Breaking News

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಕನಕಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಅವರಿಗೆ‌ ಮನವಿ ಸಲ್ಲಿಸಿದರು

ಚುನಾವಣಾ ಪ್ರಣಾಳಿಕೆ‌ ಈಡೇರಿಸಲು ಒತ್ತಾಯ

ಜಾಹೀರಾತು

ಕನಕಗಿರಿ: 2023ರ‌ ವಿಧಾನಸಭಾ ಚುನಾವಣೆಯಲ್ಲಿ ಭರವಸೆ‌ ನೀಡಿದಂತೆ‌ ಎನ್ ಪಿಎಸ್ (ನೂತನ‌ ಪಿಂಚಣಿ ಯೋಜನೆ) ರದ್ದು ಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ‌ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ 2006ರ ಎಪ್ರಿಲ್ 1ರ ನಂತರ ನೇಮಕಗೊಂಡ ರಾಜ್ಯ ಸರ್ಕಾರಿ‌ ನೌಕರರಿಗೆ ನಿವೃತ್ತಿ ಪಿಂಚಣಿ ವ್ಯವಸ್ಥೆ ಇಲ್ಲ, ಓಪಿಎಸ್ ಇಲ್ಲದ ಪರಿಣಾಮ ನಿವೃತ್ತಗೊಂಡ ನೌಕರರ ಕುಟುಂಬಗಳು ಬೀದಿ ಪಾಲಾಗಿವೆ, ಸರ್ಕಾರ ಎನ್ ಪಿಎಸ್ ಯೋಜನೆ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು.
ಓಪಿಎಸ್ ಬದಲಾಗಿ
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಯುಪಿಎಸ್ ಮಾದರಿ ಪಿಂಚಣಿ ವ್ಯವಸ್ಥೆಗೂ ಸಂಘ ವಿರೋಧ ಇದೆ, ಅಲ್ಲದೆ ಇತರೆ ಯಾವುದೇ ಸುಧಾರಣೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವುದು ಬೇಡ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ
ರಾಜ್ಯ ಸರ್ಕಾರದ ಎನ್ ಪಿಎಸ್ ನೌಕರರ ಬೇಡಿಕೆಗಳ ಈಡೇರಿಕೆ ಕುರಿತು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುವುದು, ಎನ್ ಪಿಎಸ್ ರದ್ದುಗೊಳಿಸಲು ಶ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಕನಕಪ್ಪ, ಪ್ರಧಾನ ಕಾರ್ಯದರ್ಶಿ ನಿರುಪಾದಿ, ಶಿಕ್ಷಕರಾದ ಪರಶುರಾಮ, ಪಂಪಾಪತಿ ಇತರರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.