Breaking News

ಕಾರ್ಖಾನೆ ತೊಲಗಿಸಿ ಅಭಿಯಾನ : ಫೆ. ೨೨ ರಂದು ಕೊಪ್ಪಳಕ್ಕೆ ಪರಿಸರವಾದಿ ನಾಗೇಶ ಹೆಗಡೆ

Get rid of the factory campaign: Feb. Environmentalist Nagesh Hegde to Koppal on 22nd

ಜಾಹೀರಾತು
ಜಾಹೀರಾತು

ಕೊಪ್ಪಳ : ಜಿಲ್ಲಾ ಬಚಾವೋ ಆಂದೋಲ ಸಮಿತಿಯ ನೇತೃತ್ವದಲ್ಲಿ ದಶಕಗದಿಂದ ಹಲವು ಹೋರಾಟಗಳನ್ನು ನಡೆಸಿ ಯಶಸ್ವಿಯಗಿದ್ದು, ಕೊಪ್ಪಳಕ್ಕೆ ಬಂದಿರುವ ವಿನಾಶಕಾರಿ ಕಾರ್ಖಾನೆ ತೊಲಗಿಸಲು ನಿರಂತರ ಹೋರಾಟ ರೂಪಿಸಲು ಅದಕ್ಕೆ ಪೂರಕವಾಗಿ ಫೆ. ೨೨ ರಂದು ಖ್ಯಾತ ರಾಷ್ಟಿçÃಯ ಪರಿಸರವಾದಿ ನಾಗೇಶ ಹೆಗಡೆಯವರಿಂದ ವಿಚಾರ ಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಆಂದೋಲನ ಸಮಿತಿ ಪ್ರಕಟಣೆ ನೀಡಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಶುಕ್ರವಾರ ನಡೆದ ಸಭೆಯಲ್ಲಿ ತೆದುಕೊಂಡ ನಿರ್ಣಾಯಗಳನ್ನು ಪ್ರಕಟಿಸಿದ್ದು, ಹೋರಾಟದ ರೂಪರೇಷೆ ಸಿದ್ಧಪಡಿಸಲಾಗಿದೆ. ಎಂಎಸ್‌ಪಿಎಲ್ ಬಲ್ಡೋಟಾ ಇತರೆ ೫೦ ಕ್ಕೂ ಹೆಚ್ಚಿನ ಕಾರ್ಖಾನೆಗಳ ಬೂದಿ, ಧೂಳು ಪರಿಸರ ಮಾಲಿನ್ಯದಿಂದ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಲವು ರೋಗಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಬಲ್ಡೋಟಾ ಕಂಪನಿಯು ೫೪ ಸಾವಿರ ಕೋಟಿ ವೆಚ್ಚದಲ್ಲಿ ಕಾರ್ಖಾನೆ ವಿಸ್ತರಿಸಲು ಘೋಷಿಸಿದೆ. ಕಾರ್ಖಾನೆ ವಿಸ್ತರ್ಣೆಯಾದರೆ ೫ ರಷ್ಟು ತ್ಯಾಜ್ಯ, ಧೂಳು ಪರಿಸರ ಸೇರಿ ತೀವ್ರ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ. ಆದ್ದರಿಂದ ಕೊಪ್ಪಳ ತಾಲೂಕಿನ ಎಲ್ಲಾ ಭಾಗದ ಜನರನ್ನು ಮತ್ತು ಕೊಪ್ಪಳ ಭಾಗ್ಯನಗರದ ಜನರನ್ನು ಜಾಗೃತರನ್ನಾಗಿ ಮಾಡಲು ಫೆಬ್ರವರಿ ೧೭ ರಿಂದ ೨೧ ವರಿಗೆ ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಆಂದೋಲ ನಡೆಸುವುದು.
೨೨-೦೨-೨೦೨೫ ರಂದು ಕೊಪ್ಪಳ ನಗರದದಲ್ಲಿ ಬೃಹತ್ ವಿಚಾರ ಸಂಕಿರಣ ನಡೆಸುವದು. ಈ ಕಾರ್ಯಕ್ರಮದಲ್ಲಿ ಪರಿಸರ ವಿಜ್ಞಾನಿ ನಾಗೇಶ ಹೆಗ್ಡೆಯರು ಭಾಗವಹಿಸುವರು. ಅಪಾಯಕಾರಿಯಾದ ಮಾನವ ವಿನಾಶದ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಡೆದಿರುವ ಸಿದ್ದತೆ ಕುರಿತು ಚರ್ಚಿಸಲಾಗಿ ಅದನ್ನೂ ಇದೇ ವೇಳೆ ವಿರೋಧಿಸಿ ಹೋರಾಟದ ಭಾಗವಾಗಿಸಲು ಅಂತಿಮಗೊಳಿಸಲಾಗಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲೆಯ ಸಂಸದರಿಗೆ, ಶಾಸಕರಿಗೆ ಮಂತ್ರಿಗಳಿಗೆ ಒತ್ತಾಯಿಸುವುದು. ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಂಸದರು ಪಾರ್ಲಿಮೆಂಟನಲ್ಲಿ ಧ್ವನಿ ಎತ್ತಲು ಒತ್ತಾಯಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ, ಕೊಪ್ಪಳ ಜಿಲ್ಲೆಯ ಪ್ರಗತಿಪರರ, ಮತ್ತು ಪರಿಸರವಾದಿಗಳ ಮತ್ತು ಪ್ರಜ್ಞಾವಂತರ ಭಾರಿ ಪ್ರತಿರೋದ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಲು ವಿಚಾರಗೋಷ್ಠಿಯನ್ನು ನಡೆಸಲಾಗುತ್ತದೆ.
ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ೯ ಜನರ ಸಂಚಾಲಕ ಸಮಿತಿ ರಚನೆ ಮಾಡಲಾಯಿತು. ಇದರಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರ, ಬಸವರಾಜ ಶೀಲವಂತರ, ಟಿ. ರತ್ನಾಕರ ಕುಕನೂರ, ಶ್ರೀಮತಿ ಜ್ಯೊತಿ ಗೊಂಡಬಾಳ, ಕಾಶಿಮ್ ಸರ್ದಾರ, ಶರಣು ಗಡ್ಡಿ, ಕೆ.ಬಿ.ಗೋನಾಳ, ಕಾಶಪ್ಪ ಚಲುವಾದಿ, ಮುದಕಪ್ಪ ನರೆಗಲ್ ಒಳಗೊಂಡ ಸಮಿತಿ ರಚಿಸಲಾಗಿದೆ.
ಸಭೆಯಲ್ಲಿ ಮಹಾಂತೆಶ ಕೊತ್ತಬಾಳ, ಡಿ.ಹೆಚ್.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಹನುಮಂತಪ್ಪ ಹೊಳೆಯಾಚೆ,
ರಘು ಚಾಕರಿ, ರಾಮಣ್ಣ ಚೌಡಕಿ, ಮೂಖಪ್ಪ ಬಸಾಪುರ, ಶಿವಪ್ಪ ಹಡಪದ್, ರುದ್ರಪ್ಪ ಭಂಡಾರಿ ಇತರರು ಭಾಗವಹಿದ್ದರು,

About Mallikarjun

Check Also

ಬಾಗಲಕೋಟೆ ವಿವಿ ಮುಚ್ಚಿದರೆ 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಡಲಿ ಪೆಟ್ಟು..?

If Bagalkote University is closed, the dream of higher education of 45 thousand students will …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.