Breaking News

ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಳ್ಳತನ ಪ್ರಕರಣ: ಅಪರಾಧಿಗಳಿಗೆ ಶಿಕ್ಷೆ ಪ್ರಕಟ

Gangavathi Sub-Division Hospital Theft Case: Punishment announced for the culprits

Screenshot 2025 09 26 17 41 33 07 680d03679600f7af0b4c700c6b270fe76703106220846473059

ಕೊಪ್ಪಳ ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ): ಗಂಗಾವತಿ ನಗರದ ಸರ್ಕಾರಿ ಉಪ ವಿಭಾಗಸ್ಪತ್ರೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 3 ವರ್ಷಗಳ ಸೆರೆಮನೆ ವಾಸದ ಶಿಕ್ಷೆಯೊಂದಿಗೆ ರೂ.5,000/- ಗಳ ದಂಡವನ್ನು ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ಸೆಪ್ಟೆಂಬರ್ 24 ರಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪಿತರಾದ ಎ-1 ಅಬ್ದುಲ್ ಸಮೀರ, ಎ-2 ಮಂಜುನಾಥ, ಎ-3 ಅಲ್ತಾಫ್ ಹಾಗೂ ಎ-4 ಖಾಜಾಪಾಷ ಎಂಬುವವರು 2023 ರ ಆಗಸ್ಟ್ 18 ರಂದು ಗಂಗಾವತಿ ನಗರದ ಸರಕಾರಿ ಉಪ ವಿಭಾಗ ಆಸ್ಪತ್ರೆಯ ಕಂಪೌAಡ್ ಒಳಗೆ ಪ್ರವೇಶ ಮಾಡಿ ಆಸ್ಪತ್ರೆಯಲ್ಲಿನ ಮಾಡ್ಯುಲರ್ ಶಸ್ತç ಚಿಕಿತ್ಸೆ ಕೊಠಡಿಯ ಅಂದಾಜು ರೂ.40 ಸಾವಿರ ಮೌಲ್ಯದ ಎ.ಸಿಂ ಕಾಪರ್ ಪೈಪ್‌ಲೈನ್, ಮುಖ್ಯ ವೈದ್ಯಾಧಿಕಾರಿ ಕೊಠಡಿಯ ಅಂದಾಜು ರೂ.6,000/- ಮೌಲ್ಯದ 2 ಟನ್ ಎಸಿಯ 4 ಮೀ. ಕಾಪರ್ ಲೈಪ್‌ಲೈನ್, ಲಿಕ್ವಿಡ್ ಬ್ಯಾಂಕಿನ ಅಂದಾಜು ರೂ. 50 ಸಾವಿರ ಮೌಲ್ಯದ 40 ಫೀಟ್ ಉದ್ದದ 42 ಎಂ.ಎA. ಕಾಪರ್ ಪೈಪ್‌ಲೈನ್, ಆಕ್ಸಿಜನ್ ಜನರೇಷನ್ ಪ್ಲಾಂಟ್‌ನ ರೂ.50 ಸಾವಿರ ಮೌಲ್ಯದ 40 ಫೀಟ್ ಉದ್ದದ 42 ಎಂಎA ಕಾಪರ್ ಪೈಪ್‌ಲೈನ್, ಆಕ್ಸಿಜನ್ ಮ್ಯಾನಿಪೋಲ್ಡ್ ಕೊಠಡಿಯಲ್ಲಿ ಅಂದಾಜು ರೂ.25 ಸಾವಿರ ಮೌಲ್ಯದ ಕಾಪರ್ ಟೆಲ್ ಪೈಪುಗಳು ಸೇರಿದಂತೆ ಒಟ್ಟು ರೂ.1,71,000/- ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಈ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆಯ ಆಗಿನ ತನಿಖಾಧಿಕಾರಿಯಾಗಿದ್ದ ಕಾಮಣ್ಣ ಅವರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಐಪಿಸಿ ಕಲಂ 380 ಅಡಿ ಸಾಕ್ಷಾö್ಯಧಾರಗಳ ಸಹಿತ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯಲ್ಲಿ ಆರೋಪಿತರ ವಿರುದ್ಧದ ಆರೋಪಗಳು ಸಾಕ್ಷಾö್ಯಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಐಪಿಸಿ ಕಲಂ 380 ಅಪರಾಧಕ್ಕೆ ಅಪರಾಧಿಗಳಿಗೆ 3 ವರ್ಷಗಳ ಸೆರೆಮನೆ ವಾಸ ಶಿಕ್ಷೆ ಹಾಗೂ ತಲಾ ರೂ.5000/- ಗಳ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನ ಸ್ವಾಮಿ ದೇವಯ್ಯ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಎಚ್.ಸಿ. ಶುಭಾಷ, ಪಿಸಿ-294 ಯಮನೂರಪ್ಪ, ಪಿಸಿ-97 ಭೀಮಣ್ಣ, ಪಿಸಿ-601 ಯಲ್ಲರೆಡ್ಡಿ ಅವರು ವಿಚಾರಣೆ ಸಂದರ್ಭ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರು ಪಡಿಸಿ, ಸಹಕರಿಸಿದ್ದಾರೆ ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.