Women’s Kho-Kho team selected for state level:

ಗಂಗಾವತಿ: ದಿನಾಂಕ 04/04/ 2025 ರಂದು ಕೊಪ್ಪಳದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕಿನ ಮಹಿಳೆಯರು ಖೊe-ಖೋ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 20 ವರ್ಷಗಳಿಂದಲೂ ಈಡೇರದ ಕನಸು ಈಗ ನನಸಾಗಿದೆ. ಸದರಿ ತಂಡದಲ್ಲಿ
ಶ್ರೀಮತಿ ಪೂರ್ಣಿಮಾ ಶೆಟ್ಟರ್ (ನಾಯಕಿ), ಶ್ರೀಮತಿ ಶಾರದಾ ( ಉಪ ನಾಯಕಿ), ಶ್ರೀಮತಿ ಜ್ಯೋತಿ ಢಣಾಪೂರ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಮಾಧವಿ,ಶ್ರೀಮತಿ ಶಾರದಾ, ಶ್ರೀಮತಿ ವಿದ್ಯಾಶ್ರೀ, ಶ್ರೀಮತಿ ಪ್ರೇಮ, ಶ್ರೀಮತಿ ಸಂಧ್ಯಾ, ಶ್ರೀಮತಿ ಅನಿತಾ, ಶ್ರೀಮತಿ ಶೈಲಾ ಹಾದಿಮನಿ, ಶ್ರೀಮತಿ ಲತಾ ಕುಮಾರಿ, ಶ್ರೀಮತಿ ಉಮಾ ತಂಡದಲ್ಲಿದ್ದು, ಇವರ ಸಾಧನೆಗೆ ಶಾಲಾ ಶಿಕ್ಷಣ ಇಲಾಖೆ,ಗಂಗಾವತಿ ಹಾಗೂ ಸಮಸ್ತ ಗಂಗಾವತಿ ತಾಲೂಕಿನ ಶಿಕ್ಷಕ ಹಾಗೂ ಶಿಕ್ಷಕಿ ಯರು ಅಭಿನಂದಿಸಿದ್ದಾರೆ ಎಂದು ಸದರಿ ತಂಡದ ತರಬೇತುದಾರರಾದ ಹುಸೇನಸಾಬ ಮಕಾಂದಾರ ಇವರು ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
