
Farmers' roads to reach their fields are completely dilapidated and a petition has been submitted to the MLA to repair them.

ಗಂಗಾವತಿ ,ಆ:16:ನಗರದ ಹಿರೇಜಂತಕಲ್ ನ ಶ್ರೀ ಪಂಪಾವಿರುಪಾಕ್ಷೇಶ್ವರ ದೇವಾಲಯದ ಆವರಣಕ್ಕೆ ಆಗಮಿಸಿದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಯವರಿಗೆ ಇಲ್ಲಿನ ರೈತರು ಬರ ಮಾಡಿಕೊಂಡರು. ರೈತರ ಹಲವರು ಸಮಸ್ಯೆಗಳಾದ ರಸ್ತೆಗಳ ದುರಸ್ತಿ, ಮುಂದಿನ ಬೆಳೆಗಳಿಗೆ ನೀರು ಹರಿಸುವುದೂ, ಹೊಲ ಗದ್ದೆಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಸರಿ ಪಡಿಸಲು, ನೀರು ಬಳಕೆದಾರರ ಸಂಘದ ಕಛೇರಿ ನಿರ್ಮಾಣಕ್ಕೆ ಸ್ಥಳದ ಅವಕಾಶ, ಮತ್ತು ಹಿರೇಜಂತಕಲ್,ವಿರುಪಾಪುರ,ಮತ್ತು ಹೊಸಳ್ಳಿ ಭಾಗದ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬಂಡಿ ಜಾಡು ಹಾಳಾಗಿದ್ದು ಕೂಡಲೇ ಸರಿ ಪಡಿಸಲು ಒತ್ತಾಯಿಸಿದರು.
ರೈತರು ಮುಂದಿನ ಬೆಳೆ ಬೆಳೆಯಲು ಹರ ಸಾಹಸ ಮಾಡಬೇಕಾಗುತ್ತದೆ. ಮತ್ತು ಹಿರೇಜಂತಕಲ್ ಭಾಗದ ರೈತರಿಗೆ ಮುಂದಿನ ಬೇಸಿಗೆ ಬೆಳೆ ಬೆಳೆಯಲು ನೀರು ಬೇಕಾಗಿದ್ದು,ಅಲ್ಲಲ್ಲಿ ಕಾಲುವೆಗಳ ದುರಸ್ತಿ ಕಾಮಗಾರಿಯು RNS ಕಂಪನಿಯವರು ಗುತ್ತಿಗೆ ತೆಗೆದು ಕೊಂಡಿದ್ದು, ಅದನ್ನು ಸಂಪೂರ್ಣಗೊಳಿಸಲು ಸಮಯ ಕೇಳಲಾಗಿದೆ. ಆದರೆ ಮುಂದಿನ ಬೆಳೆಯನ್ನು ಬೆಳೆದುಕೊಳ್ಳಲು ರೈತರಲ್ಲಿ ಆತಂಕ ಮೂಡಿಸಿದೆ. ಮತ್ತು ಗೊಂದಲ ಸೃಷ್ಟಿ ಮಾಡಲಾಗಿದೆ. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಸ್ಪಷ್ಟನ್ನೇ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇವರ ತೀರ್ಮಾನ ರೈತರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಹಿರೇಜಂತಕಲ್ ನ ವಾರ್ಡ್ 28(32) ರಲ್ಲಿ 18 ಸಮಾಜದ ಸ್ಮಶಾನವಿದ್ದು ಕಳೆದ ವರ್ಷದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದು, ಇಲ್ಲಿಯವರೆಗೂ ಯಾವುದೇ ಕೆಲಸಗಳು ಆಗಿರುವುದಿಲ್ಲ ಎಂದು ವಾರ್ಡಿನ ಹಿರಿಯರು, ಯುವಕರು ಖಂಡಿಸಿದರು. ಇದರ ಬಗ್ಗೆ ಮಾತನಾಡಿದ ಶಾಸಕರು ನಗರಸಭೆಯ ಅನುಧಾನದ 30 ಕೋಟಿ ರೂಪಾಯಲ್ಲಿ ಸುಮಾರು 25 ಲಕ್ಷಗಳ ಸ್ಮಶಾನ ಅಭಿವೃದ್ಧಿ ಪಡಿಸಲಾಗುವುದು ಎಂದು ಮತ್ತೊಮ್ಮೆ ಭರವಸೆ ನೀಡಿದರು. ಆದರೆ ತಮ್ಮ ಭರವಸೆಗಳು ಕೇವಲ ಭರವಸೆಯಾಗಿ ಉಳಿಯದೆ ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಬೇಕು ಎಂದು ಯುವಕರಾದ ಆರತಿ ಮಂಜುನಾಥ ಶಾಸಕರಿಗೆ ಮನವಿ ಮಾಡಿದರು. ಅದೇ ರೀತಿಯಲ್ಲಿ ಹೊಸಳ್ಳಿ ಮತ್ತು ಹಿರೇಜಂತಕಲ್ UT upper ಕಾಲುವೆಯ ಪಕ್ಕದ ರಸ್ತೆಯು ಕೂಡಲೇ ಅದಕ್ಕೆ ತಾತ್ಕಾಲಿಕವಾಗಿ ಮುರ್ರಂ ಹಾಕಿಸಿ ರೈತರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಶಿವಪ್ಪ ಹೊಸಳ್ಳಿ ಅವರು ಕೇಳಿಕೊಂಡರು. ರೈತರು ಸಲ್ಲಿಸಿದ ಎಲ್ಲಾ ಮನವಿಗಳನ್ನು ಕೂಡಲೇ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಮತ್ತು ಕಾರ್ಯ ರೂಪಕ್ಕೆ ತರುವುದು ಎಂದು ರೈತರಿಗೆ ಶಾಸಕರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳದ ವೆಂಕಟರಾವ್, ರಾಜಶೇಖರ್, ನಗರಸಭೆ ಮಾಜಿ ಸದಸ್ಯರಾದ ರಾಘವೇಂದ್ರ ಶ್ರೇಷ್ಠ, ಬಿಜೆಪಿ ಮುಖಂಡರಾದ ವೀರೇಶ್ ಬಲಕುಂದಿ, ಹೇರೂರು , ಯಮನೂರ ಚೌಡಿ ಮತ್ತು ನೀರು ಬಳಕೆದಾರ ಸಂಘದ ಕಾರ್ಯದರ್ಶಿ ಆದ ವಿನೋದ್, ನಾರಾಯಣಪ್ಪ, ಹರೀಶ,ರೇವಣ್ಣಪ್ಪ ಗೋಟೂರ, ಲೋಕಪ್ಪ ವಡ್ಡರ, S.ಚನ್ನಬಸಪ್ಪ. R.ಚನ್ನಬಸಪ್ಪ, ಹೊಸಮನಿ ಭೀಮಪ್ಪ, ಮೇಟ್ರಿ ಹುಲಗಪ್ಪ, ಮರೆಪ್ಪ, ಕುಂಟೋಜಿ ಹನುಮ್ನೇಶ್, H. ಪಂಪನಗೌಡ, ಚನ್ನಳ್ಳಿ ಶರಣಪ್ಪ, ಭಾಷಾ ಸಾಬ್, ಕೆ. ಕಳಕಪ್ಪ, ಗೌಳಿ ಸ್ವಾಮಿ, ರೇವಂತ, ರವಿತೇಜ, G. ವಿಶ್ವನಾಥ್ , ವಾಲಿಸಾಬ್, ಹಾಗೂ ಊರಿನ ಹಿರಿಯರು ಮುಖಂಡರು ಯುವಕರು ಭಾಗಿಯಾದರು.




