Demanding implementation of internal reservation,,! Protest dharna by All India Madiga Dandora Committee on Mar. 12,,

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ.
ಕುಕನೂರು : ಒಳಮೀಸಲಾತಿ ವರ್ಗೀಕರಣ ಜಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿಳಂಭ ನೀತಿಯನ್ನು ಖಂಡಿಸಿ ಮತ್ತು ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಹಾಗೂ ದಲಿತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ಆಡಳಿತದ ವಿಳಂಭ ನೀತಿಯನ್ನು ಖಂಡಿಸಿ ಮಾ.12ರಂದು ಪ್ರತಿಭಟನಾ ಧರಣಿಯನ್ನು ನಡೆಸಲಾಗುವುದು ಎಂದು ಅಖಿಲ ಭಾರತ ಮಾದಿಗ ದಂಡೋರ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ ಹೇಳಿದರು.
ಅವರು ಮಂಗಳವಾರದಂದು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾರ್ಚ್ 12ರ ಬುಧವಾರದಂದು ಬೆಳಗ್ಗೆ 11.30ಕ್ಕೆ ಕೊಪ್ಪಳದ ಡಾ. ಬಾಬು ಜಗಜೀವನ್ ರಾಮ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮತ್ತು ವಿವಿಧ ಬೇಡಿಕೆ ಹಾಗೂ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಧರಣಿ ಹಮ್ಮಿಕೊಂಡಿದ್ದು ಸಮಾಜದ ಎಲ್ಲಾ ಮುಖಂಡರು ಬಹು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜ್ಯಾಧ್ಯಕ್ಷರು ಮನವಿ ಮಾಡಿದರು.
ನಂತರದಲ್ಲಿ ಮಾತನಾಡಿದ ಅವರು ಸುಮಾರು ಮೂವತ್ತು, ನಲವತ್ತು ವರ್ಷದಿಂದ ನಿರಂತರ ನಮ್ಮ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದ್ದರು ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಳಂಭ ನೀತಿ ಅನುಸರಿಸುತ್ತಿವೆ. ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡಲು 7 ಜನರ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ. ಹೀಗಿದ್ದೂಕೂಡ ಸಂವಿಧಾನ ಪೀಠ ಆದೇಶವನ್ನು ನೀಡಿ 6-7 ತಿಂಗಳು ಕಳೆದರೂ ಪರಿಶಿಷ್ಟ ಜಾತಿಗಳಲ್ಲಿಯ ಒಳಮೀಸಲಾತಿಯನ್ನು ಮಾದಿಗರಿಗೆ ಕರ್ನಾಟಕ ರಾಜ್ಯ ಸರ್ಕಾರವು ಒಳ ಮೀಸಲಾತಿ ಕೊಡುವಲ್ಲಿ ವಿನಾಕಾರಣ ಕಾಲಹರಣ ಮಾಡುತ್ತಾ ಬಂದಿದೆ ಎಂದರು.
ನ್ಯಾಯ ಪೀಠದ ಆದೇಶದಂತೆ ಮತ್ತು ನ್ಯಾಯಮೂರ್ತಿ ಸದಾಶಿವ ಆಯೋಗದ ದತ್ತಾಂಶ ಪ್ರಕಾರ ಮಾದಿಗರಿಗೆ ಒಳಮೀಸಲಾತಿ ಜಾರಿ ಮಾಡಬೇಕು. ದೇಶದ ಸರ್ವಶ್ರೇಷ್ಠ ಸರ್ವೋಚ್ಚನ್ಯಾಯಲದ ಸಂವಿಧಾನ ಪೀಠದ 7 ಜನ ನ್ಯಾಯಮೂರ್ತಿಗಳು ನೀಡಿರುವ ಆದೇಶದಂತೆ ಒಳ ಮಿಸಲಾತಿ ನೀಡಲು ವಿಳಂಭಮಾಡಿ ಸಾಮಾಜಿಕ ನ್ಯಾಯವನ್ನು ಮುಚ್ಚಿ ಹಾಕುತ್ತಿರುವುದು ಶಡ್ಯಂತ್ರವೇ ಸರಿ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯತಾವತ್ತಾಗಿ ಜಾರಿ ಮಾಡಬೇಕು ಎಂದು ಈ ವೇಳೆ ಆಗ್ರಹಿಸಿದರು.
ನಂತರ ಬಸವರಾಜ ಬೂದಗುಂಪಿ ಮಾತನಾಡಿ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡದೇ ಏಕ ಸದಸ್ಯ ಪೀಠವನ್ನು ರಚಿಸಿ ಕಾಲಹರಣ ಮಾಡುತ್ತಾ ಮಾದಿಗರ ಹಕ್ಕುಗಳನ್ನು ಕಸಿದು ತಿನ್ನುತ್ತಿರುವುದು ಮಾದಿಗರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದರು.
ಮಾದಿಗರ ಒಳಮೀಸಲಾತಿ ಸಂಬಂದಪಟ್ಟಂತೆ ಸದನದಲ್ಲಿ ಶಾಸಕರು, ಸಚಿವರುಗಳು ಧ್ವನಿ ಎತ್ತಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಬೇಕು, ಹಾಗೂ ಶಾಸಕರು, ಸಚಿವರುಗಳು ಮಾತನಾಡದೇ ಇರುವುದು, ಮಾದಿಗ ಸಮಾಜದ ಮೇಲೆ ಸರ್ಕಾರ ಗೂಂಡಾಗಿರಿ ಮತ್ತು ದೌರ್ಜನ್ಯ ಎಂದು ಪರಿಗಣಿಸಬೇಕಾಗುತ್ತದೆ. ಅದು ಸರಿಯಲ್ಲ. ಕಾರಣ ಪರಿಶಿಷ್ಟ ಜಾತಿ ಮಾದಿಗರಿಗೆ ಒಳ ಮೀಸಲಾತಿಯನ್ನು ತುರ್ತಾಗಿ ಜಾರಿ ಮಾಡಬೇಕೆಂದು ಅಖಿಲ ಭಾರತ ಮಾದಿಗ ದಂಡೋರ ಒತ್ತಾಯಿಸುತ್ತದೆ ಮತ್ತು ಆಗ್ರಹಿಸುತ್ತದೆ ಎಂದರು.
ಒಂದು ವೇಳೆ ನಮ್ಮ ಬೇಡಿಕೆ ಹಕ್ಕೊತ್ತಾಯಗಳಿಗೆ ಸ್ಪಂದಿಸದೇ ಇದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಮುತ್ತಣ್ಣ ಮೈಲಾರಪ್ಪ ಅಂಬಳಿ, ಕುಕನೂರು ತಾಲೂಕಾಧ್ಯಕ್ಷ ಅಂದಪ್ಪ ಹೊಸ್ಮನಿ, ಯಲಬುರ್ಗಾ ತಾಲೂಕಾಧ್ಯಕ್ಷ ಪ್ರಭುರಾಜ ಕಡೇಮನಿ, ಗಂಗಾವತಿ ತಾಲೂಕ ಉಪಾಧ್ಯಕ್ಷ ಯಮನೂರಪ್ಪ ಎಸ್.ಎಚ್, ಕಲ್ಯಾಣ ಕರ್ನಾಟಕ ಅಧ್ಯಕ್ಷ ಹುಲಗಪ್ಪ ಹಿರೇಮನಿ ಮುಖಂಡರಾದ ಬಸವರಾಜ ಬೂದಗುಂಪಿ, ಮಹೇಶ ಹಿರೇಮನಿ, ಡಿಜಿ. ದೇವಪ್ಪ ಮನ್ನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.