Breaking News

ಬಾಲ್‌ಬಾಕ್ಸ್  ಜೂಜಾಟ ನಿಷೇಧಿಸುವಂತೆ ತಹಶೀಲ್ದಾರ್ ಅವರಿಗೆ ಮನವಿ

Petition to Tehsildar to Ban Ballbox Gambling

ಜಾಹೀರಾತು

ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ
ಶ್ರೀಕ್ಷೇತ್ರ ಕೊಟ್ಟೂರಿನಲ್ಲಿ ಬಾಲ್‌ಬಾಕ್ಸ್  ಜೂಜಾಟ ನಿಷೇಧಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅಮರೇಶ್ ಜಿಕೆ ಅವರಿಗೆ ಗುರುವಾರ ಮನವಿ ಪತ್ರ ನೀಡಿದರು

ವಿಜಯನಗರ ಜಿಲ್ಲೆ ವ್ಯಾಪ್ತಿ ಮತ್ತು ಕೊಟ್ಟೂರು ತಾಲ್ಲೂಕಿನ ಸಾರ್ವಜನಿಕರು ಮತ್ತು ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಈ ಮೂಲಕ ದೂರು ಸಲ್ಲಿಸಲಾಯಿತು

ಕೊಟ್ಟೂರು ಪಟ್ಟಣದ ಆರಾಧ್ಯ ದೈವ, ಕ್ಷೇತ್ರನಾಥ ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವವು ದಿನಾಂಕ 22-02-2025 ರಂದು ನಡೆಯುತ್ತಿದ್ದು, ಇದರ ಅಂಗವಾಗಿ ದಿನಾಂಕ 21-02-2025 ರಿಂದ 23-02-2025 ರವರೆಗೆ ಬೇರೆ ಬೇರೆ ಊರುಗಳಿಂದ ಸಾರ್ವಜನಿಕರು ತುಂಬಾ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸದರಿ ಜಾತ್ರೆಯಲ್ಲಿ ಬಾಲ್‌ಬಾಕ್ಸ್ ಮತ್ತು ಆನೆ ಒಂಟೆ ಹಾಗೂ ಇನ್ನಿತರೆ ಜೂಜಾಟ  ಆರಂಭವಾಗುವ ಸಂಭವವಿರುತ್ತದೆ. ಜೂಜಾಟಗಳು ಸಾರ್ವಜನಿಕರು ತಮ್ಮ ಹಣವನ್ನು ಕಳೆದುಕೊಳ್ಳುವ ಆಟವಾಗಿರುತ್ತದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಬಾಲ್‌ಬಾಕ್ಸ್ ಹಾಗೂ ಇನ್ನಿತರೆ ಯಾವುದೇ ಜೂಜಾಟಗಳನ್ನು ನಿಷೇಧಿಸುವಂತೆ ಅಖಿಲ ಕರ್ನಾಟಕ ಕಿಸಾನ್  ಜಾಗೃತ ಸಂಘದ ವಿಜಯನಗರ ಜಿಲ್ಲೆ ಉಪಾದ್ಯಕ್ಷರು  ಜಂಬೂರು ಮರುಳಸಿಧ್ದಪ್ಪ ಕೊಟ್ಟೂರು ತಾಲೂಕು ಉಪಾದ್ಯಕ್ಷರು ಎಸ್ ಎಸ್ ರಾಜಶೇಖರ್. ಪರುಸಪ್ಪ ಕೆ .ಅಯ್ಯನಹಳ್ಳಿ.ಅಶೋಕ,ಪರುಶರಾಮ.ಮೂಗಪ್ಪ,ಇತರರು ಒತ್ತಾಯಿಸಿದರು

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.