An unknown person was found dead.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ಅಪರಿಚಿತ ವ್ಯಕ್ತಿಯ ಶವ ಪತ್ತೆ ದಿ.27.02 ರಂದು ಬೆಳಗಿನ ಜಾವ 2ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ಸ್ನಾನ್ ಇಸ್ಮಾತ ಪ್ರಾಕ್ಟರಿಯ ಗೇಟ ಮುಂಭಾಗದ ತೆಗ್ಗಿನಲ್ಲಿ ಸುಮಾರು 25 ರಿಂದ 30 ವಯಸ್ಸಿನ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.
ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಸಾಕ್ಷ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಎನ್.ಹೆಚ್-67 ಕೊಪ್ಪಳ, ಹೊಸಪೇಟೆ ರಸ್ತೆಯ ಮೇಲೆ ಡಿವೈಡರ್ ಹತ್ತಿರ ತಂದು ಹಾಕಿದ್ದಾರೆ.
ಕೊಲೆಯಾದ ವ್ಯಕ್ತಿಯ ಚಹರೆ. ಗುರುತು. ಗೋದಿ ಮೈಬಣ್ಣ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ಬಲಗೈ ರಟ್ಟೆಯ ಮೇಲೆ ಇಂಗ್ಲೀಷನ “V” ಅಕ್ಷರದ ಹಚ್ಚೆ ಇದೆ.
ಈ ವ್ಯಕ್ತಿಯು 184 ಸೆಂ.ಮೀ ಎತ್ತರವಿದ್ದು, ಇತನು ಕಪ್ಪು ಬಣ್ಣದ ಸ್ಟೇಟರ್, ಕಂದು ಬಣ್ಣದ ಟೀ ಶರ್ಟ, ತಿಳಿ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲ್ಕಂಡ ಚಹರೆ ಗುರುತುವುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಗಿನ ವಿಳಾಸಕ್ಕೆ ಮಾಹಿತಿ ನೀಡಲು ಕೋರಲಾಗಿದೆ. ಪೊಲೀಸ್ ಅಧಿಕಾರಿಗಳು ದೂರವಾಣಿ ಸಂಖ್ಯೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ 08539-230111,
ಡಿ.ಎಸ್.ಪಿ. ಕೊಪ್ಪಳ 08539-230432, 9480803720, ಸಿ.ಪಿ.ಐ. ಕೊಪ್ಪಳ ಗ್ರಾಮೀಣ ವೃತ್ತ. 08539-222433, 9480803731 ಪಿ.ಎಸ್.ಐ. ಕೊಪ್ಪಳ ಗ್ರಾಮೀಣ ಠಾಣೆ 08539-221333, 9480803746 ಈ ದೂರವಾಣಿ ಸಂಪರ್ಕಿಸುವಂತೆ
ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.