Named grain purchasing center opens in the district: Farmers appealed to register
ಕೊಪ್ಪಳ ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ): 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.8,768/- ರಂತೆ ಗರಿಷ್ಠ 38,000 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಕೇಂದ್ರ ಸÀರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಸಲುವಾಗಿ ಸೆಪ್ಟೆಂಬರ್ 26 ರಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸಭೆಯಲ್ಲಿ ಹೆಸರುಕಾಳು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಖರೀದಿ ಕೇಂದ್ರಗಳಾದ ಕುಕನೂರಿನ ಪಿಎಸಿಎಸ್ ಕುಕನೂರು, ಯಲಬುರ್ಗಾದ ಟಿಎಪಿಸಿಎಂಎಸ್ ಯಲಬುರ್ಗಾ, ಬನ್ನಿಕೊಪ್ಪದ ಪಿಎಸಿಎಸ್ ಬನ್ನಿಕೊಪ್ಪ, ಚಿಕ್ಕೇನಕೊಪ್ಪದ ಪಿಎಸಿಎಸ್ ಚಿಕ್ಕೇನಕೊಪ್ಪ, ತೊಂಡಿಹಾಳನ ಪಿಎಸಿಎಸ್ ತೊಂಡಿಹಾಳ, ಮುಧೋಳನ ಪಿಎಸಿಎಸ್ ಮುಧೋಳ, ಮಂಡಲಗೇರಿಯ ಎಫ್‌ಪಿಒ ಎರೆಯ ದೊರೆ, ತಾವರಗೇರಾದ ಪಿಎಸಿಎಸ್ ಮೇಣೆದಾಳ, ಹನುಮಸಾಗರದ ಪಿಎಸಿಎಸ್ ಹನುಮಸಾಗರ, ಹಿರೇಸಿಂದೋಗಿಯ ಪಿಎಸಿಎಸ್ ಹಿರೇಸಿಂದೋಗಿ, ಮುದ್ದೇಬಳ್ಳಿಯ ಪಿಎಸಿಎಸ್ ಮುದ್ದೇಬಳ್ಳಿ, ಕವಲೂರಿನ ಪಿಎಸಿಎಸ್ ಕವಲೂರಿನ ಏಜೆನ್ಸಿ ಅಥವಾ ನೋಂದಣಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದು.
ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಹೆಸರುಕಾಳು ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಮಾತ್ರ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ, ದೂ.ಸಂ: 08539-230040 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.