Dr. Ishwara Shi.Savadi appointed as administrator of government hospital.
ಸರ್ಕಾರಿ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ಡಾ.ಈಶ್ವರ ಶಿ.ಸವಡಿ ನಿಯೋಜನೆ.
ಗಂಗಾವತಿ:ಸಾರ್ವಜನಿಕರ ಹಿತಾಸಕ್ತಿ, ಆಡಳಿತಾತ್ಮಕ ದೃಷ್ಟಿಯಿಂದ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾಗಿರುವ ಡಾ. ಈಶ್ವರ ಶಿ. ಸವಡಿ ಅವರನ್ನು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ನಿಯೋಜಿಸುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್
ಆದೇಶಿಸಿದ್ದಾರೆ.ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜ್, ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಡಾ.ಈಶ್ವರ ಶಿ , ಸವಡಿ ಅವರನ್ನು ಉಪವಿಭಾಗ ಆಸ್ಪತ್ರೆಯ ವರ್ಗಾಯಿಸಲಾಗಿದೆ.ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ತಾತ್ಕಾಲಿಕವಾಗಿ ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿ, ನಿಯೋಜಿತ ತಜ್ಞವೈದ್ಯಾಧಿಕಾರಿಗೆ ಉಪ ವಿಭಾಗ ಆಸ್ಪತ್ರೆಯ ಆಡಳಿತ ಪ್ರಭಾರವನ್ನು ವಹಿಸಿ ಡಿಎಚ್‌ಒ ಆದೇಶ ಮಾಡಿದ್ದಾರೆ.
Distribution of rights to residents of Jaibhim, Gangavathi: F. Raghavendra welcomes efforts: Bhardwaj
ಗಂಗಾವತಿ: ಕಳೆದ ೨೫-೩೦ ವರ್ಷಗಳಿಂದ ಗಂಗಾವತಿ ನಗರದಜೈಭೀಮ್‌ನಗರದ ನಿವಾಸಿಗಳು ಯಾವುದೇ ಹಕ್ಕುಪತ್ರವಿಲ್ಲದೇ
ಮೂಲಸೌಕರ್ಯಗಳಿಲ್ಲದೇ ನಿರ್ಲಕ್ಷö್ಯಕ್ಕೆ ಒಳಗಾಗಿದ್ದರು. ಈನಿವಾಸಿಗಳ ಗೋಳು ಮುಗಿಲುಮುಟ್ಟಿತ್ತು. ಅವರ ಪರವಾಗಿ
ಕ್ರಾಂತಿಚಕ್ರ ಬಳಗ ಸಂಘಟನೆಯು ವಿವಿಧ ಸಂಘಟನೆಗಳೊಂದಿಗೆಹಾಗೂ ಕೆಲವು ದಲಿತ ಮುಖಂಡರೊAದಿಗೆ ಈ ಹಿಂದೆಯೇ ಹೋರಾಟ
ಮಾಡಿತ್ತು. ಆದರೆ ಈಗಿನ ನಗರಸಭೆ ಸದಸ್ಯ ಎಫ್.
ರಾಘವೇಂದ್ರರವರ ಹೋರಾಟದ ಪರಿಶ್ರಮ ಜೈಭೀಮ್ನಿವಾಸಿಗಳಿಗೆನ್ಯಾಯಒದಗಿಸಿದಂತಾಗಿದೆ. ಎಫ್. ರಾಘವೇಂದ್ರರವರ ಪ್ರಾಮಾಣಿಕ
ಹೋರಾಟಕ್ಕೆ ಜಯ ಸಿಕ್ಕಿರುವುದು ಅತೀವ ಸಂತಸ ತಂದಿದೆ ಎಂದುಕ್ರಾಂತಿ ಚಕ್ರ ಬಳಗದ ಅಧ್ಯಕ್ಷರಾದ ಭಾರಧ್ವಾಜ್ ಹರ್ಷವ್ಯಕ್ತಪಡಿಸಿದರು.
ಅವರು ಇಂದು ತಮ್ಮ ಕ್ರಾಂತಿಚಕ್ರ ಬಳಗ ಕಾರ್ಯಾಲಯದಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದರು. ಎಫ್.ರಾಘವೇಂದ್ರರವರು ಉತ್ತಮ ಜನನಾಯಕನಾಗಿದ್ದು, ಜೈಭೀಮ್
ನಗರದ ನಿವಾಸಿಗಳ ಪರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿಮುಖ್ಯಮಂತ್ರಿಗಳು ಹಾಗೂ ಸಂಬAಧಪಟ್ಟ ಸಚಿವರ ಜೊತೆ
ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಅಧಿಕಾರಿಗಳ ಸಹಕಾರದಿಂದ ಈ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವಲ್ಲಿ
ಯಶಸ್ವಿಯಾಗಿದ್ದಾರೆ. ಮುಂಬರುವ ನಗರಸಭೆ
ಚುನಾವಣೆಯಲ್ಲಿಯೂ ಜನರು ಅವರನ್ನು ಬೆಂಬಲಿಸುವಂತೆ ಕರೆನೀಡಿದರು.
ಮುಂದಿನ ಅವಧಿಯಲ್ಲಿಯೂ ಎಫ್. ರಾಘವೇಂದ್ರ ಅವರುಸಾರ್ವಜನಿಕರ ಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಗಂಗಾವತಿನಗರಕ್ಕೆ ಮಾದರಿ ನಗರಸಭಾ ಸದಸ್ಯರಾಗಲಿ, ಅವರ ರಾಜಕೀಯ
ಭವಿಷ್ಯ ಉಜ್ವಲವಾಗಿ ಬೆಳೆಯಲಿ ಎಂದು ಆಶಿಸಿದರು.
ಕೊಪ್ಪಳ ಜನವರಿ 31 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಹಾಗೂ ಮಹಾತ್ಮ ಗಾಂಧಿಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರದಂದು ಮಹಾತ್ಮ ಗಾಂಧಿಜಿಯವರ ಸೇವಾ ಮತ್ತು ಶ್ರಮದ ಜ್ಞಾಪಕಾರ್ಥವಾಗಿ ವಿಶ್ವ ಕುಷ್ಠರೋಗ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕುಷ್ಠರೋಗವು ಮೈಕ್ರೋಬ್ಯಾಕ್ಟೀಯಂ ಲೆಪ್ರೆ ಎಂಬ ಬ್ಯಾಕ್ಟೀರಿಯ ರೋಗಾಣುವಿನಿಂದ ಖಾಯಿಲೆಯಿರುವ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಆಧಾರದ ಮೇಲೆ 2 ರಿಂದ 20 ವರ್ಷಗಳ ಕಾಲಾವಧಿ ಸಮಯ ತೆಗೆದುಕೊಳ್ಳಬಹುದು. ಕುಷ್ಠರೋಗವು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುವ ಖಾಯಿಲೆ ಆಗಿರುತ್ತದೆ. ಚರ್ಮದ ಮೇಲೆ ತಿಳಿ-ಬಿಳಿ ತಾಮ್ರ ವರ್ಣದ ಮುಖ್ಯವಾಗಿ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬರುತ್ತದೆ. ಈ ಮಚ್ಚೆಗಳಲ್ಲಿ ಬೆವರುವಿಕೆ ಮತ್ತು ಕಾಲಕ್ರಮೇಣ ಕೂದಲು ಬೆಳೆಯದೇ ಇರುವುದು ಗಮನಾರ್ಹವಾಗಿರುತ್ತದೆ. ನರಗಳಲ್ಲಿ ಉರಿಯೂತ ಉಂಟಾಗಿ ನರಗಳು ದೌರ್ಬಲ್ಯಗೊಂಡು ಕ್ರಮೇಣ ಕೈ ಕಾಲುಗಳಲ್ಲಿ ಅಂಗವೈಕಲ್ಯವನ್ನುಂಟು ಮಾಡಬಹುದು. ಕುಷ್ಠರೋಗದಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುವ ಮಚ್ಚೆಗಳ ಸಂಖ್ಯೆ ಮತ್ತು ನರಗಳ ಮೇಲಿನ ಪ್ರಭಾವದ ಆಧಾರದ ಮೇರೆಗೆ ಪಿ.ಬಿ ಮತ್ತು ಎಂ.ಬಿ ಎಂದು ಎರಡು ವಿಧಗಳಿರುತ್ತವೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಟರೋಗಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿರುತ್ತದೆ. ಪಿ.ಬಿ ಖಾಯಿಲೆಗೆ ಆರು ತಿಂಗಳಿನವರೆಗೆ ಮತ್ತು ಎಂ.ಬಿ ಖಾಯಿಲೆಗೆ ಒಂದು ವರ್ಷದ ಅವಧಿಯವರೆಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಂಗವೈಕಲ್ಯ ಹೊಂದಿದ ರೋಗಿಗಳಿಗೆ ಮರು ಚಿಕಿತ್ಸಾ ಶಸ್ತ್ರಚಿಕಿತ್ಸೆಯನ್ನು (ಆರ್.ಸಿ,) ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿನ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಏಪ್ರೀಲ್-2025 ರಿಂದ ಡಿಸೆಂಬರ್-2025 ರವರೆಗೆ ಒಟ್ಟು 88 ಹೊಸ ಪ್ರಕರಣಗಳು ಪತ್ತೆಹಚ್ಚಲಾಗಿದ್ದು, ಎಲ್ಲರಿಗೂ ಎಂ.ಡಿ.ಟಿ ಚಿಕಿತ್ಸೆಯನ್ನು ನೀಡಲಾಗಿರುತ್ತದೆ. ವಿಶೇಷವಾಗಿ 2025ರ ನವೆಂಬರ್ 24 ರಿಂದ 2025ರ ಡಿಸೆಂಬರ್ 19 ರವರೆಗೆ ಜಿಲ್ಲೆಯಲ್ಲಿ “ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ” ಹಮ್ಮಿಕೊಂಡು ಒಟ್ಟು 283 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಒಟ್ಟು 20 ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿರುತ್ತದೆ. ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು, ಪ್ರತಿಜ್ಞಾವಿಧಿಯನ್ನು ಬೋಧಿಸಿ ಈ ಸಾಲಿನ ಘೋಷ ವಾಕ್ಯ: “ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು” ಎಂಬ ಘೋಷವಾಕ್ಯದೊಂದಿಗೆ ಭೀತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ್ ಟಿ., ಜಿಲ್ಲಾ ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎ.ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಂಬಲ ಬೆಲೆಯಲ್ಲಿ ಕಡಲೇಕಾಳು ಖರೀದಿ ನೋಂದಣಿ ಕೇಂದ್ರಗಳ ಪ್ರಾರಂಭ
Registration centers for purchasing pulses at support prices to be opened
ಕೊಪ್ಪಳ ಜನವರಿ 31 (ಕರ್ನಾಟಕ ವಾರ್ತೆ): 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೇಕಾಳು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ಸಿಒ 336 ಎಂಆರ್‌ಇ 2025 ಬೆಂಗಳೂರು, ದಿನಾಂಕ:29/01/2026 ಸನ್ 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ. 5,875 ರಂತೆ ಎಫ್..ಎ.ಕ್ಯೂ. ಗುಣಮಟ್ಟದ ಕಡಲೇಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸಭೆಯನ್ನು ಜರುಗಿಸಿ, ಸಭೆಯಲ್ಲಿ ತೀರ್ಮಾನಿಸಿದಂತೆ ಎಕರೆಗೆ 4 ಕ್ವಿಂಟಾಲ್‌ನಂತೆ ಒಬ್ಬ ರೈತರಿಂದ ಗರಿಷ್ಟ್ 40 ಕ್ವಿಂಟಲ್‌ರಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಡಲೇಕಾಳು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿರುತ್ತದೆ. *ಕಡಲೇಕಾಳು ಖರೀದಿ ನೋಂದಣಿ ಕೇಂದ್ರಗಳ ವಿವರ:* ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ, ಹಿರೇಸಿಂಧೋಗಿ, ಕವಲೂರು, ಅಳವಂಡಿ, ಘಟ್ಟಿರೆಡ್ಡಿಹಾಳ ಹಾಗೂ ಬೆಟಗೇರಿ ಸೇರಿ 6 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕನಕಗಿರಿ ತಾಲ್ಲೂಕಿನ ನವಲಿ ಮತ್ತು ಕನಕಗಿರಿ, ಕುಕನೂರು ತಾಲ್ಲೂಕಿನ ಕುಕನೂರು, ಚಿಕ್ಕೆನಕೊಪ್ಪ, ಬನ್ನಿಕೊಪ್ಪ, ಮಂಗಳೂರು, ತಳಕಲ್ ಮತ್ತು ಮಂಡಲಗೇರಿ, ಯಲಬುರ್ಗಾ ತಾಲ್ಲೂಕಿನ ಯಲಬುರ್ಗಾ, ಮುಧೋಳ, ಗೆದಗೇರಿ ಮತ್ತು ತೊಂಡಿಹಾಳ ಹಾಗೂ ಕುಷ್ಟಗಿ ತಾಲ್ಲೂಕಿನ ಮೆಣೇದಾಳ(ತಾವರಗೇರೆ), ಹನುಮಸಾಗರ ಮತ್ತು ಕುಷ್ಟಗಿ, ಈ ಎಲ್ಲಾ ಕೇಂದ್ರಗಳ `ಪಿಎಸಿಎಸ್’ ಖರೀದಿ ನೋಂದಣಿ, ಖರೀದಿ ಕೇಂದ್ರ ಏಜನ್ಸಿಗಳಾಗಿರುತ್ತದೆ. *ನೋಡಲ್ ಅಧಿಕಾರಿಗಳ ವಿವರ:* ಖರೀದ ಕೇಂದ್ರಗಳ ನೋಡಲ್ ಅಧಿಕಾರಿಗಳ ವಿವರ ಇಂತಿದೆ. ಕೊಪ್ಪಳ ತಾಲ್ಲೂಕಿನ ಎಲ್ಲಾ ಖರೀದಿ ಕೇಂದ್ರಗಳಿಗೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಮೊ.ಸಂ: 9902224089, ಇವರು ನೋಡಲ್ ಅಧಿಕಾರಿಯಾಗಿದ್ದಾರೆ. ಕನಕಗಿರಿ ತಾಲ್ಲೂಕಿನ ಖರೀದಿ ಕೇಂದ್ರಗಳಿಗೆ ಕನಕಗಿರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಮೊ.ಸಂ: 9341978290, ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕುಗಳ ಖರೀದಿ ಕೇಂದ್ರಗಳಿಗೆ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೇಂದ್ರ ಕಛೇರಿ ಕುಕನೂರಿನ ಕಾರ್ಯದರ್ಶಿ ಗುರುಸ್ವಾಮಿ ಗುಡಿ ಮೊ.ಸಂ: 9972054874 ಹಾಗೂ ಕುಷ್ಟಗಿ ತಾಲ್ಲೂಕಿನ ಖರೀದಿ ಕೇಂದ್ರಗಳಿಗೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುರೇಶ ಬಿ. ತಂಗನೂರು ಮೊ.ಸಂ: 9880886909, ಇವರು ನೋಡಲ್ ಅಧಿಕಾರಿಯಾಗಿದ್ದಾರೆ. ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಾಲ್‌ರಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಕಡಲೇಕಾಳು ಉತ್ಪನ್ನವನ್ನು ಖರೀದಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ಕಡಲೇಕಾಳನ್ನು ಮಾತ್ರ ಖರೀದಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳದ ಶಾಖಾ ವ್ಯವಸ್ಥಾಪಕರ ಮೊ.ಸಂ: 8105690611 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 1ರಂದು ಜಿಲ್ಲೆಯಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆ: ನಿಷೇಧಾಜ್ಞೆ ಜಾರಿ
NMMS exam to be held in the district on February 1st: Prohibitory order imposed
ಕೊಪ್ಪಳ ಜನವರಿ 31 (ಕರ್ನಾಟಕ ವಾರ್ತೆ): ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಮುನಿರಾಬಾದ್ ಕೊಪ್ಪಳ ಇವರ ವತಿಯಿಂದ ಎನ್.ಎಂ.ಎಂ.ಎಸ್ ಪರೀಕ್ಷೆ ಫೆಬ್ರವರಿ 1 ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ. ಎನ್.ಎಂ.ಎಂ.ಎಸ್ ಪರೀಕ್ಷೆಯು ಫೆ. 1ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ 100 ಮೀಟರ್ ಅಂತರದ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ. ಮೊಬೈಲ್, ಪೇಜರ್, ಜರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಹಾಗೂ ನಿಯೋಜಿತ ಶಿಕ್ಷಕರನ್ನು ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜನವರಿ 31 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 2 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ 3ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯನ್ನು ವಿಧಾನ ಮಂಡಲ ಅಧಿವೇಶನದ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಸಭೆಯ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.5 ರಿಂದ 7 ರವರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ
Dr. Nagalakshmi Chaudhary, Chairperson of the State Women's Commission, will visit Koppal district from Feb. 5 to 7.
ಕೊಪ್ಪಳ ಜನವರಿ 31, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಫೆಬ್ರವರಿ 5 ರಿಂದ 7 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಧ್ಯಕ್ಷರು ಫೆ.5 ರಂದು ಬೆಳಿಗ್ಗೆ 6.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಕೊಪ್ಪಳದ ವಾರ್ಡ್ ನಂ.28, ಸಿದ್ದೇಶ್ವರ ನಗರದ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ, ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸುವರು. ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ ನಡೆಸುವರು. ಸಂಜೆ 6 ಗಂಟೆಗೆ ಕೊಪ್ಪಳದ ಅಲ್ಪಸಂಖ್ಯಾತ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿನಿಲಯಕ್ಕೆ ಭೇಟಿ ನೀಡುವರು. ಅಂದು ರಾತ್ರಿ ಕೊಪ್ಪಳದಲ್ಲಿಯೇ ವಾಸ್ತವ್ಯ ಮಾಡುವರು. ಫೆ.6 ರಂದು ಬೆಳಿಗ್ಗೆ 10 ಗಂಟೆಗೆ ಅಧ್ಯಕ್ಷರು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ POSH ಅಧಿನಿಯಮ 2013ರ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ 1.15 ಗಂಟೆಗೆ ಕುಷ್ಟಗಿಗೆ ತೆರಳಿ, ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ಕುಷ್ಟಗಿ ಪೊಲೀಸ್ ಠಾಣೆಗೆ ಭೇಟಿ ನೀಡುವರು. ಸಂಜೆ 5 ಗಂಟೆಗೆ ಕುಷ್ಟಗಿಯ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಕುಷ್ಟಗಿಯಿಂದ ನಿರ್ಗಮಿಸಿ ರಾತ್ರಿ 7.15 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು. ಫೆ.7 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಸ್ಪಂದನಾ ಕಾರ್ಯಕ್ರಮ ಹಾಗೂ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ವಿವಿಧ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸುವರು. ಸಂಜೆ 6.30 ಗಂಟೆಗೆ ಕೊಪ್ಪಳದಿಂದ ರೈಲಿನ ಮೂಲಕ ನಿರ್ಗಮಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.5 ರಿಂದ 7 ರವರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ
Dr. Nagalakshmi Chaudhary, Chairperson of the State Women's Commission, will visit Koppal district from Feb. 5 to 7.
ಕೊಪ್ಪಳ ಜನವರಿ 31, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಫೆಬ್ರವರಿ 5 ರಿಂದ 7 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಧ್ಯಕ್ಷರು ಫೆ.5 ರಂದು ಬೆಳಿಗ್ಗೆ 6.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಕೊಪ್ಪಳದ ವಾರ್ಡ್ ನಂ.28, ಸಿದ್ದೇಶ್ವರ ನಗರದ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ, ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸುವರು. ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ ನಡೆಸುವರು. ಸಂಜೆ 6 ಗಂಟೆಗೆ ಕೊಪ್ಪಳದ ಅಲ್ಪಸಂಖ್ಯಾತ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿನಿಲಯಕ್ಕೆ ಭೇಟಿ ನೀಡುವರು. ಅಂದು ರಾತ್ರಿ ಕೊಪ್ಪಳದಲ್ಲಿಯೇ ವಾಸ್ತವ್ಯ ಮಾಡುವರು. ಫೆ.6 ರಂದು ಬೆಳಿಗ್ಗೆ 10 ಗಂಟೆಗೆ ಅಧ್ಯಕ್ಷರು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ POSH ಅಧಿನಿಯಮ 2013ರ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ 1.15 ಗಂಟೆಗೆ ಕುಷ್ಟಗಿಗೆ ತೆರಳಿ, ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ಕುಷ್ಟಗಿ ಪೊಲೀಸ್ ಠಾಣೆಗೆ ಭೇಟಿ ನೀಡುವರು. ಸಂಜೆ 5 ಗಂಟೆಗೆ ಕುಷ್ಟಗಿಯ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಕುಷ್ಟಗಿಯಿಂದ ನಿರ್ಗಮಿಸಿ ರಾತ್ರಿ 7.15 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು. ಫೆ.7 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಸ್ಪಂದನಾ ಕಾರ್ಯಕ್ರಮ ಹಾಗೂ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ವಿವಿಧ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸುವರು. ಸಂಜೆ 6.30 ಗಂಟೆಗೆ ಕೊಪ್ಪಳದಿಂದ ರೈಲಿನ ಮೂಲಕ ನಿರ್ಗಮಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chandrashekar Mukkundi elected as Taluka President of Karnataka Working Journalists Association, Shivappa Nayak elected as Executive Director
ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ತಾಲೂಕ ಅಧ್ಯಕ್ಷರಾಗಿ ಚಂದ್ರಶೇಖರ ಮುಕ್ಕುಂದಿ , ಕಾಯ೯ದಶಿ೯ಯಾಗಿ ಶಿವಪ್ಪ ನಾಯಕ ಆಯ್ಕೆ
ಗಂಗಾವತಿ:ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ತಾಲೂಕಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಮುಕ್ಕುಂದಿ ಹಾಗೂ ಕಾಯ೯ದಶಿ೯ಯಾಗಿ ಶಿವಪ್ಪ ನಾಯಕಾರನ್ನ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹಳ್ಳಿಕೇರಿ ಹಾಗೂ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೈ.ನಾಗರಾಜ, ಸಂಘದ ರಾಜ್ಯ ಕಾಯ೯ಕಾರಣಿ ಸಮಿತಿ ವೀರಣ್ಣ ಕಳ್ಳಿಮನಿ ಅವರು ಆಯ್ಕೆ ಮಾಡಿ, ಆದೇಶ ಹೊರಡಿಸಿದ್ದಾರೆ.
ವಿಜಯ ಕನಾ೯ಟಕ ವರದಿಗಾರರಾದ ಚಂದ್ರಶೇಖರ ಮುಕ್ಕುಂದಿ ಅವರು ಸುಮಾರು 10 ವಷ೯ಗಳಿಂದ ಗಂಗಾವತಿಯಲ್ಲಿ ವಿಜಯ ಕನಾ೯ಟಕದ ತಾಲೂಕು ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದಲ್ಲಿ ಸಕ್ರೀಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿರುವುದು ಅಷ್ಟೇ ಅಲ್ಲದೆ ಕಳೆದ ಅವಧಿಯಲ್ಲಿ ಸಂಘದ ಜಿಲ್ಲಾ ಕಾಯ೯ಕಾರಣಿ ಸದಸ್ಯರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದಾರೆ.
ಅದೇ ರೀತಿಯಾಗಿ ತಾಲೂಕು ಕಾಯ೯ದಶಿ೯ಯಾಗಿ ಆಯ್ಕೆಯಾದ ಶಿವಪ್ಪ ನಾಯಕ ಅವರು ಎಟಿವಿ ಚಾನೆಲನಲ್ಲಿ ಸುಮಾರು 21 ವಷ೯ಗಳಿಂದ ಸೇವೆಯನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಸಂಘದ ಸಕ್ರೀಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿ, ಕಳೆದ ಅವಧಿಯಲ್ಲಿ ಜಿಲ್ಲಾ ಕಾಯ೯ಕಾರಣಿ ಸದಸ್ಯರಾಗಿ ಕೂಡ ಸಂಘದಲ್ಲಿ ಕೆಲಸ ಮಾಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ, ನೂತನ ಅಧ್ಯಕ್ಷ, ಕಾಯ೯ದಶಿ೯ಯಾಗಿ ಆಯ್ಕೆ ಮಾಡಲಾಗಿದೆ.
ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ-ಸೌಮ್ಯರೆಡ್ಡಿ
Jayanagar Assembly Election: Soumya Reddy confident about recount
ಬೆಂಗಳೂರು : ಜಯನಗರ ವಿಧಾನಸಭೆ ಚುನಾವಣೆಯಲ್ಲಿನ ಷಡ್ಯಂತ್ರದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ತಡೆಕೋರಿ ಪ್ರತಿಸ್ಪರ್ಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ಮರು ಎಣಿಕೆ ನಡೆಯುವ ವಿಶ್ವಾಸವಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹೇಳಿದರು.
ಅತ್ತಿಬೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನಪ್ರತಿನಿಧಿಗಳ ಕಾಲಾವಕಾಶ ಐದು ವರ್ಷವಿರುತ್ತದೆ. ಈಗಾಗಲೇ ಮೂರು ವರ್ಷ ಮುಗಿಯುತ್ತಲಿದೆ. ಹಾಗಾಗಿ ನ್ಯಾಯಾಲಯಗಳು ಒಂದು ವರುಷದೊಳಗೆ ಚುನಾವಣಾ ಅರ್ಜಿಗಳನ್ನು ವಿಲೇವಾರಿ ಮಾಡುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಚುನಾವಣೆ ತಕರಾರು ಅರ್ಜಿಗಳ ವಿಚಾರಣೆಗೆ ನ್ಯಾಯಾಲಯಗಳು ವೇಗ ನೀಡಬೇಕು. ಚುನಾವಣೆ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡಸಿ ತೀರ್ಪು ನೀಡಬೇಕು ಎಂದರು.
‘2023ರಲ್ಲಿ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ನನಗೆ ಹೆಚ್ಚು ಮತಗಳು ಬಂದಿದ್ದರು. ಅಂಚೆ ಮತ ಎಣಿಕೆಯಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಅನುಮಾನದಿಂದ ದಾವೆ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಅಂಚೆ ಮತಗಳನ್ನು ಎಣಿಸಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ. ನ್ಯಾಯದ ಮುಂದೆ ಸೋಲುವ ಭಯದಿಂದ ನಮ್ಮ ಪ್ರತಿಸ್ಪರ್ಧಿಗಳು ವಿಚಾರಣೆಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದೆ. ಸತ್ಯ ಎಂಬುದು ಎಂದಾದರೂ ಹೊರ ಬರಲೇಬೇಕು ಹಾಗಾಗಿ ಸತ್ಯ, ನ್ಯಾಯದ ಮೇಲೆ ನಂಬಿಕೆಯಿಟ್ಟು ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇನೆ’ ಎಂದರು.
ಮಹಿಳೆಯರೊಬ್ಬರು ಶಾಸಕರಾಗುತ್ತಾರೆ ಎಂಬ ಕಾರಣದಿಂದ ಷಡ್ಯಂತ್ರ ನಡೆಸಿ, ಗೋಲ್‌ಮಾಲ್ ನಡೆಸಿ ಅಂಚೆ ಮತಎಣಿಕೆಯಲ್ಲಿ ಕಡಿಮೆ ಮತ ಬರುವಂತೆ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನಿಂದಾಗಿ ಮರು ಎಣಿಕೆ ನಡೆಯುವ ವಿಶ್ವಾಸವಿದೆ. ಬಿಜೆಪಿ ಪಕ್ಷದ ಜನರ ಅಭಿವೃದ್ಧಿಯ ಬದಲಿಗೆ ಅಧಿಕಾರ ಮತ್ತು ದುಡ್ಡಿಗಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಏಕಾಏಕಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ, ಶಾಸಕರ ಖರೀದಿ ಸೇರಿದಂತೆ ಕುತಂತ್ರದಿಂದ ಹಿಂಬಾಗಿಲಲ್ಲಿ ಸರ್ಕಾರದ ರಚನೆ ಮಾಡಲು ಪ್ರಯತ್ನಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.