Koppal District Hospital Negligence of the doctor and the death of the child.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಹಾಗೂ ಮಗು ಸಾವನ್ನಪ್ಪಿದ ಘಟನೆ ಮಂಗಳವಾರದಂದು ಜರುಗಿದೆ.
ಕುಕನೂರು ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎಂಬುವರ ಪತ್ನಿ ರೇಣುಕಾ ಹಾಗೂ ಮಗು ಮೃತ ದುರ್ದೈವಿಗಳಾಗಿದ್ದಾರೆ.
ಮೃತ ಮಹಿಳೆ ರೇಣುಕಾ ಎನ್ನುವವರು ತಮ್ಮ ತವರು ಮನೆಯಾದ ಬನ್ನಿಗೋಳಕ್ಕೆ ಹೆರಿಗೆಗೆ ಹೋಗಿದ್ದ ಸಂದರ್ಭದಲ್ಲಿ
ತುಂಬು ಗರ್ಭಿಣಿಯಾಗಿದ್ದ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಷ್ಟಗಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆಗೆ ಅಡ್ಮಿಟ್ ಮಾಡಲಾಗಿತ್ತು.
ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಆಗುವುದಿಲ್ಲವೆಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ರೆಫರ್ ಮಾಡಲಾಗಿತ್ತು,ಆದರೆ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಸಿಸೆರಿನ್ ಮೂಲಕ ಮಗುವನ್ನು ಹೊರೆ ತೆಗೆದ ನಂತರ ಮಗು ಸಾವನ್ನಪ್ಪಿದ್ದು, ನಂತರದ ಇಪ್ಪತ್ತು ನಿಮಿಷಗಳಲ್ಲಿ ತಾಯಿ ಮೃತ ಪಟ್ಟ ಘಟನೆ ಜರುಗಿದೆ. ಈ ಘಟನೆಯು ವೈದ್ಯರ ನಿರ್ಲಕ್ಷದಿಂದ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಿವರ : ಕುಷ್ಟಗಿ ತಾಲೂಕಿನ ಬನ್ನಿಗೋಳ ಗ್ರಾಮದ ರೇಣುಕಾ ಎನ್ನುವ ಮಹಿಳೆಯನ್ನು ಕುಕನೂರು ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎನ್ನುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ಪ್ರಕಾಶ ಎನ್ನುವವರು ಬಡ ಕುಟುಂಬದವರಾಗಿದ್ದು ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಿದ್ದು, ಮಡದಿಯ ತವರು ಮನೆಯಾದ ಕುಷ್ಟಗಿ ತಾಲೂಕ ಬನ್ನಿಗೋಳದ ತಾಯಿಯ ಮನೆಗೆ ಹೆರಿಗೆಗೆ ಎಂದು ಬನ್ನಿಗೋಳಕ್ಕೆ ಬಂದಾಗ ನೋವು ಕಾಣಿಸಿಕೊಂಡಿದೆ.
ಕೂಡಲೇ ಅಂಬುಲೆನ್ಸ್ ಮೂಲಕ ಮಹಿಳೆಯನ್ನು ಕುಷ್ಟಗಿ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಹಿಳೆಯ ಜೊತೆಯಲ್ಲಿ ಅವರ ವೃದ್ದ ತಂದೆ ತಾಯಿಯರು ಇದ್ದು , ವೈದ್ಯರು ನಿರ್ಲಕ್ಷಿಸಿ ಕೊಪ್ಪಳಕ್ಕೆ ಕಳಿಸಿದ್ದಾರೆ, ಕೊಪ್ಪಳದಲ್ಲಿಯೂ ಚಿಕಿತ್ಸೆ ಸರಿಯಾಗಿ ನೀಡದೇ ಇದ್ದರಿಂದ ತಾಯಿ, ಮಗು ಮೃತ ಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.