PDO Suresh Chalawadi notice to submit necessary document for property tax revision

ಗಂಗಾವತಿ : ಆಸ್ತಿಗಳ ತೆರಿಗೆ ಪರಿಷ್ಕರಣೆ ಮಾಡುತ್ತಿದ್ದು, ಮಾಲೀಕರು ಅಗತ್ಯ ದಾಖಲೆಗಳನ್ನುಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸಲ್ಲಿಸುವಂತೆ ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದ ಸುತ್ತೋಲೆ ಅನುಸಾರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಆಸ್ತಿಗಳ ತೆರಿಗೆ ಬೇಡಿಕೆ ವಸೂಲಿ ಮತ್ತು ಬಾಕಿ ನಿರ್ವಹಿಸಲು ನಿಗದಿಪಡಿಸಿರುವ ಪಂಚತಂತ್ರ 2.0 ತಂತ್ರಾಂಶದಲ್ಲಿ ಕರ ಪರಿಷ್ಕರಣೆ, ಇ-ಸ್ವತ್ತು ತಂತ್ರಾಂಶದಡಿಯಲ್ಲಿ ಆಸ್ತಿಗಳ ದಾಖಲಾತಿ ಇಂದೀಕರಿಸುವಂತೆ ಸರಕಾರವು ನಿರ್ದೇಶಿಸಿದ್ದು, ನಿಗದಿತ ಕಾಲಾವಧಿ ಒಳಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ಆಸ್ತಿಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳಾದ ಖರೀದಿ ಪತ್ರ, ಎನ್ .ಎ. ಆದೇಶದ ಪ್ರತಿ, ವಿನ್ಯಾಸ ನಕ್ಷೆ, ಕಟ್ಟಡ ನಕ್ಷೆ ಪರವಾನಗಿ, ಚೆಕ್ ಬಂಧಿ ದಾಖಲೆಗಳು, ವರ್ಗಾವಣೆ ಆದೇಶದ ಪ್ರತಿ ಆಸ್ತಿಯ ಭಾವಚಿತ್ರ ಆಸ್ತಿ ಮಾಲೀಕರ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಮತ್ತು ವೋಟರ್ ಐಡಿ ದಾಖಲೆಗಳ ಅವಶ್ಯಕತೆ ಇರುತ್ತದೆ. ಈ ಎಲ್ಲಾ ದಾಖಲೆಗಳನ್ನು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಸಂಬಂಧಪಟ್ಟ ಕರವಸೂಲಿಗಾರರಾದ ರುದ್ರಸ್ವಾಮಿ, ಆಂಜನೇಯ ಅವರಿಗೆ ಒದಗಿಸಿ ಕೊಟ್ಟು ಸಹಕರಿಸುವಂತೆ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.