Seventh Experience Hall Parliament session on 21st, 22nd, 23rd February

ಬೀದರ್ : ಬಸವ ಕಲ್ಯಾಣದಲ್ಲಿ ಇಂದು ದಿ, 18/02/2025ರಂದು ಮುಂಜಾನೆ ಬಸವ ಮಹಾಮನೆಯಲ್ಲಿ ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ ಪತ್ರಿಕಾಗೋಷ್ಠಿ ಕರೆಯಲಾಗಿದ್ದು, ಗೋಷ್ಠಿಯಲ್ಲಿ ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಸಂಚಾಲಕರು, ಲಕ್ಷ್ಮಣ ದಸ್ತಿ ಅಧ್ಯಕ್ಷರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಮನೋಹರ ಮಸ್ಸಿ, ಶಾಮರಾವ ಪ್ಯಾಟಿ, ಸಂಜೀವ ಗಾಯಕವಾಡ, ಪಿಂಟು ಕಾಂಬಳೆ, ಎಂ ಬಿ ನಿಂಗಪ್ಪ ಜಾನಪದ ಅಧ್ಯಕ್ಷರು, ದಿಗಂಬರ ಜಲ್ದೆ, ಸಿಖಂದರ ಶಿಂಧೆ ಹಾಜರಿದ್ದರು.
ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ ಬಸವ ಮಹಾಮನೆ ವತಿಯಿಂದ ದಿನಾಂಕ 21-22-23 ಫೆಬ್ರುವರಿ ರಂದು ಏಳನೇ ಅನುಭವ ಮಂಟಪ ಸಂಸದ ಅಧಿವೇಶನ ಹಮ್ಮಿಕೊಳ್ಳಲಾಗಿದ್ದು, ನಾಡಿನ ಹಲವಾರು ಅನುಭಾವಿಗಳು ಬಸವಾದಿ ಶರಣರ ತತ್ವ ಸಿದ್ದಾಂತ ವಿಷಯಗಳ ಸಮಗ್ರ ಅನುಭಾವ ಹಂಚಿಕೊಳ್ಳುವರು, ಎಲ್ಲರೂ ಚರ್ಚೆ ಮಾಡುವರು.ಕೊನೆಯ ದಿನ 23-02-2025ರಂದು ಸಮಯ ಮುಂಜಾನೆ 11:30ಕ್ಕೆ ಸಮಾನತಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸಮಾವೇಶದ ಗೌರವ ಅಧ್ಯಕ್ಷ ಸನ್ಮಾನ್ಯ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಸಚಿವರು, ಅಧ್ಯಕ್ಷರಾಗಿ ಸನ್ಮಾನ್ಯ ಶರಣು ಸಲಗಾರ ಮಾನ್ಯ ಶಾಸಕರು ಬಸವಕಲ್ಯಾಣ, ಪ್ರಧಾನ ಕಾರ್ಯದರ್ಶಿರಾಗಿ ಶ್ರೀಕಾಂತ ಸ್ವಾಮಿ ಕರ್ನಾಟಕ ಲಿಂಗಾಯತ ರಾಜ್ಯ ಸಂಚಾಲಕ, ನೇತೃತ್ವ ಪೂಜ್ಯ ಡಾ ಸಿದ್ದರಾಮ ಶರಣರು ಬೆಲ್ದಾಳ.
ಈ ಕಾರ್ಯಕ್ರಮದಲ್ಲಿ ದಿನಾಂಕ 23/02/2025ರಂದು ಸನ್ಮಾನ್ಯ ಡಾ ಹೆಚ ಸಿ ಮಹದೇವಪ್ಪ ಮಾನ್ಯ ಸಮಾಜ ಕಲ್ಯಾಣ ಸಚಿವರು, ಸನ್ಮಾನ್ಯ ಸತೀಶ ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು, ಸನ್ಮಾನ್ಯ ಪ್ರಿಯಾಂಕ ಖರ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಪಂಚಾಯತರಾಜ ಮತ್ತು ಮೂಲ ಸೌಕರ್ಯ ಸಚಿವರು, ಸನ್ಮಾನ್ಯ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಮತ್ತು ಪರಿಸರ ಸಚಿವರು , ಸನ್ಮಾನ್ಯ ರಹೀಂ ಖಾನ ಮಾನ್ಯ ಪೌರಾಡಳಿತ ಸಚಿವರು, ಸನ್ಮಾನ್ಯ ಅಜಯಸಿಂಗಜಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾನ್ಯ ಶಾಸಕರು, ಸನ್ಮಾನ್ಯ ಭಗವಂತವ ಖೂಬಾ ಮಾಜಿ ಕೇಂದ್ರ ಸಚಿವರು ಮುಖ್ಯ ಅತಿಥಿ ಆಗಿ ಆಗಮಿಸುತ್ತಾರೆ. ಅಧ್ಯಕ್ಷತೆ ಸನ್ಮಾನ್ಯ ಶ್ರೀ ಶರಣು ಸಲಗಾರ ಮಾನ್ಯ ಶಾಸಕರು, ವಿಶೇಷ ಆಹ್ವಾನಿತರು: ಸನ್ಮಾನ್ಯ ಅಲ್ಲಮಪ್ರಭು ಪಾಟಿಲ ಮಾನ್ಯ ಶಾಸಕರು, ಸನ್ಮಾನ್ಯ ಸಿದ್ದು ಪಾಟಿಲ ಮಾನ್ಯ ಶಾಸಕರು, ಸನ್ಮಾನ್ಯ ಶೈಲೇಂದ್ರ ಬೆಲ್ದಾಳೆ ಮಾನ್ಯ ಶಾಸಕರು,ಸನ್ಮಾನ್ಯ ರಾಜಶೇಖರ ಪಾಟಿಲ ಮಾಜಿ ಶಾಸಕರು, ಸನ್ಮಾನ್ಯ ರಘುನಾಥ ಮಲ್ಕಾಪುರೆ ಮಾಜಿ ಶಾಸಕರು,ಸನ್ಮಾನ್ಯ ಡಾ ಚಂದ್ರಶೇಖರ ಪಾಟಿಲ ಮಾನ್ಯ ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ಭೀಮರಾವ್ ಪಾಟಿಲ ಮಾನ್ಯ ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ಶಶೀಲ ನಮೋಶಿ ವಿಧಾನ ಪರಿಷತ್ ಸದಸ್ಯರು , ಸನ್ಮಾನ್ಯ ವಿಜಯಸಿಂಗ ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಶ್ರೀಮತಿ ಮಾಲಾ ಬಿ ನಾರಾಯಣರಾವ್, ಸನ್ಮಾನ್ಯ ಮಲ್ಲಿಕಾರ್ಜುನ ಖೂಬಾ ಮಾಜಿ ಶಾಸಕರು, ಧನರಾಜ ತಾಲಮಪಳ್ಳಿ, ಆನಂದ ದೇವಪ್ಪ, ಶ್ರಿಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ ಮತ್ತಿತರರು ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಸೌಹಾರ್ದ ರತ್ನ ಪ್ರಶಸ್ತಿ ಡಾ ಅಬ್ದುಲ್ ಖದಿರಸಾಬ ಅಧ್ಯಕ್ಷರು ಶಾಹೀನ ಶಿಕ್ಷಣ ಸಂಸ್ಥೆ ಬೀದರ ಇವರಿಗೆ ಸಲ್ಲಿಸಲಾಗುವುದು.
ಶರಣರು ಮಾತನಾಡುತ್ತಾ ಸಮಾನತಾ ಸಮಾವೇಶ ಸಮಾಜದಲ್ಲಿ ಇರುವ ಗೊಂದಲ ಹೋಗಲಾಡಿಸಿ ಮಾನವರೆಲ್ಲರೂ ಒಂದೇ, ಜಾತಿ ಲಿಂಗ ವರ್ಣ ವರ್ಗ ಭೇದ ನಿರ್ನಾಮ ಮಾಡಬೇಕು ಎನ್ನುವ ಸಂದೇಶ ಸಮಾಜಕ್ಕೆ ಮುಟ್ಟಿಸುವ ಉದ್ದೇಶ ಆಗಿದೆ ಎಂದು ಹೇಳಿದರು.
ಸಮಾವೇಶದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಮಾತನಾಡುತ್ತಾ ಪೂಜ್ಯ ಬೆಲ್ದಾಳ ಶರಣರು ಅಪ್ರತಿಮ ಜ್ಞಾನಿಗಳು, ಸಂಪೂರ್ಣ ಭಾರತೀಯ ಧಾರ್ಮಿಕ ಗ್ರಂಥಗಳ ಮತ್ತು ಕುರಾನ್ ಬೈಬಲ್ ಸಹಿತ ಅಧ್ಯಯನ ಮಾಡಿದ್ದವರು, ಬಸವಾದಿ ಶರಣರ ವಚನ ಸಾಹಿತ್ಯ ಸಂಪೂರ್ಣ ಅಧ್ಯಯನ ಮಾಡಿ ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದವರು, ನಡೆ ನುಡಿ ಆಚರಣೆ ಶುದ್ಧ ಇದ್ದವರು. ಸಮಾಜದ ಬಗ್ಗೆ ಅತಿ ಕಳಕಳಿ ಉಳ್ಳವರು. ಸಮಾಜದಲ್ಲಿ ಐಕ್ಯತೆ ಮೂಡಿಸಲು ಬಸವ ತತ್ವ ಸಿದ್ದಾಂತ ಪ್ರಚಾರ ಮಾಡಲು ದುಡಿಯುತ್ತಿದ್ದಾರೆ. ಬಸವಕಲ್ಯಾಣ ಕಾಶಿ ಮಕ್ಕಾ ಜೆರುಸಲೇಮ್ ಇದ್ದ ಹಾಗೆ , ಆದರಿಂದ ಈ ಸಮಾವೇಶಕ್ಕೆ ಹೆಚ್ಚಿನ ಜನ ಭಾಗವಹಿಸಬೇಕು ಎಂದು ತಿಳಿಸಿದರು.
ಲಕ್ಷ್ಮಣ ದಸ್ತಿಯವರು ಮಾತನಾಡಿ ಪೂಜ್ಯ ಬೆಲ್ದಾಳ ಶರಣರು ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳಷ್ಟು ಜನಪರ ಕೆಲಸ ಮಾಡುತ್ತಿದ್ದಾರೆ, ಅವರ ಪ್ರಯತ್ನದಿಂದ ಈ ಭಾಗದಲ್ಲಿ ಬುದ್ಧ ಬಸವ ಅಂಬೇಡ್ಕರ್ ತತ್ವ ಪ್ರಚಾರ ಆಗುತ್ತಿದೆ, ಈ ಸಮಾನತಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯಯಲ್ಲಿ ಜನರು ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ವಿನಂತಿಸಿದರು.
ಪತ್ರಿಕಾ ಗೋಷ್ಟಿ ಸ್ವಾಗತ ಮನೋಹರ ಮಸ್ಸಿ ಸ್ವಾಗತಿಸಿದರು, ಪಿಂಟು ಕಾಂಬಳೆ ವಂದಿಸಿದರು.