
ಆನೆಗುಂದಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Free health check-up camp in Anegundi village

ಗಂಗಾವತಿ : ನಗರದ ಶ್ರೀಮಲ್ಲಿಕಾರ್ಜುನ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮೂತ್ರರೋಗ ತಜ್ಞರಾದ ಡಾ:ನಾಗರಾಜ್ ಎಚ್ ಹಾಗೂ ಆನೆಗುಂದಿ ರಸ್ತೆಯ ಶ್ರೀಸಾಯಿ ಪಾದುಕ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸೆ ಹಿರಿಯ ತಜ್ಞರಾದ ವಿ ಎಸ್ ಎನ್ ಡಿ ರಾಯಲು ಮತ್ತು ಆನೆಗುಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಹಯೋಗದೊಂದಿಗೆ ಇಂದು ಮೂತ್ರಕೋಶ ಸಂಬಂಧಿಸಿದ ಖಾಯಿಲೆಗಳು ಹಾಗೂ ಸಾಮನ್ಯ ಶಸ್ತ್ರಚಿಕಿತ್ಸೆ ಸಂಬಂಧಿಸಿದ ಖಾಯಿಲೆಗಳನ್ನು ಹೊಂದಿದ ಗ್ರಾಮೀಣ ಭಾಗದಿಂದ ಆಗಮಿಸಿದ 100 ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಜನರಲ್ ಸರ್ಜನ್ ತಜ್ಞರಾದ ರಾಯಲು ಹರ್ನಿಯಾ, ಫೈಲ್ಸ್, ಫಿಸ್ತೂಲಾ ಹಾಗೂ ಅಲರ್ಜಿ ಸಂಬಂಧಿಸಿದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿ ಅವಶ್ಯಕತೆ ಇರುವ ಮೂತ್ರಕೋಶದ ರೋಗಿಗಳಿಗೆ ಆರೋಗ್ಯ ಪರಿಸ್ಥಿತಿ ಅನುಗುಣವಾಗಿ ಪರಿಶೀಲಿಸಿ ಯುರೋಪ್ಲೋಮೀಟರ್ (ಅಂದಾಜು ಬೆಲೆ 350-400 ರೂ) ಪರೀಕ್ಷೆ ಉಚಿತವಾಗಿ ನೀಡಲಾಯಿತು
ಇದೆ ಸಮಯದಲ್ಲಿ ಚಿಕಿತ್ಸೆ ಒಳಪಟ್ಟ ಎಲ್ಲಾ ರೋಗಿಗಳಿಗೆ ಪ್ರಾಥಮಿಕ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ನಂತರ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ನಿರಂತರ ತಪಾಸಣೆ ಗೆ ಗಂಗಾವತಿಯ ಕಂಪ್ಲಿ ರಸ್ತೆಯ ಶ್ರೀಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ಪಿ ಆರ್ ಒ ನಾಗರಾಜ್ ಸಿಬ್ಬಂದಿ ಮಹೇಶ್ ಹೂಗಾರ್, ಬಸವರಾಜ್ ಹಾಗೂ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷರ ಶಂಕ್ರಯ್ಯ ಹೀರೆಮಠ್, ಬಸಪ್ಪ ಕುಣಿಕೇರಿ, ಸಂಜಯ್ ಹೀರೆಮಠ್, ತಿಮ್ಮಪ್ಪ ನಾಯಕ, ಚಂದ್ರಶೇಖರ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದ್ದರು.




