Petition to Home Minister by Bhim Army organization leader through Taluk Magistrate against Tipaturu DY SP

ತಿಪಟೂರು ಉಪ ಪೊಲೀಸ್ ಅದೀಕ್ಷಕರ ವಿರುದ್ಧ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಆಡಳಿತ ಸೌದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ದಲಿತ ಮಹಿಳೆ ಮೇಲೆ ದೌರ್ಜನ್ಯವಾಗಿದ್ದು ನೊಂದವರ ಪರ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆ ದೌರ್ಜನ್ಯ ನಡೆಸಿದ ವ್ಯಕ್ತಿಗಳ ಪರ ಶಾಮಿಲಾಗಿ ದಲಿತ ಮಹಿಳೆಗೆ ಅನ್ಯಾಯ ಮಾಡಲಾಗಿದೆ, ತಿಪಟೂರು ಪೊಲೀಸ್ ಉಪ ಅಧೀಕ್ಷಕರು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಸಿಲ್ಲ. ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ್ ಆರ್ಮಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ಗೃಹಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾ ನಿರತರನ್ನ ಉದೇಶಿಸಿ ಕರ್ನಾಟಕ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮತೀನ್ ಕುಮಾರ್ ಮಾತನಾಡಿ ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ಮಂಜುಳಮ್ಮ ಕೋಂ ಬಸವರಾಜು ಎಂಬುವವರಿಂದ ಹಣಕಾಸಿನ ಸಹಾಯಪಡೆದ ಅದೇ ಗ್ರಾಮದ ರಾಜೇಶ್ ಬಿನ್ ಜಯರಾಮಯ್ಯ ಎಂಬುವವರು ದಲಿತ ಮಹಿಳೆ ಮಂಜುಳಮ್ಮನ ಮೇಲೆ ಜಾತಿದೌರ್ಜನ್ಯ ನಡೆಸಿ,ಕೊಲೆ ಬೆದರಿಕೆ ಹಾಕಿದರು,ನೊಂದ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದರೆ, ಪ್ರಕರಣದ ತನಿಖೆನಡೆಸಿ ಪ್ರಕರಣ ದಾಖಲಿಸದೇ,ದೌರ್ಜನ್ಯ ನಡೆಸಿದ ರಾಜೇಶ್ ಪರವಾಗಿ ವಕಾಲತ್ತು ವಹಿಸಿದ ಪೊಲೀಸರು, ಪ್ರಕರಣ ದಾಖಲಿಸದೆ, ವಾಪಾಸ್ ಕಳಿಸಿದರು.ದೌರ್ಜನ್ಯದಿಂದ ನೊಂದಮಹಿಳೆ ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿಗಳಿಗೆ ದೂರು ನೀಡಿ ಎಸ್ಪಿ ಯವರ ಸೂಚನೆ ಮೇರೆಗೆ ಅಟ್ರಾಸಿಟಿ ಕೇಸ್ ದಾಖಲಿಸಲಾಗಿತ್ತು, ಆದರೆ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ತಿಪಟೂರು ಪೊಲೀಸ್ ಉಪ ಅಧೀಕ್ಷಕರು ,ದಲಿತರ ಮೇಲೆ ದೌರ್ಜನ್ಯ ನಡೆಸಿದ ರಾಜೇಶ್ ಪ್ರಭಾವಕ್ಕೆ ಒಳಗಾಗಿ ಪರಿಶಿಷ್ಠ ದೌರ್ಜನ್ಯ ಪ್ರಕರಣ ನ್ಯಾಯಸಮ್ಮತವಾಗಿ ನಡೆಸದೆ ಅನ್ಯಾಯ ಮಾಡಿದ್ದಾರೆ,ಪ್ರಕರಣದ ಸಾಕ್ಷಿಗಳನ್ನ ಬೆದರಿಸಿ ತಮ್ಮ ಇಚ್ಚೆಯಂತೆ ಹೇಳಿಕೆ ಪಡೆದಿದ್ದಾರೆ, ತಿಪಟೂರು ಡಿವೈಎಸ್ಪಿ ಹಾಗೂ ಅವರ ಕಚೇರಿ ಸಿಬ್ಬಂದಿ ದಲಿತ ವಿರೋಧಿಗಳಾಗಿ ವರ್ತಿಸುತ್ತಿದ್ದು,ಇವರಿಂದ ದಲಿತರು ನ್ಯಾಯ ನಿರೀಕ್ಷೆ ಮಾಡುವುದು,ಕಷ್ಟವಾಗಿದ್ದು, ಡಿವೈಎಸ್ಪಿ ಯವರು ಸಲ್ಲಿಸಿರುವ ದೋಷಾರೋಪಪಟ್ಟಿ ರದ್ದುಗೊಳ್ಳಿ ಬೇರೆ ಅಧಿಕಾರಿಗಳಿಂದ ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ದಲಿತ ಮಹಿಳೆ ಮಂಜುಳಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಭೀಮ್ ಆರ್ಮಿ ಸಂಘಟನೆಯ ಕಾನೂನು ಸಲಹೆಗಾರ ರಾಜೀವ್ ಶಾಂಬು ಮಾತನಾಡಿ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ನ್ಯಾಯ ಕೊಡಿಸುವುದನ್ನು ಬಿಟ್ಟು ಕಾಣದ ಕೈಗಳು ಈ ವಿಚಾರವೇ ತುಂಬಾ ಕೆಲಸ ಮಾಡಿದೆ ಕೂಡಲೇ ಗೃಹ ಮಂತ್ರಿಗಳು ಮರುತನಿಕೆಗೆ ಆದೇಶಿಸಿ ನೊಂದ ದಲಿತ ಮಹಿಳೆಗೆ ನ್ಯಾಯ ತೋರಿಸಿರಬೇಕು ಎಂದು ಗೃಹ ಸಚಿವರಿಗೆ ತಾಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ,ಮುಖಂಡರಾದ ಪ್ರದೀಪ್,ಕಾನೂನು ಸಲಹೆಗಾರ ರಾಜೀವ್ ಶಾಂಬು,ದರ್ಶನ್ ಪಂಡಿತ್ ಸಿಂಹ, ಭೀಮ್ ಆರ್ಮಿ ಯುವ ಮುಖಂಡ ಮೋಹನ್ ಬಾಬು,ಹರೀಶ್ ಯಗಚೀಕಟ್ಟೆ .ನಾಗ್ತೀಹಳ್ಳಿ ಶಶಿಕುಮಾರ್ .ಕವಿತ ,ಮಂಜುಳ, ಬಸವರಾಜು, ಮುಂತ್ತಾದವರು ಉಪಸ್ಥಿತರಿದರು.
.