CCMesh project electric lamp installed in 16th ward in one day

ಗುಣಮಟ್ಟ ಹೊಂದಿವಿಯೋ ಇಲ್ಲವೋ ದೇವರೇ ಬಲ್ಲ,,? ಸಾರ್ವಜನಿಕ ವಲಯದ ಮಾತು.
ಕುಕನೂರು : ಕೇಂದ್ರ ಸರ್ಕಾರದ 1ಕೋಟಿ 6 ಲಕ್ಷ ರೂ.ಗಳ ಸಿಸಿ ಮೆಶ್ ಯೋಜನೆಯ ವಿದ್ಯುತ್ ದೀಪಗಳ ಅಳವಡಿಕೆಗೆ ಇತ್ತೀಚಿಗೆ ಪಪಂ ಮುಂಬಾಗದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಅದರಂತೆ ವಾರ್ಡನ ಪ್ರತಿಯೊಂದು ಕಂಬಗಳಿಗೂ ಈ ವಿದ್ಯುತ್ ದೀಪ ಅಳವಡಿಸಲಾಯಿತು.
ಆದರೆ 16ನೇ ವಾರ್ಡ ಒಂದರ ವಿದ್ಯುತ್ ಕಂಬದಲ್ಲಿ ಶುಕ್ರವಾರ ಸಾಯಂಕಾಲ ಅಳವಡಿಸಿದ ನಂತರ ಶನಿವಾರ ಬೆಳಗಿನ 4 ಗಂಟೆಯವರೆಗೆ ಉರಿದ ವಿದ್ಯುತ್ ದೀಪ ಕೊನೆಯುಸಿರೆಳೆಯಿತು.
ಶನಿವಾರ ಸಾಯಂಕಾಲ 7ಗಂಟೆಯಾದರೂ ದೀಪ ಹತ್ತಲೇ ಇಲ್ಲಾ, ಈ ಕುರಿತು ವಾರ್ಡನ ಸದಸ್ಯರ ಗಮನಕ್ಕೆ ತಂದಿದ್ದರು ಶನಿವಾರವು ದೀಪ ಬೆಳಗಲೇ ಇಲ್ಲಾ.
ಈ ಕಂಬದ ವಿದ್ಯುತ್ ದೀಪಗಳು ಪಟ್ಟಣದ ಪ್ರತಿ ಒಂದು ವಾರ್ಡ್‌ನಲ್ಲಿ ಪ್ರತಿ ಒಂದು ಕಂಬಗಳಿಗೂ ಅಳವಡಿಸಲು, 1 ಕೋಟಿ 6 ಲಕ್ಷ ರೂ.ಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಇದು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಹೊಂದಿದ್ದು ಒಂದು ವೇಳೆ ವಿದ್ಯುತ್ ಬಲ್ಪಗಳು ಅನಾನುಕೊಲತೆಯಿಂದ ಸ್ಥಗಿತಗೊಂಡಲ್ಲಿ ಸ್ವಯಂಚಾಲಿತವಾಗಿ ಮಾಹಿತಿ ಒದಗಿಸುವ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಹೇಳಿದ್ದರು.
ಆದರೆ ಇದೇನಾ ಸ್ವಯಂ ಚಾಲಿತ ಮಾಹಿತಿ,,? ಮಾರನೇ ದಿನವಾದರೂ ಗಮನಕ್ಕಿಲ್ಲಾ, ಇವೇನು ಗುಣಮಟ್ಟ ಹೊಂದಿವೆಯೋ ಇಲ್ಲವೋ ಆ ಭಗವಂತನೇ ಬಲ್ಲಾ ಎಂದು ಸಾರ್ವಜನಿಕ ವಲಯದ ಮಾತುಗಳು ಕೇಳಿ ಬಂದವು.