Government Junior College, NSS Annual Special Camp in Haralahalli Village
ಮರೆಯಾಗುತ್ತಿರುವ ಜಾನಪದ ಕಲೆಯ ಉಳಿಸಿ-ಮೈಬೂಬ್ ಕಿಲ್ಲೇದಾರ್
ದಿನಾಂಕ 20.09.2025 ರಿಂದ 26.09.25 ರವರಿಗೆ
ಗಂಗಾವತಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿದ ಜಾನಪದ ಕಲಾವಿದ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಮಹಿಬೂಬ್ ಕಿಲ್ಲೆದಾರ್ ರವರು ಮಾತನಾಡುತ್ತಾ ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ನಮ್ಮ ಸುತ್ತಮುತ್ತಲಿನ ಜಾನಪದ ಕಲಾವಿದರನ್ನು ಜಾನಪದ ತಜ್ಞರನ್ನು ಮಾತಾಡಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಈ ಕಲೆಯನ್ನು ನಿರಂತರ ಜೀವಂತವಾಗಿಸುವ ಅಗತ್ಯವಿದೆ. ಹಲವು ಜಾನಪದ ಗೀತೆಗಳ ಮೂಲಕ ಮಕ್ಕಳನ್ನು ರಂಜಿಸುತ್ತ ಅದರಲ್ಲಿರುವ ಜೀವನ ಮೌಲ್ಯವನ್ನು ವಿವರಿಸುತ್ತಾ ಮಕ್ಕಳನ್ನು ತೊಡಗಿಸಿಕೊಂಡು ಹಾಡುವುದರ ಮೂಲಕ ಸ್ವಯಂ ಸೇವಕರಲ್ಲಿ ಜಾನಪದ ಕಲೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಮೇಶ ಗಬ್ಬೂರ್ ರವರು ಜಾನಪದ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಥಳೀಯರಾದ ಬಸವರಾಜ್ ಉಪನ್ಯಾಸಕರು, ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಈಶ್ವರಪ್ಪ , ಇಂಗ್ಲಿಷ್ ಉಪನ್ಯಾಸಕರಾದ ಮಹೇಶ್ ಮತ್ತು ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ ಅವರು ಹಾಜರಿದ್ದರು..
ಎನ್ಎಸ್ಎಸ್ ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬಸಪ್ಪ ನಾಗೋಲಿ ಪ್ರಾಚಾರ್ಯರು ಜೂನಿಯರ್ ಕಾಲೇಜ್ ಗಂಗಾವತಿ