Breaking News

ಬೆಂಗಳೂರುಮೆಥೋಡಿಸ್ಟ್ ಚರ್ಚ್‌ನ ಬಿಷಪ್ ಲಕ್ಷ್ಮಣ ನಾಮದೇವ್ ಕರ್ಕರೆ ಅವಧಿ ಮೀರಿ ಏಳು ವರ್ಷ ಕಳೆದರೂ ಅಧಿಕಾರಬಿಟ್ಟುಕೊಡದೇ ಹಠಮಾರಿ ಧೋರಣೆ

Bengaluru Methodist Church Bishop Lakshmana Namdev Karkare’s obstinate attitude of not relinquishing power even after seven years have passed

ಜಾಹೀರಾತು
ಜಾಹೀರಾತು



ಬೆಂಗಳೂರು ಮೆಥೋಡಿಸ್ಟ್ ಚರ್ಚ್‌ನಲ್ಲಿ ನಾಯಕತ್ವ ವಿವಾದದ ನಡುವೆ ಡಾ. ಅನಿಲ್ ಕುಮಾರ್ ಸರ್ವಾಂದ್ ಅವರಿಗೆ ಸ್ವಾಗತ
ಬೆಂಗಳೂರು, ಫೆ. 3: ಬೆಂಗಳೂರಿನ ಮೆಥೋಡಿಸ್ಟ್ ಚರ್ಚ್‌ನ ಬಿಷಪ್ ಲಕ್ಷ್ಮಣ ನಾಮದೇವ್ ಕರ್ಕರೆ ಅವರು ತಮ್ಮ ಅವಧಿ ಮೀರಿ ಐದು ವರ್ಷ ಕಳೆದರೂ ಅಧಿಕಾರ ಬಿಟ್ಟುಕೊಡದೇ ಹಠಮಾರಿ ಧೋರಣೆ ಅನುಸರಿಸುತ್ತಿರುವ ಕಾರಣ, ಡಾ. ಅನಿಲ್ ಕುಮಾರ್ ಸರ್ವಾಂದ್ ಅವರನ್ನು ಬೆಂಗಳೂರು ಎಪಿಸ್ಕೋಪಲ್ ಪ್ರದೇಶದ ಹೊಸ ಬಿಷಪ್ ಆಗಿ ನೇಮಕ

ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ನೂತನ ಬಿಷಪ್ ಅವರಿಗೆ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ.
ಹೊಸದಾಗಿ ನೇಮಕಗೊಂಡ ಬಿಷಪ್‌ರ ಸ್ವಾಗತ ಸಮಾರಂಭ ಬೆಂಗಳೂರು, ರಿಚ್‌ಮಂಡ್ ಟೌನ್‌ನ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ. ನಾಯಕತ್ವ ವಿವಾದ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುವ ಸಾಧ್ಯತೆ ಇದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಭಾರತದ ಮೆಥೋಡಿಸ್ಟ್ ಚರ್ಚ್‌ನ ಕಾರ್ಯಕಾರಿ ಮಂಡಳಿ ಜನವರಿ 31ರಂದು ಮುಂಬೈನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಮೂರನೇ ಎರಡಷ್ಟು ಬಹುಮತದಿಂದ ಡಾ. ಅನಿಲ್ ಕುಮಾರ್ ಸರ್ವಾಂಡ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ಎಪಿಸ್ಕೋಪಲ್ ಪ್ರದೇಶದ ಬಿಷಪ್ ಆಗಿ ನೇಮಕ ಮಾಡಿದೆ. ಈ ಪ್ರದೇಶದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದ ಕೆಲವು ಭಾಗಗಳು ಒಳಗೊಂಡಿವೆ.
ಚರ್ಚ್‌ನ ನಿಯಮದಂತೆ 70 ವರ್ಷ ಮೀರಿದವರು ಅಧಿಕಾರ ತೊರೆಯಬೇಕು, ಆದರೆ ಬಿಷಪ್ ಲಕ್ಷ್ಮಣ ನಾವದ್ ಕರ್ಕರೆ ಅವರಿಗೆ ಇದೀಗ 77 ವರ್ಷ ವಯಸ್ಸಾಗಿದ್ದು, ಅಧಿಕಾರ ಹಸ್ತಾಂತರಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಇದೇ ರೀತಿ ಗುಜರಾತ್, ಬಾಂಬೆ, ಚೆನ್ನೈ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಹೊಸ ನೇಮಕಾತಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ.
ಬಿಷಪ್ ಕರ್ಕರೆ ಅವರ ಆಡಳಿತ ಅವಧಿಯಲ್ಲಿ, ಮೆಥೋಡಿಸ್ಟ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಖ್ಯೆ 15,000ರಿಂದ 9,000ಕ್ಕೆ ಕುಸಿದಿದೆ, ಮತ್ತು ₹35 ಕೋಟಿ ಎಫ್.ಡಿಯನ್ನು ಕರಗಿಸಿ ₹30 ಕೋಟಿ ಸಾಲ ಮಾಡಿರುವ ಆರೋಪಗಳಿವೆ.
ಬಿಷಪ್ ಡಾ. ಅನಿಲ್ ಕುಮಾರ್ ಸರ್ವಾಂದ್, ಬೆಂಗಳೂರು, ಕೋಲಾರ, ರಾಯಚೂರಿನ ಬಾಲ್ಡ್‌ವಿನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮತ್ತು ಬೆಳಗಾವಿ ಜಿಲ್ಲಾ ಮೆಥೋಡಿಸ್ಟ್ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಭಾರತದ ಮೆಥೋಡಿಸ್ಟ್ ಚರ್ಚ್ ಒಂದು ಅಖಿಲ ಭಾರತ ಪ್ರೊಟೆಸ್ಟಂಟ್ ಚರ್ಚ್ ಆಗಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ.
ಬೆಂಗಳೂರು ಮೆಥೋಡಿಸ್ಟ್ ಚರ್ಚ್‌ನ ಬಿಷಪ್ ಲಕ್ಷ್ಮಣ ನಾಮದೇವ್ ಕರ್ಕರೆ ಅವರು ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ನ್ಯಾಯಾಯಗಳಲ್ಲಿ ಒಂದೆರಡು ಪ್ರಕರಣಗಳಿದ್ದವು. ಇದೀಗ ಪ್ರಕರಣಗಳ ಸಂಖ್ಯೆ 250 ಕ್ಕೂ ಅಧಿಕವಾಗಿವೆ. ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಸಭಾಪಾಲಕರಿಗೆ ಸಮಪರ್ಕ ವೇತನ ಪಾವತಿಯಾಗುತ್ತಿಲ್ಲ. ಹೀಗೆ ಹತ್ತು ಹಲವು ಲೋಪಗಳು ಇವರ ಅವಧಿಯಲ್ಲಿ ಕಂಡು ಬಂದಿವೆ. ಹೀಗಾಗಿ ಈ ಬದಲಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ನಡೆಯುವ ಪದಗ್ರಹಣ ಸಮಾರಂಭವು ವಿಶೇಷ ಗಮನ ಸೆಳೆಯುವ ಸಾಧ್ಯತೆ ಇದೆ.

About Mallikarjun

Check Also

ನಿಯಮಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ: ಡಿ.ಸಿ ನಿತೀಶ್ ಕೆ ಎಚ್ಚರಿಕೆ

D.C. Nitish K warns of strict action if illegal loan recovery proceeds ಮೈಕ್ರೋಫೈನಾನ್ಸ್ ಪ್ರತಿನಿಧಿಗಳು, ಬ್ಯಾಂಕಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.