಕುರುಬರ ಸಂಜೀವಪ್ಪ ಚೌದ್ರಿ, ಪವಿತ್ರ ಬೆಳವಿನಾಳ್, ರುದ್ರಮ್ಮ, ಲಲಿತವ್ವ ಗಡಿಗಿ, ನಿರ್ಮಲ ಹಿರೇಮಠ, ನಿರ್ಮಲ ಸೋಂಪುರ, ಜ್ಯೋತಿ ಮುತ್ತಾಳ್ ಸೇರಿದಂತೆ ಮುಂತಾದ ಊರಿನ ಹಿರಿಯರು, ಪೋಷಕರು, ಮಹಿಳೆಯರು ಹಾಗೂ ರೈತ ಮುಖಂಡರು ಸೇರಿ 400ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.