ಭಾಗ್ಯನಗರ: ಪ್ರಾಣಿ ಆರೈಕೆ ಕೇಂದ್ರದಲ್ಲಿನ ನಾಯಿಗಳನ್ನು ದತ್ತು ಪಡೆಯಲು ಅವಕಾಶ
Bhagyanagar: Dogs at animal care center available for adoption
ಕೊಪ್ಪಳ ಡಿಸೆಂಬರ್ 08 (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತಿಯ ಪ್ರಾಣಿ ಆರೈಕೆ ಕೇಂದ್ರದಲ್ಲಿ ರಕ್ಷಿಸಲ್ಪಟ್ಟ ನಾಯಿಗಳನ್ನು ಸುರಕ್ಷಿತವಾಗಿ ವಸತಿಗೊಳಿಸಿ ಲಸಿಕೆ ಹಾಕಲಾಗಿದ್ದು, ಇವುಗಳು ಆರೋಗ್ಯವಾಗಿವೆ, ಇಚ್ಚೆಯುಳ್ಳ ನಾಗರಿಕರು ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆರೈಕೆ ಕೇಂದ್ರದಲ್ಲಿನ ನಾಯಿಗಳನ್ನು ದತ್ತು ಪಡೆಯಲು ಇಚ್ಚಿಸುವ ನಾಗರಿಕರು ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ಭಾಗ್ಯನಗರ ಪ್ರಾಣಿ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಲಭ್ಯವಿರುವ ನಾಯಿಗಳನ್ನು ಪರಿಶೀಲಿಸಿ ಸೂಕ್ತ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.