
Another insult to the Kadasiddeshwara Sri of Kanheri Mutt in Kolhapur
ಲಿಂಗಾಯತ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕಾಗಿ ವಿಜಯಪುರ ಜಿಲ್ಲಾಡಳಿತದಿಂದ ವಿಜಯಪುರ ನಿಷೇಧಕ್ಕೆ ಒಳಗಾಗಿದ್ದ ಕೊಲ್ಹಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ ಮತ್ತೆ ಮುಖಭಂಗ.

ದೆಹಲಿ ವಾರ್ತೆ: ವಿಜಯಪುರ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿ ಛಿಮಾರಿ ಹಾಕಿಸಿಕೊಂಡಿದ್ದ ಕನ್ಹೇರಿ ಸ್ವಾಮಿ, ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ವಿಜಯಪುರ ಜಿಲ್ಲಾಡಳಿತದ ನಿರ್ಧಾರವನ್ನು ಎತ್ತಿ ಹಿಡಿದಿದ್ದು, ಇದರಿಂದ ಮತ್ತೊಮ್ಮೆ ಸ್ವಾಮೀಜಿ ಮುಖಭಂಗ ಎದುರಿಸಿದ್ದಾರೆ.

ಬಸವ ಸಂಸ್ಕೃತಿ ಅಭಿಯಾನ ಕೈಗೊಂಡ ಸ್ವಾಮೀಜಿಗಳ ಕುರಿತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳ ಕುರಿತು ಅವಾಚ್ಯ ಶಬ್ದ ಬಳಸಿ, ನಿಂದನೆ ಮಾಡಿದ್ದಾಕ್ಕಾಗಿ ಇವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿ ಈ ಸ್ವಾಮಿ ಸುದ್ದಿಯಾಗಿದ್ದರು.
ಸ್ವಾಮೀಜಿಯ ಹೇಳಿಕೆಯ ಕುರಿತು ಪರ ಮತ್ತು ವಿರೋಧ ಪ್ರತಿಭಟನೆಗಳು ಆಗಿದ್ದವು.




