Illegal clinic at City Hospital in Kotturu without permission from the authorities

ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೊಟ್ಟೂರು ಸಿಟಿ ಆಸ್ಪತ್ರೆಯನ್ನು ಸೂಕ್ತ ಪರವಾನಿಗೆಯನ್ನು ಪಡೆಯದೇ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಥಾರಿಟಿಯಿಂದ ನೋಂದಣಿಯಾಗದ ಪ್ರವೇಟ್ ಕ್ಲಿನಿಕ್ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಹೈ ಡೋಸ್ ಔಷಧಿಗಳನ್ನು ಬರೆದು, ಸುಂಕಪ್ಪ ಎಂಬುವ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.?
ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸಹ ಅಕ್ರಮವಾಗಿ ನಡೆಯುತ್ತಿದ್ದು, ಈ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪರವಾನಿಗೆಯ ಪ್ರಮಾಣಪತ್ರ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದಾಗ ಪ್ರಮಾಣ ಪತ್ರ ಪಡೆಯಲು ಆರು ತಿಂಗಳು ಕಾಲಾವಕಾಶ ಇದೆಯೆಂದು ಸಬೂಬು ಹೇಳಿರುತ್ತಾರೆ. ಇಂತಹ ಅಕ್ರಮ ಕ್ಲಿನಿಕ್‌ಗಳ ಸೀಜ್ ಮಾಡುವ ಮೂಲಕ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಲ್ಲದೇ ಕಾದು ನೋಡಬೇಕಾಗಿದೆ. ಎಂದು ಎ ಐ ಡಿ ಆರ್ ಎಂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ,ರಾಮೇಶ್, ಮಂಜುನಾಥ್ ಪತ್ರಿಕೆ ತಿಳಿಸಿದರು
ಈ ರೀತಿಯಾಗಿ ಅಕ್ರಮವಾಗಿ ಪ್ರೈವೇಟ್ ಕ್ಲಿನಿಕ್ ನಡೆಸಲು ಆರೋಗ್ಯ ಇಲಾಖೆಯಲ್ಲಿ ನಿಯಮಾವಳಿಗಳು ಇವೆಯೇ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸಾರ್ವಜನಿಕರಾದ ರಮೇಶ್ ಪ್ರಶ್ನಿಸುತ್ತಿದ್ದಾರೆ.