The development of Mallamma’s temple is commendable : Sanganna Kardi

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಶ್ಲಾಘನೀಯ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮದೇವಸ್ಥಾನದ ವತಿಯಿಂದ ಮಹಾಶಿವರಾತ್ರಿ ನಿಮಿತ್ಯ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವೇ ರ‍್ಷಗಳಲ್ಲಿ ಕೊಪ್ಪಳದ ಎರಡನೇಯ ಗವಿಮಠದಂತೆ ಬೆಳೆಯುತ್ತಿದೆ ಎಂದರು.
ರಡ್ಡಿ ಸಮಾಜ ದುಡಿಯುವ ಸಮಾಜವಾಗಿದೆ ಇತರೆ ಸಮಾಜಕ್ಕೆ ಅದು ಮಾದರಿಯಂತೆ ದುಡಿಯುತ್ತದೆ ಎಂದರು. ಇತ್ತೀಚಿಗೆ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಆದರೆ, ಕೃಷಿ ಅತ್ಯಂತ ಪವಿತ್ರ ಎನ್ನುವುದನ್ನು ಅವರಿಗೆ ಅರಿವು ಮೂಡಿಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಮಾತನಾಡಿ, ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ದಿಸೆಯಲ್ಲಿ ಶೀಘ್ರದಲ್ಲಿಯೇ ಕ್ರಮವಹಿಸುವ ಭರವಸೆ ನೀಡಿದರು. ಹಾಗೇ ಸಮಾಜದ ಕಾರ್ಯ ಶ್ಲಾಘನೀಯ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಅವರು ಮಾತನಾಡಿ, ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ನಾನು ಸಹ ಸದಾ ಸಹಕರಿಸುತ್ತೇನೆ ಎಂದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅವರು ಮಾತನಾಡಿ, ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಳ್ಳೆಯ ಸಂಸ್ಕಾರವನ್ನು ನೀಡುತ್ತೇವೆ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಮಾತನಾಡಿ, ಸಮಾಜದ ಯುವಕರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಘಟನೆಯಿಂದ ಮತ್ತು ಹಿರಿಯರ ಸತತ ಪ್ರಯತ್ನದಿಂದ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್. ವಿ. ಕಣವಿ ಅವರು ಮಾತನಾಡಿ, ಕಾರ್ಯಕ್ರಮ ಮತ್ತು ದೇವಸ್ಥಾನದ ಅಭಿವೃದ್ಧಿಯ ಕುರಿತು ಮಾತನಾಡಿದರು.
ರಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಜಗದೀಶಪ್ಪ ಸಿಂಗನಾಳ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಎಸ್. ಬಿ. ನಾಗರಳ್ಳಿ, ತಾಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ, ವೆಂಕಾರಡ್ಡಿ ವಕೀಲರು, ಹನುಮರಡ್ಡಿ ಹಂಗನಕಟ್ಟಿ, ಕಾಶಿನಾಥರಡ್ಡಿ ಅವಾಜಿ, ಶಿವಣ್ಣ ರಾಯರಡ್ಡಿ, ದೇವಪ್ಪ ಅರಿಕೇರಿ, ವಿರುಪಾಕ್ಷಪ್ಪ ನವೋದಯ ಇದ್ದರು.
ಜೀವನ ಸಾಬ ಭಿನ್ನಾಳ ಅವರ ತಂಡ ಜನಪದ ಹಾಗೂ ಮಂಜುನಾಥ ಓಸ್ವೋ ಅವರ ತಂಡ ಭಾವಗೀತೆ ಕಾರ್ಯಕ್ರಮವನ್ನು ನೀಡಿದರು.
ಸೋಮರಡ್ಡಿ ಅಳವಂಡಿ ಪ್ರಸ್ಥಾವಿಕವಾಗಿ ಮಾತನಾಡಿದರು, ಚಂದ್ರು ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು, ಬಿ.ಎಸ್. ಪಾಟೀಲ್ ಸ್ವಾಗತಿಸಿದರು, ಹಾಗೂ ಲಿಂಗಾರಡ್ಡಿ ಕರಮುಡಿ ವಂದಿಸಿದರು.