
ನರೇಗದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಮಾಡುವಂತೆ ಅಧಿಕಾರಿಗಳಿಗೆ : ರೈತ ಮುಖಂಡರಾದ ಅಮ್ಜಾದ್ ಖಾನ್ .
Farmer leader Amjad Khan asks officials to properly implement the employment guarantee scheme in NREGA.
ವರದಿ: ಬಂಗಾರಪ್ಪ .ಸಿ.
ಹನೂರು : ಸರಕಾರದ ವಿವಿಧ ಯೋಜನೆಯನ್ನು ಸರಿಯಾದ ಪಲಾನುಭವಿಗಳಿಗೆ ನೀಡಲು ಹಲವು ಅಧಿಕಾರಿಗಳು ವಿಪಲವಾಗಿದ್ದಾರೆ ಅಂತಹ ಅಧಿಕಾರಿಗಳಿಂದ ಗ್ರಾಮಗಳ ಅಭಿವೃದ್ಧಿ ಅಸಾದ್ಯವಾಗಿದೆ ಎಂದು ರೈತ ಸಂಘ ಹನೂರು ಘಟಕದ ಅಧ್ಯಕ್ಷರಾದ ಶ್ರೀ ಯುತ ಅಮ್ಜಾದ್ ಖಾನ್ ರವರು ತಿಳಿಸಿದರು.
ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾತನಾಡಿದ ಅವರು ಸ್ಥಳಿಯರಿಗೆ ಉದ್ಯೋಗ ನೀಡದೆ ಗುಳೆ ಹೋರಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಪಂಚಾಯತಿ ಕಾರ್ಯಾಲಯದಲ್ಲಿ ಆಡಳಿತವು ಸಂಪೂರ್ಣವಾಗಿ ನಿಂತು ಹೋಗಿದೆ ಅದರ ವಿರುದ್ದವೆ ನಮ್ಮ ಹೋರಾಟ ಮಾಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಸಮಿತಿಯಿಂದ ನಾಳೆ ಮಾಟಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಚಳುವಳಿಯನ್ನು ಹಮ್ಮಿಕೊಂಡಿದ್ದೇವೆ ವಿಷಯ ಮಹಿಳೆಯರು ಉದ್ಯೋಗ ಕಾತ್ರೆಯಲ್ಲಿ ಕೆಲಸ ಕೇಳಿದ್ದು 30 ದಿನಗಳು ಕಳೆದರು ಕೆಲಸ ಕೊಟ್ಟಿಲ್ಲ ಕೇಳಿದರೆ ಅಲ್ಲಿನ ಅಧಿಕಾರಿ ಪಿಡಿಒ ನಿಮ್ಮ ಮೇಲೆ ಕೇಸ್ ಹಾಕಿಸುವೆ ಎಂದು ದಮ್ಕಿ ಹಾಕುತ್ತಿದ್ದಾರೆ ಆದ್ದರಿಂದ ತಾವುಗಳು ಆಗಮಿಸಬೇಕೆಂದು ಎಲ್ಲಾ ರೈತರಿಗೂ ಮತ್ತು ಸಾರ್ವಜನಿಕರಿಗೆ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮನವಿ ಮಾಡಿದರು.




