
ಕ್ಷಯರೋಗಿಗಳಿಗೆ ಪೌಷ್ಟಿಕಾಂಶ ಶಿಬಿರ

Nutrition camp for tuberculosis patients

ಗಂಗಾವತಿ: ರಾಜ್ಯ ಕ್ಷಯರೋಗ ನಿಯಂತ್ರಣ ಕಚೇರಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಕೊಪ್ಪಳ ತಾಲೂಕಾ ಆಸ್ಪತ್ರೆ ಮತ್ತು ತಾಲೂಕಾ ಆರೋಗ್ಯ ಕಛೇರಿ ಗಂಗಾವತಿ ಅಡಿಯಲ್ಲಿ ನಿಕ್ಷಯ ಮಿತ್ರ ಯೋಜನೆಯಡಿ ಉಪ ವಿಭಾಗೀಯ ಆಸ್ಪತ್ರೆ ಗಂಗಾವತಿ ವೈದ್ಯ ಡಾ.ಸೋಮಶೇಖರ ಕಬ್ಬೇರ್ 2 ರೋಗಿಗಳಿಗೆ ಆರು ತಿಂಗಳ ಕಾಲ ಪೌಷ್ಠಿಕಾಂಶ ಬೆಂಬಲ ನೀಡುವುದರಿಂದ ಪ್ರತಿ ಕಿಟ್‌ಗೆ ಸುಮಾರು 1000 ರೂ ನೆಲಗಡಲೆ,ಸಿರಿ ಧಾನ್ಯಗಳು ಸೇರಿದಂತೆ ಅಡುಗೆಮನೆಯಲ್ಲಿ ದೈನಂದಿನ ಅವಶ್ಯಕತೆ ಪಡಿತರ .ಇದರಿಂದ ರೋಗಿಗಳು ಪೋಷಣೆಯನ್ನು ಮಾಡುವುದು ರೋಗಿಯ ದೈಹಿಕ ಸ್ಥಿತಿ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿ ಚಿಕಿತ್ಸೆ ಒದಗಿಸುತ್ತದೆ
ಈ ರೀತಿ ಸಮಾಜದಲ್ಲಿ ದಯವಿಟ್ಟು ಅವಶ್ಯಕ ಕ್ಷಯ ರೋಗಿಗಳು ದತ್ತು ತೆಗೆದುಕೊಳ್ಳಿ ವಿನಂತಿ
ಕ್ಷಯರೋಗಿಗಳಿಗೆ ಪೌಷ್ಟಿಕಾಂಶ ಶಿಬಿರ
ಕೇಂದ್ರ ಕೊಪ್ಪಳ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಇವರ ಸಹಯೋಗದೊಂದಿಗೆ ಕ್ಷಯರೋಗಿಗಳಿಗಾಗಿ ಪೌಷ್ಟಿಕಾಂಶ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದಡಾ.ಸೋಮಶೇಖರ ಅವರು ಮಾತನಾಡಿ ಮನೆಯ ಮಕ್ಕಳೇ ಮನೆಯವರಿಗೆ ಆಹಾರ ನೀಡಲು ಯೋಚಿಸುತ್ತಿರುವಾಗ ಬಹು ಉಪಯುಕ್ತ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ನೀಡುತ್ತಿರುವುದು ದೈವದತ್ತವಾದ ಕೆಲಸವಾಗಿದೆ ಎಂದು ತಿಳಿಸುತ್ತಾ ಬಂದಂತ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ಆರೋಗ್ಯ ಇಲಾಖೆಯ ಕ್ಷಯ ರೋಗ ವಿಭಾಗದ ಮಲ್ಲಿಕಾರ್ಜುನ ಹ್ಯಾಟಿ, ರಾಘವೇಂದ್ರ ಜೋಶಿ ಭಾಗವಹಿಸಿದ್ದರು.
ಕ್ಷಯ ರೋಗ ವಿಭಾಗ ಗಂಗಾವತಿ ವತಿಯಿಂದ ಸುಮಾರು 290 ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ ಸುಮಾರು ಶೇಕಡ 80ರಷ್ಟು ಬಡವರು ಅಂತವರಿಗೆ ಸಮಾಜದ ಸಂಘ ಸಂಸ್ಥೆ ಹಾಗೂ ಇತರರು ಆಹಾರದ ಕಿಟ್ಟುಗಳನ್ನು ನೀಡಲು ಮನವಿ ಮಾಡಿದರು.



