From the fans of Aravind Gowda, former member of Zilla Panchayat,! Special Puja to Maruteshwar
ವರದಿ : ಪಂಚಯ್ಯ ಹಿರೇಮಠ
ಯಲಬುರ್ಗಾ : ನಮ್ಮ ತಂದೆಯವರು ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಸಾರ್ವಜನಿಕ ವಲಯದಲ್ಲಿ ಯಾವದೇ ಪಕ್ಷವಿರಲಿ ಪಂಗಡವಿರಲಿ, ಪಕ್ಷ ಪಂಗಡ ಬೇಧ ಮರೆತು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಿದವರಾಗಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದಗೌಡ ಪಾಟೀಲ್ ಹೇಳಿದರು.
ಶನಿವಾರದಂದು ಅರವಿಂದಗೌಡ ಪಾಟೀಲ್ ಅಭಿಮಾನಿ ಬಳಗದಿಂದ ಚಿಕ್ಕವಂಕಲಕುಂಟಾ ಮಾರುತೇಶ್ವರ ದೇವಸ್ಥಾನದಲ್ಲಿ ವಿಷೇಶ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ತಂದೆ ಶಿವಶರಣಪ್ಪ ಗೌಡ ಪಾಟೀಲರೆಂದರೇ ಮಸಾರಿ ಭಾಗ ಸೇರಿದಂತೆ ಕ್ಷೇತ್ರದ ಜನತೆಗೆ ಅಚ್ಚು ಮೆಚ್ಚಿನವರಾಗಿದ್ದು ಅವರ ಅಪಾರ ಅಭಿಮಾನಿ ಬಳಗವಿದೆ
ಮೊನ್ನೆ ಉದ್ಯಮದ ವಿಷಯಕ್ಕೆ ಸಣ್ಣ ಘಟನೆಯೊಂದು ನಡೆದಿದ್ದರಿಂದ ಎರಡು ತಿಂಗಳು ಜನರ ಜೊತೆಗೆ ಬೆರೆಯಲು ಆಗಲಿಲ್ಲಾ, ನಾನು ನಂಬಿದ ಭಗವಂತ ಹಾಗೂ ಅಭಿಮಾನಿಗಳು ನನ್ನೊಂದಿಗಿದ್ದಾರೆ ಇದಕ್ಕೆ ನಾನು ಚಿರ ಋಣಿ ಎಂದರು.
ನಾವು ರಾಜಕೀಯದ ವಿಷಯದಲ್ಲಿ ಮಾತ್ರ ರಾಜಕಾರಣ ಮಾಡುತ್ತೇವೆ ವಿನಃ ಯಾವಾಗಲೂ ರಾಜಕಾರಣ ಮಾಡುವುದಾಗಲಿ, ದ್ಷೇಷಿಸುವದಾಗಲಿ, ಟೀಕೆ, ಟಿಪ್ಪಣೆ ಮಾಡುವುದಾಗಲಿ ಮಾಡುವುದಿಲ್ಲಾ ನಮಗೆ ಸಾರ್ವಜನಿಕ ವಲಯ ಯಾವಾಗಲೂ ತೆರೆದ ಬಾಗಿಲಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯ. ಎಸ್ ಮೆಣಸಿಗೇರಿ, ರಾಚಪ್ಪ ಹಳ್ಳಿ, ಸಂಗಮೇಶ ವಾದಿ, ನಿರುಪಾದಪ್ಪ ಮರಕಟ್, ಬಸವರಾಜ ಕಜ್ಜಿ, ಅಮರೇಶ್ ಬಳ್ಳಾರಿ, ಮರಿಸ್ವಾಮಿ ಕಲಭಾವಿ, ನಿಂಗಪ್ಪ ಮುದೋಳ, ಶಿವನಗೌಡ ಮಾಲಿಪಾಟೀಲ್, ಸಿದ್ದಪ್ಪ ಕಟ್ಟಿಮನಿ, ಹುಲ್ಲಪ್ಪ ಉಪ್ಪಾರ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿ ಉಪಸ್ಥಿತರಿದ್ದರು.