Breaking News

ಹರಮುಡಿ : ಹಠಯೋಗಿ ಹುಚ್ಚಿರಪ್ಪಜ್ಜನವರ ರಥೋತ್ಸವ, ಅಂಗವಾಗಿ ಸಾಮೂಹಿಕ ವಿವಾಹ

Haramudi: A mass wedding as part of the chariot festival of the great yogi Hucchirappajjan

ಜಾಹೀರಾತು

ವರದಿ: ಶರಣಬಸಪ್ಪ ದಾನಕೈ

ಯಲಬುರ್ಗಾ ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ : ಶ್ರೀಗಳು ಯಲಬುರ್ಗಾ: ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ,ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಬಸವಲಿಂಗೇಶ್ವರ ಸ್ವಾಮೀಜಿ ಅವರು ತಾಲೂಕಿನ ಕರಮುಡಿ ಗ್ರಾಮದ ಹಠಯೋಗಿ ಕೋಡಿಕೊಪ್ಪದ ಶ್ರೀ ಹುಚ್ಚಿರಪ್ಪಜ್ಜನವರ ರಥೋತ್ಸವ, ಶ್ರೀ ಭೀಮಾಂಬಿಕಾದೇವಿಯ ಪುರಾಣ ಮಹಾಮಂಗಲ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.ಇಟಗಿಯ ಪ್ರವಚನಕಾರ ಡಾ.ಗುರುಶಾಂತವೀರ ಸ್ವಾಮೀಜಿ,ರೋಣದ ಗುಲಗಂಜಿ ಮಠದ.ಗುರುಪಾದ ಸ್ವಾಮೀಜಿ, ನಿಡಗುಂದಿ ಕೊಪ್ಪದ ಚನ್ನಮಲ್ಲಿಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ , ದಮ್ಮೂರ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅದ್ಯಕ್ಷ ಶರಣಬಸಪ್ಪ ದಾನಕೈ, ಮಾಹತೇಶ ಶಾಸ್ತ್ರೀ, ,ಪಿ.ಡಿ.ಓ. ಬಸವರಾಜ ಬಳೋಟಗಿ ,ಡಾ! ಅಂದಾನಪ್ಪ ಅಬ್ಬಿಗೇರಿ ಇತರರು ಮಾತನಾಡಿ ಗ್ರಾಮದ ಸರ್ವ ಭಕ್ತರು ಉತ್ಸಾಹದಿಂದ ಒಗ್ಗಟ್ಟಾಗಿ ಸೇವೆ ಮಾಡುವದರಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಯಲಬುರ್ಗಾದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಇಟಗಿಯ ಧರ್ಮರ ಮಠದ ಷಣ್ಮುಖಪ್ಫಜ್ಜನವರು ಸಾನಿಧ್ಯವಹಿಸಿದ್ದರು.
ಶಿವಪ್ಪ ಉಳ್ಳಾಗಡ್ಡಿ , ಶರಣಪ್ಪಗೌಡ ಪೋ.ಪಾಟೀಲ , ಶಕುಂತಲಾದೇವಿ ಮಾಲಿ ಪಾಟೀಲ, ಆನಂದ ಮಲ್ಲಿಗವಾಡ ,! ಗ್ರಾ.ಪಂ.. ಸದಸ್ಯರಾದ ರಾಮಣ್ಣ ಹೊಕ್ಕಳದ ,ಪರಸಪ್ಪ ರಾಠೋಡ,ಗಂಗಪ್ಪ ಹವಳಿ ,ಕಾಶಪ್ಪ ಹವಳಿ , ವಿರುಪಾಕ್ಷಪ್ಪ ಉಳ್ಳಾಗಡ್ದಿ ,ಭೀಮಣ್ಣ ಹವಳಿ, ಕೊಟ್ರಯ್ಯಸ್ವಾಮಿ ಹಡಗಲಿ, ವ್ಹಿ.ಎಸ್. ಶಿವಪ್ಪಯ್ಯನಮಠ ,ರುದ್ರಯ್ಯ ಕೆಂಭಾವಿಮಠ ಸೇರಿದಂತೆ ಇತರರು ಇದ್ದರು.
ಮಹಾಂತೇಶ ವಂಕಲಕುಂಟಿ ಹಾಗೂ ಶಿವಪ್ಪ ಮಡಿವಾಳರ ಸಂಗೀತ ಸೇವೆಗೈದರು.
ಹದಿಮೂರು ಸಾಮೂಹಿಕ ವಿವಾಹಗಳು ಜರುಗಿದವು. ಸಂಜೆ ಹುಚ್ಚೀರೇಶ್ವರ ರಥೋತ್ಸವವು ವಿಜ್ರಂಭಣೆಯಿಂದ ಜರುಗಿತು. ಶ್ರೀ ಕರವೀರಭದ್ರೇಶ್ವರ ಕಲಾ ನಾಟ್ಯ ಸಂಘ ಕರಮುಡಿ ಇವರಿಂದ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗರ ನಾಟಕ ಪ್ರದರ್ಶನಗೊಂಡಿತು.

About Mallikarjun

Check Also

ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದನೂತನ ಗಂಗಾವತಿ ತಾಲೂಕು ಸಮಿತಿ ರಚನೆ

New Gangavathi Taluk Committee of Karnataka Progressive Civil Servants Association formed ಗಂಗಾವತಿ: ಏಪ್ರಿಲ್-೧೭ ಗುರುವಾರ ಗಂಗಾವತಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.