
Dr. Ishwara Shi.Savadi appointed as administrator of government hospital.ಸರ್ಕಾರಿ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ಡಾ.ಈಶ್ವರ ಶಿ.ಸವಡಿ ನಿಯೋಜನೆ.
ಜಾಹೀರಾತು


ಗಂಗಾವತಿ:ಸಾರ್ವಜನಿಕರ ಹಿತಾಸಕ್ತಿ, ಆಡಳಿತಾತ್ಮಕ ದೃಷ್ಟಿಯಿಂದ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾಗಿರುವ ಡಾ. ಈಶ್ವರ ಶಿ. ಸವಡಿ ಅವರನ್ನು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ನಿಯೋಜಿಸುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್

ಆದೇಶಿಸಿದ್ದಾರೆ.ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜ್, ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಡಾ.ಈಶ್ವರ ಶಿ , ಸವಡಿ ಅವರನ್ನು ಉಪವಿಭಾಗ ಆಸ್ಪತ್ರೆಯ ವರ್ಗಾಯಿಸಲಾಗಿದೆ.ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ತಾತ್ಕಾಲಿಕವಾಗಿ ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿ, ನಿಯೋಜಿತ ತಜ್ಞವೈದ್ಯಾಧಿಕಾರಿಗೆ ಉಪ ವಿಭಾಗ ಆಸ್ಪತ್ರೆಯ ಆಡಳಿತ ಪ್ರಭಾರವನ್ನು ವಹಿಸಿ ಡಿಎಚ್ಒ ಆದೇಶ ಮಾಡಿದ್ದಾರೆ.




