Breaking News

ಹಿರೇಜಂತಕಲ್ಲ ಚಲುವಾದಿ ವಾರ್ಡ ನಿಂದ ಹೊಸಹಳ್ಳಿ ತೆರಳುವ ಚರಂಡಿ ಕಾಮಗಾರಿ ಕಳಪೆ: ಕ್ರಮಕ್ಕೆ ಒತ್ತಾಯ

 





Sewerage work from Hirejantakalla Chaluvadi Ward to Hosahalli is poor: Action demanded

ಗಂಗಾವತಿ:  ನಗರದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಚಾರ್ಡ ೨೮ ಹಿರೇಜಂತಕಲ್ಲ ಚಲುವಾದಿ ವಾರ್ಡ ದಿಂದು ಹೊಸಹಳ್ಳಿ ತೆರಳುವ ಮಾರ್ಗದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕಳಪೆ ಮಟ್ಟದಿದ ಕೂಡಿದ್ದು, ಹಿರಿಯ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಯುವ ಪತ್ರಕರ್ತ ಹಾಗೂ ಚಿಂತಕರ ಎಚ್ ಸಿ ಹಂಚಿನಾಳ ಒತ್ತಾಯಿಸಿದ್ದಾರೆ.

ಜಾಹೀರಾತು

ಮಳೆ ಬಂದರೆಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ದುರ್ವಾಸನೆ ಹರಡಿದೆ. ಅಲ್ಲದೇ ರೋಗ ಭೀತಿಯೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚರಂಡಿ ನಿರ್ಮಿಸಿ ಎಂದು ಕಳೆ ದಿನಗಳ ಹಿಂದೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.. ನಗರಸಭೆ ಅಧಿಕಾರಿಗಳು, ಚರಂಡಿ ನಿರ್ಮಿಸಲು ಅಂದಾಜು 65ಲಕ್ಷ ರೂ(.25) ಮೀಸಲಿಟ್ಟಿದ್ದಾರೆ. ಇದು ಸ್ಲಾಮ್ ಬೋರ್ಡ್ ದಿಂದ ಮತ್ತು ನಿರ್ಮಿರ್ತಿ ಕೇಂದ್ರ ಇಲಾಖೆ, (ಲ್ಯಾಂಡ್‌ ಅರ್ಮಿ) ಯಲ್ಲಿ ಇರುವ ಅನುದಾನವನ್ನು ಸರಿಯಾಗೆ ಬಳಕೆ ಮಾಡದೆ ಆರೆಬರೆ ಕಾಮಗಾರಿ ಮಾಡಿ ಬಿಲ್ ಎತ್ತವಳಿ ಮಾಡಿದ್ದಾರೆ.

ಇದರಲ್ಲಿ ಸಿಸಿ ರಸ್ತೆ,ಶೌಚಾಲಯ, ಮತ್ತು ಚರಂಡಿ ನಿರ್ಮಾಣ ಮಾಡಬೇಕಿತ್ತು. ಅದರೆ ಬರೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಉಳಿದ ಅನುದಾನ ವನ್ನು ನುಂಗಿ ನೀರು ಕುಡಿದ ಅಧಿಕಾರಿಗಳು
ಗುತ್ತಿಗೆದಾರರು. ಕಾಮಗಾರಿ ಕೈಗೆತ್ತಿಕೊಂಡಿದ್ದು, ಸರಕಾರದ ಸೂಚನೆ ಪ್ರಕಾರ ಕಾಮಗಾರಿ ಮಾಡದೆ, ಚಿಕ್ಕದಾಗಿ ಚರಂಡಿ ನಿರ್ಮಿಸಿದ್ದಾರೆ.


ಹಳೆಯ ಚರಂಡಿ ಅದರ ಮೇಲೆ ಕಾಂಕ್ರೀಟ್ ನ್ನು ಹಾಕಿ ಚರಂಡಿ ನಿರ್ಮಾಣ ಮಾಡುತ್ತಿರುವುದ ಸರಿಯಲ್ಲ ಎಂದು ಆರೋಪ ಮಾಡಿದ್ದರು. ಚರಂಡಿಯ ಮೇಲೆ ನಿರ್ಮಿಸಿದ ಗೋಡೆಗಳನ್ನು ತೆರವುಗೊಳಿಸಬೆಕೆಂದು ಕೇಳಿಕೊಳ್ಳುತ್ತವೆ.
ಚರಂಡಿ ಕಾಮಗಾರಿ ಎಂ ಸ್ಯಾಂಡ್‌ಮಯ! : ಈ ಚರಂಡಿ ಕಾಮಗಾರಿ ಎಲ್ಲವೂ ಎಂ. ಸ್ಯಾಂಡ್ ಮಯವಾಗಿದೆ, ಇದರಲ್ಲಿ ಎಷ್ಟು ಸಿಮೆಂಟ್‌ ಮಿಶ್ರಣವಾಗಿದೆ ಎಂಬುದು ತಿಳಿದಿಲ್ಲ.

ಚರಂಡಿ ಕಾಮಗಾರಿಯಲ್ಲೂ ಬರಿ ಎಂ. ಸ್ಯಾಂಡ್ ಹೆಚ್ಚಾಗಿ ಬಳಸಿ ರುವುದರಿಂದ ಎಲ್ಲವೂ ಎಂ ಸ್ಯಾಂಡ್‌ಮಯಚರಂಡಿ ಕಾಮಗಾರಿ ನಿರ್ಮಾಣ ಮಾಡುತ್ತಿರುವುದು,ವಿನ್ಯಾಸದಂತೆ ಇಲ್ಲ( ಎಸ್ಟೇಮೇಟ್ ಪ್ರಕಾರ) ಹೊಸದಾಗಿ ಚರಂಡಿ ನಿರ್ಮಿಸಿ, ಅದರಿಂದ ಬರುವ ದುರ್ವಾಸನೆ ತಡೆಗಟ್ಟಿ.ಇಲ್ಲಿ ವಾಸಿಸುವ ಜನರು ಸ್ಲಾಮ್ ಜನರು.

ನಿತ್ಯ ಚರಂಡಿ ದುರ್ವಾಸನೆ ಬೀರುವುದು. ಇದನ್ನು ತಡೆಗಟ್ಟಲು ಸುವ್ಯವಸ್ಥಿತವಾದ ಚರಂಡಿ ಮಾಡಿ ಇಲ್ಲಾಂದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಹೋರಾಟ ಮಾಡಬೇಕಾದ ಅನಿವಾರ್ಯ.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *