Breaking News

ಸ್ವರಗಳ ಕ್ಷೀರಾಭಿಷೇಕ ಮಾಡಿಸಿದ ಸಂಗೀತ ಸ್ವರಾಭಿಷೇಕಕಾರ್ಯಕ್ರಮ: ಹೆಚ್.ಎಸ್. ಮುರುಳಿಧರ

Musical Swarabhishekam program that performed the Ksheerabhisheka of the voices: H.S. Muralidhar

ಜಾಹೀರಾತು

ಗಂಗಾವತಿ: ಈ ದಿನಮಾನಗಳಲ್ಲಿ ಮಾನವರಲ್ಲಿ ತಾಳ್ಮೆ, ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಸಂಗೀತವು ಎಲ್ಲ ಬಗೆಯ ಮನಸ್ಸುಗಳಿಗೆ ನೆಮ್ಮದಿ ನೀಡುತ್ತದೆ. ಸಂಗೀತಾಭ್ಯಾಸಕ್ಕೆ ಮಕ್ಕಳು ಹೆಚ್ಚು ಮಹತ್ವ ಕೊಡಬೇಕಿದೆ. ಸಂಗೀತವು ಮಕ್ಕಳನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಅಲ್ಲದೇ ಪ್ರತಿಯೊಬ್ಬರ ಮನಸ್ಸಿನ ದುಗುಡ, ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುವ ಶಕ್ತಿ ಸಂಗೀತಕ್ಕಿದೆ. ಆ ನಿಟ್ಟಿನಲ್ಲಿ ಈ ಸಂಗೀತ ಸ್ವರಾಭಿಷೇಕ ಕಾರ್ಯಕ್ರಮ ಸ್ವರಗಳ ಕ್ಷೀರಾಭಿಷೇಕ ಮಾಡಿಸಿದೆ ಎಂದು ಮಾಜಿ ಶಾಸಕರಾದ ಹೆಚ್.ಎಸ್. ಮುರುಳೀಧರ ಅಭಿಪ್ರಾಯಪಟ್ಟರು.
ಅವರು ಮಾರ್ಚ್-೨೯ ಶನಿವಾರ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಕಲ್ಯಾಣನಗರದ ಬಯಲು ಪ್ರದೇಶದಲ್ಲಿ ಶ್ರೀಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ (ರಿ) ಗಂಗಾವತಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂಗೀತ ಸ್ವರಾಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಜೆ ೬:೦೦ಕ್ಕೆ ಪ್ರಾರಂಭಗೊAಡ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ಶರಣಬಸವ ದೇವರು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮನೋರಮಾ ಬೊಮ್ಮಲಾಪುರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಎಫ್. ರಾಘವೇಂದ್ರ, ನಿವೃತ್ತ ಪ್ರಾಚಾರ್ಯರಾದ ಡಾ. ಬಸವರಾಜ ಐಗೋಳ, ವಕೀಲರಾದ ಡಿ.ಎ ಹಾಲಸಮುದ್ರ, ಪತ್ರಕರ್ತ ಪ್ರಸನ್ನ ದೇಸಾಯಿ, ಪ್ರಮುಖರಾದ ಮಲ್ಲೇಶಪ್ಪ ಹೊಸಕೇರ, ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಗದ್ದಿ, ಕುರುಹಿನ ಶೆಟ್ಟಿ ಸಮಾಜದ ಮುಖಂಡರಾದ ಲಕ್ಷö್ಮಣಪ್ಪ ಶಿರವಾರ ಇವರುಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ, ಕುವೆಂಪು ಭಾಷಾ ಭಾರತಿ ಸದಸ್ಯರಾದ ಜಾಜಿ ದೇವೆಂದ್ರಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಹೆಬೂಬ ಕಿಲ್ಲೇದಾರ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿಸಲಾಯಿತು.
ಅದೇ ರೀತಿ ಒಬ್ಬ ವಿಶೇಷಚೇತನರಾಗಿ, ಕಂಪ್ಯೂಟರ್‌ನ ಟೈಪಿಂಗ್‌ನಲ್ಲಿ ಪರಿಣಿತಿ ಹೊಂದಿ ಸ್ವಾವಲಂಬಿಯಾಗಿ ಸ್ವಯಂ ಉದ್ಯೋಗ ರೂಪಿಸಿಕೊಂಡು, ವಿಶೇಷಚೇತನ ಮಹಿಳೆಯೊಂದಿಗೆ ವಿವಾಹವಾಗಿ, ಮಾದರಿ ಸ್ವಾಭಿಮಾನಿ ಜೀವನ ನಡೆಸುತ್ತಿರುವ ವಿಶ್ವರೂಪ ಕಂಪ್ಯೂಟರ್‌ನ ಮಂಜುನಾಥ ಸೋನಾರ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂಗೀತ ಕಾರ್ಯಕ್ರಮದಲ್ಲಿ ಮಂಗಲವಾದ್ಯ ಬಾನ್ಸುರಿಯನ್ನು ಭಾಗ್ಯನಗರದ ನಾಗರಾಜ ಶ್ಯಾವಿ ಹಾಗೂ ಸಂಗೀತ ಶಿಕ್ಷಕ ಶಿವಕುಮಾರ ಗೆಜ್ಜಿ ನುಡಿಸಿದರೆ, ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಕನಕಪ್ಪ ಚಿತ್ರಗಾರ, ಕ್ಲಾರಿಯೋನೆಟ್ ವಾದನವನ್ನು ರಾಮಾಂಜನೇಯಲು, ವಚನ ಗಾಯನವನ್ನು ಬಸವರಾಜಸ್ವಾಮಿ ಕರಡಕಲ್, ತತ್ವಪದವನ್ನು ಪ್ರಕಾಶ ಪಾಟೀಲ್, ಹಾರ್ಮೋನಿಯಂ ಸೊಲೋ ವಿಜಯಕುಮಾರ ಬಡಿಗೇರ, ಹಿಂದೂಸ್ತಾನಿ ಶಾಸ್ತಿçÃಯ ಗಾಯನವನ್ನು ಕುಮಾರಿ ಶಕುಂತಲಾ ಬೆನ್ನಾಳ, ವಚನ ಸಂಗೀತವನ್ನು ಮೌನೇಶ ಬಡಿಗೇರ, ತತ್ವಪದವನ್ನು ಉಡುಮಕಲ್‌ನ ಶಿವಲಿಂಗಯ್ಯ ಶಾಸ್ತಿçöçಗಳು, ಭಕ್ತಿ ಸಂಗೀತವನ್ನು ವಿನೋದ, ಸುಗಮ ಸಂಗೀತವನ್ನು ಶಿವಪ್ಪ ಹುಳ್ಳಿ, ಭಾವಗೀತೆಯನ್ನು ವಿಜಯಲಕ್ಷಿö್ಮ ನಾಗರಾಜ ಶ್ಯಾವಿ, ಕನ್ನಡ ಗಜಲ್‌ನ್ನು ದೊಡ್ಡಬಸವ ನಾಗಲೀಕರ, ದಾಸವಾಣಿಯನ್ನು ಪಂಚಾಕ್ಷರಕುಮಾರ, ಸಮೂಹ ಗೀತೆಗಳನು ಡಾ. ಎಫ್.ಎಂ. ಮುದ್ದಾಬಳ್ಳಿ ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಹಾಗೆಯೇ ಸಮೂಹ ನೃತ್ಯವನ್ನು ಕುಮಾರಿ ವೈಷ್ಣವಿ ಹಾಗೂ ವರ್ಷಿತಾ ಮಾಡಿದರೆ, ಭರತನಾಟ್ಯವನ್ನು ಕುಮಾರಿ ಮನ್ವಿತಾ ಬಳಗಾನೂರು ಮಾಡಿದರು.
ಈ ಕಾರ್ಯಕ್ರಮದಲ್ಲಿ ತಬಲಾ ವಾದ್ಯವನ್ನು ರಾಜಾಸಾಬ್ ಮುದ್ದಾಬಳ್ಳಿ ಹಾಗೂ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ, ಹಾರ್ಮೋನಿಯಂನ್ನು ವಿಜಯಕುಮಾರ ಬಡಿಗೇರ, ತಾಳವಾದ್ಯವನ್ನು ಶಿವಕುಮಾರ ಗೆಜ್ಜಿ ನುಡಿಸಿದರು. ಇದೇ ಸಂದರ್ಭದಲ್ಲಿ ಹತ್ತಾರು ಸಂಗೀತ ಕಲಾವಿದರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾರ್ಥನೆಯನ್ನು ಪಂಚಾಕ್ಷರಕುಮಾರ ನಡೆಸಿಕೊಟ್ಟರೆ, ಶ್ರೀಮತಿ ಜಯಶ್ರೀ ಹಕ್ಕಂಡಿಯವರು ಅಚ್ಚುಕಟ್ಟಾಗಿ ನಿರೂಪಣೆಗೈದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.