Madappa’s income has crossed crores and the rate of fee given by the devotees has not been reduced.

ವರದಿ : ಬಂಗಾರಪ್ಪ .ಸಿ .
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹುಂಡಿ ಹಣದ ಏಣಿಕೆ ಕಾರ್ಯವು ಈ ದಿನ ಬೆಳಿಗ್ಗೆ 6.30 ಗಂಟೆಯಿಂದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು 28 ದಿನಗಳಲ್ಲಿ ಒಟ್ಟು ಮೊತ್ತ ರೂ.1,94,49,243.00ಗಳು (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 63 ಗ್ರಾಂ 06 ಮಿ, ಬೆಳ್ಳಿ 01 ಕೆ.ಜಿ 510 ಗ್ರಾಂ ಹುಂಡಿಯಲ್ಲಿ ದೊರೆತಿದೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಲೆಕ್ಕಾಧೀಕ್ಷಕರಾದ ಶ್ರೀ ಗುರುಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಶ್ರೀ ಗಂಗನ ತಿಮ್ಮಯ್ಯ, ಶ್ರೀಮತಿ ಭಾಗ್ಯಮ್ಮ, ಮಹದೇವಪ್ಪ ಬಿ, ಮರಿಸ್ವಾಮಿ ರವರು ಹಾಗು ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಶಶಿಕುಮಾರ್, ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡದ ಮುಖ್ಯ ವ್ಯವಸ್ಥಾಪಕರು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
ರಾಜ್ಯದಲ್ಲೆ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆದರೆ ದೇವಾಲಯದ ಪ್ರವೇಶ ಶುಲ್ಕವು ದುಪ್ಪಟ್ಟು ಹೆಚ್ಚಾಗಿದೆ ಎಂದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ,ಅಧಿಕಾರಿಗಳು ಕೂಡಲೆ ಸಂಬಂಧಿಸಿದ ಶುಲ್ಕಗಳನ್ನು ಕಡಿತಗೊಳಿಸಲು ಪತ್ರಿಕೆಗಳ ಮುಖಾಂತರ ಮನವಿ ಮಾಡಿದರು.