
“ಸಂವಿಧಾನದ ನೈಜ ಆಶಯ ಅರಿಯೋಣ”
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ

Let's understand the true intention of the Constitution" Gram Panchayat Development Officer Suresh Chalwadi

ಈಸಂದರ್ಭದಲ್ಲಿ MBBS ಆಯ್ಕೆಯಾದ ಎಸ್. ಟಿ. ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ₹15,000/ ರಂತೆ ಚೆಕ್ ಮೂಲಕ ನೀಡಲಾಯಿತು.
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ಹತ್ತಿಮರದ ಅವರು ಧ್ವಜಾರೋಹಣ ಸೋಮವಾರ ನೆರವೇರಿಸಿದರು.
ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಭಾರತ ದೇಶ ಸ್ವಾತಂತ್ರ್ಯ ಹೊಂದಿ ಇಂದು ಸುಸೂತ್ರವಾಗಿ ನಡೆಯಲು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. 1950 ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನವು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚವಾಗಿದೆ. ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಈ ಶುಭ ದಿನದಂದು, ಸಂವಿಧಾನದ ನೈಜ ಆಶಯಗಳನ್ನು ಅರಿಯೋಣ ಎಂದು ತಿಳಿಸಿದರು.
ಸನ್ಮಾನ: 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಗ್ರಾಪಂ ವ್ಯಾಪ್ತಿಯ ಎಂ. ಬಿ.ಬಿ.ಎಸ್. ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯಿಂದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.
ಗ್ರಾಮಸಭೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂಪಡೆದಿರುವ ಹಾಗೂ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಯೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಗಳ ಕುರಿತು ಸಮಗ್ರವಾಗಿ ಚರ್ಚಿಸಲು “ವಿಶೇಷ ಗ್ರಾಮ ಸಭೆ” ನಡೆಸಲಾಯಿತು.
ಗ್ರಾಪಂ ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ, ಸದಸ್ಯರಾದ ರಾಮಣ್ಣ ಬಳ್ಳಾರಿ, ಪೀರ್ ಮಹ್ಮದ್,ಹುಸೇನಪ್ಪ, ಡಾ. ಮಹೇಶ್, ಹಣಮಂತಮ್ಮ, ಸಯ್ಯದ್ ಮಿರಾಜ್, ಶಾಂತಮ್ಮ, ಭರತಕುಮಾರ್ ಮತ್ತು ಇತರೆ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ನೌಕರರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.





