Breaking News

ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಸಮಾರಂಭ-೨೦೨೫

Lions Club celebrates Teachers' Day and Best Teacher Award Ceremony-2025

Screenshot 2025 09 24 18 45 13 09 E307a3f9df9f380ebaf106e1dc980bb6455507925036282273

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್-೨೨ ಸೋಮವಾರ ಐ.ಎಂ.ಎ ಹಾಲ್‌ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಖ್ಯಾತ ವೈದ್ಯರಾದ ಡಾ,ಜಿ ಚಂದ್ರಪ್ಪ ಸರ್ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಲಯನ್ಸ್ ಸದಸ್ಯರಾದ ಡಾ, ವಿ.ವಿ ಚಿನಿವಾಲರ್ ಇವರು ವಹಿಸಿದ್ದರು.
ಶಿಕ್ಷಕರಾದ ಉಲ್ಲಾಸರೆಡ್ಡಿ ಸ್ವಾಗತಿಸಿದರೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ,ಶಿವಕುಮಾರ ಮಾಲಿಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಮುಖ್ಯ ಅತಿಥಿಗಳು ಶಿಕ್ಷಕರ ಮಹತ್ವ, ಜವಾಬ್ದಾರಿ &ಅರ್ಪಣ ಮನೋಭಾವ ಕುರಿತು ಮಾತನಾಡಿದರು.
ಪ್ರಸ್ತುತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿವಿಧ ಶಾಲೆಗಳ ಏಳು ಶಿಕ್ಷಕರಾದ ಮಧುಕುಮಾರ ಕುಲಕರ್ಣಿ, ಯಮನೂರಪ್ಪ, ಮೆಹಬೂಬ ಕಿಲ್ಲೇದಾರ್, ಶ್ರೀಮತಿ ವಿಜಯಾ ದೊಡ್ಡ ಬಿದರಿ, ಶ್ರೀಮತಿ ಶರಣಮ್ಮ, ಶ್ರೀಮತಿ ಕಾಳಮ್ಮ, ಪರಶುರಾಮ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ಹರ್ಷ ವ್ಯಕ್ತಪಡಿಸಿ, ಲಯನ್ಸ್ ಕ್ಲಬ್‌ಗೆ ಧನ್ಯವಾದಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ, ಜಿ. ಚಂದ್ರಪ್ಪ ಸರ್ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳು ಮಹತ್ವರ ಕೊಡುಗೆ ನೀಡಿರುತ್ತಾರೆ, ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸರಸ್ವತಿ, ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಡಾ, ಜಂಬುನಾಥಗೌಡ, ಡಾ,ಸೋಮಪ್ಪ, ಲ. ಸೋಮನಾಥ ಪಟ್ಟಣಶೆಟ್ಟಿ,
ಲ. ಸಿದ್ದಣ್ಣ ಜಕ್ಕಲಿ, ಪ್ರಭು ರೆಡ್ಡಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಚಂದ್ರಗೌಡ ಪೊ.ಪಾಟೀಲ್, ಕ್ಲಬ್ ಖಜಾಂಚಿಗಳಾದ ಲ. ಶಿವಕುಮಾರ ಗಾಳಿ ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

screenshot 2025 10 07 20 38 18 90 a71c66a550bc09ef2792e9ddf4b16f7a.jpg

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

Many of my deepfake videos are circulating everywhere: Nirmala Sitharaman ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.