Breaking News

ಕಾಡಂಚಿನ ಗ್ರಾಮಗಳಿಗೆ ಸರ್ಕಾರದಅನುದಾನದಲ್ಲಿಅಭಿವೃದ್ಧಿಪಡಿಸುವುದೆ ನಮ್ಮ ಗುರಿ :ಶಾಸಕ ಮಂಜುನಾಥ್ ‌

Our goal is to develop forest villages with government grants: MLA Manjunath

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು
: ಕ್ಷೇತ್ರದ ಕಾಡಂಚಿನ ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳ ದಶಕಗಳ ಕನಸ್ಸನ್ನು ಇಂದು ನನಸು ಮಾಡಲಾಗಿದೆ ಈ ಭಾಗದ ಜನರಿಗೆ ಶುಭ ಸಮಯವಾಗಿದೆ .
ಸ್ವಾತಂತ್ರ್ಯ ಬಂದ ನಂತರ ಹದಿನೇಳು ಹಳ್ಳಿಯನ್ನು ಸುತ್ತಿ ಬಂದು ಜಯಿಸಿ ಇಂದು ಚುನಾಯಿತರಾಗಿದ್ದಾರೆ . ರಸ್ತೆ ಮಾಡಿ ದ್ವೀಪದ ವ್ಯವಸ್ಥೆಯನ್ನು ಮಾಡುತ್ತೆನೆ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು.

ಹನೂರು ತಾಲ್ಲೂಕಿನ ಹಳೆಯುರು ಮುಖ್ಯ ರಸ್ತೆ ಮೆಂದಾರೆ ಇಂಡಿಗನತ್ತ. ತುಳಸಿಕೆರೆ ಗ್ರಾಮಗಳಿಗೆ ಇಪ್ಪತ್ತು ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಗುದ್ದಲಿ ಪೂಜೆ ಮಾಡಿದ ನಂತರ ಮಾತನಾಡಿದ ಅವರು ಈಭಾಗದಲ್ಲಿ
ನಡೆದಾಡಲು ರಸ್ತೆಯಿಲ್ಲ ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಸಹ ನಮಗೆ ತೊಂದರೆಯುಂಟಾಗುತ್ತದೆ ,ಸಾವು ನೋವು ಸಂಖಟಕ್ಕೂ ಸಹ ಹೋಗಲು ಸಾದ್ಯವಿರಲಿಲ್ಲ , ಇದೆ ಅಭಿವೃದ್ಧಿ ಕೆಲಸವನ್ನು ಮಾಡಲು ಸರ್ಕಾರಕ್ಕೆ ಮನವಿ ಮಾಡಿದರ ಫಲವಾಗಿ ಇಂದು ಗುದ್ದಲಿ ಪೂಜೆ ಮಾಡಿದ್ದೆವೆ ದಶಕಗಳಿಗೂ ಹೆಚ್ಚಿನ ಬೇಡಿಕೆಯನ್ನು ನಾವು ಸತತ ಪ್ರಯತ್ನದಿಂದ ಇಂದು ಗುದ್ದಲಿ ಪೂಜೆ ನೆರವೆರಿಸಿದ್ದೆನೆ . ಕಳೆದ ಚುನಾವಣಾ ಸಂದರ್ಭದಲ್ಲಿ ಸೋತಾಗ ಕೊಟ್ಟ ಮಾತಿನಂತೆ ಇಂದು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೆನೆ . ಸಿಎಮ್ ಮೊದಲು ಬೇಟಿ ನೀಡಿದಾಗ ಅವರಿಗೆ ಮನವಿ ಮಾಡಲಾಯಿತು ನಂತರ ಪ್ರಾಧಿಕಾರದ ಸಭೆಯಲ್ಲಿ ತಿರ್ಮಾನ ಮಾಡಿದರು . ವಿದ್ಯುತ್ ಸಂಪರ್ಕವನ್ನು ಈಗಾಗಲೇ ಪಾಲರ್ ನಲ್ಲಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ಸೇವೆ ಮಾಡಲು ಸಿದ್ದನ್ನೆದ್ದೆನಿ . ನಾನು ಮೊದಲಿಗೆ ಬೆಟ್ಟದಿಂದ ಹಾದು ಹೋಗುವ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತದೆ ಇದರಿಂದ ನಿಮಗೆ ಈಗಾಗಲೇ ಬಹಳ ಉಪಯೋಗ ವಾಗುತ್ತದೆ . ಈ ಭಾಗದ ಜನರು ಕೆಲಸ ಮಾಡಲು ಕಷ್ಟಕರವಾದ ಸ್ಥಿತಿಯಲ್ಲಿದ್ದೆವೆ , ಕೆಸಿಪ್ ರಸ್ತೆಯಾಗಿ ಪಾಲರ್ ಮತ್ತು ಹನೂರಿನಿಂದ ಮುಂದುವರಿದಿದೆ . ಮಕ್ಕಳ ಭವಿಷ್ಯದಲ್ಲಿ ನಿಮಗೆ ಸುಖವನ್ನು ನೀಡಲಿ ಇಪ್ಪತ್ತು ಕೋಟಿ ಅನುದಾನ ಬಿಡುಗಡೆಯಾಗಿದೆ ಗುತ್ತಿಗೆದಾರರು ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದರು.

ಇದೇ ಸಂದರ್ಭದಲ್ಲಿ ಡಿಆರ್ ಮಾದೇಶ್ ,ವಿಜಯಕುಮಾರ್ . ವಿರಣ್ಣ ,ಪುಟ್ಟಪ್ಪ, ಮಾದೇಶ್ , ಇಂಜಿನಿಯರ್ ಕಾರ್ತಿಕ್ , ಮಾದೆಶ್ ಮಹೇಶ್ ವಿರಣ್ಣ . ಮಹೇಂದ್ರ ,ಸುರೇಶ್ ,ಮಾದಪ್ಪನ ಅರ್ಚಕರಾದ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.