Andigalish Gudda Plumbing Repair

ಕೊಪ್ಪಳ: ಐತಿಹಾಸಿಕ ಶ್ರೀ ಅಂದಿಗಾಲೀಶ ಗುಡ್ಡದಲ್ಲಿ ನೂರಾರು ಕೋತಿಗಳು, ನವಿಲುಗಳು, ನರಿ, ತೋಳ, ವನಗ್ಯಾ, ಕರಡಿ, ಚಿರತೆ ಸೇರಿದಂತೆ ಹಲವಾರು ವನ್ಯಜೀವಿಗಳು ಇದ್ದು ಬೇಸಿಗೆಯ ನಿಮಿತ್ತ ಕುಡಿವ ನೀರಿನ ದಾಹ ಹಿಂಗಿಸಲು ಅಗಳಕೇರಿಯ ಶ್ರೀ ಅಂದಿಗಾಲೀಶ್ವರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಕೆಟ್ಟು ಹೋದ ಕೊಳಾಯಿ ರಿಪೇರಿ ಮಾಡಲಾಯಿತು.
ಪ್ರತಿವರ್ಷ ಬೇಸಿಗೆಯ ಸಂದರ್ಭದಲ್ಲಿ ಕುಡಿವ ನೀರಿನ ಕೊರತೆ ಗುಡ್ಡದಲ್ಲಿ ಕಾಣಸಿಗುತ್ತದೆ. ಕೊಳ್ಳಿನ ಕೆರೆ ಇದ್ದರೂ ಅದರಲ್ಲಿ ನೀರು ಸಂಗ್ರಹ ಸಾಮರ್ಥ್ಯ ಇಲ್ಲದ ಕಾರಣ ವನ್ಯಜೀವಿಗಳು ನೀರು ಅರಸಿ, ರಾಷ್ಟಿçÃಯ ಹೆದ್ದಾರಿಯತ್ತ ಸಾಗಿ ಬರುತ್ತಿದ್ದವು. ಅನೇಕ ಪ್ರಾಣಿಗಳು ವಾಹನಗಳಿಗೆ ಬಲಿಯಾಗಿ ಸಾವಿಗೀಡಾಗುತ್ತಿದ್ದವು. ಇದನ್ನು ತಪ್ಪಿಸಲು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮಿ ದೇವಿ ಮತ್ತು ಶ್ರೀ ತೇರಿನ ಹನುಮಂತರಾಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ ಅವರು ಅಂದಿಗಾಲೀಶ ಗುಡ್ಡದಲ್ಲಿ ಅಗಳಕೇರಿ ದೈವದವರ ವತಿಯಿಂದ ಕೊರೆಸಿದ್ದ ಕೊಳಾಯಿಯನ್ನು ಸದ್ಭಕ್ತರ ನೆರವಿನಿಂದ ದುರಸ್ತಿಗೊಳಿಸಿದರು.
ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರು, ಆಹಾರ ಒದಗಿಸಿದರೆ ವನ್ಯಜೀವಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ಶ್ರೀ ಅಂದಿಗಾಲಶೀಶ್ವರ ಸ್ವಾಮಿ ಸೇವಾ ಸಮಿತಿಯ ಮುಖಂಡರಾದ ಕೃಷ್ಣ ಗಡಾದ, ಮಂಜುನಾಥ ಶೆಟ್ಟರ್, ಪರಶುರಾಮ ವಡ್ಡರ್, ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳಾದ ಹನುಮಂತಪ್ಪ, ಕನಕರಾಯ, ಹನುಮಂತ ಮೇಸ್ತಿç ಗುಡದಳ್ಳಿ ಇವರ ಸಹಕಾರದೊಂದಿಗೆ ಕೆಟ್ಟು ನಿಂತಿದ್ದ ಕೊಳಾಯಿ ರಿಪೇರಿ ಮಾಡಿ ತೊಟ್ಟಿಯಲ್ಲಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಸೇವಾ ಕೈಂಕರ್ಯಕ್ಕೆ ಅಗಳಕೇರಿ ಮತ್ತು ಶಹಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಹಲವಾರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.